logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Quad Meet 2023: ಭಾರತವಿಲ್ಲದ ಇಂಡೋ-ಪೆಸಿಫಿಕ್‌ ಊಹಿಸಲೂ ಸಾಧ್ಯವಿಲ್ಲ: ಕ್ವಾಡ್‌ ಸಭೆಯಲ್ಲಿ ಮೂಡಿದ ಒಮ್ಮತದ ಅಭಿಪ್ರಾಯ

Quad Meet 2023: ಭಾರತವಿಲ್ಲದ ಇಂಡೋ-ಪೆಸಿಫಿಕ್‌ ಊಹಿಸಲೂ ಸಾಧ್ಯವಿಲ್ಲ: ಕ್ವಾಡ್‌ ಸಭೆಯಲ್ಲಿ ಮೂಡಿದ ಒಮ್ಮತದ ಅಭಿಪ್ರಾಯ

Mar 03, 2023 10:05 AM IST

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕ್ವಾಡ್‌ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಡಾ.ಎಸ್.‌ ಜೈಶಂಕರ್,ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಜಪಾನ್ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಹಾಗೂ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಭಾಗವಹಿಸಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..

  • ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕ್ವಾಡ್‌ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಡಾ.ಎಸ್.‌ ಜೈಶಂಕರ್,ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಜಪಾನ್ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಹಾಗೂ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಭಾಗವಹಿಸಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..
ದೆಹಲಿಯ ರೈಸಿನಾ ಸಂವಾದ ಕ್ವಾಡ್‌ ವಿದೇಶಾಂಗ ಸಚಿವರ ಸಭೆಯಲ್ಲಿ, ಭಾರತವನ್ನು ಹೊರಗೊಟ್ಟು ಇಂಡೋ-ಪೆಸಿಫಿಕ್‌ನ್ನು ಮರುರೂಪಿಸುವುದು ಸಾಧ್ಯವಿಲ್ಲ ಎಂಬ ಒಮ್ಮತದ ಅಭಿಪ್ರಾಯವನ್ನೂ ಎಲ್ಲ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರೂ ಹೊರಹಾಕಿದರು.
(1 / 5)
ದೆಹಲಿಯ ರೈಸಿನಾ ಸಂವಾದ ಕ್ವಾಡ್‌ ವಿದೇಶಾಂಗ ಸಚಿವರ ಸಭೆಯಲ್ಲಿ, ಭಾರತವನ್ನು ಹೊರಗೊಟ್ಟು ಇಂಡೋ-ಪೆಸಿಫಿಕ್‌ನ್ನು ಮರುರೂಪಿಸುವುದು ಸಾಧ್ಯವಿಲ್ಲ ಎಂಬ ಒಮ್ಮತದ ಅಭಿಪ್ರಾಯವನ್ನೂ ಎಲ್ಲ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರೂ ಹೊರಹಾಕಿದರು.(ANI)
ಈ ಕುರಿತು ಮಾತನಾಡಿದ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್,  ಭಾರತವು ನಿರ್ಣಾಯಕ ಶಕ್ತಿಯಾಗಿದೆ. ಭಾರತವಿಲ್ಲದೆ ಇಂಡೋ ಪೆಸಿಫಿಕ್ ಅನ್ನು ಮರುರೂಪಿಸಲಾಗುವುದಿಲ್ಲ. ಭಾರತವು ನಾಗರಿಕತೆಯ ಶಕ್ತಿಯಾಗಿದ್ದು, ಈ ಕಾಲದ ಕೆಲವು ಸವಾಲುಗಳಿಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿದೆ ಎಂದು ಹೇಳಿದರು.
(2 / 5)
ಈ ಕುರಿತು ಮಾತನಾಡಿದ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್,  ಭಾರತವು ನಿರ್ಣಾಯಕ ಶಕ್ತಿಯಾಗಿದೆ. ಭಾರತವಿಲ್ಲದೆ ಇಂಡೋ ಪೆಸಿಫಿಕ್ ಅನ್ನು ಮರುರೂಪಿಸಲಾಗುವುದಿಲ್ಲ. ಭಾರತವು ನಾಗರಿಕತೆಯ ಶಕ್ತಿಯಾಗಿದ್ದು, ಈ ಕಾಲದ ಕೆಲವು ಸವಾಲುಗಳಿಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿದೆ ಎಂದು ಹೇಳಿದರು.(ANI)
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯುಎಸ್‌ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಇಂಡೋ-ಪೆಸಿಫಿಕ್ ನಮ್ಮ ಭವಿಷ್ಯವಾಗಿದೆ. ಭಾರತ ಈ ಪ್ರದೇಶದಲ್ಲಿ ನಿರ್ವಹಿಸಬಹುದಾದ ನಿರ್ಣಾಯಕ ಪಾತ್ರದ ಬಗ್ಗೆ ನಮಗೆ ಸ್ಪಷ್ಟ ಅರಿವಿದೆ ಎಂದು ಹೇಳಿದರು.
(3 / 5)
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯುಎಸ್‌ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಇಂಡೋ-ಪೆಸಿಫಿಕ್ ನಮ್ಮ ಭವಿಷ್ಯವಾಗಿದೆ. ಭಾರತ ಈ ಪ್ರದೇಶದಲ್ಲಿ ನಿರ್ವಹಿಸಬಹುದಾದ ನಿರ್ಣಾಯಕ ಪಾತ್ರದ ಬಗ್ಗೆ ನಮಗೆ ಸ್ಪಷ್ಟ ಅರಿವಿದೆ ಎಂದು ಹೇಳಿದರು.(ANI)
ಇದೇ ವೇಳೆ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಡಾ.ಎಸ್.‌ ಜೈಶಂಕರ್‌, ಕ್ವಾಡ್‌ ಓಕ್ಕೂಟ ಜಾಗತಿಕ ಪರಿಣಾಮಗಳನ್ನು ಬೀರುತ್ತಿದೆ ಎಂದು ಹೇಳಿದರು.
(4 / 5)
ಇದೇ ವೇಳೆ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಡಾ.ಎಸ್.‌ ಜೈಶಂಕರ್‌, ಕ್ವಾಡ್‌ ಓಕ್ಕೂಟ ಜಾಗತಿಕ ಪರಿಣಾಮಗಳನ್ನು ಬೀರುತ್ತಿದೆ ಎಂದು ಹೇಳಿದರು.(ANI)
ಸಭೆ ಆರಂಭಕ್ಕೂ ಮುನ್ನ ಟ್ವೀಟ್‌ ಮಾಡಿದ್ದ ಆಂಟೋನಿ ಬ್ಲಿಂಕೆನ್, 'ಕ್ವಾಡ್‌ ವಿದೇಶಾಂಗ ಸಚಿವರೊಂದಿಗೆ ಬೆಳಗಿನ ಉಪಹಾರ ಸೇವಿಸುತ್ತಿರುವುದು ಸಂತಸ ತಂದಿದೆ. ಇಂಡೋ-ಪೆಸಿಫಿಕ್ ಪ್ರದೇಶವು 21 ನೇ ಶತಮಾನದಲ್ಲಿ ಪ್ರಪಂಚದ ಪಥವನ್ನು ರೂಪಿಸುತ್ತದೆ ಮತ್ತು ಅದರ ಶಾಂತಿ, ಸ್ಥಿರತೆ ಮತ್ತು ಬೆಳೆಯುತ್ತಿರುವ ಸಮೃದ್ಧಿಯನ್ನು ಕಾಪಾಡಲು ಬದ್ಧವಾಗಿದೆ..' ಎಂದು ಹೇಳಿದ್ದರು.
(5 / 5)
ಸಭೆ ಆರಂಭಕ್ಕೂ ಮುನ್ನ ಟ್ವೀಟ್‌ ಮಾಡಿದ್ದ ಆಂಟೋನಿ ಬ್ಲಿಂಕೆನ್, 'ಕ್ವಾಡ್‌ ವಿದೇಶಾಂಗ ಸಚಿವರೊಂದಿಗೆ ಬೆಳಗಿನ ಉಪಹಾರ ಸೇವಿಸುತ್ತಿರುವುದು ಸಂತಸ ತಂದಿದೆ. ಇಂಡೋ-ಪೆಸಿಫಿಕ್ ಪ್ರದೇಶವು 21 ನೇ ಶತಮಾನದಲ್ಲಿ ಪ್ರಪಂಚದ ಪಥವನ್ನು ರೂಪಿಸುತ್ತದೆ ಮತ್ತು ಅದರ ಶಾಂತಿ, ಸ್ಥಿರತೆ ಮತ್ತು ಬೆಳೆಯುತ್ತಿರುವ ಸಮೃದ್ಧಿಯನ್ನು ಕಾಪಾಡಲು ಬದ್ಧವಾಗಿದೆ..' ಎಂದು ಹೇಳಿದ್ದರು.(ANI)

    ಹಂಚಿಕೊಳ್ಳಲು ಲೇಖನಗಳು