logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲಂಕಾ ವಿರುದ್ಧ ಒಂದೇ ಒಂದು ಶತಕ ಸಿಡಿಸದೆಯೂ ದಾಖಲೆ ಬರೆದ ಭಾರತ

ಲಂಕಾ ವಿರುದ್ಧ ಒಂದೇ ಒಂದು ಶತಕ ಸಿಡಿಸದೆಯೂ ದಾಖಲೆ ಬರೆದ ಭಾರತ

Nov 03, 2023 11:02 AM IST

India vs Sri Lanka World Cup 2023: ಶ್ರೀಲಂಕಾ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಭಾರತವು 357 ರನ್‌ ಕಲೆ ಹಾಕಿತು. ಆದರೂ, ಟೀಮ್‌ ಇಂಡಿಯಾ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ಶತಕಕ ಸಿಡಿಯಲಿಲ್ಲ. ಆ ಮೂಲಕ ಯಾವುದೇ ಬ್ಯಾಟರ್ ಸೆಂಚುರಿ ಗಳಿಸದೆಯೂ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮೂರು ಬಾರಿ 350 ರನ್‌ಗಳ ಗಡಿ ದಾಟಿದ ದಾಖಲೆ ಮಾಡಿದೆ.

  • India vs Sri Lanka World Cup 2023: ಶ್ರೀಲಂಕಾ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಭಾರತವು 357 ರನ್‌ ಕಲೆ ಹಾಕಿತು. ಆದರೂ, ಟೀಮ್‌ ಇಂಡಿಯಾ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ಶತಕಕ ಸಿಡಿಯಲಿಲ್ಲ. ಆ ಮೂಲಕ ಯಾವುದೇ ಬ್ಯಾಟರ್ ಸೆಂಚುರಿ ಗಳಿಸದೆಯೂ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮೂರು ಬಾರಿ 350 ರನ್‌ಗಳ ಗಡಿ ದಾಟಿದ ದಾಖಲೆ ಮಾಡಿದೆ.
2023ರ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 8 ವಿಕೆಟ್‌ಗೆ 357 ರನ್‌ಗಳ ಬೃಹತ್ ಇನ್ನಿಂಗ್ಸ್ ಅನ್ನು ದಾಖಲಿಸಿತು. ಭಾರತದ ಯಾವ ಬ್ಯಾಟರ್‌ ಕೂಡಾ ಇನ್ನಿಂಗ್ಸ್‌ನಲ್ಲಿ ಶತಕದ ಗಡಿ ದಾಟಿಲ್ಲ. ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಯಾವುದೇ ಬ್ಯಾಟರ್‌ ಶತಕ ಗಳಿಸದೆಯೇ ತಂಡವೊಂದು ಅತಿ ಹೆಚ್ಚು ರನ್ ಗಳಿಸಿದ ಸಾರ್ವಕಾಲಿಕ ದಾಖಲೆಯನ್ನು ಭಾರತ ನಿರ್ಮಿಸಿದೆ.
(1 / 6)
2023ರ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 8 ವಿಕೆಟ್‌ಗೆ 357 ರನ್‌ಗಳ ಬೃಹತ್ ಇನ್ನಿಂಗ್ಸ್ ಅನ್ನು ದಾಖಲಿಸಿತು. ಭಾರತದ ಯಾವ ಬ್ಯಾಟರ್‌ ಕೂಡಾ ಇನ್ನಿಂಗ್ಸ್‌ನಲ್ಲಿ ಶತಕದ ಗಡಿ ದಾಟಿಲ್ಲ. ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಯಾವುದೇ ಬ್ಯಾಟರ್‌ ಶತಕ ಗಳಿಸದೆಯೇ ತಂಡವೊಂದು ಅತಿ ಹೆಚ್ಚು ರನ್ ಗಳಿಸಿದ ಸಾರ್ವಕಾಲಿಕ ದಾಖಲೆಯನ್ನು ಭಾರತ ನಿರ್ಮಿಸಿದೆ.(ANI)
ಗುರುವಾರ ವಾಂಖೆಡೆಯಲ್ಲಿ ಭಾರತದ ಪರ ವಿರಾಟ್ ಕೊಹ್ಲಿ 88 ರನ್‌, ಶುಭ್ಮನ್ ಗಿಲ್ 92 ಹಾಗೂ ಶ್ರೇಯಸ್ ಅಯ್ಯರ್ 82 ರನ್‌ ಗಳಿಸಿದರು. ಈ ಮೂವರು ಬ್ಯಾಟರ್‌ಗಳು ಅರ್ಧಶತಕದ ಗಡಿ ದಾಟಿದರೂ, ಯಾರೂ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಶುಭಮನ್ ಗಿಲ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದರು.
(2 / 6)
ಗುರುವಾರ ವಾಂಖೆಡೆಯಲ್ಲಿ ಭಾರತದ ಪರ ವಿರಾಟ್ ಕೊಹ್ಲಿ 88 ರನ್‌, ಶುಭ್ಮನ್ ಗಿಲ್ 92 ಹಾಗೂ ಶ್ರೇಯಸ್ ಅಯ್ಯರ್ 82 ರನ್‌ ಗಳಿಸಿದರು. ಈ ಮೂವರು ಬ್ಯಾಟರ್‌ಗಳು ಅರ್ಧಶತಕದ ಗಡಿ ದಾಟಿದರೂ, ಯಾರೂ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಶುಭಮನ್ ಗಿಲ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದರು.(PTI)
ಇದಕ್ಕೂ ಮುಂಚೆ ಯಾವುದೇ ವೈಯಕ್ತಿಕ ಶತಕವಿಲ್ಲದೆ ಭಾರತದ ಗರಿಷ್ಠ ಏಕದಿನ ಸ್ಕೋರ್ 5 ವಿಕೆಟ್‌ಗೆ 351 ಆಗಿತ್ತು. ಈ ವರ್ಷ ಟ್ರಿನಿಡಾಡ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಈ ದಾಖಲೆ ನಿರ್ಮಿಸಿತ್ತು. ಟೀಮ್ ಇಂಡಿಯಾ ಒಂದೇ ವರ್ಷದಲ್ಲಿ ಎರಡು ಬಾರಿ ಶತಕ ಸಿಡಿಸದೆ ಏಕದಿನದಲ್ಲಿ 350 ರನ್ ಗಡಿ ದಾಟಿದೆ. ಕಳೆದ ಆಗಸ್ಟ್‌ನಲ್ಲಿ ನಿರ್ಮಿಸಿದ್ದ ದಾಖಲೆಯನ್ನು ನವೆಂಬರ್‌ನಲ್ಲಿ ಭಾರತ ಮುರಿಯಿತು.
(3 / 6)
ಇದಕ್ಕೂ ಮುಂಚೆ ಯಾವುದೇ ವೈಯಕ್ತಿಕ ಶತಕವಿಲ್ಲದೆ ಭಾರತದ ಗರಿಷ್ಠ ಏಕದಿನ ಸ್ಕೋರ್ 5 ವಿಕೆಟ್‌ಗೆ 351 ಆಗಿತ್ತು. ಈ ವರ್ಷ ಟ್ರಿನಿಡಾಡ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಈ ದಾಖಲೆ ನಿರ್ಮಿಸಿತ್ತು. ಟೀಮ್ ಇಂಡಿಯಾ ಒಂದೇ ವರ್ಷದಲ್ಲಿ ಎರಡು ಬಾರಿ ಶತಕ ಸಿಡಿಸದೆ ಏಕದಿನದಲ್ಲಿ 350 ರನ್ ಗಡಿ ದಾಟಿದೆ. ಕಳೆದ ಆಗಸ್ಟ್‌ನಲ್ಲಿ ನಿರ್ಮಿಸಿದ್ದ ದಾಖಲೆಯನ್ನು ನವೆಂಬರ್‌ನಲ್ಲಿ ಭಾರತ ಮುರಿಯಿತು.(Reuters)
ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ 5 ವಿಕೆಟ್‌ಗೆ 351 ರನ್ ಗಳಿಸಿತ್ತು. ಆಗ ಶುಭ್ಮನ್ ಗಿಲ್ 85, ಇಶಾನ್ ಕಿಶನ್ 77, ಹಾರ್ದಿಕ್ ಪಾಂಡ್ಯ ಅಜೇಯ 70, ಸಂಜು ಸ್ಯಾಮ್ಸನ್ 51 ರನ್ ಗಳಿಸಿದ್ದರು.
(4 / 6)
ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ 5 ವಿಕೆಟ್‌ಗೆ 351 ರನ್ ಗಳಿಸಿತ್ತು. ಆಗ ಶುಭ್ಮನ್ ಗಿಲ್ 85, ಇಶಾನ್ ಕಿಶನ್ 77, ಹಾರ್ದಿಕ್ ಪಾಂಡ್ಯ ಅಜೇಯ 70, ಸಂಜು ಸ್ಯಾಮ್ಸನ್ 51 ರನ್ ಗಳಿಸಿದ್ದರು.(AFP)
ಇದಕ್ಕೂ ಮುನ್ನ ಭಾರತವು 2005ರಲ್ಲಿ ನಾಗ್ಪುರದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್‌ಗೆ 350 ರನ್ ಗಳಿಸಿತ್ತು. ಆ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 93, ರಾಹುಲ್ ದ್ರಾವಿಡ್ ಅಜೇಯ 85, ಇರ್ಫಾನ್ ಪಠಾಣ್ 83 ರನ್ ಗಳಿಸಿದ್ದರು.
(5 / 6)
ಇದಕ್ಕೂ ಮುನ್ನ ಭಾರತವು 2005ರಲ್ಲಿ ನಾಗ್ಪುರದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್‌ಗೆ 350 ರನ್ ಗಳಿಸಿತ್ತು. ಆ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 93, ರಾಹುಲ್ ದ್ರಾವಿಡ್ ಅಜೇಯ 85, ಇರ್ಫಾನ್ ಪಠಾಣ್ 83 ರನ್ ಗಳಿಸಿದ್ದರು.( AFP)
ಅತ್ತ ಏಕದಿನ ವಿಶ್ವಕಪ್‌ನಲ್ಲಿಯೂ ಭಾರತ ದಾಖಲೆ ನಿರ್ಮಿಸಿದೆ. ಒಂದೇ ಒಣದು ಶತಕವಿಲ್ಲದೆ ಅತಿ ಹೆಚ್ಚು ರನ್‌ ಕಲೆ ಹಾಕಿದ ಸಾಧನೆ ಮಾಡಿದೆ. ಈ  ಹಿಂದೆ 2019ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನ ಯಾವುದೇ ಶತಕವಿಲ್ಲದೆ 348 ರನ್‌ ಕಲೆ ಹಾಕಿತ್ತು. ಈ ಬಾರಿ ಲಂಕಾ ವಿರುದ್ಧ ಭಾರತ 357 ರನ್‌ ಕಲೆ ಹಾಕಿದೆ. ವಿಶ್ವಕಪ್‌ನಲ್ಲಿ ಶತಕವಿಲ್ಲದೆ ತಂಡವೊಂದು 350 ರನ್‌ ಗಡಿ ದಾಟಿದ್ದು ಇದೇ ಮೊದಲು
(6 / 6)
ಅತ್ತ ಏಕದಿನ ವಿಶ್ವಕಪ್‌ನಲ್ಲಿಯೂ ಭಾರತ ದಾಖಲೆ ನಿರ್ಮಿಸಿದೆ. ಒಂದೇ ಒಣದು ಶತಕವಿಲ್ಲದೆ ಅತಿ ಹೆಚ್ಚು ರನ್‌ ಕಲೆ ಹಾಕಿದ ಸಾಧನೆ ಮಾಡಿದೆ. ಈ  ಹಿಂದೆ 2019ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನ ಯಾವುದೇ ಶತಕವಿಲ್ಲದೆ 348 ರನ್‌ ಕಲೆ ಹಾಕಿತ್ತು. ಈ ಬಾರಿ ಲಂಕಾ ವಿರುದ್ಧ ಭಾರತ 357 ರನ್‌ ಕಲೆ ಹಾಕಿದೆ. ವಿಶ್ವಕಪ್‌ನಲ್ಲಿ ಶತಕವಿಲ್ಲದೆ ತಂಡವೊಂದು 350 ರನ್‌ ಗಡಿ ದಾಟಿದ್ದು ಇದೇ ಮೊದಲು

    ಹಂಚಿಕೊಳ್ಳಲು ಲೇಖನಗಳು