logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Modi: ಸಿಖ್‌ ವೇಷಧಾರಿಯಾದ ಮೋದಿ, ಪಾಟ್ನಾ ಗುರುದ್ವಾರದಲ್ಲಿ ಆಹಾರ ಬಡಿಸಿದ ಪ್ರಧಾನಿ

Modi: ಸಿಖ್‌ ವೇಷಧಾರಿಯಾದ ಮೋದಿ, ಪಾಟ್ನಾ ಗುರುದ್ವಾರದಲ್ಲಿ ಆಹಾರ ಬಡಿಸಿದ ಪ್ರಧಾನಿ

May 13, 2024 02:18 PM IST

Modi in Patna Gurudwara ಪ್ರಧಾನಿ ನರೇಂದ್ರ ಮೋದಿ ಯಾವುದೇ ಊರಿಗೆ ಹೋದರೆ ಅಲ್ಲಿನ ಮಂದಿರ, ದೈವ ಸ್ಥಳಕ್ಕೆ ಭೇಟಿ ಮಾಡುತ್ತಾರೆ. ಈ ಬಾರಿ ಬಿಹಾರದ ಪಾಟ್ನಾದಲ್ಲಿ ಗುರುದ್ವಾರಕ್ಕೆ ಭೇಟಿ ನೀಡಿ ಅಪ್ಪಟ ಸಿಖ್‌ ಆಗಿದ್ದರು. ಅವರ ಗುರುದ್ವಾರ ಭೇಟಿ, ಸೇವೆಯ ಚಿತ್ರಣ ಹೀಗಿತ್ತು.

  • Modi in Patna Gurudwara ಪ್ರಧಾನಿ ನರೇಂದ್ರ ಮೋದಿ ಯಾವುದೇ ಊರಿಗೆ ಹೋದರೆ ಅಲ್ಲಿನ ಮಂದಿರ, ದೈವ ಸ್ಥಳಕ್ಕೆ ಭೇಟಿ ಮಾಡುತ್ತಾರೆ. ಈ ಬಾರಿ ಬಿಹಾರದ ಪಾಟ್ನಾದಲ್ಲಿ ಗುರುದ್ವಾರಕ್ಕೆ ಭೇಟಿ ನೀಡಿ ಅಪ್ಪಟ ಸಿಖ್‌ ಆಗಿದ್ದರು. ಅವರ ಗುರುದ್ವಾರ ಭೇಟಿ, ಸೇವೆಯ ಚಿತ್ರಣ ಹೀಗಿತ್ತು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಾಟ್ನಾದಲ್ಲಿರುವ ಪ್ರಸಿದ್ದ ಗುರುದ್ವಾರಕ್ಕೆ ಭೇಟಿ ನೀಡಿದರು.
(1 / 8)

ಅಪ್ಪಟ ಸಿಖ್‌ ರೀತಿಯಲ್ಲಿಯೇ ತಲೆಗೆ ಟರ್ಬನ್‌ ಧರಿಸಿ ಗುರುದ್ವಾರ ಪ್ರವೇಶಿಸಿದ ಮೋದಿ ಅವರು ಅಲ್ಲಿನ ಧರ್ಮಗುರುಗಳಿಗೆ ಉಡುಗೊರೆಯನ್ನು ನೀಡಿದರು,
(2 / 8)

ಗುರುದ್ವಾರದ ಸಂಪ್ರದಾಯದಂತೆ ಅಲ್ಲಿಗೆ ತೆರಳಿ ವಿಶೇಷ ಪೂಜೆಯನ್ನು ಮೋದಿ ಸಲ್ಲಿಸಿದರು. ಸಿಖ್‌ ಧರ್ಮ ಸಮಾನತೆ, ಸಹಿಷ್ಣುತೆ ಹಾಗೂ ಶಾಂತಿ ಸಾರಿದ ಧರ್ಮ. ಅಂತಹ ಧರ್ಮದ ಕ್ಷೇತ್ರಕ್ಕೆ ಬಂದಿರುವುದು ಖುಷಿ ತಂದಿದೆ ಎಂದು ಮೋದಿ ಹೇಳಿದರು.
(3 / 8)

ಪಾಟ್ನಾ ಸಾಹಿಬ್‌ನ ತಖತ್‌ಶ್ರೀ ಹರಿಮಂದಿರ್‌ಜಿ( Takhat Sri Harimandir Ji Patna Sahib)ನಲ್ಲಿ ಕೆಲ ಹೊತ್ತು ಕಳೆದ ಮೋದಿ ಈ ತಾಣವೂ ಗುರು ಗೋವಿಂದಸಿಂಗ್‌ ಅವರು ಭೇಟಿ ನೀಡಿದ ಸ್ಥಳ. ಇಲ್ಲಿಗೆ ಬಂದಿರುವುದು ಖುಷಿ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
(4 / 8)

ಇದಾದ ಬಳಿಕ ಗುರುದ್ವಾರದಲ್ಲಿ ಚಪಾತಿ ,ಲಟ್ಟಿಸುವ ಮೂಲಕ ಸೇವೆಯಲ್ಲೂ ಪ್ರಧಾನಿ ಮೋದಿ ಭಾಗಿಯಾದರು.
(5 / 8)

ಪಾಟ್ನಾ ಗುರುದ್ವಾರದ ಅಡುಗೆ ಮನೆಯಲ್ಲಿ ಅಡುಗೆ ತಯಾರಿಸುವ ಸೇವೆಯಲ್ಲೂ ಭಾಗಿಯಾದ ಮೋದಿ ಜನರ ಸೇವೆಯೇ ಪರಮಧ್ಯೇಯ ಎಂದು ನಂಬಿರುವ ಸಿಖ್‌ ಧರ್ಮದಲ್ಲಿ ಸೇವೆ ಮಾಡಿದ್ದು ಸಂತಸದಾಯಕ ಎಂದು ಹೇಳಿಕೊಂಡಿದ್ದಾರೆ.
(6 / 8)

ಗುರುದ್ವಾರಕ್ಕೆ ಬಂದಿದ್ದ ಭಕ್ತರಿಗೆ ತಾವೇ ಖುದ್ದು ಊಟವನ್ನು ಬಡಿಸಿದ ಪ್ರಧಾನಿ ಮೋದಿ ಸೇವೆಯಲ್ಲಿ ಖುಷಿಯಿದೆ ಎಂದು ಹೇಳಿದ್ದಾರೆ.
(7 / 8)

ಸಿಖ್‌ ಧರ್ಮದ ಗುರುಗಳು,. ಸಮುದಾಯದ ಪ್ರತಿನಿಧಿಗಳಿಗೆ ಮೋದಿ ಅವರೇ ಊಟವನ್ನು ಬಡಿಸಿದರು. ಸೇವೆಯಲ್ಲಿ ಭಾಗಿಯಾದ ಕ್ಷಣವೇ ವಿಶೇಷವಾಗಿತ್ತು ಎಂದು ಮೋದಿ ಖುಷಿ ಹಂಚಿಕೊಂಡಿದ್ದಾರೆ. 
(8 / 8)

    ಹಂಚಿಕೊಳ್ಳಲು ಲೇಖನಗಳು