logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tv Screen Cleaning: ಟಿವಿ ಸ್ಕ್ರೀನ್‌ ಒರೆಸುವ ಮುನ್ನ ಮರೆಯದೇ ಗಮನಿಸಬೇಕಾದ 6 ಅಂಶಗಳಿವು

Tv Screen Cleaning: ಟಿವಿ ಸ್ಕ್ರೀನ್‌ ಒರೆಸುವ ಮುನ್ನ ಮರೆಯದೇ ಗಮನಿಸಬೇಕಾದ 6 ಅಂಶಗಳಿವು

Nov 07, 2023 01:57 PM IST

TV Screen Cleaning Tips: ಮನೆಯಲ್ಲಿನ ಟಿವಿ ಸ್ಕ್ರೀನ್‌ ಅನ್ನು ಆಗಾಗ ಸ್ವಚ್ಛ ಮಾಡುತ್ತಲೇ ಇರಬೇಕು. ಇಲ್ಲದಿದ್ದರೆ ಧೂಳಿ ಕಣದಿಂದ ಸ್ಕ್ರೀನ್‌ ಹಾಳಾಗಬಹುದು. ಆದರೆ ಟಿವಿ ಸ್ಕ್ರೀನ್‌ ಸ್ವಚ್ಛ ಮಾಡುವ ಮುನ್ನ ಕೆಲವು ಅಂಶಗಳನ್ನು ಗಮನಿಸಲೇಬೇಕು.

  • TV Screen Cleaning Tips: ಮನೆಯಲ್ಲಿನ ಟಿವಿ ಸ್ಕ್ರೀನ್‌ ಅನ್ನು ಆಗಾಗ ಸ್ವಚ್ಛ ಮಾಡುತ್ತಲೇ ಇರಬೇಕು. ಇಲ್ಲದಿದ್ದರೆ ಧೂಳಿ ಕಣದಿಂದ ಸ್ಕ್ರೀನ್‌ ಹಾಳಾಗಬಹುದು. ಆದರೆ ಟಿವಿ ಸ್ಕ್ರೀನ್‌ ಸ್ವಚ್ಛ ಮಾಡುವ ಮುನ್ನ ಕೆಲವು ಅಂಶಗಳನ್ನು ಗಮನಿಸಲೇಬೇಕು.
ಇತ್ತೀಚಿನ ದಿನಗಳಲ್ಲಿ ಹಲವರ ಮನೆಯಲ್ಲಿ ವಾಲ್‌ ಮೌಂಟೆಡ್‌ ಎಲ್‌ಇಡಿ ಟಿವಿ ಇರುವುದು ಸಹಜ. ಈ ಅತ್ಯಾಧುನಿಕ ಟಿವಿಗಳು ಮನೆಯ ಅಂದ ಹೆಚ್ಚಿಸುವ ಜೊತೆಗೆ ಸಕಲ ಸೌಲಭ್ಯಗಳೂ ಒಂದೇ ಪರಿಕರದಲ್ಲಿ ಸಿಗುವಂತೆ ಮಾಡುತ್ತವೆ. ಎಲ್ಇಡಿ ಟಿವಿ ಸ್ಕ್ರೀನ್‌ ಅನ್ನು ಆಗಾಗ ಸ್ವಚ್ಛ ಮಾಡುತ್ತಲೇ ಇರಬೇಕು. ಆದರೆ ಸ್ವಚ್ಛ ಮಾಡಲು ಮುನ್ನ ಯಾವುದೇ ಕಾರಣಕ್ಕೂ ಈ ಅಂಶಗಳನ್ನು ಮರೆಯಬಾರದು. 
(1 / 7)
ಇತ್ತೀಚಿನ ದಿನಗಳಲ್ಲಿ ಹಲವರ ಮನೆಯಲ್ಲಿ ವಾಲ್‌ ಮೌಂಟೆಡ್‌ ಎಲ್‌ಇಡಿ ಟಿವಿ ಇರುವುದು ಸಹಜ. ಈ ಅತ್ಯಾಧುನಿಕ ಟಿವಿಗಳು ಮನೆಯ ಅಂದ ಹೆಚ್ಚಿಸುವ ಜೊತೆಗೆ ಸಕಲ ಸೌಲಭ್ಯಗಳೂ ಒಂದೇ ಪರಿಕರದಲ್ಲಿ ಸಿಗುವಂತೆ ಮಾಡುತ್ತವೆ. ಎಲ್ಇಡಿ ಟಿವಿ ಸ್ಕ್ರೀನ್‌ ಅನ್ನು ಆಗಾಗ ಸ್ವಚ್ಛ ಮಾಡುತ್ತಲೇ ಇರಬೇಕು. ಆದರೆ ಸ್ವಚ್ಛ ಮಾಡಲು ಮುನ್ನ ಯಾವುದೇ ಕಾರಣಕ್ಕೂ ಈ ಅಂಶಗಳನ್ನು ಮರೆಯಬಾರದು. 
ಟಿವಿ ಸ್ವಚ್ಛ ಮಾಡಲು ಆರಂಭಿಸುವ ಮುನ್ನ ಟಿವಿಗೆ ಕನೆಕ್ಟ್‌ ಇರುವ ಎಲ್ಲಾ ಸ್ವಿಚ್‌ಗಳನ್ನು ಆಫ್‌ ಮಾಡಬೇಕು. ಫ್ಲಗ್‌ ಕಿತ್ತು ಇಡುವುದು ಉತ್ತಮ ಅಭ್ಯಾಸ. ಇದರಿಂದ ವಿದ್ಯುತ್‌ ಅಪಾಯಗಳನ್ನು ತಪ್ಪಿಸಬಹುದು. 
(2 / 7)
ಟಿವಿ ಸ್ವಚ್ಛ ಮಾಡಲು ಆರಂಭಿಸುವ ಮುನ್ನ ಟಿವಿಗೆ ಕನೆಕ್ಟ್‌ ಇರುವ ಎಲ್ಲಾ ಸ್ವಿಚ್‌ಗಳನ್ನು ಆಫ್‌ ಮಾಡಬೇಕು. ಫ್ಲಗ್‌ ಕಿತ್ತು ಇಡುವುದು ಉತ್ತಮ ಅಭ್ಯಾಸ. ಇದರಿಂದ ವಿದ್ಯುತ್‌ ಅಪಾಯಗಳನ್ನು ತಪ್ಪಿಸಬಹುದು. 
ಎಲ್‌ಸಿಡಿ, ಎಲ್‌ಇಡಿ ಟಿವಿ ಸ್ಕ್ರೀನ್‌ಗಳ ಮೇಲಿನ ಸಣ್ಣ ಧೂಳಿನ ಕಿಡಿಯು ಟಿವಿ ಪರದೆ ಸ್ಕ್ರ್ಯಾಚ್‌ ಉಂಟಾಗಲು ಕಾರಣವಾಗಬಹುದು. ಹಾಗಾಗಿ ಎಲ್‌ಇಡಿ, ಒಎಲ್ಇಡಿ ಮತ್ತು ಪ್ಲಾಸ್ಮಾ ಟಿವಿಗಳ ಪರದೆಗಳನ್ನು ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆಯನ್ನು ಬಳಸುವುದು ಸೂಕ್ತ. 
(3 / 7)
ಎಲ್‌ಸಿಡಿ, ಎಲ್‌ಇಡಿ ಟಿವಿ ಸ್ಕ್ರೀನ್‌ಗಳ ಮೇಲಿನ ಸಣ್ಣ ಧೂಳಿನ ಕಿಡಿಯು ಟಿವಿ ಪರದೆ ಸ್ಕ್ರ್ಯಾಚ್‌ ಉಂಟಾಗಲು ಕಾರಣವಾಗಬಹುದು. ಹಾಗಾಗಿ ಎಲ್‌ಇಡಿ, ಒಎಲ್ಇಡಿ ಮತ್ತು ಪ್ಲಾಸ್ಮಾ ಟಿವಿಗಳ ಪರದೆಗಳನ್ನು ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆಯನ್ನು ಬಳಸುವುದು ಸೂಕ್ತ. (Getty images)
ಟಿ.ವಿ ಪರದೆಯ ಮೂಲೆ ಹಾಗೂ ಅಂಚುಗಳನ್ನು ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆ ಅವಶ್ಯ. ಆದರೆ ಈ ಜಾಗಗಳನ್ನು ಗಟ್ಟಿಯಾಗಿ ಪ್ರೆಸ್‌ ಮಾಡಿ ಒರೆಸಬಾರದು ಎಂಬುದು ನೆನಪಿರಲಿ.
(4 / 7)
ಟಿ.ವಿ ಪರದೆಯ ಮೂಲೆ ಹಾಗೂ ಅಂಚುಗಳನ್ನು ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆ ಅವಶ್ಯ. ಆದರೆ ಈ ಜಾಗಗಳನ್ನು ಗಟ್ಟಿಯಾಗಿ ಪ್ರೆಸ್‌ ಮಾಡಿ ಒರೆಸಬಾರದು ಎಂಬುದು ನೆನಪಿರಲಿ.(Getty Images)
ಕೆಲವರು ಟಿವಿ ಪರದೆಯನ್ನು ಸ್ವಚ್ಛಗೊಳಿಸಲು ರಾಸಾಯನಿಕ ಸ್ಪ್ರೇ ಬಳಸುತ್ತಾರೆ. ಆದರೆ ಇದರ ಬಳಕೆಗೂ ಮುನ್ನ ಗುಣಮಟ್ಟ ಪರಿಶೀಲಿಸಿ. ಖರೀದಿಗೂ ಮುನ್ನ ಎಚ್ಚರ ವಹಿಸಿ. ಅದನ್ನು ನೇರವಾಗಿ ಪರದೆಗೆ ಸಿಂಪಡಿಸಬೇಡಿ. ಒರೆಸುವ ಬಟ್ಟೆಗೆ ಸಿಂಪಡಿಸಿ ನಂತರ ಟಿವಿ ಪರದೆಯನ್ನು ಒರೆಸಿ.
(5 / 7)
ಕೆಲವರು ಟಿವಿ ಪರದೆಯನ್ನು ಸ್ವಚ್ಛಗೊಳಿಸಲು ರಾಸಾಯನಿಕ ಸ್ಪ್ರೇ ಬಳಸುತ್ತಾರೆ. ಆದರೆ ಇದರ ಬಳಕೆಗೂ ಮುನ್ನ ಗುಣಮಟ್ಟ ಪರಿಶೀಲಿಸಿ. ಖರೀದಿಗೂ ಮುನ್ನ ಎಚ್ಚರ ವಹಿಸಿ. ಅದನ್ನು ನೇರವಾಗಿ ಪರದೆಗೆ ಸಿಂಪಡಿಸಬೇಡಿ. ಒರೆಸುವ ಬಟ್ಟೆಗೆ ಸಿಂಪಡಿಸಿ ನಂತರ ಟಿವಿ ಪರದೆಯನ್ನು ಒರೆಸಿ.(Getty images)
ಸ್ಪ್ರೇಯಿಂದ ಒರೆಸುವ ಮೊದಲು ಪೇಪರ್‌ ಅಥವಾ ಟಿಶ್ಯೂ ಸಹಾಯದಿಂದ ಧೂಳು ಒರೆಸಿಕೊಳ್ಳಿ. ಟಿವಿ ಸ್ಕ್ರೀನ್‌ ಜೊತೆಗೆ ಸ್ಪೀಕರ್‌ಗಳು ಹಾಗೂ ಪೋರ್ಟ್‌ಗಳ ಧೂಳನ್ನು ಸ್ವಚ್ಛಗೊಳಿಸುವುದು ಒಳ್ಳೆಯದು.
(6 / 7)
ಸ್ಪ್ರೇಯಿಂದ ಒರೆಸುವ ಮೊದಲು ಪೇಪರ್‌ ಅಥವಾ ಟಿಶ್ಯೂ ಸಹಾಯದಿಂದ ಧೂಳು ಒರೆಸಿಕೊಳ್ಳಿ. ಟಿವಿ ಸ್ಕ್ರೀನ್‌ ಜೊತೆಗೆ ಸ್ಪೀಕರ್‌ಗಳು ಹಾಗೂ ಪೋರ್ಟ್‌ಗಳ ಧೂಳನ್ನು ಸ್ವಚ್ಛಗೊಳಿಸುವುದು ಒಳ್ಳೆಯದು.(Getty images)
ಟಿವಿ ಪರದೆಯನ್ನು ಸ್ವಚ್ಛಗೊಳಿಸುವಾಗ ಒಂದೇ ಡೈರೆಕ್ಷನ್‌ನಲ್ಲಿ ಹಲವಾರು ಬಾರಿ ಒರೆಸಬೇಡಿ. ಹಾಗೆ ಮಾಡುವುದರಿಂದ ಪರದೆಯ ಮೇಲೆ ಗೀರುಗಳು ಉಂಟಾಗಬಹುದು. ಇದನ್ನು ತಪ್ಪಿಸಲು, ಅಡ್ಡಲಾಗಿ ಅಥವಾ ಲಂಬವಾಗಿ ಒರೆಸಿ. ಆದರೆ ಅತಿಯಾಗಿ ಶಕ್ತಿ ಹಾಕಿ ಒರೆಸುವುದು ಖಂಡಿತ ತಪ್ಪು. ನೆನಪಿರಲಿ. 
(7 / 7)
ಟಿವಿ ಪರದೆಯನ್ನು ಸ್ವಚ್ಛಗೊಳಿಸುವಾಗ ಒಂದೇ ಡೈರೆಕ್ಷನ್‌ನಲ್ಲಿ ಹಲವಾರು ಬಾರಿ ಒರೆಸಬೇಡಿ. ಹಾಗೆ ಮಾಡುವುದರಿಂದ ಪರದೆಯ ಮೇಲೆ ಗೀರುಗಳು ಉಂಟಾಗಬಹುದು. ಇದನ್ನು ತಪ್ಪಿಸಲು, ಅಡ್ಡಲಾಗಿ ಅಥವಾ ಲಂಬವಾಗಿ ಒರೆಸಿ. ಆದರೆ ಅತಿಯಾಗಿ ಶಕ್ತಿ ಹಾಕಿ ಒರೆಸುವುದು ಖಂಡಿತ ತಪ್ಪು. ನೆನಪಿರಲಿ. (Getty Images)

    ಹಂಚಿಕೊಳ್ಳಲು ಲೇಖನಗಳು