logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Indian Navy Day: ಭಾರತೀಯ ನೌಕಾಪಡೆ ದಿನ: ಸಾಗರ ಶೂರರಿಗೆ ಇದೋ ನಮ್ಮ ನಮನ...

Indian Navy Day: ಭಾರತೀಯ ನೌಕಾಪಡೆ ದಿನ: ಸಾಗರ ಶೂರರಿಗೆ ಇದೋ ನಮ್ಮ ನಮನ...

Dec 04, 2022 02:20 PM IST

ನವದೆಹಲಿ: ದೇಶಾದ್ಯಂತ ಇಂದು(ಡಿ.04-ಭಾನುವಾರ) ಭಾರತೀಯ ನೌಕಾಸೇನೆ ದಿನ ಆಚರಣೆ ನಡೆಯುತ್ತಿದ್ದು, ದೇಶದ ಸಮುದ್ರ ಗಡಿಗಳ ರಕ್ಷಣೆಯಲ್ಲಿ ನಿರತವಾಗಿರುವ ನೌಕಾ ವೀರರಿಗೆ ದೇಶ ನಮಿಸುತ್ತಿದೆ. ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ, ಭಾರತೀಯ ನೌಕಾಸೇನೆ ನಡೆಸಿದ ದಾಳಿಯ ಇತಿಹಾಸವನ್ನು ಸ್ಮರಿಸಲಾಗುತ್ತಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ..

  • ನವದೆಹಲಿ: ದೇಶಾದ್ಯಂತ ಇಂದು(ಡಿ.04-ಭಾನುವಾರ) ಭಾರತೀಯ ನೌಕಾಸೇನೆ ದಿನ ಆಚರಣೆ ನಡೆಯುತ್ತಿದ್ದು, ದೇಶದ ಸಮುದ್ರ ಗಡಿಗಳ ರಕ್ಷಣೆಯಲ್ಲಿ ನಿರತವಾಗಿರುವ ನೌಕಾ ವೀರರಿಗೆ ದೇಶ ನಮಿಸುತ್ತಿದೆ. ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ, ಭಾರತೀಯ ನೌಕಾಸೇನೆ ನಡೆಸಿದ ದಾಳಿಯ ಇತಿಹಾಸವನ್ನು ಸ್ಮರಿಸಲಾಗುತ್ತಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ..
ಇಂದು(ಡಿ.04-ಭಾನುವಾರ) ಭಾರತೀಯ ನೌಕಾಸೇನೆ ದಿನವಾಗಿದ್ದು, ನೌಕಾಸೇನೆ ಮುಖ್ಯಸ್ಥ ಅಡ್ಮಿರಲ್‌ ಆರ್.‌ ಹರಿ ಕುಮಾರ್‌ ಅವರು ನೌಕಾಪಡೆಯ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. (ಸಂಗ್ರಹ ಚಿತ್ರ)
(1 / 6)
ಇಂದು(ಡಿ.04-ಭಾನುವಾರ) ಭಾರತೀಯ ನೌಕಾಸೇನೆ ದಿನವಾಗಿದ್ದು, ನೌಕಾಸೇನೆ ಮುಖ್ಯಸ್ಥ ಅಡ್ಮಿರಲ್‌ ಆರ್.‌ ಹರಿ ಕುಮಾರ್‌ ಅವರು ನೌಕಾಪಡೆಯ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. (ಸಂಗ್ರಹ ಚಿತ್ರ)(AFP)
1971ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ, ಭಾರತೀಯ ನೌಕಾಪಡೆಯು ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಡಿ.04ರಂದು ನಡೆಸಿದ ದಿಟ್ಟ ದಾಳಿಯ ಸ್ಮರಣಾರ್ಥವಾಗಿ ಪ್ರತಿವರ್ಷ ಇದೇ ದಿನ ಭಾರತೀಯ ನೌಕಾಪಡೆ ದಿನವನ್ನು ಆಚರಿಸಲಾಗುತ್ತದೆ. (ಸಂಗ್ರಹ ಚಿತ್ರ)
(2 / 6)
1971ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ, ಭಾರತೀಯ ನೌಕಾಪಡೆಯು ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಡಿ.04ರಂದು ನಡೆಸಿದ ದಿಟ್ಟ ದಾಳಿಯ ಸ್ಮರಣಾರ್ಥವಾಗಿ ಪ್ರತಿವರ್ಷ ಇದೇ ದಿನ ಭಾರತೀಯ ನೌಕಾಪಡೆ ದಿನವನ್ನು ಆಚರಿಸಲಾಗುತ್ತದೆ. (ಸಂಗ್ರಹ ಚಿತ್ರ)(ANI)
ಡಿ.04 1971ರಂದು ಆರಂಭವಾದ ಈ ದಾಳಿಯು ಡಿ.05ರವರೆಗೆ ಮುಂದುವರೆದು, ಕರಾಚಿಯಲ್ಲಿದ್ದ ಪಾಕಿಸ್ತಾನ ನೌಕಾಪಡೆಯ ಬಂದರನ್ನು ಸಂಪೂರ್ಣವಾಗಿ ನಾಶಪಡಿಸಿತ್ತು. ಅಲ್ಲದೇ ಬಂದರಿನ ತೈಲ ಸಂಗ್ರಹಾರವನ್ನು ಧ್ವಂಸಗೊಳಿಸಿತ್ತು. (ಸಂಗ್ರಹ ಚಿತ್ರ)
(3 / 6)
ಡಿ.04 1971ರಂದು ಆರಂಭವಾದ ಈ ದಾಳಿಯು ಡಿ.05ರವರೆಗೆ ಮುಂದುವರೆದು, ಕರಾಚಿಯಲ್ಲಿದ್ದ ಪಾಕಿಸ್ತಾನ ನೌಕಾಪಡೆಯ ಬಂದರನ್ನು ಸಂಪೂರ್ಣವಾಗಿ ನಾಶಪಡಿಸಿತ್ತು. ಅಲ್ಲದೇ ಬಂದರಿನ ತೈಲ ಸಂಗ್ರಹಾರವನ್ನು ಧ್ವಂಸಗೊಳಿಸಿತ್ತು. (ಸಂಗ್ರಹ ಚಿತ್ರ)(ANI)
ಸತತ 24 ಗಂಟೆಗಳ ಕಾಲ ನಡೆದ 'ಆಪರೇಷನ್‌ ಟ್ರಿಡೆಂಟ್'(‌Operation Trident) ಕಾರ್ಯಾಚರಣೆ, ಕರಾಚಿ ಬಂದರನ್ನು ಸಂಪೂರ್ಣ ನಾಸಗೊಳಿಸುವಲ್ಲಿ ಯಶಸ್ವಿಯಾಯಿತು. ಈ ಕಾರ್ಯಚರಣೆ ಭಾರತೀಯ ಸೇನೆಯು ಯುದ್ಧವನ್ನು ಗೆಲ್ಲುವಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿತ್ತು. (ಸಂಗ್ರಹ ಚಿತ್ರ)
(4 / 6)
ಸತತ 24 ಗಂಟೆಗಳ ಕಾಲ ನಡೆದ 'ಆಪರೇಷನ್‌ ಟ್ರಿಡೆಂಟ್'(‌Operation Trident) ಕಾರ್ಯಾಚರಣೆ, ಕರಾಚಿ ಬಂದರನ್ನು ಸಂಪೂರ್ಣ ನಾಸಗೊಳಿಸುವಲ್ಲಿ ಯಶಸ್ವಿಯಾಯಿತು. ಈ ಕಾರ್ಯಚರಣೆ ಭಾರತೀಯ ಸೇನೆಯು ಯುದ್ಧವನ್ನು ಗೆಲ್ಲುವಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿತ್ತು. (ಸಂಗ್ರಹ ಚಿತ್ರ)(Ashish Vaishnav)
ಯುದ್ಧಪೀಡಿತ ಪೂರ್ವ ಪಾಕಿಸ್ತಾನ(ಇಂದಿನ ಬಾಂಗ್ಲಾದೇಶ)ಕ್ಕೆ ಸೈನಿಕರನ್ನು ಮತ್ತು ಶಸ್ತ್ರಾಸ್ತ್ರಗಳನ್ನು ರವಾನಿಸಲು, ಪಾಕಿಸ್ತಾನ ನೌಕಾಸೇನೆಯು ಕರಾಚಿ ಬಂದರನ್ನು ಅವಲಂಬಿಸಿತ್ತು. ಹೀಗಾಗಿ ಈ ಬಂದರನ್ನೇ ನಾಶಗೊಳಿಸುವ ಯೋಜನೆ ರೂಪಿಸಿದ ಭಾರತೀಯ ನೌಕಾಸೇನೆ, 'ಆಪರೇಷನ್‌ ಟ್ರಿಡೆಂಟ್'(‌Operation Trident) ಹೆಸರಿನ ಕಾರ್ಯಾಚರಣೆಯನ್ನು ನಡೆಸಿತ್ತು. (ಸಂಗ್ರಹ ಚಿತ್ರ)
(5 / 6)
ಯುದ್ಧಪೀಡಿತ ಪೂರ್ವ ಪಾಕಿಸ್ತಾನ(ಇಂದಿನ ಬಾಂಗ್ಲಾದೇಶ)ಕ್ಕೆ ಸೈನಿಕರನ್ನು ಮತ್ತು ಶಸ್ತ್ರಾಸ್ತ್ರಗಳನ್ನು ರವಾನಿಸಲು, ಪಾಕಿಸ್ತಾನ ನೌಕಾಸೇನೆಯು ಕರಾಚಿ ಬಂದರನ್ನು ಅವಲಂಬಿಸಿತ್ತು. ಹೀಗಾಗಿ ಈ ಬಂದರನ್ನೇ ನಾಶಗೊಳಿಸುವ ಯೋಜನೆ ರೂಪಿಸಿದ ಭಾರತೀಯ ನೌಕಾಸೇನೆ, 'ಆಪರೇಷನ್‌ ಟ್ರಿಡೆಂಟ್'(‌Operation Trident) ಹೆಸರಿನ ಕಾರ್ಯಾಚರಣೆಯನ್ನು ನಡೆಸಿತ್ತು. (ಸಂಗ್ರಹ ಚಿತ್ರ)(ANI)
ಈ ಬಾರಿಯ ಭಾರತೀಯ ನೌಕಾಸೇನೆ ದಿನಾಚರಣೆಯನ್ನು ಮುಂಬೈನಲ್ಲಿ ಆಯೋಜಿಸಲಾಗಿದ್ದು, ಇಂದು ಸಂಜೆ ನಡೆಯಲಿರುವ ಭವ್ಯ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. (ಸಂಗ್ರಹ ಚಿತ್ರ)
(6 / 6)
ಈ ಬಾರಿಯ ಭಾರತೀಯ ನೌಕಾಸೇನೆ ದಿನಾಚರಣೆಯನ್ನು ಮುಂಬೈನಲ್ಲಿ ಆಯೋಜಿಸಲಾಗಿದ್ದು, ಇಂದು ಸಂಜೆ ನಡೆಯಲಿರುವ ಭವ್ಯ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. (ಸಂಗ್ರಹ ಚಿತ್ರ)(PTI)

    ಹಂಚಿಕೊಳ್ಳಲು ಲೇಖನಗಳು