logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chandrayaan-3: ವಾವ್, ವಿಜ್ಞಾನಿಗಳಿಗಿದು ಅಪರೂಪದ ಅಭಿನಂದನೆ: ಇಸ್ರೋ ಸಾಧಕರಿಗೆ ಕುಂಚ ಗೌರವ ಸಲ್ಲಿಸಿದ ಶಿಡ್ಲಘಟ್ಟದ ಅಜಿತ್ ಕೌಂಡಿನ್ಯ

Chandrayaan-3: ವಾವ್, ವಿಜ್ಞಾನಿಗಳಿಗಿದು ಅಪರೂಪದ ಅಭಿನಂದನೆ: ಇಸ್ರೋ ಸಾಧಕರಿಗೆ ಕುಂಚ ಗೌರವ ಸಲ್ಲಿಸಿದ ಶಿಡ್ಲಘಟ್ಟದ ಅಜಿತ್ ಕೌಂಡಿನ್ಯ

Aug 24, 2023 01:07 PM IST

ISRO Scientists: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಸಕ್ಸಸ್ ಆಗಿದ್ದು, ದೇಶಾದ್ಯಂತ ಸಂಭ್ರಮ, ಸಡಗರ ಕಂಡುಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಕಲಾವಿದ ಅಜಿತ್ ಕೌಂಡಿನ್ಯ ವಿಶಿಷ್ಟ ರೀತಿಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಅವರು ಮಾಡಿರುವ ಕ್ಯಾರಿಕೇಚರ್ ಜತೆಗೆ ವಿಜ್ಞಾನಿಗಳ ಕಿರುಪರಿಚಯದ ವಿವರ ಹೀಗಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತು ಇಸ್ರೋ ವಿಜ್ಞಾನಿಗಳ ಬಗ್ಗೆ ಇನ್ನಿಲ್ಲದ ಕುತೂಹಲ. ಅನೇಕರಿಗೆ ಅವರು ಪ್ರೇರಣೆ ಕೂಡ. ಚಂದ್ರಯಾನದ ಸಕ್ಸಸ್‍ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಕಲಾವಿದ ಅಜಿತ್ ಕೌಂಡಿನ್ಯ ತಮ್ಮದೇ ಆದ ರೀತಿಯಲ್ಲಿ ವಿಜ್ಞಾನಿಗಳಿಗೆ ಕಲಾಕುಂಚದ ಗೌರವ ಸಲ್ಲಿಸಿದ್ದಾರೆ. ಅವರು ಬಿಡಿಸಿದ ವಿಜ್ಞಾನಿಗಳ ಕ್ಯಾರಿಕೇಚರ್ ಜತೆಗೆ ಆ ವಿಜ್ಞಾನಿಗಳ ಕಿರುಪರಿಚಯವನ್ನು ಇಲ್ಲಿ ಪ್ರಸ್ತುತಿ ಮಾಡಿದ್ದೇವೆ.
(1 / 16)

ಯು ಆರ್ ರಾವ್ (ಉಡುಪಿ ರಾಮಚಂದ್ರ ರಾವ್) – ಕರ್ನಾಟಕದ ಉಡುಪಿ ಅದಮಾರಿನವರು. (10.03.1932 – 24.07.2017). ಭಾರತದ ಬಾಹ್ಯಾಕಾಶ ವಿಜ್ಞಾನಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಮಾಜಿ ಅಧ್ಯಕ್ಷ. ಅಹಮದಾಬಾದ್‌ನಲ್ಲಿರುವ ಭೌತಿಕ ಸಂಶೋಧನಾ ಪ್ರಯೋಗಾಲಯ ಮತ್ತು ಬೆಂಗಳೂರಿನ ನೆಹರು ತಾರಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು. ಅದೇ ರೀತಿ, ತಿರುವನಂತಪುರಂನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ (IIST) ಕುಲಪತಿ ಕೂಡ ಆಗಿದ್ದರು. "ಭಾರತದ ಉಪಗ್ರಹ ಮನುಷ್ಯ" (The Satellite Man of India) ಎಂದೇ ಜನಪ್ರಿಯರಾದವರು. ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿದವರು.
(2 / 16)

ಕೆ.ಕಸ್ತೂರಿ ರಂಗನ್‍ (ಕೃಷ್ಣಸ್ವಾಮಿ ಕಸ್ತೂರಿ ರಂಗನ್‍). ಎರ್ನಾಕುಲಂನಲ್ಲಿ 1940ರ ಅಕ್ಟೋಬರ್ 24ರಂದು ಜನಿಸಿದರು. ಭಾರತೀಯ ಬಾಹ್ಯಾಕಾಶ ವಿಜ್ಞಾನಿ. ಇಸ್ರೋದ ಚೇರ್‍ಮನ್ ಆಗಿ 1994ರಿಂದ 2003ರ ತನಕ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾಲಯ, ಎನ್‍ಐಐಟಿ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾರೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಕುಲಪತಿ, ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರೂ ಹೌದು. ರಾಜ್ಯಸಭೆಯ ಮಾಜಿ ಸದಸ್ಯ (2003-09)ರಾಗಿರುವ ಅವರು, ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ನಿರ್ದೇಶಕರಾಗಿ ಏಪ್ರಿಲ್ 2004 ರಿಂದ 2009 ರವರೆಗೆ ಕೆಲಸ ಮಾಡಿದ್ದರು.
(3 / 16)

ಜಿ. ಮಾಧವನ್ ನಾಯರ್. ತಿರುವಾಂಕೂರು ರಾಜ್ಯದ ಕುಲಶೇಖರಂನಲ್ಲಿ (ಈಗ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿದೆ) 1943ರ ಅಕ್ಟೋಬರ್ 31ರಂದು ಜನಿಸಿದರು. ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷರು. ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ, ಅವರು ಬಾಹ್ಯಾಕಾಶ ಆಯೋಗದ ಅಧ್ಯಕ್ಷರು ಮತ್ತು ಬೆಂಗಳೂರಿನ ಆಂಟ್ರಿಕ್ಸ್ ಕಾರ್ಪೊರೇಶನ್‌ನ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿದ್ದರು. 
(4 / 16)

ಸುಬ್ಬಯ್ಯ ಅರುಣನ್. ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಕೊಥಾಯಿಸೇರಿಯಲ್ಲಿ ಜನಿಸಿದರು. ಭಾರತೀಯ ವಿಜ್ಞಾನಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದಲ್ಲಿ ಮಾರ್ಸ್ ಆರ್ಬಿಟರ್ ಮಿಷನ್‌ನಲ್ಲಿ ನಿರ್ವಹಿಸಿದ ಹೊಣೆಗಾರಿಕೆಗೆ ಗುರುತಿಸಲ್ಪಟ್ಟವರು. 1984 ರಲ್ಲಿ ಅವರು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2013 ರಲ್ಲಿ ಮಾರ್ಸ್ ಆರ್ಬಿಟರ್ ಮಿಷನ್‌ನ ಯೋಜನಾ ನಿರ್ದೇಶಕರಾಗಿದ್ದರು. ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರ ಅಳಿಯ. 
(5 / 16)

ಕೆ. ಶಿವನ್‍ (ಶಿವನ್‍ ಕೈಲಾಸವಾಡಿವು). ಭಾರತದ ಬಾಹ್ಯಾಕಾಶ ವಿಜ್ಞಾನಿ. ತಮಿಳುನಾಡಿನ ಕನ್ಯಾಕುಮಾರಿಯ ನಾಗರ್ ಕೋಯಿಲ್‍ನ ಮೇಲಾ ಸರಕ್ಕಲ್ವಿಲೈನಲ್ಲಿ 1957ರ ಏಪ್ರಿಲ್ 14ರಂದು ಜನಿಸಿದರು. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು ಈ ಹಿಂದೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಮತ್ತು ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಚಂದ್ರಯಾನ 2ರ ಸಂದರ್ಭದಲ್ಲಿ ಗಮನಸೆಳೆದಿದ್ದರು. 
(6 / 16)

ಟೆಸ್ಸಿ ಥಾಮಸ್. ಕೇರಳದ ಆಲಪ್ಪುಳದಲ್ಲಿ 1963ರ ಏಪ್ರಿಲ್‍ನಲ್ಲಿ ಜನಿಸಿದರು. ಕ್ಷಿಪಣಿ ಮಹಿಳೆ (ಮಿಸೈಲ್ ವುಮನ್) ಎಂದೇ ಗುರುತಿಸಲ್ಪಟ್ಟವರು. ಭಾರತದ ಬಾಹ್ಯಾಕಾಶ ವಿಜ್ಞಾನಿ. ಏರೋನಾಟಿಕಲ್ ಸಿಸ್ಟಮ್ಸ್ ನ ಮಹಾನಿರ್ದೇಶಕರಾಗಿದ್ದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಅಗ್ನಿ-IV ಕ್ಷಿಪಣಿ ಪ್ರಾಜೆಕ್ಟ್ ಗೆ ನಿರ್ದೇಶಕರಾಗಿದ್ದರು. ಕ್ಷಿಪಣಿ ಯೋಜನೆಯ ಮೊದಲ ಮಹಿಳಾ ನಿರ್ದೇಶಕಿ ಎಂಬ ಕೀರ್ತಿಗೆ ಭಾಜನರಾದವರು.
(7 / 16)

ಎಸ್‍. ಸೋಮನಾಥ್‍ ( ಶ್ರೀಧರ ಪಣಿಕ್ಕರ್ ಸೋಮನಾಥ್). ಕೇರಳದ ಚೇರ್ತಲಾದಲ್ಲಿ 1963ರ ಜುಲೈನಲ್ಲಿ ಜನನ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಚೇರ್ಮನ್‍. ಚಂದ್ರಯಾನ 3ರ ಸಕ್ಸಸ್‍ ಸಿಕ್ಕಿರುವುದು ಇವರ ನಾಯಕತ್ವದಲ್ಲಿ.  ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದ ಮೊದಲ ದೇಶ ಎಂಬ ಕೀರ್ತಿಗೆ ಭಾಜನವಾಗಿದ್ದೂ ಈಗಲೇ. ಸೋಮನಾಥ್ ಅವರು ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಮತ್ತು ತಿರುವನಂತಪುರಂನ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ರಾಕೆಟ್‍ ಉಡಾವಣಾ ವಾಹನ ವಿನ್ಯಾಸಕ್ಕೆ ಸಂಬಂಧಿಸಿದ ಕೊಡುಗೆಗಳಿಗೆ ಸೋಮನಾಥ್‍ ಹೆಸರುವಾಸಿ. ವಿಶೇಷವಾಗಿ ಲಾಂಚ್ ವೆಹಿಕಲ್ ಸಿಸ್ಟಮ್ಸ್ ಎಂಜಿನಿಯರಿಂಗ್, ಸ್ಟ್ರಕ್ಚರಲ್ ಡಿಸೈನ್, ಸ್ಟ್ರಕ್ಚರಲ್ ಡೈನಾಮಿಕ್ಸ್ ಮತ್ತು ಪೈರೋಟೆಕ್ನಿಕ್ಸ್ ಕ್ಷೇತ್ರಗಳಲ್ಲಿ ಪರಿಣತಿ ಪಡೆದವರು.
(8 / 16)

ಎಂ.ಶ್ರೀಕಾಂತ್, ಚಂದ್ರಯಾನ 3ರ ಮಿಷನ್ ಆಪರೇಷನ್ಸ್ ಡೈರೆಕ್ಟರ್. ಇಸ್ರೋದಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿರುವ ವಿಜ್ಞಾನಿ ಎಂ.ಶ್ರೀಕಾಂತ್ ಚಂದ್ರಯಾನ 3 ಸಕ್ಸಸ್ ಬಳಿಕ, ಈ ಯೋಜನೆಯ ಕೆಲಸ ತೃಪ್ತಿ ನೀಡಿದೆ ಎಂದು ಹೇಳಿದ್ದರು. ಚಂದ್ರಯಾನ-3 ಬಗ್ಗೆ ಮಾತನಾಡುವಾಗ ಮಿಷನ್ ಆಪರೇಷನ್ಸ್ ಡೈರೆಕ್ಟರ್ ಎಂ ಶ್ರೀಕಾಂತ್ ನಿರ್ವಹಿಸಿದ ಪಾತ್ರವನ್ನು ಯಾರೂ ಕಡೆಗಣಿಸುವಂತಿಲ್ಲ. ಎರಡು ದಶಕಗಳಿಂದ ಇಸ್ರೋಗಾಗಿ ಕೆಲಸ ಮಾಡಿದ ಅವರ ಪರಿಣತಿಯು ಚಂದ್ರಯಾನ-1 ಮತ್ತು ಚಂದ್ರಯಾನ-2 ಸೇರಿ ವಿವಿಧ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವಹಿಸಿದೆ. ಚಂದ್ರಯಾನ-3 ಮಿಷನ್ ಅವರ ಮುಡಿಗೆ ಮತ್ತೊಂದು ಗರಿ.
(9 / 16)

ಡಾ.ಬೃಂದಾ ಮತ್ತು ಡಾ.ವೆಂಕಿಟಕೃಷ್ಣನ್ ದಂಪತಿ – ಡಾ.ಬೃಂದಾ ಸದ್ಯ ಇಸ್ರೋದಲ್ಲಿ ಡೈರೆಕ್ಟರೇಟ್ ಆಫ್ ಸೇಫ್ಟಿ, ರಿಲಯೆಬಿಲಿಟಿ ಆಂಡ್‍ ಕ್ವಾಲಿಟಿ ವಿಭಾಗದ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ಧಾರೆ. 1989ರಲ್ಲಿ ಇಸ್ರೋಗೆ ಸೇರಿದ್ದಾರೆ. ಇವರ ಪತಿ ಡಾ.ವೆಂಕಿಟಕೃಷ್ಣನ್‍ 1983ರಲ್ಲಿ ಇಸ್ರೋಗೆ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿದವರು. ಇಸ್ರೋದ ಸಿಬಿಪಿಒ ವಿಭಾಗದ ಡೈರೆಕ್ಟರ್ ಆಗಿ ನಿವೃತ್ತರಾದವರು. ಇವರು ವಿಎಸ್‍ಎಸ್‍ಸಿಯಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೂಡ ಕೆಲಸ ಮಾಡಿದ್ದರು.
(10 / 16)

ಶ್ರೀನಿವಾಸ ಹೆಗ್ಡೆ ಎನ್‍. ಇಸ್ರೋದ ಸ್ಯಾಟಲೈಟ್ ಸೆಂಟರ್‍ ನಲ್ಲಿ ಚಂದ್ರಯಾನ 1ರ ಮಿಷನ್ ಡೈರೆಕ್ಟರ್ ಆಗಿ ಕೆಲಸ ಮಾಡಿದವರು. 1978ರಿಂದ 2014ರ ತನಕ ಇಸ್ರೋದಲ್ಲಿ ವಿವಿಧ ಹೊಣೆಗಾರಿಕೆ ನಿಭಾಯಿಸಿದವರು. ಪ್ರಸ್ತುತ ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಲೀಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
(11 / 16)

ಅನುರಾಧಾ ಟಿ.ಕೆ. ಅವರು ಬೆಂಗಳೂರಿನವರು. ಭಾರತದ ವಿಜ್ಞಾನಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ವಿಶೇಷ ಸಂವಹನ ಉಪಗ್ರಹಗಳ ಯೋಜನಾ ನಿರ್ದೇಶಕರಾಗಿದ್ದರು. ಅವರು GSAT-12 ಮತ್ತು GSAT-10 ಉಪಗ್ರಹಗಳ ಉಡಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಅವರು 1982 ರಲ್ಲಿ ಬಾಹ್ಯಾಕಾಶ ಸಂಸ್ಥೆಗೆ ಸೇರಿದ ಇಸ್ರೋದಲ್ಲಿ ಅತ್ಯಂತ ಹಿರಿಯ ಮಹಿಳಾ ವಿಜ್ಞಾನಿ ಎಂದು ಗುರುತಿಸಲ್ಪಟ್ಟವರು. ಇಸ್ರೋದಲ್ಲಿ ಉಪಗ್ರಹ ಯೋಜನಾ ನಿರ್ದೇಶಕರಾದ ಮೊದಲ ಮಹಿಳೆ ಎಂಬ ಕೀರ್ತಿಗೂ ಭಾಜನರಾದವರು.
(12 / 16)

ಶ್ಯಮಾ ನರೇಂದ್ರನಾಥ್ – ಇಸ್ರೋದಲ್ಲಿ ಪ್ಲಾನೆಟರಿ ಸೈಂಟಿಸ್ಟ್. ಚಂದ್ರಯಾನ 1, ಚಂದ್ರಯಾನ 2, ಚಂದ್ರಯಾನ 3 ಯೋಜನೆಗಳಲ್ಲಿ ಕೆಲಸ ಮಾಡಿದವರು. ಸಾಮಾಜಿಕವಾಗಿಯೂ ಬಾಹ್ಯಾಕಾಶ ಸಂಬಂಧಿ ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲರಾಗಿ ಜ್ಞಾನ ಪ್ರಸರಣದಲ್ಲಿ ತೊಡಗಿರುವವರು
(13 / 16)

ಶ್ರೀನಾಥ್‍ ರತ್ನಕುಮಾರ್ – ಇಸ್ರೋ ಬೆಂಗಳೂರು ಇಂಡಿಯನ್‍ ಸ್ಪೇಸ್ ಸೈಯನ್ಸ್ ಡೇಟಾ ಸೆಂಟರಲ್ಲಿ ವಿಜ್ಞಾನಿ/ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಕೂಡ ಸಾಮಾಜಿಕವಾಗಿ ಬಾಹ್ಯಾಕಾಶ ಸಂಬಂಧಿತ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
(14 / 16)

ಅರುಳ್ ಡ್ಯಾನಿಯಲ್ (ದೇವಾ ಅರುಳ್ ಡ್ಯಾನಿಯಲ್‍) – ಇಸ್ರೋ ವಿಜ್ಞಾನಿ. ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಯಲ್ಲಿ ಡಿಎಸ್‍ಎಸ್‍ಎಎಂನಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಂದ್ರಯಾನದಲ್ಲಿ ಕೂಡ ಇವರು ಕೆಲಸ ಮಾಡಿದ್ದಾರೆ.
(15 / 16)

ಗಿರೀಶ್ – ಆಸ್ಟ್ರೋಸ್ಯಾಟ್ ಮಿಷನ್‍ಗೆ ಸಂಬಂಧಿಸಿದ ಇಸ್ರೋ ಯೋಜನೆಯಲ್ಲಿ ಕೆಲಸ ಮಾಡಿದವರು. ಇಸ್ರೋದ ಸೈನ್ಸ್ ಪ್ರೋಗ್ರಾಂ ಆಫೀಸ್‍ನ ಡೆಪ್ಯೂಟಿ ಡೈರೆಕ್ಟರ್ ಆಗಿ ಕೆಲಸ ಮಾಡಿದವರು. ಆಸ್ಟ್ರೋಸ್ಯಾಟ್‍ಗೆ ಸಂಬಂಧಿಸಿದ ಹಲವು ಸಂಶೋಧನಾ ಪ್ರಬಂಧ, ಲೇಖನಗಳನ್ನು ಬರೆದಿದ್ದಾರೆ
(16 / 16)

    ಹಂಚಿಕೊಳ್ಳಲು ಲೇಖನಗಳು