logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಮ ದರ್ಬಾರ್‌ನಿಂದ ಸೀತಾ ಕೂಪದವರೆಗೆ, ಅಯೋಧ್ಯೆ ರಾಮಮಂದಿರದಲ್ಲಿದೆ ನಿಮ್ಮ ಊಹೆಗೆ ನಿಲುಕದ ಹಲವು ವೈಶಿಷ್ಟ್ಯಗಳು

ರಾಮ ದರ್ಬಾರ್‌ನಿಂದ ಸೀತಾ ಕೂಪದವರೆಗೆ, ಅಯೋಧ್ಯೆ ರಾಮಮಂದಿರದಲ್ಲಿದೆ ನಿಮ್ಮ ಊಹೆಗೆ ನಿಲುಕದ ಹಲವು ವೈಶಿಷ್ಟ್ಯಗಳು

Jan 21, 2024 05:51 PM IST

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಸಜ್ಜಾಗಿದ್ದು, ನಾಳೆ ಅಂದರೆ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ. ಈ ಹೊತ್ತಿನಲ್ಲಿ ರಾಮಮಂದಿರದ ವೈಶಿಷ್ಟ್ಯಗಳ ಬಗ್ಗೆ ಚಿತ್ರ ಸಹಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇದು ನಿಮ್ಮಲ್ಲಿ ಅಚ್ಚರಿ ಮೂಡಿಸುವುದು ಖಂಡಿತ. 

  • ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಸಜ್ಜಾಗಿದ್ದು, ನಾಳೆ ಅಂದರೆ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ. ಈ ಹೊತ್ತಿನಲ್ಲಿ ರಾಮಮಂದಿರದ ವೈಶಿಷ್ಟ್ಯಗಳ ಬಗ್ಗೆ ಚಿತ್ರ ಸಹಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇದು ನಿಮ್ಮಲ್ಲಿ ಅಚ್ಚರಿ ಮೂಡಿಸುವುದು ಖಂಡಿತ. 
ಸದ್ಯ ಭಾರತದಾದ್ಯಂತ ಎಲ್ಲಿ ಕೇಳಿದರೂ ಶ್ರೀರಾಮ, ಅಯೋಧ್ಯೆಯದ್ದೇ ಸದ್ದು. ನಾಳೆ (ಜ.22) ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಇದೆ. 75 ಎಕರೆ ವಿಸ್ತೀರ್ಣದಲ್ಲಿ ಬಹೃತ್‌ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಈ ದೇಗುಲವನ್ನು ಸಂಪೂರ್ಣವಾಗಿ ದೇಶದ ಸಾಂಪ್ರದಾಯಿಕ ಸ್ಥಳೀಯ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾಗಿದೆ. 1000 ವರ್ಷ ಕಳೆದರೂ ಈ ದೇವಾಲಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಭಾರತದ ಬಹುಕೋಟಿ ಜನರ ಕನಸಾಗಿರುವ ರಾಮಮಂದಿರದ ವೈಶಿಷ್ಟ್ಯದ ಸಚಿತ್ರ ವರದಿ ಇಲ್ಲಿದೆ. 
(1 / 13)
ಸದ್ಯ ಭಾರತದಾದ್ಯಂತ ಎಲ್ಲಿ ಕೇಳಿದರೂ ಶ್ರೀರಾಮ, ಅಯೋಧ್ಯೆಯದ್ದೇ ಸದ್ದು. ನಾಳೆ (ಜ.22) ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಇದೆ. 75 ಎಕರೆ ವಿಸ್ತೀರ್ಣದಲ್ಲಿ ಬಹೃತ್‌ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಈ ದೇಗುಲವನ್ನು ಸಂಪೂರ್ಣವಾಗಿ ದೇಶದ ಸಾಂಪ್ರದಾಯಿಕ ಸ್ಥಳೀಯ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾಗಿದೆ. 1000 ವರ್ಷ ಕಳೆದರೂ ಈ ದೇವಾಲಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಭಾರತದ ಬಹುಕೋಟಿ ಜನರ ಕನಸಾಗಿರುವ ರಾಮಮಂದಿರದ ವೈಶಿಷ್ಟ್ಯದ ಸಚಿತ್ರ ವರದಿ ಇಲ್ಲಿದೆ. (File Photo)
ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಕಾರ, ರಾಮಮಂದಿರವು ಮೂರು ಅಂತಸ್ತಿನ ದೇವಾಲಯವಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರದಲ್ಲಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಒಳಗೊಂಡಿದೆ. 
(2 / 13)
ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಕಾರ, ರಾಮಮಂದಿರವು ಮೂರು ಅಂತಸ್ತಿನ ದೇವಾಲಯವಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರದಲ್ಲಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಒಳಗೊಂಡಿದೆ. (ANI)
ಅಯೋಧ್ಯೆಯ ರಾಮಮಂದಿರದ ಮುಖ್ಯ ದ್ವಾರವು ಆನೆಗಳು, ಸಿಂಹಗಳು, ಭಗವಾನ್ ಹನುಮಾನ್ ಮತ್ತು 'ಗರುಡ'ನ ಪ್ರತಿಮೆಗಳಿಂದ ಅಲಂಕರಿಸಲ್ಪಟ್ಟಿದೆ. ಈ ಪ್ರತಿಮೆಗಳನ್ನು ರಾಜಸ್ಥಾನದ ಬನ್ಸಿ ಪಹಾರ್‌ಪುರ ಪ್ರದೇಶದಿಂದ ಸಂಗ್ರಹಿಸಿದ ಮರಳುಗಲ್ಲಿನಿಂದ ರಚಿಸಲಾಗಿದೆ.
(3 / 13)
ಅಯೋಧ್ಯೆಯ ರಾಮಮಂದಿರದ ಮುಖ್ಯ ದ್ವಾರವು ಆನೆಗಳು, ಸಿಂಹಗಳು, ಭಗವಾನ್ ಹನುಮಾನ್ ಮತ್ತು 'ಗರುಡ'ನ ಪ್ರತಿಮೆಗಳಿಂದ ಅಲಂಕರಿಸಲ್ಪಟ್ಟಿದೆ. ಈ ಪ್ರತಿಮೆಗಳನ್ನು ರಾಜಸ್ಥಾನದ ಬನ್ಸಿ ಪಹಾರ್‌ಪುರ ಪ್ರದೇಶದಿಂದ ಸಂಗ್ರಹಿಸಿದ ಮರಳುಗಲ್ಲಿನಿಂದ ರಚಿಸಲಾಗಿದೆ.(ANI)
ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯದ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ, 
(4 / 13)
ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯದ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ, (ANI)
ದೇವಾಲಯದ ಪ್ರತಿಯೊಂದು ಮಹಡಿಯು 20 ಅಡಿ ಎತ್ತರವನ್ನು ಹೊಂದಿರುತ್ತದೆ ಮತ್ತು ಒಟ್ಟು 392 ಕಂಬಗಳು ಮತ್ತು 44 ದ್ವಾರಗಳನ್ನು ರಾಮಮಂದಿರ ಹೊಂದಿದೆ. 
(5 / 13)
ದೇವಾಲಯದ ಪ್ರತಿಯೊಂದು ಮಹಡಿಯು 20 ಅಡಿ ಎತ್ತರವನ್ನು ಹೊಂದಿರುತ್ತದೆ ಮತ್ತು ಒಟ್ಟು 392 ಕಂಬಗಳು ಮತ್ತು 44 ದ್ವಾರಗಳನ್ನು ರಾಮಮಂದಿರ ಹೊಂದಿದೆ. (ANI)
ದೇವಾಲಯವು ಐದು ಮಂಟಪಗಳನ್ನು (ಹಾಲ್‌ಗಳು) ಒಳಗೊಂಡಿದೆ. ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನ ಮಂಟಪಗಳು ಇಲ್ಲಿವೆ. 
(6 / 13)
ದೇವಾಲಯವು ಐದು ಮಂಟಪಗಳನ್ನು (ಹಾಲ್‌ಗಳು) ಒಳಗೊಂಡಿದೆ. ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನ ಮಂಟಪಗಳು ಇಲ್ಲಿವೆ. (PTI)
ಗರ್ಭಗೃಹ ಅಥವಾ ದೇವಾಲಯದ ಒಳಗಿನ ಗರ್ಭಗುಡಿಯಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಗರ್ಭಗುಡಿಯು ಬಾಲರಾಮ ಪ್ರತಿಮೆಯನ್ನು ಹೊಂದಿರುತ್ತದೆ, ಮೊದಲ ಮಹಡಿಯಲ್ಲಿ ಶ್ರೀ ರಾಮ ದರ್ಬಾರ್ ಇರುತ್ತದೆ.
(7 / 13)
ಗರ್ಭಗೃಹ ಅಥವಾ ದೇವಾಲಯದ ಒಳಗಿನ ಗರ್ಭಗುಡಿಯಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಗರ್ಭಗುಡಿಯು ಬಾಲರಾಮ ಪ್ರತಿಮೆಯನ್ನು ಹೊಂದಿರುತ್ತದೆ, ಮೊದಲ ಮಹಡಿಯಲ್ಲಿ ಶ್ರೀ ರಾಮ ದರ್ಬಾರ್ ಇರುತ್ತದೆ.(Shri Ram Janmbhoomi Teerth Kshet)
ಈ ದೇವಾಲಯದ ಸ್ತಂಭಗಳು ಮತ್ತು ಗೋಡೆಗಳಲ್ಲಿ ದೇವತೆಗಳು, ದೇವರುಗಳು ಅತ್ಯಾಕರ್ಷಕ ಕೆತ್ತನೆಗಳನ್ನು ನೋಡಬಹುದಾಗಿದೆ. 
(8 / 13)
ಈ ದೇವಾಲಯದ ಸ್ತಂಭಗಳು ಮತ್ತು ಗೋಡೆಗಳಲ್ಲಿ ದೇವತೆಗಳು, ದೇವರುಗಳು ಅತ್ಯಾಕರ್ಷಕ ಕೆತ್ತನೆಗಳನ್ನು ನೋಡಬಹುದಾಗಿದೆ. (Shri Ram Janmbhoomi Teerth Kshet)
ದೇಗುಲದ ಮುಖ್ಯ ದ್ವಾರವು ಪೂರ್ವ ಭಾಗದಲ್ಲಿದೆ. 32 ಮೆಟ್ಟಿಲುಗಳನ್ನು ಏರಿ ಸಿಂಗ್ ದ್ವಾರದ ಮೂಲಕ ಇಲ್ಲಿಗೆ ಪ್ರವೇಶಿಸಬಹುದು. ಹೆಚ್ಚುವರಿಯಾಗಿ, ವಿಕಲಚೇತನರು ಮತ್ತು ವಯಸ್ಸಾದ ಸಂದರ್ಶಕರ ಅನುಕೂಲಕ್ಕಾಗಿ ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳನ್ನು ಒದಗಿಸಲಾಗಿದೆ.
(9 / 13)
ದೇಗುಲದ ಮುಖ್ಯ ದ್ವಾರವು ಪೂರ್ವ ಭಾಗದಲ್ಲಿದೆ. 32 ಮೆಟ್ಟಿಲುಗಳನ್ನು ಏರಿ ಸಿಂಗ್ ದ್ವಾರದ ಮೂಲಕ ಇಲ್ಲಿಗೆ ಪ್ರವೇಶಿಸಬಹುದು. ಹೆಚ್ಚುವರಿಯಾಗಿ, ವಿಕಲಚೇತನರು ಮತ್ತು ವಯಸ್ಸಾದ ಸಂದರ್ಶಕರ ಅನುಕೂಲಕ್ಕಾಗಿ ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳನ್ನು ಒದಗಿಸಲಾಗಿದೆ.(HT Photo/Deepak Gupta)
ಮಂದಿರವು 732 ಮೀಟರ್ ಉದ್ದ ಮತ್ತು 14 ಅಡಿ ಅಗಲವನ್ನು ಹೊಂದಿರುವ ಪಾರ್ಕೋಟಾ (ಆಯತಾಕಾರದ ಸಂಯುಕ್ತ ಗೋಡೆ) ಯಿಂದ ಸುತ್ತುವರಿದಿದೆ.
(10 / 13)
ಮಂದಿರವು 732 ಮೀಟರ್ ಉದ್ದ ಮತ್ತು 14 ಅಡಿ ಅಗಲವನ್ನು ಹೊಂದಿರುವ ಪಾರ್ಕೋಟಾ (ಆಯತಾಕಾರದ ಸಂಯುಕ್ತ ಗೋಡೆ) ಯಿಂದ ಸುತ್ತುವರಿದಿದೆ.(PTI)
ಮಂದಿರದ ಅಡಿಪಾಯವನ್ನು 14-ಮೀಟರ್ ದಪ್ಪದ ರೋಲರ್-ಕಾಂಪ್ಯಾಕ್ಟ್ ಕಾಂಕ್ರೀಟ್ (RCC) ಪದರದಿಂದ ನಿರ್ಮಿಸಲಾಗಿದೆ, ಇದು ಕೃತಕ ಬಂಡೆಯ ನೋಟವನ್ನು ನೀಡುತ್ತದೆ.
(11 / 13)
ಮಂದಿರದ ಅಡಿಪಾಯವನ್ನು 14-ಮೀಟರ್ ದಪ್ಪದ ರೋಲರ್-ಕಾಂಪ್ಯಾಕ್ಟ್ ಕಾಂಕ್ರೀಟ್ (RCC) ಪದರದಿಂದ ನಿರ್ಮಿಸಲಾಗಿದೆ, ಇದು ಕೃತಕ ಬಂಡೆಯ ನೋಟವನ್ನು ನೀಡುತ್ತದೆ.(AP)
ಮಂದಿರದ ಸಮೀಪದಲ್ಲಿ ಐತಿಹಾಸಿಕ ಪ್ರಸಿದ್ಧವಾದ ಸೀತಾ ಕೂಪ (ಬಾವಿ) ಇದೆ, ಇದು ಪ್ರಾಚೀನ ಯುಗಕ್ಕೂ ಹಿಂದಿನದು ಎಂದು ನಂಬಲಾಗಿದೆ. 
(12 / 13)
ಮಂದಿರದ ಸಮೀಪದಲ್ಲಿ ಐತಿಹಾಸಿಕ ಪ್ರಸಿದ್ಧವಾದ ಸೀತಾ ಕೂಪ (ಬಾವಿ) ಇದೆ, ಇದು ಪ್ರಾಚೀನ ಯುಗಕ್ಕೂ ಹಿಂದಿನದು ಎಂದು ನಂಬಲಾಗಿದೆ. (AP)
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯ ಕ್ಷಣ ಕ್ಷಣದ ತಾಜಾ ಮಾಹಿತಿಗೆ kannada,hindustantimes.com ನೋಡಿ 
(13 / 13)
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯ ಕ್ಷಣ ಕ್ಷಣದ ತಾಜಾ ಮಾಹಿತಿಗೆ kannada,hindustantimes.com ನೋಡಿ 

    ಹಂಚಿಕೊಳ್ಳಲು ಲೇಖನಗಳು