logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Afc ಏಷ್ಯನ್ ಕಪ್‌ ಫುಟ್ಬಾಲ್; ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಸವಾಲು; ಪಂದ್ಯದ ನೇರಪ್ರಸಾರ ವಿವರ ಹೀಗಿದೆ?

AFC ಏಷ್ಯನ್ ಕಪ್‌ ಫುಟ್ಬಾಲ್; ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಸವಾಲು; ಪಂದ್ಯದ ನೇರಪ್ರಸಾರ ವಿವರ ಹೀಗಿದೆ?

Jan 13, 2024 03:19 PM IST

India vs Australia Live Streaming: ಜಾಗತಿಕ ಫುಟ್ಬಾಲ್‌ ಶ್ರೇಯಾಂಕದಲ್ಲಿ 25 vs 102ನೇ ಸ್ಥಾನದಲ್ಲಿರುವ ತಂಡಗಳೆರಡು ಜನವರಿ 12ರ ಶನಿವಾರ ನಡೆಯುವ ಎಎಫ್‌ಸಿ ಏಷ್ಯನ್ ಕಪ್‌ನ ಮೊದಲ ಪಂದ್ಯದಲ್ಲಿ ಸೆಣಸುತ್ತಿವೆ. ಸುನಿಲ್ ಛೆಟ್ರಿ ನೇತೃತ್ವದ ಭಾರತ ತಂಡದ ವಿರುದ್ಧ ಬಲಿಷ್ಠ ಆಸ್ಟ್ರೇಲಿಯಾ ಕಣಕ್ಕಿಳಿಯುತ್ತಿದೆ. ರೋಚಕ ಪಂದ್ಯದ ಲೈವ್‌ ಸ್ಟ್ರೀಮಿಂಗ್‌ ವಿವರ ಇಲ್ಲಿದೆ.

  • India vs Australia Live Streaming: ಜಾಗತಿಕ ಫುಟ್ಬಾಲ್‌ ಶ್ರೇಯಾಂಕದಲ್ಲಿ 25 vs 102ನೇ ಸ್ಥಾನದಲ್ಲಿರುವ ತಂಡಗಳೆರಡು ಜನವರಿ 12ರ ಶನಿವಾರ ನಡೆಯುವ ಎಎಫ್‌ಸಿ ಏಷ್ಯನ್ ಕಪ್‌ನ ಮೊದಲ ಪಂದ್ಯದಲ್ಲಿ ಸೆಣಸುತ್ತಿವೆ. ಸುನಿಲ್ ಛೆಟ್ರಿ ನೇತೃತ್ವದ ಭಾರತ ತಂಡದ ವಿರುದ್ಧ ಬಲಿಷ್ಠ ಆಸ್ಟ್ರೇಲಿಯಾ ಕಣಕ್ಕಿಳಿಯುತ್ತಿದೆ. ರೋಚಕ ಪಂದ್ಯದ ಲೈವ್‌ ಸ್ಟ್ರೀಮಿಂಗ್‌ ವಿವರ ಇಲ್ಲಿದೆ.
AFC ಏಷ್ಯನ್ ಕಪ್‌ನಲ್ಲಿ ಶನಿವಾರ (ಜನವರಿ 13) ಕತಾರ್‌ನ ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿಲ್ ಅಲಿ ಸ್ಟೇಡಿಯಂನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ‘ಬಿ’ ಗುಂಪಿನಲ್ಲಿ ಭಾರತದ ಮೊದಲ ಪಂದ್ಯ ಇದು. ಭಾರತದೊಂದಿಗೆ ಈ ಗುಂಪಿನಲ್ಲಿ ಉಜ್ಬೇಕಿಸ್ತಾನ್ ಮತ್ತು ಸಿರಿಯಾ ತಂಡಗಳು ಕೂಡಾ ಇದೆ.
(1 / 5)
AFC ಏಷ್ಯನ್ ಕಪ್‌ನಲ್ಲಿ ಶನಿವಾರ (ಜನವರಿ 13) ಕತಾರ್‌ನ ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿಲ್ ಅಲಿ ಸ್ಟೇಡಿಯಂನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ‘ಬಿ’ ಗುಂಪಿನಲ್ಲಿ ಭಾರತದ ಮೊದಲ ಪಂದ್ಯ ಇದು. ಭಾರತದೊಂದಿಗೆ ಈ ಗುಂಪಿನಲ್ಲಿ ಉಜ್ಬೇಕಿಸ್ತಾನ್ ಮತ್ತು ಸಿರಿಯಾ ತಂಡಗಳು ಕೂಡಾ ಇದೆ.(PTI, AP)
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎಎಫ್‌ಸಿ ಏಷ್ಯನ್ ಕಪ್ ಪಂದ್ಯವು ಶನಿವಾರ ಸಂಜೆ 5 ಗಂಟೆಗೆ ಆರಂಭವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 5 ಗಂಟೆಗೆ ಪಂದ್ಯ ಆರಂಭವಾಗಲಿದೆ. ಕತಾರ್ ಸಮಯದ ಪ್ರಕಾರ, ಕಿಕ್-ಆಫ್ ಸಮಯವು ಮಧ್ಯಾಹ್ನ 2:30 ಆಗಿದೆ.
(2 / 5)
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎಎಫ್‌ಸಿ ಏಷ್ಯನ್ ಕಪ್ ಪಂದ್ಯವು ಶನಿವಾರ ಸಂಜೆ 5 ಗಂಟೆಗೆ ಆರಂಭವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 5 ಗಂಟೆಗೆ ಪಂದ್ಯ ಆರಂಭವಾಗಲಿದೆ. ಕತಾರ್ ಸಮಯದ ಪ್ರಕಾರ, ಕಿಕ್-ಆಫ್ ಸಮಯವು ಮಧ್ಯಾಹ್ನ 2:30 ಆಗಿದೆ.(Indian Football Team)
AFC ಏಷ್ಯನ್ ಕಪ್ ಭಾರತ vs ಆಸ್ಟ್ರೇಲಿಯಾ ಪಂದ್ಯವು ಸ್ಪೋರ್ಟ್ಸ್ 18 ನೆಟ್‌ವರ್ಕ್‌ನ ವಿವಿಧ ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ. ಇಲ್ಲಿ ನೀವು ಭಾರತ-ಆಸ್ಟ್ರೇಲಿಯಾ ಪಂದ್ಯವನ್ನು ಲೈವ್ ಆಗಿ ವೀಕ್ಷಿಸಬಹುದು.
(3 / 5)
AFC ಏಷ್ಯನ್ ಕಪ್ ಭಾರತ vs ಆಸ್ಟ್ರೇಲಿಯಾ ಪಂದ್ಯವು ಸ್ಪೋರ್ಟ್ಸ್ 18 ನೆಟ್‌ವರ್ಕ್‌ನ ವಿವಿಧ ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ. ಇಲ್ಲಿ ನೀವು ಭಾರತ-ಆಸ್ಟ್ರೇಲಿಯಾ ಪಂದ್ಯವನ್ನು ಲೈವ್ ಆಗಿ ವೀಕ್ಷಿಸಬಹುದು.(Indian Football Team)
ಭಾರತ vs ಆಸ್ಟ್ರೇಲಿಯಾ AFC ಏಷ್ಯನ್ ಕಪ್ ಪಂದ್ಯವನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಫ್ರೀಯಾಗಿ ವೀಕ್ಷಿಸಬಹುದು.
(4 / 5)
ಭಾರತ vs ಆಸ್ಟ್ರೇಲಿಯಾ AFC ಏಷ್ಯನ್ ಕಪ್ ಪಂದ್ಯವನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಫ್ರೀಯಾಗಿ ವೀಕ್ಷಿಸಬಹುದು.(Indian Football Team)
ಭಾರತ ತಂಡದ ಮುಖ್ಯ ಕೋಚ್ ಇಗೊರ್ ಸ್ಟಿಮಾಚ್ ಆಸ್ಟ್ರೇಲಿಯ ವಿರುದ್ಧದ ಪಂದ್ಯಕ್ಕೂ ಮುನ್ನಾ ಬಲಿಷ್ಠ ಪೈಪೋಟಿ ಕುರಿತು ಮಾತನಾಡಿದ್ದರು. "ನಿಸ್ಸಂಶಯವಾಗಿ, ಪಂದ್ಯ ತುಂಬಾ ಕಠಿಣವಾಗಿರುತ್ತದೆ" ಎಂದು ಅವರು ಹೇಳಿದರು. ಆಸ್ಟ್ರೇಲಿಯಾ ತಂಡ ಏನು ಸಾಧಿಸಿದೆ ಎಂಬುದು ನಮಗೆ ತಿಳಿದಿದೆ. ಅವರ ಅಗ್ರ ಆಟಗಾರರು ಯುರೋಪ್‌ನ ಅತ್ಯುತ್ತಮ ಲೀಗ್‌ಗಳಲ್ಲಿ ಆಡುತ್ತಾರೆ. ಅವರೆಲ್ಲರೂ ನಿಯಮಿತವಾಗಿ ಸ್ಪರ್ಧಾತ್ಮಕ ಪಂದ್ಯಗಳನ್ನು ಆಡುತ್ತಾರೆ. ಪಂದ್ಯ ಸುಲಭವಲ್ಲ. ಆದರೆ ನಾವು ಸವಾಲನ್ನು ಎದುರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.
(5 / 5)
ಭಾರತ ತಂಡದ ಮುಖ್ಯ ಕೋಚ್ ಇಗೊರ್ ಸ್ಟಿಮಾಚ್ ಆಸ್ಟ್ರೇಲಿಯ ವಿರುದ್ಧದ ಪಂದ್ಯಕ್ಕೂ ಮುನ್ನಾ ಬಲಿಷ್ಠ ಪೈಪೋಟಿ ಕುರಿತು ಮಾತನಾಡಿದ್ದರು. "ನಿಸ್ಸಂಶಯವಾಗಿ, ಪಂದ್ಯ ತುಂಬಾ ಕಠಿಣವಾಗಿರುತ್ತದೆ" ಎಂದು ಅವರು ಹೇಳಿದರು. ಆಸ್ಟ್ರೇಲಿಯಾ ತಂಡ ಏನು ಸಾಧಿಸಿದೆ ಎಂಬುದು ನಮಗೆ ತಿಳಿದಿದೆ. ಅವರ ಅಗ್ರ ಆಟಗಾರರು ಯುರೋಪ್‌ನ ಅತ್ಯುತ್ತಮ ಲೀಗ್‌ಗಳಲ್ಲಿ ಆಡುತ್ತಾರೆ. ಅವರೆಲ್ಲರೂ ನಿಯಮಿತವಾಗಿ ಸ್ಪರ್ಧಾತ್ಮಕ ಪಂದ್ಯಗಳನ್ನು ಆಡುತ್ತಾರೆ. ಪಂದ್ಯ ಸುಲಭವಲ್ಲ. ಆದರೆ ನಾವು ಸವಾಲನ್ನು ಎದುರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.(Indian Football Team)

    ಹಂಚಿಕೊಳ್ಳಲು ಲೇಖನಗಳು