logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶಿವನ ಪೂಜೆಗೆ ಶ್ರೇಷ್ಠ ಶ್ರಾವಣ ಮಾಸ: ಈ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದರ ದರ್ಶನ ಪಡೆದರೂ ಪುಣ್ಯ ಪ್ರಾಪ್ತಿ Photo Gallery

ಶಿವನ ಪೂಜೆಗೆ ಶ್ರೇಷ್ಠ ಶ್ರಾವಣ ಮಾಸ: ಈ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದರ ದರ್ಶನ ಪಡೆದರೂ ಪುಣ್ಯ ಪ್ರಾಪ್ತಿ Photo Gallery

Jul 26, 2024 04:58 PM IST

ಶ್ರಾವಣದಲ್ಲಿ ಶಿವನ ಪೂಜೆಗೆ ಬಹಳ ಪ್ರಾಮುಖ್ಯತೆ ಇದೆ. ಈ ಸಮಯದಲ್ಲಿ ದೇಶಾದ್ಯಂತ ಇರುವ 12 ಜ್ಯೋತಿರ್ಲಿಂಗಗಳ ದರ್ಶನ ಮಾಡಿದರೆ ಬಹಳ ಒಳ್ಳೆಯದು. ಅದು ಸಾಧ್ಯವಾಗದಿದ್ದರೆ ಶ್ರಾವಣ ಮಾಸದಲ್ಲಿ ಈ ಜ್ಯೋತಿರ್ಲಿಂಗಗಳಲ್ಲಿ ಯಾವುದಾದರೊಂದನ್ನು ದರ್ಶನ ಪಡೆದರೆ ವ್ಯಕ್ತಿಯ ಎಲ್ಲಾ ಕಷ್ಟಗಳು ದೂರಾಗಿ ಅಡೆತಡೆಗಳಿಂದ ಮುಕ್ತನಾಗುತ್ತಾನೆ ಎಂಬ ನಂಬಿಕೆ ಇದೆ. 

ದಕ್ಷಿಣ ಭಾರತದಲ್ಲಿ ಆಗಸ್ಟ್‌ 5 ರಿಂದ ಶ್ರಾವಣ ಆರಂಭವಾಗುತ್ತಿದೆ. ಈ ಸಮಯದಲ್ಲಿ ಶಿವನ ಪೂಜೆ ಹಾಗೂ ಜ್ಯೋತಿರ್ಲಿಂಗ ದರ್ಶನಕ್ಕೆ ಬಹಳ ಪ್ರಾಮುಖ್ಯತೆ ಇದೆ. ಪ್ರತಿಯೊಂದು ಜ್ಯೋತಿರ್ಲಿಂಗವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ದೇಶಾದ್ಯಂತ ಎಲ್ಲೆಲ್ಲಿ ಜ್ಯೋತಿರ್ಲಿಂಗಗಳಿವೆ, ಅವುಗಳ ಪ್ರಾಮುಖ್ಯತೆ ಏನು ನೋಡೋಣ. 
(1 / 14)
ದಕ್ಷಿಣ ಭಾರತದಲ್ಲಿ ಆಗಸ್ಟ್‌ 5 ರಿಂದ ಶ್ರಾವಣ ಆರಂಭವಾಗುತ್ತಿದೆ. ಈ ಸಮಯದಲ್ಲಿ ಶಿವನ ಪೂಜೆ ಹಾಗೂ ಜ್ಯೋತಿರ್ಲಿಂಗ ದರ್ಶನಕ್ಕೆ ಬಹಳ ಪ್ರಾಮುಖ್ಯತೆ ಇದೆ. ಪ್ರತಿಯೊಂದು ಜ್ಯೋತಿರ್ಲಿಂಗವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ದೇಶಾದ್ಯಂತ ಎಲ್ಲೆಲ್ಲಿ ಜ್ಯೋತಿರ್ಲಿಂಗಗಳಿವೆ, ಅವುಗಳ ಪ್ರಾಮುಖ್ಯತೆ ಏನು ನೋಡೋಣ. (PC: Twitter)
ಸೋಮನಾಥ ಜ್ಯೋತಿರ್ಲಿಂಗ:  ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿ ನೆಲೆಸಿರುವ ಸೋಮನಾಥ ಜ್ಯೋತಿರ್ಲಿಂಗವನ್ನು ಮೊದಲ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ. ಈ ಜ್ಯೋತಿರ್ಲಿಂಗದ ದರ್ಶನ ಹಾಗೂ ಪೂಜೆಯಿಂದ ಜಾತಕದಲ್ಲಿ ಚಂದ್ರನ ಅಶುಭ ಪರಿಣಾಮಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
(2 / 14)

ಮಲ್ಲಿಕಾರ್ಜುನ ಜ್ಯೋತಿರ್ಲಿಂಗ: ಮಲ್ಲಿಕಾರ್ಜುನ ಜ್ಯೋತಿರ್ಲಿಂಗವು ಆಂಧ್ರಪ್ರದೇಶದಲ್ಲಿದೆ, ಇದನ್ನು ದಕ್ಷಿಣ ಭಾರತದ ಕೈಲಾಸ ಎಂದೂ ಕರೆಯುತ್ತಾರೆ. ಈ ಜ್ಯೋತಿರ್ಲಿಂಗವನ್ನು ಪಾರ್ವತಿ ದೇವಿ ಮತ್ತು ಶಿವನ ಸಂಯೋಜಿತ ರೂಪವೆಂದು ಪರಿಗಣಿಸಲಾಗಿದೆ.
(3 / 14)

ಮಹಾಕಾಳೇಶ್ವರ ಜ್ಯೋತಿರ್ಲಿಂಗ: ಮಹಾಕಾಲೇಶ್ವರ ಜ್ಯೋತಿರ್ಲಿಂಗವು ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿದೆ. ಮಹಾಕಾಳೇಶ್ವರವನ್ನು ಮಹಾಕಾಳ ಎಂದೂ ಕರೆಯುತ್ತಾರೆ.
(4 / 14)

ಓಂಕಾರೇಶ್ವರ ಜ್ಯೋತಿರ್ಲಿಂಗ: ಇದು ಮಧ್ಯಪ್ರದೇಶದಲ್ಲಿದೆ. ಭೋಲೆನಾಥನು ಮೂರು ಲೋಕಗಳನ್ನು ಸುತ್ತಿದ ನಂತರ,  ರಾತ್ರಿ ಈ ಸ್ಥಳಕ್ಕೆ ವಿಶ್ರಾಂತಿಗಾಗಿ ಹೋಗುತ್ತಾನೆ ಎಂದು ನಂಬಲಾಗಿದೆ.  
(5 / 14)
ಓಂಕಾರೇಶ್ವರ ಜ್ಯೋತಿರ್ಲಿಂಗ: ಇದು ಮಧ್ಯಪ್ರದೇಶದಲ್ಲಿದೆ. ಭೋಲೆನಾಥನು ಮೂರು ಲೋಕಗಳನ್ನು ಸುತ್ತಿದ ನಂತರ,  ರಾತ್ರಿ ಈ ಸ್ಥಳಕ್ಕೆ ವಿಶ್ರಾಂತಿಗಾಗಿ ಹೋಗುತ್ತಾನೆ ಎಂದು ನಂಬಲಾಗಿದೆ.  (Shutterstock)
ಕೇದಾರನಾಥ ಜ್ಯೋತಿರ್ಲಿಂಗ: ಇದು ಉತ್ತರಾಖಂಡದಲ್ಲಿದೆ, ಶಿವನಿಗೆ ತುಂಬಾ ಪ್ರಿಯವಾದ ಸ್ಥಳವಾಗಿದೆ. ಈ ಜ್ಯೋತಿರ್ಲಿಂಗವನ್ನು ಎಲ್ಲಾ ಜ್ಯೋತಿರ್ಲಿಂಗಗಳಲ್ಲಿ ಅತ್ಯುನ್ನತವೆಂದು ಪರಿಗಣಿಸಲಾಗಿದೆ.  ಶಿವಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿಯೂ ಕೇದಾರನಾಥದ ವಿವರಣೆ ಕಂಡುಬರುತ್ತದೆ.
(6 / 14)

ಭೀಮಾ ಶಂಕರ ಜ್ಯೋತಿರ್ಲಿಂಗ: ಮಹಾರಾಷ್ಟ್ರದ ಅತ್ಯಂತ ದೊಡ್ಡ ಮತ್ತು ವಿಶಾಲವಾದ ದೇವಾಲಯವಾಗಿದೆ. ಭೀಮಾಶಂಕರ ಜ್ಯೋತಿರ್ಲಿಂಗವನ್ನು ಮೋಟೇಶ್ವರ ಮಹಾದೇವ ಎಂದೂ ಕರೆಯುತ್ತಾರೆ. ಜ್ಯೋತಿರ್ಲಿಂಗದ ಈ ಸ್ಥಳದಲ್ಲಿ ಶಿವನು ರಾಕ್ಷಸ ತ್ರಿಪುರಾಸುರನನ್ನು ಕೊಂದನು ಮತ್ತು ಭೀಮನನ್ನು ರಕ್ಷಿಸಿದನು ಎಂದು ನಂಬಲಾಗಿದೆ.
(7 / 14)

ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ: ಉತ್ತರ ಪ್ರದೇಶದ ಬನಾರಸ್‌ನಲ್ಲಿರುವ ಕಾಶಿ ವಿಶ್ವನಾಥ ಜ್ಯೋತಿರ್ಲಿಂಗವನ್ನು ಬಹಳ ಪ್ರಸಿದ್ಧವಾದ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ. ಮೋಕ್ಷವನ್ನು ಪಡೆಯಲು ಜೀವನದಲ್ಲಿ ಒಮ್ಮೆಯಾದರೂ ಈ ಜ್ಯೋತಿರ್ಲಿಂಗವನ್ನು ದರ್ಶನ ಮಾಡಬೇಕು ಎಂದು ನಂಬಲಾಗಿದೆ. ಬನಾರಸ್ ಅನ್ನು ಕಾಶಿ, ವಾರಣಾಸಿ ಎಂದೂ ಕರೆಯುತ್ತಾರೆ, ಇದು ಶಿವನ ನಗರವಾಗಿದೆ. ಇಡೀ ಕಾಶಿ ನಗರವು ಶಿವನ ತ್ರಿಶೂಲದ ಮೇಲೆ ನಿಂತಿದೆ ಎಂದು ನಂಬಲಾಗಿದೆ.
(8 / 14)

ತ್ರಯಂಬಕೇಶ್ವರ ಜ್ಯೋತಿರ್ಲಿಂಗ: ತ್ರಯಂಬಕೇಶ್ವರ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿದೆ. ಈ ಜ್ಯೋತಿರ್ಲಿಂಗದಲ್ಲಿ, ತ್ರಿಮೂರ್ತಿಗಳ ಮೂರು ಸಣ್ಣ ಶಿವಲಿಂಗಗಳಿವೆ, ಈ ಜ್ಯೋತಿರ್ಲಿಂಗದ ದರ್ಶನದಿಂದ, ಕಾಳಸರ್ಪ ದೋಷದಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.
(9 / 14)

ವೈದ್ಯನಾಥ ಜ್ಯೋತಿರ್ಲಿಂಗ:  ಪೌರಾಣಿಕ ನಂಬಿಕೆಗಳ ಪ್ರಕಾರ, ರಾವಣನು ಭಗವಾನ್ ಶಿವನನ್ನು ಮೆಚ್ಚಿಸಲು ತನ್ನ ಒಂಬತ್ತು ತಲೆಗಳನ್ನು ಕತ್ತರಿಸಿ ಅವನಿಗೆ ಅರ್ಪಿಸಿದ ಸ್ಥಳ ಎನ್ನಲಾಗಿದೆ. ರಾವಣನ ಭಕ್ತಿಗೆ ಮೆಚ್ಚಿದ ಶಿವನು ವರವನ್ನು ನೀಡುತ್ತಾನೆ. ಜಾರ್ಖಂಡ್‌ನಲ್ಲಿರುವ ಈ ಜ್ಯೋತಿರ್ಲಿಂಗವನ್ನು ರಾವಣೇಶ್ವರ ಧಾಮ ಎಂದೂ ಕರೆಯುತ್ತಾರೆ.
(10 / 14)

 ನಾಗೇಶ್ವರ ಜ್ಯೋತಿರ್ಲಿಂಗ: ಇದು ಹಾವುಗಳ ದೇವರು ಅಂದರೆ ನಾಗೇಶ್ವರ ಎಂದು ಹೆಸರಾಗಿದೆ. ಶಿವನ ನಾಗೇಶ್ವರ ಜ್ಯೋತಿರ್ಲಿಂಗವು ಗುಜರಾತ್‌ನ ದ್ವಾರಕಾದಲ್ಲಿದೆ.
(11 / 14)

ರಾಮೇಶ್ವರಂ ಜ್ಯೋತಿರ್ಲಿಂಗ: ಶಿವ ಪುರಾಣದ ಪ್ರಕಾರ, ರಾಮೇಶ್ವರಂ ಜ್ಯೋತಿರ್ಲಿಂಗವನ್ನು ಶ್ರೀ ರಾಮ ನಿರ್ಮಿಸಿದನು. ಈ ಕಾರಣದಿಂದ ಈ ಜ್ಯೋತಿರ್ಲಿಂಗಕ್ಕೆ ರಾಮೇಶ್ವರಂ ಎಂದು ಹೆಸರು ಬಂದಿದೆ. ಶಿವನ 11ನೇ ರಾಮೇಶ್ವರಂ ಜ್ಯೋತಿರ್ಲಿಂಗ ತಮಿಳುನಾಡಿನಲ್ಲಿದೆ. ರಾವಣನೊಂದಿಗೆ ಯುದ್ಧ ಮಾಡುವ ಮೊದಲು, ಶ್ರೀರಾಮನು ಸಮುದ್ರತೀರದಲ್ಲಿ ಮರಳಿನಿಂದ ಶಿವಲಿಂಗವನ್ನು ನಿರ್ಮಿಸಿ ಶಿವನನ್ನು ಪೂಜಿಸುತ್ತಾನೆ. 
(12 / 14)

ಘುಷ್ಮೇಶ್ವರ ಜ್ಯೋತಿರ್ಲಿಂಗ: ಎಲ್ಲಾ 12 ಜ್ಯೋತಿರ್ಲಿಂಗಗಳಲ್ಲಿ, ಚಿಕ್ಕದಾದ ಜ್ಯೋತಿರ್ಲಿಂಗವಿದು.  ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ  ಘುಷ್ಮೇಶ್ವರ ಜ್ಯೋತಿರ್ಲಿಂಗವಿದೆ. 
(13 / 14)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(14 / 14)

    ಹಂಚಿಕೊಳ್ಳಲು ಲೇಖನಗಳು