logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನ್ಯೂಜಿಲೆಂಡ್ ಎದುರಿನ ಸೆಮೀಸ್​​ಗೂ ಮುನ್ನ ಭಾರತದ ಅಜೇಯ ಓಟ ಹೇಗಿತ್ತು; ರೋಚಕ ಜರ್ನಿಯ ಕಿರುನೋಟ ಇಲ್ಲಿದೆ

ನ್ಯೂಜಿಲೆಂಡ್ ಎದುರಿನ ಸೆಮೀಸ್​​ಗೂ ಮುನ್ನ ಭಾರತದ ಅಜೇಯ ಓಟ ಹೇಗಿತ್ತು; ರೋಚಕ ಜರ್ನಿಯ ಕಿರುನೋಟ ಇಲ್ಲಿದೆ

Nov 13, 2023 08:30 PM IST

Team India: ವಿಶ್ವಕಪ್ ಟೂರ್ನಿಯ ಲೀಗ್​ ಹಂತದಲ್ಲಿ ಆಡಿದ 9 ಪಂದ್ಯಗಳನ್ನೂ ಗೆದ್ದು ಭಾರತ ಅಜೇಯವಾಗಿ ಉಳಿದಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್​ನಲ್ಲಿ ಸೆಣಸಾಣ ನಡೆಸಲಿದೆ. ಲೀಗ್​​​ನಲ್ಲಿ ಭಾರತ ಗೆದ್ದಿರುವ 9 ಪಂದ್ಯಗಳ ಚಿತ್ರಣ ಇಲ್ಲಿದೆ.

  • Team India: ವಿಶ್ವಕಪ್ ಟೂರ್ನಿಯ ಲೀಗ್​ ಹಂತದಲ್ಲಿ ಆಡಿದ 9 ಪಂದ್ಯಗಳನ್ನೂ ಗೆದ್ದು ಭಾರತ ಅಜೇಯವಾಗಿ ಉಳಿದಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್​ನಲ್ಲಿ ಸೆಣಸಾಣ ನಡೆಸಲಿದೆ. ಲೀಗ್​​​ನಲ್ಲಿ ಭಾರತ ಗೆದ್ದಿರುವ 9 ಪಂದ್ಯಗಳ ಚಿತ್ರಣ ಇಲ್ಲಿದೆ.
ಭಾರತ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ಗಳ ಜಯದೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 199 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಭಾರತ ಇನ್ನೂ 52 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳ ಜಯ ಸಾಧಿಸಿತು. ಕೆಎಲ್ ರಾಹುಲ್ ಪಂದ್ಯಶ್ರೇಷ್ಠ (115 ಎಸೆತಗಳಲ್ಲಿ 97 ರನ್).
(1 / 10)

ಅಕ್ಟೋಬರ್​ 11ರಂದು ಭಾರತ-ಅಫ್ಘಾನಿಸ್ತಾನ ಪಂದ್ಯ ನಡೆಯಿತು. ಮೊದಲು ಬ್ಯಾಟ್ ನಡೆಸಿದ ಅಫ್ಘನ್, 50 ಓವರ್‌ಗಳಲ್ಲಿ 8 ವಿಕೆಟ್‌ಗೆ 272 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ 35 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ರೋಹಿತ್ ಶರ್ಮಾ (84 ಎಸೆತಗಳಲ್ಲಿ 131 ರನ್) ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.
(2 / 10)

ವಿಶ್ವಕಪ್​ನ ಹೈವೋಲ್ಟೇಜ್​ ಪಂದ್ಯವು ಅಕ್ಟೋಬರ್​ 14ರಂದು ನಡೆಯಿತು. ಅಹ್ಮದಾಬಾದ್​​ನ ನರೇಂದ್ರ ಮೋದಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನದ 191 ರನ್‌ಗೆ ಆಲೌಟ್​ ಆಯಿತು. ಈ ಗುರಿ ಬೆನ್ನಟ್ಟಿದ 117 ಎಸೆತಗಳು ಬಾಕಿ ಇರುವಂತೆಯೇ ಭಾರತ 7 ವಿಕೆಟ್‌ ಜಯ ಸಾಧಿಸಿತು. ಜಸ್ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದರು. 7 ಓವರ್​ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರು.
(3 / 10)

ಸತತ ಮೂರು ಪಂದ್ಯಗಳನ್ನು ಗೆದ್ದಿದ್ದ ಭಾರತ ಅಕ್ಟೋಬರ್​ 19ರಂದು ಬಾಂಗ್ಲಾದೇಶ ತಂಡವನ್ನು ಎದುರಿಸಿತು. ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 8 ವಿಕೆಟ್‌ಗೆ 256 ರನ್ ಗಳಿಸಿತು. ಭಾರತ ಇನ್ನೂ 51 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳ ಜಯ ಸಾಧಿಸಿತು. ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ (97 ಎಸೆತಗಳಲ್ಲಿ 103 ರನ್).
(4 / 10)

ಬಾಂಗ್ಲಾವನ್ನು ಮಣಿಸಿದ ರೋಹಿತ್​ ಪಡೆ ನಂತರ ನ್ಯೂಜಿಲೆಂಡ್ ತಂಡವನ್ನು ಎದುರಿಸಿತು. ಅಕ್ಟೋಬರ್ 22ರಂದು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್​​ನಲ್ಲಿ ಈ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್​ 273 ರಮ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ 48 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ಗೆರೆ ದಾಟಿತು. ಮೊಹಮ್ಮದ್ ಶಮಿ (5 ವಿಕೆಟ್) ಪಂದ್ಯಶ್ರೇಷ್ಠ.
(5 / 10)

ಸತತ ಗೆಲುವಿನ ನಾಗಾಲೋಟದಲ್ಲಿದ್ದ ಭಾರತ, ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಅಕ್ಟೋಬರ್ 29ರಂದು ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ಎದುರಿಸಿತು. ಭಾರತ ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಮೊದಲು ಬ್ಯಾಟಿಂಗ್ ನಡೆಸಿತು. ನಿಗದಿತ 50 ಓವರ್​​ಗಳಲ್ಲಿ 9 ವಿಕೆಟ್‌ಗೆ 229 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 34.5 ಓವರ್‌ಗಳಲ್ಲಿ 129 ರನ್‌ಗಳಿಗೆ ಇನಿಂಗ್ಸ್‌ ಅಂತ್ಯಗೊಳಿಸಿತು. ಭಾರತ 100 ರನ್‌ಗಳ ಜಯ ಸಾಧಿಸಿತು. ರೋಹಿತ್ ಪಂದ್ಯಶ್ರೇಷ್ಠ (101 ಎಸೆತಗಳಲ್ಲಿ 87 ರನ್). ಶಮಿ ನಾಲ್ಕು ವಿಕೆಟ್ ಪಡೆದು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
(6 / 10)

ಮುಂಬೈನ ವಾಂಖೆಡೆ ಮೈದಾನದಲ್ಲಿ ನವೆಂಬರ್​​ 2ರಂದು ಗುರುವಾರ ಶ್ರೀಲಂಕಾ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. ವಿರಾಟ್ ಕೊಹ್ಲಿ 88, ಶುಭ್ಮನ್ ಗಿಲ್ 91, ಶ್ರೇಯಸ್ ಅಯ್ಯರ್ 82 ರನ್ ಗಳಿಸಿದರು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ 55 ರನ್​​ಗಳಿಗೆ ಆಲೌಟ್ ಆಯಿತು. ಭಾರತ 302 ರನ್​ಗಳ ಜಯ ಸಾಧಿಸಿತು. ಮೊಹಮ್ಮದ್ ಶಮಿ 5 ಓವರ್​ಗಳಲ್ಲಿ 18 ರನ್ ನೀಡಿ 5 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠರಾದರು.
(7 / 10)

ಸತತ 6 ಪಂದ್ಯ ಜಯಿಸಿದ್ದ ಭಾರತ ತನ್ನ 7ನೇ ಪಂದ್ಯದಲ್ಲಿ ಬಲಿಷ್ಠ ಸೌತ್ ಆಫ್ರಿಕಾ ತಂಡವನ್ನು ಎದುರಿಸಿತು. ನವೆಂಬರ್​ 5ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮತ್ತೆ ಮೊದಲ ಬಾರಿಗೆ ಬ್ಯಾಟಿಂಗ್ ನಡೆಸಿತು. ವಿರಾಟ್ ಕೊಹ್ಲಿ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆಫ್ರಿಕಾ 83 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ 243 ರನ್‌ಗಳ ಜಯ ಸಾಧಿಸಿತು. ವಿರಾಟ್ ಪಂದ್ಯಶ್ರೇಷ್ಠ (121 ಎಸೆತಗಳಲ್ಲಿ 101 ರನ್).
(8 / 10)

ಸತತ 8 ಗೆಲುವು ಸಾಧಿಸಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ, ಕೊನೆಯ ಲೀಗ್​ ಪಂದ್ಯದಲ್ಲೂ ಜಯದ ನಗೆ ಬೀರಿತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ನಡೆಸಿತು. 4 ವಿಕೆಟ್‌ ನಷ್ಟಕ್ಕೆ 410 ರನ್​ಗಳ ಬೃಹತ್ ಮೊತ್ತ ಗಳಿಸಿತು. ಈ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ 250 ರನ್‌ಗಳಿಗೆ ಆಲೌಟ್ ಆಯಿತು. ಭಾರತ 160 ರನ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅಜೇಯ 128 ರನ್, ಕೆಎಲ್ ರಾಹುಲ್ 102 ರನ್ ಗಳಿಸಿದರು. ಅಯ್ಯರ್ ಪಂದ್ಯಶ್ರೇಷ್ಠ. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ 9 ಪಂದ್ಯಗಳನ್ನೂ ಗೆದ್ದುಕೊಂಡಿತು.
(9 / 10)

ಈ ಬಾರಿ ರೋಹಿತ್, ವಿರಾಟ್ ಮತ್ತು ಶಮಿ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೂವರೂ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆದರೆ ಎಲ್ಲರೂ ಒಂಬತ್ತು ಪಂದ್ಯಗಳನ್ನು ಆಡಿದ್ದಾರೆ. ಶಮಿ ಐದು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ನವೆಂಬರ್ 15ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಲಿವೆ.
(10 / 10)

    ಹಂಚಿಕೊಳ್ಳಲು ಲೇಖನಗಳು