logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Fruits: ಹಣ್ಣುಗಳಿಗೆ ಉಪ್ಪು ಖಾರ ಸೇರಿಸಿ ತಿನ್ನುವುದು ಎಷ್ಟು ರುಚಿ ಅಲ್ವಾ; ಆದರೆ ಆರೋಗ್ಯಕ್ಕೆ ಅದು ಎಷ್ಟು ಅಪಾಯಕಾರಿ ನಿಮಗೆ ಅರಿವಿದ್ಯಾ?

Fruits: ಹಣ್ಣುಗಳಿಗೆ ಉಪ್ಪು ಖಾರ ಸೇರಿಸಿ ತಿನ್ನುವುದು ಎಷ್ಟು ರುಚಿ ಅಲ್ವಾ; ಆದರೆ ಆರೋಗ್ಯಕ್ಕೆ ಅದು ಎಷ್ಟು ಅಪಾಯಕಾರಿ ನಿಮಗೆ ಅರಿವಿದ್ಯಾ?

Jun 01, 2023 07:34 PM IST

ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಕೆಲವರು ಹಣ್ಣುಗಳನ್ನು ಹಾಗೇ ತಿನ್ನಲು ಇಷ್ಟ ಪಡದೆ ಮಿಲ್ಕ್‌ ಶೇಕ್‌ , ಜ್ಯೂಸ್‌ ಮಾಡಿ ಕುಡಿಯುತ್ತಾರೆ. ಇನ್ನೂ ಕೆಲವರು ಹಣ್ಣನ್ನು ಕತ್ತರಿಸಿ ಉಪ್ಪು ಖಾರ ಮಿಕ್ಸ್‌ ಮಾಡಿ ತಿನ್ನುತ್ತಾರೆ. 

ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಕೆಲವರು ಹಣ್ಣುಗಳನ್ನು ಹಾಗೇ ತಿನ್ನಲು ಇಷ್ಟ ಪಡದೆ ಮಿಲ್ಕ್‌ ಶೇಕ್‌ , ಜ್ಯೂಸ್‌ ಮಾಡಿ ಕುಡಿಯುತ್ತಾರೆ. ಇನ್ನೂ ಕೆಲವರು ಹಣ್ಣನ್ನು ಕತ್ತರಿಸಿ ಉಪ್ಪು ಖಾರ ಮಿಕ್ಸ್‌ ಮಾಡಿ ತಿನ್ನುತ್ತಾರೆ. 
ಕೆಲವೊಂದು ಹಣ್ಣುಗಳಿಗೆ ಉಪ್ಪು ಖಾರ ಸೇರಿಸಿ ತಿನ್ನುವುದರಿಂದ ರುಚಿ ಏನೋ ಚೆನ್ನಾಗಿರುತ್ತದೆ. ಆದರೆ ಆರೋಗ್ಯಕ್ಕೆ ಅದು ಒಳ್ಳೆಯದಾ? ಈ ರೀತಿ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ ಎನ್ನುತ್ತಾರೆ ಆಹಾರ ತಜ್ಞರು. 
(1 / 7)
ಕೆಲವೊಂದು ಹಣ್ಣುಗಳಿಗೆ ಉಪ್ಪು ಖಾರ ಸೇರಿಸಿ ತಿನ್ನುವುದರಿಂದ ರುಚಿ ಏನೋ ಚೆನ್ನಾಗಿರುತ್ತದೆ. ಆದರೆ ಆರೋಗ್ಯಕ್ಕೆ ಅದು ಒಳ್ಳೆಯದಾ? ಈ ರೀತಿ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ ಎನ್ನುತ್ತಾರೆ ಆಹಾರ ತಜ್ಞರು. (Freepik)
ಹೊರಗಿನಿಂದ ತಂದ ಅಥವಾ ನಮ್ಮ ಮನೆಯ ತೋಟದಲ್ಲೇ ಬಿಟ್ಟ ಸೀಬೆ ಕಾಯಿ ಹಾಗೂ ಮಾವಿನ ಕಾಯಿಗೆ ಬಹಳ ಜನರು ಉಪ್ಪು ಹಾಗೂ ಖಾರ ಎರಡನ್ನೂ ಮಿಕ್ಸ್‌ ಮಾಡಿ ತಿನ್ನುತ್ತಾರೆ. ಜೊತೆಗೆ ಹುಣಿಸೆಹಣ್ಣನ್ನು ಕೂಡಾ ಇದೇ ರೀತಿ ತಿನ್ನುತ್ತಾರೆ. ಆದರೆ ಇನ್ನೆಂದೂ ಈ ರೀತಿ ಮಾಡಬೇಡಿ. 
(2 / 7)
ಹೊರಗಿನಿಂದ ತಂದ ಅಥವಾ ನಮ್ಮ ಮನೆಯ ತೋಟದಲ್ಲೇ ಬಿಟ್ಟ ಸೀಬೆ ಕಾಯಿ ಹಾಗೂ ಮಾವಿನ ಕಾಯಿಗೆ ಬಹಳ ಜನರು ಉಪ್ಪು ಹಾಗೂ ಖಾರ ಎರಡನ್ನೂ ಮಿಕ್ಸ್‌ ಮಾಡಿ ತಿನ್ನುತ್ತಾರೆ. ಜೊತೆಗೆ ಹುಣಿಸೆಹಣ್ಣನ್ನು ಕೂಡಾ ಇದೇ ರೀತಿ ತಿನ್ನುತ್ತಾರೆ. ಆದರೆ ಇನ್ನೆಂದೂ ಈ ರೀತಿ ಮಾಡಬೇಡಿ. (Unsplash)
ಹಣ್ಣುಗಳಿಗೆ ಉಪ್ಪು ಅಥವಾ ಖಾರ ಸೇರಿಸಿ ತಿಂದರೆ ಅದರ ಪೋಷಕಾಂಶಗಳು ಕಡಿಮೆ ಆಗುತ್ತವೆ. ಹಣ್ಣುಗಳಿಗೆ ಉಪ್ಪು ಸೇರಿಸಿದಾಗ ಅದರಲ್ಲಿ ನೀರು ಉತ್ಪತ್ತಿ ಆಗಿ ಹೊರ ಚೆಲ್ಲುತ್ತದೆ. ಇದರ ಮೂಲಕ ಹಣ್ಣುಗಳಲ್ಲಿ ಇರುವ ಪೋಷಕಾಂಶ ಕೂಡಾ ಹೊರ ಹೋಗುತ್ತದೆ. 
(3 / 7)
ಹಣ್ಣುಗಳಿಗೆ ಉಪ್ಪು ಅಥವಾ ಖಾರ ಸೇರಿಸಿ ತಿಂದರೆ ಅದರ ಪೋಷಕಾಂಶಗಳು ಕಡಿಮೆ ಆಗುತ್ತವೆ. ಹಣ್ಣುಗಳಿಗೆ ಉಪ್ಪು ಸೇರಿಸಿದಾಗ ಅದರಲ್ಲಿ ನೀರು ಉತ್ಪತ್ತಿ ಆಗಿ ಹೊರ ಚೆಲ್ಲುತ್ತದೆ. ಇದರ ಮೂಲಕ ಹಣ್ಣುಗಳಲ್ಲಿ ಇರುವ ಪೋಷಕಾಂಶ ಕೂಡಾ ಹೊರ ಹೋಗುತ್ತದೆ. (Freepik)
ಇನ್ನೂ ಕೆಲವರು ಹಣ್ಣುಗಳು ಹುಳಿ ಅಥವಾ ಸಿಹಿ ಇಲ್ಲದಿದ್ದರೆ ಜೊತೆಗೆ ಸಕ್ಕರೆ ಕೂಡಾ ಸೇರಿಸಿ ತಿನ್ನುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. 
(4 / 7)
ಇನ್ನೂ ಕೆಲವರು ಹಣ್ಣುಗಳು ಹುಳಿ ಅಥವಾ ಸಿಹಿ ಇಲ್ಲದಿದ್ದರೆ ಜೊತೆಗೆ ಸಕ್ಕರೆ ಕೂಡಾ ಸೇರಿಸಿ ತಿನ್ನುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. (Unsplash)
ಊಟಕ್ಕೆ ಉಪ್ಪು ಸೇರಿಸಿ ತಿನ್ನುವುದು ಸಹಜ. ಆದರೆ ಪದೆ ಪದೇ ಪ್ರತಿ ಪದಾರ್ಥಗಳಿಗೂ ಉಪ್ಪು ಸೇರಿಸಿ ತಿಂದರೆ ಅದು ಮೂತ್ರಪಿಂಡಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ನಿಮಗೆ ಕಿಡ್ನಿ ಸಮಸ್ಯೆ ಕಟ್ಟಿಟ್ಟ ಬುತ್ತಿ. 
(5 / 7)
ಊಟಕ್ಕೆ ಉಪ್ಪು ಸೇರಿಸಿ ತಿನ್ನುವುದು ಸಹಜ. ಆದರೆ ಪದೆ ಪದೇ ಪ್ರತಿ ಪದಾರ್ಥಗಳಿಗೂ ಉಪ್ಪು ಸೇರಿಸಿ ತಿಂದರೆ ಅದು ಮೂತ್ರಪಿಂಡಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ನಿಮಗೆ ಕಿಡ್ನಿ ಸಮಸ್ಯೆ ಕಟ್ಟಿಟ್ಟ ಬುತ್ತಿ. (Freepik)
ಹಣ್ಣುಗಳಿಗೆ ಉಪ್ಪು ಸೇರಿಸಿ ತಿಂದರೆ ಉರಿಯೂತದ ಅಪಾಯವಿದೆ. ಉಪ್ಪಿನಲ್ಲಿರುವ ಸೋಡಿಯಂ ಮತ್ತು ಅದರ ಪಿಹೆಚ್ ಮಟ್ಟವು  ನೀರನ್ನು ದೇಹದಲ್ಲೇ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಪರಿಣಾಮವಾಗಿ ಉರಿಯೂತ ಹೆಚ್ಚಾಗುತ್ತದೆ. 
(6 / 7)
ಹಣ್ಣುಗಳಿಗೆ ಉಪ್ಪು ಸೇರಿಸಿ ತಿಂದರೆ ಉರಿಯೂತದ ಅಪಾಯವಿದೆ. ಉಪ್ಪಿನಲ್ಲಿರುವ ಸೋಡಿಯಂ ಮತ್ತು ಅದರ ಪಿಹೆಚ್ ಮಟ್ಟವು  ನೀರನ್ನು ದೇಹದಲ್ಲೇ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಪರಿಣಾಮವಾಗಿ ಉರಿಯೂತ ಹೆಚ್ಚಾಗುತ್ತದೆ. (Freepik)
ಹಣ್ಣುಗಳು ಪ್ರಕೃತಿ ನಮಗೆ ನೀಡಿರುವ ವರ. ಅದು ಹೇಗೆ ದೊರೆಯುತ್ತದೆ ಹಾಗೇ ತಿನ್ನಲು ಯತ್ನಿಸಿ. ಆದರೆ ತಿನ್ನುವ ಮುನ್ನ ತೊಳೆಯುವುದನ್ನು ಮರೆಯಬೇಡಿ. ಜ್ಯೂಸ್‌ ಮಾಡುವುದಕ್ಕಿಂತ ನೇರವಾಗಿ ತಿಂದರೆ ಬಹಳ ಒಳ್ಳೆಯದು. 
(7 / 7)
ಹಣ್ಣುಗಳು ಪ್ರಕೃತಿ ನಮಗೆ ನೀಡಿರುವ ವರ. ಅದು ಹೇಗೆ ದೊರೆಯುತ್ತದೆ ಹಾಗೇ ತಿನ್ನಲು ಯತ್ನಿಸಿ. ಆದರೆ ತಿನ್ನುವ ಮುನ್ನ ತೊಳೆಯುವುದನ್ನು ಮರೆಯಬೇಡಿ. ಜ್ಯೂಸ್‌ ಮಾಡುವುದಕ್ಕಿಂತ ನೇರವಾಗಿ ತಿಂದರೆ ಬಹಳ ಒಳ್ಳೆಯದು. (Freepik)

    ಹಂಚಿಕೊಳ್ಳಲು ಲೇಖನಗಳು