logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪೈಲ್ಸ್‌ನಿಂದ ಬಳಲುತ್ತಿದ್ದೀರಾ, ಹಾಗಿದ್ರೆ ಇಂದೇ ಈ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ; ಮೂಲವ್ಯಾಧಿ ನಿವಾರಣೆಗೆ ಇದುವೇ ಪರಿಹಾರ

ಪೈಲ್ಸ್‌ನಿಂದ ಬಳಲುತ್ತಿದ್ದೀರಾ, ಹಾಗಿದ್ರೆ ಇಂದೇ ಈ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ; ಮೂಲವ್ಯಾಧಿ ನಿವಾರಣೆಗೆ ಇದುವೇ ಪರಿಹಾರ

Feb 12, 2024 09:44 PM IST

ಪೈಲ್ಸ್‌ ಅಥವಾ ಮೂಲವ್ಯಾದಿ ಅನ್ನುವುದು ಕೆಲವರು ಪ್ರತಿದಿನ ಎದುರಿಸುವಂತಹ ಸಮಸ್ಯೆ. ಇದು ನಿತ್ಯದ ಸಾಮಾನ್ಯ ಚಟುವಟಿಕೆಗಳಿಗೂ ಅಡ್ಡಿಪಡಿಸುತ್ತದೆ. ನೀವು ಪ್ರತಿನಿತ್ಯ ಯೋಗ ಮಾಡುವುದರಿಂದ ಈ ಪೈಲ್ಸ್‌ನ ಲಕ್ಷಣ ಅಥವಾ ಪೈಲ್ಸ್‌ ಅನ್ನು ಶಮನಮಾಡಿಕೊಳ್ಳಬಹುದು. ಯಾವ ಆಸನಗಳು ನಿಮಗೆ ಹೇಗೆ ನೆರವಾಗಬಲ್ಲದು ಇಲ್ಲಿದೆ ಓದಿ.

  • ಪೈಲ್ಸ್‌ ಅಥವಾ ಮೂಲವ್ಯಾದಿ ಅನ್ನುವುದು ಕೆಲವರು ಪ್ರತಿದಿನ ಎದುರಿಸುವಂತಹ ಸಮಸ್ಯೆ. ಇದು ನಿತ್ಯದ ಸಾಮಾನ್ಯ ಚಟುವಟಿಕೆಗಳಿಗೂ ಅಡ್ಡಿಪಡಿಸುತ್ತದೆ. ನೀವು ಪ್ರತಿನಿತ್ಯ ಯೋಗ ಮಾಡುವುದರಿಂದ ಈ ಪೈಲ್ಸ್‌ನ ಲಕ್ಷಣ ಅಥವಾ ಪೈಲ್ಸ್‌ ಅನ್ನು ಶಮನಮಾಡಿಕೊಳ್ಳಬಹುದು. ಯಾವ ಆಸನಗಳು ನಿಮಗೆ ಹೇಗೆ ನೆರವಾಗಬಲ್ಲದು ಇಲ್ಲಿದೆ ಓದಿ.
ಪ್ರತಿನಿತ್ಯ ಯೋಗ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ತಜ್ಞರು ಹೇಳುತ್ತಾರೆ. ಅದರಲ್ಲೂ ಮೂಲವ್ಯಾದಿ ಅಥವಾ ಪೈಲ್ಸ್‌ ಅನ್ನು ನಿರ್ವಹಿಸಲು ಯೋಗಾಭ್ಯಾಸವು ಪೂರಕವಾಗಿದೆ. ನಿಯಮಿತವಾಗಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದರಿಂದ ಪೈಲ್ಸ್‌ ರೋಗಲಕ್ಷಣಗಳನ್ನು ಆರಂಭದಲ್ಲೇ ನಿವಾರಿಸಿಕೊಳ್ಳಬಹುದು. ಈಗಾಗಲೇ ಪೈಲ್ಸ್‌ನಿಂದ ಬಳಲುತ್ತಿದ್ದರೆ ಯೋಗ ಮಾಡುವುದರಿಂದ ಅದು ಮತ್ತಷ್ಟು ಹೆಚ್ಚಾಗದಂತೆ ತಡೆಯಬಹುದು. ಯೋಗವು ವ್ಯಕ್ತಿಯ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಅಕ್ಷರ ಯೋಗ ಕೇಂದ್ರದ ಸಂಸ್ಥಾಪಕ ಹಿಮಾಲಯನ್ ಸಿದ್ಧಾ ಅಕ್ಷರ್ ಅವರು ಪೈಲ್ಸ್ ನಿರ್ವಹಣೆಗೆ ಯೋಗವು ಹೇಗೆ ಪೂರಕ ವಿಧಾನವಾಗಿದೆ ಎಂಬುದನ್ನು ವಿವರಿಸಿದ್ದಾರೆ.
(1 / 9)
ಪ್ರತಿನಿತ್ಯ ಯೋಗ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ತಜ್ಞರು ಹೇಳುತ್ತಾರೆ. ಅದರಲ್ಲೂ ಮೂಲವ್ಯಾದಿ ಅಥವಾ ಪೈಲ್ಸ್‌ ಅನ್ನು ನಿರ್ವಹಿಸಲು ಯೋಗಾಭ್ಯಾಸವು ಪೂರಕವಾಗಿದೆ. ನಿಯಮಿತವಾಗಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದರಿಂದ ಪೈಲ್ಸ್‌ ರೋಗಲಕ್ಷಣಗಳನ್ನು ಆರಂಭದಲ್ಲೇ ನಿವಾರಿಸಿಕೊಳ್ಳಬಹುದು. ಈಗಾಗಲೇ ಪೈಲ್ಸ್‌ನಿಂದ ಬಳಲುತ್ತಿದ್ದರೆ ಯೋಗ ಮಾಡುವುದರಿಂದ ಅದು ಮತ್ತಷ್ಟು ಹೆಚ್ಚಾಗದಂತೆ ತಡೆಯಬಹುದು. ಯೋಗವು ವ್ಯಕ್ತಿಯ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಅಕ್ಷರ ಯೋಗ ಕೇಂದ್ರದ ಸಂಸ್ಥಾಪಕ ಹಿಮಾಲಯನ್ ಸಿದ್ಧಾ ಅಕ್ಷರ್ ಅವರು ಪೈಲ್ಸ್ ನಿರ್ವಹಣೆಗೆ ಯೋಗವು ಹೇಗೆ ಪೂರಕ ವಿಧಾನವಾಗಿದೆ ಎಂಬುದನ್ನು ವಿವರಿಸಿದ್ದಾರೆ.(HT File Photo)
ರಕ್ತಪರಿಚಲನೆಯನ್ನು ಸುಧಾರಿಸುತ್ತದೆ: ಉಸಿರಾಟದ ಮೇಲೆ ನಿಯಂತ್ರಣ ಮತ್ತು ದೇಹದಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸುವಂತಹ ನಿರ್ದಿಷ್ಟ ಆಸನಗಳು ಯೋಗದಲ್ಲಿದೆ. ವಿಪರಿತ ಕರಣಿ ಮತ್ತು ಬಾಲಾಸನ ಭಂಗಿಗಳು ಗುದನಾಳದ ಪ್ರದೇಶದಲ್ಲಿರುವ ತೊಂದರೆಯನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ರಕ್ತದ ಹರಿವನ್ನು ಉತ್ತೇಜಿಸಿ, ಮೂಲವ್ಯಾಧಿ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
(2 / 9)
ರಕ್ತಪರಿಚಲನೆಯನ್ನು ಸುಧಾರಿಸುತ್ತದೆ: ಉಸಿರಾಟದ ಮೇಲೆ ನಿಯಂತ್ರಣ ಮತ್ತು ದೇಹದಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸುವಂತಹ ನಿರ್ದಿಷ್ಟ ಆಸನಗಳು ಯೋಗದಲ್ಲಿದೆ. ವಿಪರಿತ ಕರಣಿ ಮತ್ತು ಬಾಲಾಸನ ಭಂಗಿಗಳು ಗುದನಾಳದ ಪ್ರದೇಶದಲ್ಲಿರುವ ತೊಂದರೆಯನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ರಕ್ತದ ಹರಿವನ್ನು ಉತ್ತೇಜಿಸಿ, ಮೂಲವ್ಯಾಧಿ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ.(HT File Photo)
ಒತ್ತಡ ನಿವಾರಿಸುತ್ತದೆ: ದೀರ್ಘಕಾಲದ ಒತ್ತಡವು ಪೈಲ್ಸ್‌ ಉಲ್ಭಣಕ್ಕೆ ಸಂಬಂಧಿಸಿದೆ. ಯೋಗವು ಧ್ಯಾನ ಮತ್ತು ಆಳವಾದ ಉಸಿರಾಟದಂತಹ ವಿಶ್ರಾಂತಿಯನ್ನು ಒಳಗೊಂಡಿದೆ. ಇದು ಒತ್ತಡದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ನಿಧಾನವಾಗಿ ಉಸಿರಾಡುವಂತಹ ಯೋಗಾಭ್ಯಾಸವು ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮತ್ತು ಪೈಲ್ಸ್‌ ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
(3 / 9)
ಒತ್ತಡ ನಿವಾರಿಸುತ್ತದೆ: ದೀರ್ಘಕಾಲದ ಒತ್ತಡವು ಪೈಲ್ಸ್‌ ಉಲ್ಭಣಕ್ಕೆ ಸಂಬಂಧಿಸಿದೆ. ಯೋಗವು ಧ್ಯಾನ ಮತ್ತು ಆಳವಾದ ಉಸಿರಾಟದಂತಹ ವಿಶ್ರಾಂತಿಯನ್ನು ಒಳಗೊಂಡಿದೆ. ಇದು ಒತ್ತಡದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ನಿಧಾನವಾಗಿ ಉಸಿರಾಡುವಂತಹ ಯೋಗಾಭ್ಯಾಸವು ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮತ್ತು ಪೈಲ್ಸ್‌ ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.(unsplash)
ಸ್ನಾಯು ಬಲಪಡಿಸುತ್ತದೆ: ನಿರ್ದಿಷ್ಟ ಯೋಗದ ಭಂಗಿಗಳು ಸ್ನಾಯುಗಳನ್ನು ಬಲಪಡಿಸುತ್ತವೆ. ಮಾಲಾಸನ ಮತ್ತು ಭುಜಂಗಾಸನದಂತಹ ಭಂಗಿಗಳು ಗುದನಾಳ ಮತ್ತು ಗುದದ್ವಾರದ ಪ್ರದೇಶಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತು ಹೆಮೊರಾಯ್ಡ್‌ಗಳ ರಚನೆಯನ್ನು ತಡೆಯುತ್ತದೆ. ಹಾಗಾಗಿ ಈ ಎರಡೂ ಆಸನಗಳು ಪ್ರಯೋಜನಕಾರಿಯಾಗಿದೆ. 
(4 / 9)
ಸ್ನಾಯು ಬಲಪಡಿಸುತ್ತದೆ: ನಿರ್ದಿಷ್ಟ ಯೋಗದ ಭಂಗಿಗಳು ಸ್ನಾಯುಗಳನ್ನು ಬಲಪಡಿಸುತ್ತವೆ. ಮಾಲಾಸನ ಮತ್ತು ಭುಜಂಗಾಸನದಂತಹ ಭಂಗಿಗಳು ಗುದನಾಳ ಮತ್ತು ಗುದದ್ವಾರದ ಪ್ರದೇಶಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತು ಹೆಮೊರಾಯ್ಡ್‌ಗಳ ರಚನೆಯನ್ನು ತಡೆಯುತ್ತದೆ. ಹಾಗಾಗಿ ಈ ಎರಡೂ ಆಸನಗಳು ಪ್ರಯೋಜನಕಾರಿಯಾಗಿದೆ. (HT File Photo)
ಜೀರ್ಣಕ್ರಿಯೆ ಸುಧಾರಿಸುತ್ತದೆ: ಯೋಗವು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಪೈಲ್ಸ್‌ನಲ್ಲಿ ಸಾಮಾನ್ಯವಾಗಿರುವ ಮಲಬದ್ಧತೆಯಂತಹ ಸಮಸ್ಯೆಗಳನ್ನು ದೂರಮಾಡುತ್ತದೆ. ಪವನಮುಕ್ತಾಸನ ಮತ್ತು ತ್ರಿಕೋನಾಸನವು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ. ಈ ಮೂಲಕ ಗುದನಾಳದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
(5 / 9)
ಜೀರ್ಣಕ್ರಿಯೆ ಸುಧಾರಿಸುತ್ತದೆ: ಯೋಗವು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಪೈಲ್ಸ್‌ನಲ್ಲಿ ಸಾಮಾನ್ಯವಾಗಿರುವ ಮಲಬದ್ಧತೆಯಂತಹ ಸಮಸ್ಯೆಗಳನ್ನು ದೂರಮಾಡುತ್ತದೆ. ಪವನಮುಕ್ತಾಸನ ಮತ್ತು ತ್ರಿಕೋನಾಸನವು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ. ಈ ಮೂಲಕ ಗುದನಾಳದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.(HT File Photo)
ಮನಸ್ಸು ಮತ್ತು ದೇಹದ ಸ್ಥಿತಿ ಸುಧಾರಿಸುತ್ತದೆ: ಯೋಗವು ಮನಸ್ಸು ಮತ್ತು ದೇಹ ಇವೆರಡನ್ನೂ ಉತ್ತೇಜಿಸುವುದರಿಂದ ದೇಹದ ಸಂಪೂರ್ಣ ಆರೋಗ್ಯಕ್ಕೆ ಪ್ರಮುಖವಾಗಿದೆ. ಇದು ಪೈಲ್ಸ್‌ ನಿರ್ವಹಣೆಗೆ ಸಹಕಾರಿಯಾಗಿದೆ. ದೈಹಿಕ ಸಂವೇದನೆಗಳಿಗೆ ಪ್ರತಿಕ್ರಿಯಿಸುವುದರಿಂದ ರೋಗಲಕ್ಷಣಗಳು ಹೆಚ್ಚಾಗುವುದನ್ನು ತಡೆಯುತ್ತದೆ. ಯೋಗಾಭ್ಯಾಸದಲ್ಲಿರುವ ಮೈಂಡ್‌ಫುಲ್‌ ಚಲನೆಯು ದೇಹದ ಆರೋಗ್ಯಕ್ಕೆ ಪೋಷಣೆಯನ್ನು ನೀಡುತ್ತದೆ. 
(6 / 9)
ಮನಸ್ಸು ಮತ್ತು ದೇಹದ ಸ್ಥಿತಿ ಸುಧಾರಿಸುತ್ತದೆ: ಯೋಗವು ಮನಸ್ಸು ಮತ್ತು ದೇಹ ಇವೆರಡನ್ನೂ ಉತ್ತೇಜಿಸುವುದರಿಂದ ದೇಹದ ಸಂಪೂರ್ಣ ಆರೋಗ್ಯಕ್ಕೆ ಪ್ರಮುಖವಾಗಿದೆ. ಇದು ಪೈಲ್ಸ್‌ ನಿರ್ವಹಣೆಗೆ ಸಹಕಾರಿಯಾಗಿದೆ. ದೈಹಿಕ ಸಂವೇದನೆಗಳಿಗೆ ಪ್ರತಿಕ್ರಿಯಿಸುವುದರಿಂದ ರೋಗಲಕ್ಷಣಗಳು ಹೆಚ್ಚಾಗುವುದನ್ನು ತಡೆಯುತ್ತದೆ. ಯೋಗಾಭ್ಯಾಸದಲ್ಲಿರುವ ಮೈಂಡ್‌ಫುಲ್‌ ಚಲನೆಯು ದೇಹದ ಆರೋಗ್ಯಕ್ಕೆ ಪೋಷಣೆಯನ್ನು ನೀಡುತ್ತದೆ. (HT File Photo)
ನಿಧಾನಗತಿಯ ವ್ಯಾಯಾಮ: ಯೋಗವು ಪೈಲ್ಸ್‌ ಹೊಂದಿರುವ ವ್ಯಕ್ತಿಗಳಿಗೆ ಸೂಕ್ತವಾದ ಕಡಿಮೆ–ಪರಿಣಾಮದ ವ್ಯಾಯಾಮವನ್ನು ನೀಡುತ್ತದೆ. ನಿಮ್ಮ ದಿನಚರಿಯಲ್ಲಿ ನೀವು ತೊಡಗಿಸಿಕೊಳ್ಳುವ ಸೌಮ್ಯವಾದ ಯೋಗಾಸನಗಳು ದೇಹದ ಮೇಲೆ ಅತಿಯಾದ ಒತ್ತಡವನ್ನು ಉಂಟುಮಾಡದೇ ಸಂಪೂರ್ಣ ಫಿಟ್ನೆಸ್‌ ಅನ್ನು ಹೆಚ್ಚಿಸುತ್ತದೆ. ಪೈಲ್ಸ್‌ ಕಾರಣದಿಂದ ತೀವ್ರವಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುವವರಿಗೆ ಇದು ವಿಶೇಷವಾಗಿ ಬಹಳ ಪ್ರಯೋಜನವಾಗಿದೆ.
(7 / 9)
ನಿಧಾನಗತಿಯ ವ್ಯಾಯಾಮ: ಯೋಗವು ಪೈಲ್ಸ್‌ ಹೊಂದಿರುವ ವ್ಯಕ್ತಿಗಳಿಗೆ ಸೂಕ್ತವಾದ ಕಡಿಮೆ–ಪರಿಣಾಮದ ವ್ಯಾಯಾಮವನ್ನು ನೀಡುತ್ತದೆ. ನಿಮ್ಮ ದಿನಚರಿಯಲ್ಲಿ ನೀವು ತೊಡಗಿಸಿಕೊಳ್ಳುವ ಸೌಮ್ಯವಾದ ಯೋಗಾಸನಗಳು ದೇಹದ ಮೇಲೆ ಅತಿಯಾದ ಒತ್ತಡವನ್ನು ಉಂಟುಮಾಡದೇ ಸಂಪೂರ್ಣ ಫಿಟ್ನೆಸ್‌ ಅನ್ನು ಹೆಚ್ಚಿಸುತ್ತದೆ. ಪೈಲ್ಸ್‌ ಕಾರಣದಿಂದ ತೀವ್ರವಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುವವರಿಗೆ ಇದು ವಿಶೇಷವಾಗಿ ಬಹಳ ಪ್ರಯೋಜನವಾಗಿದೆ.(HT File Photo)
ಉರಿಯೂತ ಶಮನಗೊಳಿಸುತ್ತದೆ: ಕೆಲವು ನಿರ್ದಿಷ್ಟ ಯೋಗದ ಭಂಗಿಗಳು ಉರಿಯೂತದ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದು ಪೈಲ್ಸ್‌ ಹೊಂದಿರುವ ವ್ಯಕ್ತಿಗಳಿಗೆ ಪ್ರಯೋಜನಕಾರಿಯಾಗಿದೆ. ಸಪ್ತ ಬದ್ಧ ಕೋನಾಸನ ಮತ್ತು ಉತ್ಥಾನಾಸನವು ಗುದನಾಳದ ಪ್ರದೇಶದಲ್ಲಿ ಕಂಡುಬರುವ ಉರಿಯೂತವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. 
(8 / 9)
ಉರಿಯೂತ ಶಮನಗೊಳಿಸುತ್ತದೆ: ಕೆಲವು ನಿರ್ದಿಷ್ಟ ಯೋಗದ ಭಂಗಿಗಳು ಉರಿಯೂತದ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದು ಪೈಲ್ಸ್‌ ಹೊಂದಿರುವ ವ್ಯಕ್ತಿಗಳಿಗೆ ಪ್ರಯೋಜನಕಾರಿಯಾಗಿದೆ. ಸಪ್ತ ಬದ್ಧ ಕೋನಾಸನ ಮತ್ತು ಉತ್ಥಾನಾಸನವು ಗುದನಾಳದ ಪ್ರದೇಶದಲ್ಲಿ ಕಂಡುಬರುವ ಉರಿಯೂತವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. (HT File Photo)
ದೇಹದ ಭಂಗಿಯ ಬಗ್ಗೆ ಇರಲಿ ಅರಿವು: ಪೈಲ್ಸ್‌ಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಯೋಗವು ದೇಹದ ಭಾಗಗಳ ಜೋಡಣೆಯ ಅರಿವನ್ನು ಹೆಚ್ಚಿಸುತ್ತದೆ. ಮತ್ತು ವ್ಯಕ್ತಿಯ ಕುಳಿತುಕೊಳ್ಳುವ, ನಿಲ್ಲುವ ಮತ್ತು ಸಾವಧಾನದಿಂದ ಚಲಿಸುವುದನ್ನು ಪ್ರೋತ್ಸಾಹಿಸುತ್ತದೆ. ಇದರಿಂದ ಗುದನಾಳದ ಪ್ರದೇಶದ ಮೇಲಿನ ಒತ್ತಡ ನಿವಾರಣೆಯಾಗುತ್ತದೆ. ಹೆಮೊರಾಯಿಡ್ಸ್‌ ಅಪಾಯವನ್ನು ಕಡಿಮೆ ಮಡುತ್ತದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ. ಧನಾತ್ಮಕ ಬದಲಾವಣೆಗಳನ್ನು ತರುತ್ತದೆ. 
(9 / 9)
ದೇಹದ ಭಂಗಿಯ ಬಗ್ಗೆ ಇರಲಿ ಅರಿವು: ಪೈಲ್ಸ್‌ಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಯೋಗವು ದೇಹದ ಭಾಗಗಳ ಜೋಡಣೆಯ ಅರಿವನ್ನು ಹೆಚ್ಚಿಸುತ್ತದೆ. ಮತ್ತು ವ್ಯಕ್ತಿಯ ಕುಳಿತುಕೊಳ್ಳುವ, ನಿಲ್ಲುವ ಮತ್ತು ಸಾವಧಾನದಿಂದ ಚಲಿಸುವುದನ್ನು ಪ್ರೋತ್ಸಾಹಿಸುತ್ತದೆ. ಇದರಿಂದ ಗುದನಾಳದ ಪ್ರದೇಶದ ಮೇಲಿನ ಒತ್ತಡ ನಿವಾರಣೆಯಾಗುತ್ತದೆ. ಹೆಮೊರಾಯಿಡ್ಸ್‌ ಅಪಾಯವನ್ನು ಕಡಿಮೆ ಮಡುತ್ತದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ. ಧನಾತ್ಮಕ ಬದಲಾವಣೆಗಳನ್ನು ತರುತ್ತದೆ. (HT File Photo)

    ಹಂಚಿಕೊಳ್ಳಲು ಲೇಖನಗಳು