logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Indian Railways: ಮಳೆಹಾನಿ, ಹಾಸನ-ದಕ್ಷಿಣ ಕನ್ನಡ ರೈಲ್ವೆ ಮಾರ್ಗದ ತ್ವರಿತ ಪುನರ್‌ ನಿರ್ಮಾಣ, ರೈಲ್ವೆ ಸಿಬ್ಬಂದಿ ಫಟಾಫಟ್‌ ಕೆಲಸ ಹೀಗಿದೆ

Indian Railways: ಮಳೆಹಾನಿ, ಹಾಸನ-ದಕ್ಷಿಣ ಕನ್ನಡ ರೈಲ್ವೆ ಮಾರ್ಗದ ತ್ವರಿತ ಪುನರ್‌ ನಿರ್ಮಾಣ, ರೈಲ್ವೆ ಸಿಬ್ಬಂದಿ ಫಟಾಫಟ್‌ ಕೆಲಸ ಹೀಗಿದೆ

Jul 28, 2024 01:27 PM IST

Rain updates ಭಾರೀ ಮಳೆಯಿಂದ ಕರ್ನಾಟಕದ ಮಲೆನಾಡು ಹಾಗೂ ಗುಡ್ಡ ಪ್ರದೇಶವಾದ ಹಾಸನ ಹಾಗೂ ದಕ್ಷಿಣ ಕನ್ನಡ ನಡುವಿನ ಮೈಸೂರು ರೈಲ್ವೆ ವಿಭಾಗಕ್ಕೆ ಸೇರಿದ ಯೆಡಕುಮೇರಿ ಬಳಿ ಆಗಿದ್ದ ರೈಲ್ವೆ ಮಾರ್ಗ ದುರಸ್ತಿ ಕಾರ್ಯಭರದಿಂದ ಸಾಗಿದೆ.

  • Rain updates ಭಾರೀ ಮಳೆಯಿಂದ ಕರ್ನಾಟಕದ ಮಲೆನಾಡು ಹಾಗೂ ಗುಡ್ಡ ಪ್ರದೇಶವಾದ ಹಾಸನ ಹಾಗೂ ದಕ್ಷಿಣ ಕನ್ನಡ ನಡುವಿನ ಮೈಸೂರು ರೈಲ್ವೆ ವಿಭಾಗಕ್ಕೆ ಸೇರಿದ ಯೆಡಕುಮೇರಿ ಬಳಿ ಆಗಿದ್ದ ರೈಲ್ವೆ ಮಾರ್ಗ ದುರಸ್ತಿ ಕಾರ್ಯಭರದಿಂದ ಸಾಗಿದೆ.
ಎರಡು ದಿನದ ಹಿಂದೆ ಹಾಸನ ಭಾಗದಲ್ಲಿ ಸುರಿದಿದ್ದ ಭಾರೀ ಮಳೆಗೆ ಸಕಲೇಶಪುರ ತಾಲ್ಲೂಕಿನ ಯಡಕುಮೇರಿ ಬಳಿ ರೈಲ್ವೆ ಮಾರ್ಗ ಹಾನಿಯಾಗಿತ್ತು.
(1 / 7)

ಇದರಿಂದಾಗಿ ಎರಡು ದಿನದಿಂದ ಮೈಸೂರು- ಮಂಗಳೂರು, ಹಾಸನ೦ ಮಂಗಳೂರು ಮಾರ್ಗದ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. 
(2 / 7)

ಭಾರತೀಯ ರೈಲ್ವೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ತಂಡ ಸತತ ಒಂದು ದಿನ ಕೆಲಸ ಮಾಡಿ ರೈಲ್ವೆ ಮಾರ್ಗ ದುರಸ್ಥಿಗೊಳಿಸುವಲ್ಲಿ ನಿರತರಾಗಿದ್ದಾರೆ.
(3 / 7)

ಭಾರೀ ಯಂತ್ರಗಳನ್ನು ಬಳಸಿಕೊಂಡು ಗುಡ್ಡ ಕುಸಿತದಿಂದ ಹಾಳಾಗಿದ್ದ ಮಾರ್ಗವನ್ನು ಸರಿಪಡಿಸುತ್ತಿದ್ದು, ಭಾರತೀಯ ರೈಲ್ವೆಯ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತದೆ.
(4 / 7)

ಈಗಾಗಲೇ ರೈಲ್ವೆ ಮಾರ್ಗ ಹಾಗೂ ಪಕ್ಕದಲ್ಲಿ ಕುಸಿದಿದ್ದ ಜಾಗಗಳನ್ನು ಜೆಸಿಬಿ ಯಂತ್ರಗಳನ್ನು ಬಳಸಿ ಸರಿಪಡಿಸಲಾಗಿದೆ.
(5 / 7)

ವಿಶೇಷವಾಗಿ ಕುಸಿತ ಕಂಡಿದ್ದ ಜಾಗದಲ್ಲಿ ಮರಳಿನ ಚೀಲಗಳು, ಭಾರೀ ಗಾತ್ರದ ಕಲ್ಲುಗಳನ್ನು ಹಾಕಿ ಬಿಗಿಗೊಳಿಸುವ ಕೆಲಸ ಮಾಡಲಾಗಿದೆ. 
(6 / 7)

ಅತ್ಯಾಧುನಿಕ ಉಪಕರಗಳನ್ನು ಬಳಕೆ ಮಾಡಿಕೊಂಡು ಎಲ್ಲಿಲ್ಲೆ ಅನಾಹುತ ಆಗಿದೆ. ಮಾರ್ಗ ಸರಿಪಡಿಸಲು ಏನು ಮಾಡಬೇಕು ಎಂದು ತಂತ್ರಜ್ಞರ ತಂಡವು ಸ್ಥಳದಲ್ಲೇ ಬೀಡು ಬಿಟ್ಟು ಕೆಲಸ ಮಾಡುತ್ತಿದೆ. 
(7 / 7)

    ಹಂಚಿಕೊಳ್ಳಲು ಲೇಖನಗಳು