logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc Points Table: ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು; ಅಗ್ರಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದ ಭಾರತ

WTC Points Table: ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು; ಅಗ್ರಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದ ಭಾರತ

Dec 29, 2023 05:00 AM IST

World Test Championship Standings: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತವು ಹೀನಾಯ ಸೋಲು ಕಂಡ ಬೆನ್ನಲ್ಲೇ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕ ಪಟ್ಟಿಯಲ್ಲಿ ಭಾರಿ ಬದಲಾವಣೆಯಾಗಿದೆ. ಟೀಮ್ ಇಂಡಿಯಾ ಸ್ಥಾನವು ಭಾರಿ ಕುಸಿತ ಕಂಡಿದ್ದು, ಯಾವ ತಂಡಗಳು ಯಾವ ಸ್ಥಾನ ಪಡೆದಿವೆ ಎಂಬುದನ್ನು ನೋಡಿ.

  • World Test Championship Standings: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತವು ಹೀನಾಯ ಸೋಲು ಕಂಡ ಬೆನ್ನಲ್ಲೇ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕ ಪಟ್ಟಿಯಲ್ಲಿ ಭಾರಿ ಬದಲಾವಣೆಯಾಗಿದೆ. ಟೀಮ್ ಇಂಡಿಯಾ ಸ್ಥಾನವು ಭಾರಿ ಕುಸಿತ ಕಂಡಿದ್ದು, ಯಾವ ತಂಡಗಳು ಯಾವ ಸ್ಥಾನ ಪಡೆದಿವೆ ಎಂಬುದನ್ನು ನೋಡಿ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡ ಸೋತ ನಂತರ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು. ಆದರೆ ಭಾರತಕ್ಕೆ ಹೆಚ್ಚು ಕಾಲ ಅಗ್ರಸ್ಥಾನದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಸೆಂಚುರಿಯನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್‌ ಮತ್ತು 32 ರನ್‌ಗಳಿಂದ ಸೋತ ನಂತರ ರೋಹಿತ್ ಶರ್ಮಾ ಬಳಗವು ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಿಂದ ಕೆಳಕ್ಕೆ ಜಾರಿದೆ.
(1 / 10)
ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡ ಸೋತ ನಂತರ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು. ಆದರೆ ಭಾರತಕ್ಕೆ ಹೆಚ್ಚು ಕಾಲ ಅಗ್ರಸ್ಥಾನದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಸೆಂಚುರಿಯನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್‌ ಮತ್ತು 32 ರನ್‌ಗಳಿಂದ ಸೋತ ನಂತರ ರೋಹಿತ್ ಶರ್ಮಾ ಬಳಗವು ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಿಂದ ಕೆಳಕ್ಕೆ ಜಾರಿದೆ.(Reuters)
ಸೆಂಚುರಿಯನ್ ಟೆಸ್ಟ್‌ನಲ್ಲಿ ಸೋತ ನಂತರ, ಭಾರತವು 16 ಅಂಕಗಳೊಂದಿಗೆ 44.44 ಶೇಕಡಾ ಗೆಲುವಿನ ಪ್ರಮಾಣ ಹೊಂದಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ ಸೈಕಲ್‌ನಲ್ಲಿ ಮೂರು ಪಂದ್ಯಗಳನ್ನು ಆಡಿರುವ ಭಾರತ 1 ಪಂದ್ಯ ಮಾತ್ರ ಗೆದ್ದಿದೆ. ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.  ಹೀಗಾಗಿ ಟೀಂ ಇಂಡಿಯಾ ಲೀಗ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ. ಕೇವಲ 1 ಪಂದ್ಯದಲ್ಲಿ ಸೋಲುವ ಮೂಲಕ ಒಂದನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದಿದೆ.
(2 / 10)
ಸೆಂಚುರಿಯನ್ ಟೆಸ್ಟ್‌ನಲ್ಲಿ ಸೋತ ನಂತರ, ಭಾರತವು 16 ಅಂಕಗಳೊಂದಿಗೆ 44.44 ಶೇಕಡಾ ಗೆಲುವಿನ ಪ್ರಮಾಣ ಹೊಂದಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ ಸೈಕಲ್‌ನಲ್ಲಿ ಮೂರು ಪಂದ್ಯಗಳನ್ನು ಆಡಿರುವ ಭಾರತ 1 ಪಂದ್ಯ ಮಾತ್ರ ಗೆದ್ದಿದೆ. ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.  ಹೀಗಾಗಿ ಟೀಂ ಇಂಡಿಯಾ ಲೀಗ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ. ಕೇವಲ 1 ಪಂದ್ಯದಲ್ಲಿ ಸೋಲುವ ಮೂಲಕ ಒಂದನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದಿದೆ.(PTI)
ದಕ್ಷಿಣ ಆಫ್ರಿಕಾ ತಂಡವು ಸೆಂಚುರಿಯನ್ ಟೆಸ್ಟ್‌ನಲ್ಲಿ ಭಾರತವನ್ನು ಸೋಲಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ನಂಬರ್ ವನ್ ಸ್ಥಾನ ಪಡೆದುಕೊಂಡಿದೆ. ನೂತನ WTC ಸೈಕಲ್‌ನಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಟೆಸ್ಟ್ ಪಂದ್ಯವಾಗಿದೆ. ಹೀಗಾಗಿ 100 ಪ್ರತಿಶತ ಗೆಲುವಿನ ಪ್ರಮಾಣದೊಂದಿಗೆ 12 ಅಂಕಗಳನ್ನು ಸಂಗ್ರಹಿಸಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲಿಸ್ಟ್‌ಗಳನ್ನು ಪಾಯಿಂಟ್‌ಗಳಿಂದ ನಿರ್ಧರಿಸಲಾಗುವುದಿಲ್ಲ. ಪ್ರತಿ ತಂಡಗಳ ಶೇಕಡಾವಾರು ಅಂಕಗಳ ಮೂಲಕ ಫೈನಲಿಸ್ಟ್‌ ನಿರ್ಧಾರ ಮಾಡಲಾಗುತ್ತದೆ.
(3 / 10)
ದಕ್ಷಿಣ ಆಫ್ರಿಕಾ ತಂಡವು ಸೆಂಚುರಿಯನ್ ಟೆಸ್ಟ್‌ನಲ್ಲಿ ಭಾರತವನ್ನು ಸೋಲಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ನಂಬರ್ ವನ್ ಸ್ಥಾನ ಪಡೆದುಕೊಂಡಿದೆ. ನೂತನ WTC ಸೈಕಲ್‌ನಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಟೆಸ್ಟ್ ಪಂದ್ಯವಾಗಿದೆ. ಹೀಗಾಗಿ 100 ಪ್ರತಿಶತ ಗೆಲುವಿನ ಪ್ರಮಾಣದೊಂದಿಗೆ 12 ಅಂಕಗಳನ್ನು ಸಂಗ್ರಹಿಸಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲಿಸ್ಟ್‌ಗಳನ್ನು ಪಾಯಿಂಟ್‌ಗಳಿಂದ ನಿರ್ಧರಿಸಲಾಗುವುದಿಲ್ಲ. ಪ್ರತಿ ತಂಡಗಳ ಶೇಕಡಾವಾರು ಅಂಕಗಳ ಮೂಲಕ ಫೈನಲಿಸ್ಟ್‌ ನಿರ್ಧಾರ ಮಾಡಲಾಗುತ್ತದೆ.(AFP)
ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಎರಡನೇ ಸ್ಥಾನ ಕಾಯ್ದುಕೊಂಡಿದೆ. 3 ಪಂದ್ಯಗಳಲ್ಲಿ 22 ಅಂಕಗಳೊಂದಿಗೆ 61.11 ಶೇಕಡಾ ಗೆಲುವಿನ ಪ್ರಮಾಣ ಹೊಂದಿದೆ. ತಂಡವು 2 ಟೆಸ್ಟ್ ಗೆದ್ದು 1 ಟೆಸ್ಟ್ ಪಂದ್ಯ ಸೋತಿದೆ.
(4 / 10)
ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಎರಡನೇ ಸ್ಥಾನ ಕಾಯ್ದುಕೊಂಡಿದೆ. 3 ಪಂದ್ಯಗಳಲ್ಲಿ 22 ಅಂಕಗಳೊಂದಿಗೆ 61.11 ಶೇಕಡಾ ಗೆಲುವಿನ ಪ್ರಮಾಣ ಹೊಂದಿದೆ. ತಂಡವು 2 ಟೆಸ್ಟ್ ಗೆದ್ದು 1 ಟೆಸ್ಟ್ ಪಂದ್ಯ ಸೋತಿದೆ.(AFP)
ನ್ಯೂಜಿಲ್ಯಾಂಡ್‌ ತಂಡವು 2 ಪಂದ್ಯಗಳಲ್ಲಿ 12 ಅಂಕ ಕಲೆಹಾಕಿದೆ. ತಂಡ 1 ಟೆಸ್ಟ್ ಗೆದ್ದು 1 ಪಂದ್ಯವನ್ನು ಸೋತಿದೆ. ಹೀಗಾಗಿ 50 ಪ್ರತಿಶತ ಅಂಕಗಳೊಂದಿಗೆ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಸದ್ಯ ಕಿವೀಸ್ ಮೂರನೇ ಸ್ಥಾನದಲ್ಲಿದೆ.
(5 / 10)
ನ್ಯೂಜಿಲ್ಯಾಂಡ್‌ ತಂಡವು 2 ಪಂದ್ಯಗಳಲ್ಲಿ 12 ಅಂಕ ಕಲೆಹಾಕಿದೆ. ತಂಡ 1 ಟೆಸ್ಟ್ ಗೆದ್ದು 1 ಪಂದ್ಯವನ್ನು ಸೋತಿದೆ. ಹೀಗಾಗಿ 50 ಪ್ರತಿಶತ ಅಂಕಗಳೊಂದಿಗೆ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಸದ್ಯ ಕಿವೀಸ್ ಮೂರನೇ ಸ್ಥಾನದಲ್ಲಿದೆ.(AP)
ನ್ಯೂಜಿಲ್ಯಾಂಡ್‌ ತಂಡದಂತೆ ಬಾಂಗ್ಲಾದೇಶ ಕೂಡ 2 ಪಂದ್ಯಗಳಿಂದ 12 ಅಂಕ ಕಲೆಹಾಕಿದೆ. 1 ಟೆಸ್ಟ್ ಗೆದ್ದು 1 ಟೆಸ್ಟ್ ಸೋತಿರುವ ಬಾಂಗ್ಲಾದೇಶವು 50 ಪ್ರತಿಶತದಷ್ಟು ಪಾಯಿಂಟ್ ಪ್ರಮಾಣ ಹೊಂದಿದೆ. ಆ ಮೂಲಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದೆ.
(6 / 10)
ನ್ಯೂಜಿಲ್ಯಾಂಡ್‌ ತಂಡದಂತೆ ಬಾಂಗ್ಲಾದೇಶ ಕೂಡ 2 ಪಂದ್ಯಗಳಿಂದ 12 ಅಂಕ ಕಲೆಹಾಕಿದೆ. 1 ಟೆಸ್ಟ್ ಗೆದ್ದು 1 ಟೆಸ್ಟ್ ಸೋತಿರುವ ಬಾಂಗ್ಲಾದೇಶವು 50 ಪ್ರತಿಶತದಷ್ಟು ಪಾಯಿಂಟ್ ಪ್ರಮಾಣ ಹೊಂದಿದೆ. ಆ ಮೂಲಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದೆ.(AFP)
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಆರನೇ ಸ್ಥಾನಕ್ಕೆ ಕುಸಿದಿದೆ. ತಂಡದ ಬತ್ತಳಿಕೆಯಲ್ಲಿ 30 ಅಂಕಗಳಿವೆ. ಆದರೆ, ಶೇಕಡಾವಾರು ಅಂಕ 41.67 ಮಾತ್ರ. ಸದ್ಯ ಪಾಕ್‌ ವಿರುದ್ಧ ತಂಡ ಗೆಲ್ಲುವ ನಿರೀಕ್ಷೆಯಲ್ಲಿದೆ.
(7 / 10)
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಆರನೇ ಸ್ಥಾನಕ್ಕೆ ಕುಸಿದಿದೆ. ತಂಡದ ಬತ್ತಳಿಕೆಯಲ್ಲಿ 30 ಅಂಕಗಳಿವೆ. ಆದರೆ, ಶೇಕಡಾವಾರು ಅಂಕ 41.67 ಮಾತ್ರ. ಸದ್ಯ ಪಾಕ್‌ ವಿರುದ್ಧ ತಂಡ ಗೆಲ್ಲುವ ನಿರೀಕ್ಷೆಯಲ್ಲಿದೆ.(AFP)
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಏಳನೇ ಸ್ಥಾನದಲ್ಲಿದೆ. 2 ಟೆಸ್ಟ್‌ಗಳಲ್ಲಿ 16.67 ಶೇಕಡಾ ಗೆಲುವಿನ ಪ್ರಮಾಣದೊಂದಿಗೆ 4 ಅಂಕಗಳನ್ನು ಕಲೆಹಾಕಿದೆ.
(8 / 10)
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಏಳನೇ ಸ್ಥಾನದಲ್ಲಿದೆ. 2 ಟೆಸ್ಟ್‌ಗಳಲ್ಲಿ 16.67 ಶೇಕಡಾ ಗೆಲುವಿನ ಪ್ರಮಾಣದೊಂದಿಗೆ 4 ಅಂಕಗಳನ್ನು ಕಲೆಹಾಕಿದೆ.(AFP)
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಸದ್ಯ ಇಂಗ್ಲೆಂಡ್ 8ನೇ ಸ್ಥಾನದಲ್ಲಿದೆ. 5 ಪಂದ್ಯಗಳಲ್ಲಿ 9 ಅಂಕಗಳನ್ನು ಗಳಿಸಿ ಕೇವಲ 15 ಪ್ರತಿಶತ ಗೆಲುವಿನ ಪ್ರಮಾಣ ಹೊಂದಿದೆ.
(9 / 10)
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಸದ್ಯ ಇಂಗ್ಲೆಂಡ್ 8ನೇ ಸ್ಥಾನದಲ್ಲಿದೆ. 5 ಪಂದ್ಯಗಳಲ್ಲಿ 9 ಅಂಕಗಳನ್ನು ಗಳಿಸಿ ಕೇವಲ 15 ಪ್ರತಿಶತ ಗೆಲುವಿನ ಪ್ರಮಾಣ ಹೊಂದಿದೆ.(AP)
ಶ್ರೀಲಂಕಾ 2 ಪಂದ್ಯಗಳನ್ನು ಆಡಿದ್ದರೂ, ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಪ್ರಸ್ತುತ ಶ್ರೀಲಂಕಾ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
(10 / 10)
ಶ್ರೀಲಂಕಾ 2 ಪಂದ್ಯಗಳನ್ನು ಆಡಿದ್ದರೂ, ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಪ್ರಸ್ತುತ ಶ್ರೀಲಂಕಾ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.( AFP)

    ಹಂಚಿಕೊಳ್ಳಲು ಲೇಖನಗಳು