logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  India-china Troops Clash: ಅರುಣಾಚಲದ ಎಲ್‌ಎಸಿಯಲ್ಲಿ ಭಾರತ-ಚೀನಾ ಸೇನಾ ಸಂಘರ್ಷ, ಏನಿದು ಘಟನೆ | ಚಿತ್ರ ಮಾಹಿತಿ

India-China troops clash: ಅರುಣಾಚಲದ ಎಲ್‌ಎಸಿಯಲ್ಲಿ ಭಾರತ-ಚೀನಾ ಸೇನಾ ಸಂಘರ್ಷ, ಏನಿದು ಘಟನೆ | ಚಿತ್ರ ಮಾಹಿತಿ

Dec 13, 2022 01:29 PM IST

ಅರುಣಾಚಲ ಪ್ರದೇಶದಲ್ಲಿನ ತವಾಂಗ್‌ ವಲಯದ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಡಿಸೆಂಬರ್‌ 9ರಂದು ಭಾರತದ ಸೈನಿಕರು ಮತ್ತು ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

  • ಅರುಣಾಚಲ ಪ್ರದೇಶದಲ್ಲಿನ ತವಾಂಗ್‌ ವಲಯದ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಡಿಸೆಂಬರ್‌ 9ರಂದು ಭಾರತದ ಸೈನಿಕರು ಮತ್ತು ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಅರುಣಾಚಲ ಪ್ರದೇಶದಲ್ಲಿನ ತವಾಂಗ್‌ ವಲಯದ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಡಿಸೆಂಬರ್‌ 9ರಂದು ಭಾರತದ ಸೈನಿಕರು ಮತ್ತು ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದಿದೆ.  ಎರಡೂ ಕಡೆಯ ಸೈನಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸೇನೆ ಮಾಹಿತಿ ನೀಡಿದೆ. ಈ ಕುರಿತು ಇಂದು ರಾಜ್ಯಸಭೆಗೂ ರಕ್ಷಣಾ ಸಚಿವರು ಮಾಹಿತಿ ನೀಡಿದ್ದು, "ಗಂಭೀರ ಗಾಯಗಳಾಗಿಲ್ಲ, ಯಾರೂ ಮೃತಪಟ್ಟಿಲ್ಲ, ಎರಡೂ ಕಡೆಯ ಸೈನಿಕರಿಗೂ ಸಣ್ಣ ಗಾಯಗಳಾಗಿವೆʼʼ ಎಂದು ಮಾಹಿತಿ ನೀಡಿದ್ದಾರೆ. 
(1 / 9)
ಅರುಣಾಚಲ ಪ್ರದೇಶದಲ್ಲಿನ ತವಾಂಗ್‌ ವಲಯದ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಡಿಸೆಂಬರ್‌ 9ರಂದು ಭಾರತದ ಸೈನಿಕರು ಮತ್ತು ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದಿದೆ.  ಎರಡೂ ಕಡೆಯ ಸೈನಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸೇನೆ ಮಾಹಿತಿ ನೀಡಿದೆ. ಈ ಕುರಿತು ಇಂದು ರಾಜ್ಯಸಭೆಗೂ ರಕ್ಷಣಾ ಸಚಿವರು ಮಾಹಿತಿ ನೀಡಿದ್ದು, "ಗಂಭೀರ ಗಾಯಗಳಾಗಿಲ್ಲ, ಯಾರೂ ಮೃತಪಟ್ಟಿಲ್ಲ, ಎರಡೂ ಕಡೆಯ ಸೈನಿಕರಿಗೂ ಸಣ್ಣ ಗಾಯಗಳಾಗಿವೆʼʼ ಎಂದು ಮಾಹಿತಿ ನೀಡಿದ್ದಾರೆ. (PTI)
ಈ ಕುರಿತು ಅರುಣಾಚಲ ಪ್ರದೇಶದ ಬಿಜೆಪಿಯ ಸಂಸದರಾದ ತಪಿರ್‌ ಗವೊ ಕೂಡ ಪ್ರತಿಕ್ರಿಯೆ ನೀಡಿದ್ದರು. ಭಾರತ ಮತ್ತು ಚೀನಾ ಸೇನೆಗಳ ನಡುವೆ ಘರ್ಷಣೆ ನಡೆದಿದೆ ಎಂದಿದ್ದರು. 
(2 / 9)
ಈ ಕುರಿತು ಅರುಣಾಚಲ ಪ್ರದೇಶದ ಬಿಜೆಪಿಯ ಸಂಸದರಾದ ತಪಿರ್‌ ಗವೊ ಕೂಡ ಪ್ರತಿಕ್ರಿಯೆ ನೀಡಿದ್ದರು. ಭಾರತ ಮತ್ತು ಚೀನಾ ಸೇನೆಗಳ ನಡುವೆ ಘರ್ಷಣೆ ನಡೆದಿದೆ ಎಂದಿದ್ದರು. (PTI)
ಗಾಯಗೊಂಡ ಭಾರತೀಯ ಸೈನಿಕರನ್ನು ಹತ್ತಿರದ ಮಿಲಿಟರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 
(3 / 9)
ಗಾಯಗೊಂಡ ಭಾರತೀಯ ಸೈನಿಕರನ್ನು ಹತ್ತಿರದ ಮಿಲಿಟರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. (AP)
"ಡಿಸೆಂಬರ್‌ 9ರಂದು ನಡೆದ ಘಟನೆಯ ಕುರಿತು ಕೇಳಿದಾಗ ನನಗೆ ನೋವಾಯಿತು. ನಾನು ಇದನ್ನು ಖಂಡಿಸುವೆ. ಭವಿಷ್ಯದಲಿ ಪಿಎಲ್‌ಎ ಇಂತಹ ಉದ್ಧಟತನ ಮುಂದುವರೆಸಿದರೆ ಭಾರತ-ಚೀನಾ ಸಂಬಂಧ ಹಾಳಾಗಬಹುದುʼʼ ಎಂದು ಅರುಣಾಚಲ ಪ್ರದೇಶದ ಬಿಜೆಪಿ ಸಂಸದರಾದ ತಪಿರ್‌ ಗಾವೊ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
(4 / 9)
"ಡಿಸೆಂಬರ್‌ 9ರಂದು ನಡೆದ ಘಟನೆಯ ಕುರಿತು ಕೇಳಿದಾಗ ನನಗೆ ನೋವಾಯಿತು. ನಾನು ಇದನ್ನು ಖಂಡಿಸುವೆ. ಭವಿಷ್ಯದಲಿ ಪಿಎಲ್‌ಎ ಇಂತಹ ಉದ್ಧಟತನ ಮುಂದುವರೆಸಿದರೆ ಭಾರತ-ಚೀನಾ ಸಂಬಂಧ ಹಾಳಾಗಬಹುದುʼʼ ಎಂದು ಅರುಣಾಚಲ ಪ್ರದೇಶದ ಬಿಜೆಪಿ ಸಂಸದರಾದ ತಪಿರ್‌ ಗಾವೊ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.(PTI)
"ನನಗೆ ತಿಳಿದ ಮಾಹಿತಿ ಪ್ರಕಾರ, ಭಾರತೀಯ ಪಡೆಗಳಿಗೆ ಕೊಂಚ ಮಟ್ಟಿನ ಗಾಯಗಳಾಗಿವೆ. ಆದರೆ, ಪಿಎಲ್‌ಎ ಸೈನಿಕರಿಗೆ ಹೆಚ್ಚಿನ ಗಾಯಗಳಾಗಿವೆʼʼ ಎಂದು ಅವರು ಹೇಳಿದ್ದಾರೆ.
(5 / 9)
"ನನಗೆ ತಿಳಿದ ಮಾಹಿತಿ ಪ್ರಕಾರ, ಭಾರತೀಯ ಪಡೆಗಳಿಗೆ ಕೊಂಚ ಮಟ್ಟಿನ ಗಾಯಗಳಾಗಿವೆ. ಆದರೆ, ಪಿಎಲ್‌ಎ ಸೈನಿಕರಿಗೆ ಹೆಚ್ಚಿನ ಗಾಯಗಳಾಗಿವೆʼʼ ಎಂದು ಅವರು ಹೇಳಿದ್ದಾರೆ.(PTI)
ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ)ಯ ಈ ಕ್ರಮವನ್ನು ಖಂಡಿಸಿದ್ದಾರೆ. "ಈ ರೀತಿ ಪದೇಪದೇ ಘಟನೆಗಳಾದರೆ ಭಾರತ ಮತ್ತು ಚೀನಾದ ಸಂಬಂಧ ಹಾಲಾಗಬಹುದು. ನಾನು ಪಿಎಲ್‌ಎಯ ಈ ಕ್ರಮವನ್ನು ವೈಯಕ್ತಿಕವಾಗಿ ಖಂಡಿಸುವೆ. ಗಡಿಯಲ್ಲಿರುವ ಯೋಧರು ಒಂದು ಇಂಚು ಭೂಮಿಯನ್ನೂ ಚೀನಾಕ್ಕೆ ಬಿಡಲಾರರುʼʼ ಎಂದು ಅವರು ಹೇಳಿದ್ದಾರೆ.
(6 / 9)
ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ)ಯ ಈ ಕ್ರಮವನ್ನು ಖಂಡಿಸಿದ್ದಾರೆ. "ಈ ರೀತಿ ಪದೇಪದೇ ಘಟನೆಗಳಾದರೆ ಭಾರತ ಮತ್ತು ಚೀನಾದ ಸಂಬಂಧ ಹಾಲಾಗಬಹುದು. ನಾನು ಪಿಎಲ್‌ಎಯ ಈ ಕ್ರಮವನ್ನು ವೈಯಕ್ತಿಕವಾಗಿ ಖಂಡಿಸುವೆ. ಗಡಿಯಲ್ಲಿರುವ ಯೋಧರು ಒಂದು ಇಂಚು ಭೂಮಿಯನ್ನೂ ಚೀನಾಕ್ಕೆ ಬಿಡಲಾರರುʼʼ ಎಂದು ಅವರು ಹೇಳಿದ್ದಾರೆ.(PTI)
ಈ ಕುರಿತು ಲೋಕಸಭೆಯಲ್ಲಿ ರಕ್ಷಣಾ ಸಚಿವರು ಮಾತನಾಡಿದ್ದು, "ಗಡಿ ಸಂಘರ್ಷಧ ಬಳಿಕ ಸರಕಾರವು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾದೊಂದಿಗೆ ಸಂವಹನ ನಡೆಸಿದೆʼʼ ಎಂದು ಹೇಳಿದ್ದಾರೆ. "ಗಡಿಯಲ್ಲಿ ಯಾವುದೇ ಸವಾಲುಗಳನ್ನು ಎದುರಿಸಲು ನಮ್ಮ ಪಡೆಗಳು ಸಿದ್ಧವಾಗಿವೆ ಎಂದು ಅವರು ಹೇಳಿದ್ದಾರೆ. "ಚೀನಾದ ಸೈನಿಕರು ಎಲ್‌ಎಸಿಯನ್ನು ಉಲ್ಲಂಘಿಸಲು ಪ್ರಯತ್ನಿಸಿದರು ಮತ್ತು ಯಥಾಸ್ಥಿತಿ ಬದಲಾಯಿಸಲು ಪ್ರಯತ್ನಿಸಿದರುʼʼ ಎಂದು ರಾಜನಾಥ್‌ ಸಿಂಗ್‌ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
(7 / 9)
ಈ ಕುರಿತು ಲೋಕಸಭೆಯಲ್ಲಿ ರಕ್ಷಣಾ ಸಚಿವರು ಮಾತನಾಡಿದ್ದು, "ಗಡಿ ಸಂಘರ್ಷಧ ಬಳಿಕ ಸರಕಾರವು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾದೊಂದಿಗೆ ಸಂವಹನ ನಡೆಸಿದೆʼʼ ಎಂದು ಹೇಳಿದ್ದಾರೆ. "ಗಡಿಯಲ್ಲಿ ಯಾವುದೇ ಸವಾಲುಗಳನ್ನು ಎದುರಿಸಲು ನಮ್ಮ ಪಡೆಗಳು ಸಿದ್ಧವಾಗಿವೆ ಎಂದು ಅವರು ಹೇಳಿದ್ದಾರೆ. "ಚೀನಾದ ಸೈನಿಕರು ಎಲ್‌ಎಸಿಯನ್ನು ಉಲ್ಲಂಘಿಸಲು ಪ್ರಯತ್ನಿಸಿದರು ಮತ್ತು ಯಥಾಸ್ಥಿತಿ ಬದಲಾಯಿಸಲು ಪ್ರಯತ್ನಿಸಿದರುʼʼ ಎಂದು ರಾಜನಾಥ್‌ ಸಿಂಗ್‌ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.(PTI)
ಅರುಣಾಚಲ ಪ್ರದೇಶದಲ್ಲಿ ಇರುವ ತವಾಂಗ್ ಗಡಿಯಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಘರ್ಷಣೆ ಪ್ರಕರಣ ಸೋಮವಾರ ಸಂಜೆಯಷ್ಟೇ ಬೆಳಕಿಗೆ ಬಂದಿತ್ತು. ಭಾರತ ಮತ್ತು ಚೀನಾ ಗಡಿಯ ಎಲ್‌ಎಸಿ (ವಾಸ್ತವ ಗಡಿ ನಿಯಂತ್ರಣ ರೇಖೆ) ಬಳಿ ಈ ಘರ್ಷಣೆ ಸಂಭವಿಸಿತ್ತು. ಈ ಕುರಿತಾಗಿ ಸಂಸತ್‌ನಲ್ಲಿ ಸಮಗ್ರ ಚರ್ಚೆ ನಡೆಯಬೇಕು ಎಂದು ಹಲವು ಸಂಸದರು ಆಗ್ರಹಿಸಿದ್ದರು.
(8 / 9)
ಅರುಣಾಚಲ ಪ್ರದೇಶದಲ್ಲಿ ಇರುವ ತವಾಂಗ್ ಗಡಿಯಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಘರ್ಷಣೆ ಪ್ರಕರಣ ಸೋಮವಾರ ಸಂಜೆಯಷ್ಟೇ ಬೆಳಕಿಗೆ ಬಂದಿತ್ತು. ಭಾರತ ಮತ್ತು ಚೀನಾ ಗಡಿಯ ಎಲ್‌ಎಸಿ (ವಾಸ್ತವ ಗಡಿ ನಿಯಂತ್ರಣ ರೇಖೆ) ಬಳಿ ಈ ಘರ್ಷಣೆ ಸಂಭವಿಸಿತ್ತು. ಈ ಕುರಿತಾಗಿ ಸಂಸತ್‌ನಲ್ಲಿ ಸಮಗ್ರ ಚರ್ಚೆ ನಡೆಯಬೇಕು ಎಂದು ಹಲವು ಸಂಸದರು ಆಗ್ರಹಿಸಿದ್ದರು.(PTI)
ಲೋಕಸಭೆಯಲ್ಲಿ ಮಾತನಾಡಿದ ಸಿಂಗ್, ಗಡಿ ಘರ್ಷಣೆಯ ನಂತರ ಸರ್ಕಾರ ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾದೊಂದಿಗೆ ಮಾತನಾಡಿದೆ ಎಂದು ಹೇಳಿದರು. ಗಡಿಯಲ್ಲಿ ಯಾವುದೇ ಸವಾಲನ್ನು ಎದುರಿಸಲು ನಮ್ಮ ಪಡೆಗಳು ಸಿದ್ಧವಾಗಿವೆ ಎಂದು ಅವರು ಒತ್ತಿ ಹೇಳಿದರು.
(9 / 9)
ಲೋಕಸಭೆಯಲ್ಲಿ ಮಾತನಾಡಿದ ಸಿಂಗ್, ಗಡಿ ಘರ್ಷಣೆಯ ನಂತರ ಸರ್ಕಾರ ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾದೊಂದಿಗೆ ಮಾತನಾಡಿದೆ ಎಂದು ಹೇಳಿದರು. ಗಡಿಯಲ್ಲಿ ಯಾವುದೇ ಸವಾಲನ್ನು ಎದುರಿಸಲು ನಮ್ಮ ಪಡೆಗಳು ಸಿದ್ಧವಾಗಿವೆ ಎಂದು ಅವರು ಒತ್ತಿ ಹೇಳಿದರು.(PTI)

    ಹಂಚಿಕೊಳ್ಳಲು ಲೇಖನಗಳು