logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Explosions In Firecracker Shop: ತಮಿಳುನಾಡು ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಭಾರಿ ಸ್ಫೋಟಕ್ಕೆ 9 ಜನ ಬಲಿ, ಹಲವರಿಗೆ ಗಾಯ

Explosions in Firecracker Shop: ತಮಿಳುನಾಡು ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಭಾರಿ ಸ್ಫೋಟಕ್ಕೆ 9 ಜನ ಬಲಿ, ಹಲವರಿಗೆ ಗಾಯ

Oct 17, 2023 05:27 PM IST

ತಮಿಳುನಾಡಿನ ವಿರುದುನಗರ ಜಿಲ್ಲೆಯ ಶಿವಕಾಸಿ ತಾಲೂಕಿನ ರೆಂಗಪಾಳ್ಯಂನಲ್ಲಿ ಇಂದು (ಅ.17) ಸಂಭವಿಸಿದ ಭಾರಿ ಸ್ಫೋಟದಲ್ಲಿ 9 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಘಟನಾ ಸ್ಥಳದ ಸಚಿತ್ರ ವರದಿ ಇಲ್ಲಿದೆ.

ತಮಿಳುನಾಡಿನ ವಿರುದುನಗರ ಜಿಲ್ಲೆಯ ಶಿವಕಾಶಿ ತಾಲೂಕಿನ ರೆಂಗಪಾಳ್ಯಂ ಪಂಚಾಯಿತಿ ವ್ಯಾಪ್ತಿಯಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಇಂದು (ಅ.17) ಭಾರಿ ಸ್ಫೋಟ ಸಂಭವಿಸಿದೆ. ಇದರಿಂದಾಗಿ 9 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರಿಗೆ ಗಾಯಗಳಾಗಿವೆ.
(1 / 7)

ಕನಿಷ್ಕರ್ ಫೈರ್ ವರ್ಕ್ಸ್ ಎಂಬ ಪಟಾಕಿ ಕಾರ್ಖಾನೆಯಲ್ಲಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ಕಾರ್ಖಾನೆಯ ಮುಂಭಾಗದಲ್ಲಿ ಪಟಾಕಿ ಅಂಗಡಿಯೂ ಇದೆ. ಪಟಾಕಿ ಅಂಗಡಿ ಎದುರು ಪಟಾಕಿ ಸುಡುತ್ತಿದ್ದಾಗ, ಸ್ಫೋಟ ಸಂಭವಿಸಿದೆ.
(2 / 7)

ಈ ಸ್ಫೋಟದ ಬೆನ್ನಿಗೆ ಅಂಗಡಿಯ ಒಳಗಿದ್ದ ಇತರೆ ಸುಡುಮದ್ದುಗಳು ಸ್ಫೋಟಗೊಳ್ಳತೊಡಗಿದ್ದು, ದುರಂತದ ತೀವ್ರತೆಯನ್ನು ಹೆಚ್ಚಿಸಿತು. ಇದರಿಂದಾಗಿ ಕಾರ್ಖಾನೆಯಲ್ಲಿ ಗೊಂದಲ ಉಂಟಾಗಿತ್ತು. ಕಾರ್ಮಿಕರಿಗೆ ಹೊರಬರಲಾಗದೆ ಸಂಕಷ್ಟಕ್ಕೆ ಒಳಗಾದರು.
(3 / 7)

ಮೃತರನ್ನು ಪಕ್ಕೀಮ್‌ (35), ಮಹಾದೇವಿ (50), ಪಂಚವರ್ಣ (35), ಬಾಲಮುರುಗನ್ (30), ತಮಿಳ್ (55), ಮುನೀಶ್ವರಿ (32), ತಂಗಮಾಲೈ (33), ಅನಿತಾ (40), ಕುರುವಮ್ಮಾಳ್ (55) ಎಂದು ಗುರುತಿಸಲಾಗಿದೆ.
(4 / 7)

ದುರಂತ ಸ್ಥಳದ ಸಮೀಪ ಸೇರಿದ ಜನಸಂದಣಿ
(5 / 7)
ದುರಂತ ಸ್ಥಳದ ಸಮೀಪ ಸೇರಿದ ಜನಸಂದಣಿ
ದುರಂತ ನಡೆದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸೇವಾ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾದರು.
(6 / 7)

ಅದೇ ರೀತಿ, ಹಲವು ಆಂಬುಲೆನ್ಸ್‌ಗಳು ಸ್ಥಳಕ್ಕೆ ಅಗಮಿಸಿ ಗಾಯಾಳುಗಳನ್ನು ತತ್‌ಕ್ಷಣವೇ ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿವೆ. ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
(7 / 7)

    ಹಂಚಿಕೊಳ್ಳಲು ಲೇಖನಗಳು