logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಚ್ಚರಿ ಎನಿಸಿದರೂ ಸತ್ಯ, ವಿಶ್ವದ ಜಿಗಿಯುವ ಪ್ರಾಣಿಗಳ ಪೈಕಿ ಅತಿದೊಡ್ಡ ಜೀವಿಯಿದು; ಇದರ ಕುರಿತ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ

ಅಚ್ಚರಿ ಎನಿಸಿದರೂ ಸತ್ಯ, ವಿಶ್ವದ ಜಿಗಿಯುವ ಪ್ರಾಣಿಗಳ ಪೈಕಿ ಅತಿದೊಡ್ಡ ಜೀವಿಯಿದು; ಇದರ ಕುರಿತ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ

Jun 06, 2024 05:41 PM IST

ಪ್ರಪಂಚದ ಕೆಲವು ವಿಚಿತ್ರ ಪ್ರಾಣಿಗಳಲ್ಲಿ ಕಾಂಗರೂ ಕೂಡ ಒಂದು. ತನ್ನ ಗಾತ್ರ, ಮಕ್ಕಳನ್ನು ಹೊಕ್ಕಳ ಬಳಿ ಇಟ್ಟು ಪೋಷಿಸುವುದು ಹೀಗೆ ಹಲವು ವೈಶಿಷ್ಟ್ಯಗಳಿಂದ ಹೆಸರುವಾಸಿಯಾಗಿರುವ ಕಾಂಗರೂ ಪ್ರಪಂಚದಲ್ಲೇ  ಜಿಗಿಯುವ ಪ್ರಾಣಿಗಳಲ್ಲಿ ದೊಡ್ಡ ಪ್ರಾಣಿ ಎಂಬ ಖ್ಯಾತಿಗೆ ಪಡೆದಿದೆ. ಮೊಲದಂತಹ ಜಿಗಿಯುವ ಪ್ರಾಣಿಗಳ ಸಾಲಿಗೆ ಸೇರುತ್ತದೆ ಕಾಂಗರೂ. 

  • ಪ್ರಪಂಚದ ಕೆಲವು ವಿಚಿತ್ರ ಪ್ರಾಣಿಗಳಲ್ಲಿ ಕಾಂಗರೂ ಕೂಡ ಒಂದು. ತನ್ನ ಗಾತ್ರ, ಮಕ್ಕಳನ್ನು ಹೊಕ್ಕಳ ಬಳಿ ಇಟ್ಟು ಪೋಷಿಸುವುದು ಹೀಗೆ ಹಲವು ವೈಶಿಷ್ಟ್ಯಗಳಿಂದ ಹೆಸರುವಾಸಿಯಾಗಿರುವ ಕಾಂಗರೂ ಪ್ರಪಂಚದಲ್ಲೇ  ಜಿಗಿಯುವ ಪ್ರಾಣಿಗಳಲ್ಲಿ ದೊಡ್ಡ ಪ್ರಾಣಿ ಎಂಬ ಖ್ಯಾತಿಗೆ ಪಡೆದಿದೆ. ಮೊಲದಂತಹ ಜಿಗಿಯುವ ಪ್ರಾಣಿಗಳ ಸಾಲಿಗೆ ಸೇರುತ್ತದೆ ಕಾಂಗರೂ. 
ಆಸ್ಟ್ರೇಲಿಯಾದ ರಾಷ್ಟ್ರಪ್ರಾಣಿ ಕಾಂಗರೂ ವನ್ಯಜೀವಿಗಳಲ್ಲೇ ವಿಶೇಷವಾದದ್ದು. ಹಲವು ವೈಶಿಷ್ಟ್ಯಗಳ ಮೂಲಕ ಗಮನ ಸೆಳೆವ ಈ ಪ್ರಾಣಿಯು ವಿಶ್ವದಲ್ಲೇ ಜಿಗಿಯುವ ಪ್ರಾಣಿಗಳ ಪೈಕಿ ದೊಡ್ಡ ಜೀವಿ ಎಂಬ ಖ್ಯಾತಿ ಪಡೆದಿದೆ. ಸಾಮಾನ್ಯವಾಗಿ ಜಿಗಿಯುವ ಪ್ರಾಣಿಗಳು ದೇಹಾಕಾರದಲ್ಲಿ ಚಿಕ್ಕದಾಗಿರುತ್ತವೆ. ಆದರೆ ಕಾಂಗರೂ ಇದಕ್ಕೆ ತದ್ವಿರುದ್ಧವಾಗಿದೆ. 
(1 / 7)

ಇದು ತನ್ನ ಗಾತ್ರದಿಂದ ಮಾತ್ರವಲ್ಲ, ವಿಚಿತ್ರ ಚಲನೆಯ ಮೂಲಕವೂ ಗಮನ ಸೆಳೆಯುತ್ತದೆ. ಮ್ಯಾಕ್ರೋಪೊಡಿಡೆ ಕುಟುಂಬದ ಭಾಗವಾಗಿರುವ ಕಾಂಗರೂಗಳಿಗೆ ಬಿಗ್‌ ಫೂಟ್‌ ಅಥವಾ ದೊಡ್ಡ ಪಾದದ ಪ್ರಾಣಿಗಳು ಎಂದೂ ಕರೆಯಲಾಗುತ್ತದೆ. 
(2 / 7)

ಇದರ ಹಿಂಗಾಲುಗಳು ಶಕ್ತಿಯುತವಾಗಿರುತ್ತದೆ. ಕಾಲುಗಳು ಉದ್ದವಾಗಿದ್ದು ಹಾಗೂ ಉದ್ದನೆಯ ಬಾಲವನ್ನು ಹೊಂದಿರುತ್ತದೆ. ಅವು ಈ ಪ್ರಾಣಿಗಳಿಗೆ ಎತ್ತರಕ್ಕೆ ಜಿಗಿಯಲು ಸಹಾಯ ಮಾಡುತ್ತವೆ. 
(3 / 7)

ಆದರೆ ಕಾಂಗರೂಗಳು ಎತ್ತರಕ್ಕೆ ಜಿಗಿಯುವುದು ಬೇಗ ಬಹುದೂರ ಕ್ರಮಿಸಲು ಎಂದಲ್ಲ. ಪರಭಕ್ಷಕ ಪ್ರಾಣಿಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಇವು ಅತಿ ಎತ್ತರಕ್ಕೆ ಜಿಗಿಯುತ್ತವೆ. 
(4 / 7)

ಕಾಂಗರೂಗಳಲ್ಲಿ ಕೆಂಪು ಕಾಂಗರೂ ಅತಿ ದೊಡ್ಡ ಜಾತಿಯಾಗಿದೆ. ಇದು 2 ಮೀಟರ್ ಎತ್ತರಕ್ಕೆ ಬೆಳೆಯತ್ತದೆ ಮತ್ತು ಸುಮಾರು 90ಕೆಜಿ ತೂಕ ಇರುತ್ತದೆ. ಇದು ಗಂಟೆಗೆ 50 ಕಿಲೋಮೀಟರ್‌ ದೂರಕ್ಕೆ ಓಡಬಲ್ಲುದು. 
(5 / 7)

ಕಾಂಗರೂಗಳು ವೇಗವಾಗಿ ಮತ್ತು ದೂರಕ್ಕೆ ನೆಗೆಯುವ ಸಾಮರ್ಥ್ಯದಿಂದ ಸುತ್ತಲಿನ ಪರಿಸರಕ್ಕೆ ಹಾನಿಯಾಗುವುದು ತಪ್ಪುತ್ತದೆ. ಕಾಂಗರೂವನ್ನು ವಿಶ್ವದ ಅತಿದೊಡ್ಡ ಜಿಗಿತದ ಪ್ರಾಣಿ ಎಂದು ಗುರುತಿಸುವುದು ಈ ಜೀವಿಗಳು ಸವಾಲಿನ ಪರಿಸರದಲ್ಲಿ ಅಭಿವೃದ್ಧಿ ಹೊಂದಲು ಅಭಿವೃದ್ಧಿಪಡಿಸಿದ ಗಮನಾರ್ಹ ವಿಕಸನೀಯ ರೂಪಾಂತರಗಳನ್ನು ಎತ್ತಿ ತೋರಿಸುತ್ತದೆ. 
(6 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(7 / 7)

    ಹಂಚಿಕೊಳ್ಳಲು ಲೇಖನಗಳು