logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರತಿಭಟನೆ, ಮೇಲ್ಮನವಿ; ವಿನೇಶ್‌ ಫೋಗಟ್ ಅನರ್ಹತೆ ಬಳಿಕ ಭಾರತ ಸರ್ಕಾರ-ಐಒಸಿ ಕೈಗೊಂಡ ಕ್ರಮಗಳಿವು

ಪ್ರತಿಭಟನೆ, ಮೇಲ್ಮನವಿ; ವಿನೇಶ್‌ ಫೋಗಟ್ ಅನರ್ಹತೆ ಬಳಿಕ ಭಾರತ ಸರ್ಕಾರ-ಐಒಸಿ ಕೈಗೊಂಡ ಕ್ರಮಗಳಿವು

Aug 07, 2024 06:05 PM IST

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 50 ಕೆಜಿ ವಿಭಾಗ ಕುಸ್ತಿ ಫೈನಲ್‌ನಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಯ್ತು. ಅಧಿಕ ತೂಕದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಭಾರತ ಸೇರಿದಂತೆ ಎಲ್ಲೆಡೆ ಬೇಸರದ ಜೊತೆಗೆ ಅಸಮಾಧಾನ ವ್ಯಕ್ತವಾಗಿದೆ. ಭಾರತದ ಪರ ದಾಖಲೆ ನಿರ್ಮಿಸುವ ಅವಕಾಶ ಹೊಂದಿದ್ದ ವಿನೇಶ್‌, ಇದೀಗ ಪದಕ ಮಿಸ್‌ ಮಾಡಿಕೊಂಡಿದ್ದಾರೆ.

  • ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 50 ಕೆಜಿ ವಿಭಾಗ ಕುಸ್ತಿ ಫೈನಲ್‌ನಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಯ್ತು. ಅಧಿಕ ತೂಕದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಭಾರತ ಸೇರಿದಂತೆ ಎಲ್ಲೆಡೆ ಬೇಸರದ ಜೊತೆಗೆ ಅಸಮಾಧಾನ ವ್ಯಕ್ತವಾಗಿದೆ. ಭಾರತದ ಪರ ದಾಖಲೆ ನಿರ್ಮಿಸುವ ಅವಕಾಶ ಹೊಂದಿದ್ದ ವಿನೇಶ್‌, ಇದೀಗ ಪದಕ ಮಿಸ್‌ ಮಾಡಿಕೊಂಡಿದ್ದಾರೆ.
ವಿನೇಶ್‌ ಅನರ್ಹಗೊಂಡ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಒಲಿಂಪಿಕ್ಸ್​​ ಒಕ್ಕೂಟದ ಅಧ್ಯಕ್ಷೆ ಪಿಟಿ ಉಷಾ ಅವರಿಗೆ ಕರೆ ಮಾತನಾಡಿ ಮಾಹಿತಿ ಪಡೆದಿದ್ದಾರೆ. ವಿನೇಶ್‌ಗೆ ನೆರವಾಗುವ ಸಲುವಾಗಿ ಪ್ರತಿಭಟನೆ ದಾಖಲಿಸುವಂತೆ ಪಿಟಿ ಉಷಾಗೆ ಮೋದಿ ಖಡಕ್ ಸೂಚನೆ ನೀಡಿದ್ದರು. ಅದರಂತೆ ಪಿಟಿ ಉಷಾ ಅವರು ಕೈಗೊಂಡ ಕ್ರಮಗಳ ಕುರಿತು ಮಾತನಾಡಿದ್ದಾರೆ.
(1 / 6)
ವಿನೇಶ್‌ ಅನರ್ಹಗೊಂಡ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಒಲಿಂಪಿಕ್ಸ್​​ ಒಕ್ಕೂಟದ ಅಧ್ಯಕ್ಷೆ ಪಿಟಿ ಉಷಾ ಅವರಿಗೆ ಕರೆ ಮಾತನಾಡಿ ಮಾಹಿತಿ ಪಡೆದಿದ್ದಾರೆ. ವಿನೇಶ್‌ಗೆ ನೆರವಾಗುವ ಸಲುವಾಗಿ ಪ್ರತಿಭಟನೆ ದಾಖಲಿಸುವಂತೆ ಪಿಟಿ ಉಷಾಗೆ ಮೋದಿ ಖಡಕ್ ಸೂಚನೆ ನೀಡಿದ್ದರು. ಅದರಂತೆ ಪಿಟಿ ಉಷಾ ಅವರು ಕೈಗೊಂಡ ಕ್ರಮಗಳ ಕುರಿತು ಮಾತನಾಡಿದ್ದಾರೆ.(HT_PRINT)
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಖ್ಯಸ್ಥೆ ಪಿಟಿ ಉಷಾ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿನೇಶ್‌ ಅನರ್ಹತೆ ಕುರಿತು ಆಘಾತ ವ್ಯಕ್ತಪಡಿಸಿರುವ ಅವರು, ಭಾರತೀಯ ಒಲಿಂಪಿಕ್‌ ಅಸೋಸಿಇಯೇಷನ್‌ ಈಗಾಗಲೇ ವಿಶ್ವ ಕುಸ್ತಿ ಆಡಳಿತ ಮಂಡಳಿಯಾದ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (UWW)ಗೆ ಮೇಲ್ಮನವಿ ಸಲ್ಲಿಸಿದೆ ಎಂದು ದೃಢಪಡಿಸಿದ್ದಾರೆ.
(2 / 6)
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಖ್ಯಸ್ಥೆ ಪಿಟಿ ಉಷಾ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿನೇಶ್‌ ಅನರ್ಹತೆ ಕುರಿತು ಆಘಾತ ವ್ಯಕ್ತಪಡಿಸಿರುವ ಅವರು, ಭಾರತೀಯ ಒಲಿಂಪಿಕ್‌ ಅಸೋಸಿಇಯೇಷನ್‌ ಈಗಾಗಲೇ ವಿಶ್ವ ಕುಸ್ತಿ ಆಡಳಿತ ಮಂಡಳಿಯಾದ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (UWW)ಗೆ ಮೇಲ್ಮನವಿ ಸಲ್ಲಿಸಿದೆ ಎಂದು ದೃಢಪಡಿಸಿದ್ದಾರೆ.(REUTERS)
"ನಾವು ವಿನೇಶ್ ಅವರಿಗೆ ಎಲ್ಲಾ ರೀತಿಯ ವೈದ್ಯಕೀಯ ಮತ್ತು ಭಾವನಾತ್ಮಕ ಬೆಂಬಲ ನೀಡುತ್ತಿದ್ದೇವೆ. ವಿನೇಶ್ ಅವರನ್ನು ಅನರ್ಹಗೊಳಿಸುವ ನಿರ್ಧಾರವನ್ನು ಪರಿಗಣಿಸುವಂತೆ ಭಾರತೀಯ ಕುಸ್ತಿ ಫೆಡರೇಶನ್ ಈಗಾಗಲೇ ಯುಡಬ್ಲ್ಯೂಡಬ್ಲ್ಯೂಗೆ ಮನವಿ ಸಲ್ಲಿಸಿದೆ. ಮನವಿಯ ಬೆನ್ನೇರಿ ಸಾಧ್ಯವಾದಷ್ಟು ಬಲವಾದ ರೀತಿಯಲ್ಲಿ ಅನುಸರಿಸುತ್ತಿದ್ದೇವೆ" ಎಂದು ಹೇಳಿದ್ದಾರೆ. 
(3 / 6)
"ನಾವು ವಿನೇಶ್ ಅವರಿಗೆ ಎಲ್ಲಾ ರೀತಿಯ ವೈದ್ಯಕೀಯ ಮತ್ತು ಭಾವನಾತ್ಮಕ ಬೆಂಬಲ ನೀಡುತ್ತಿದ್ದೇವೆ. ವಿನೇಶ್ ಅವರನ್ನು ಅನರ್ಹಗೊಳಿಸುವ ನಿರ್ಧಾರವನ್ನು ಪರಿಗಣಿಸುವಂತೆ ಭಾರತೀಯ ಕುಸ್ತಿ ಫೆಡರೇಶನ್ ಈಗಾಗಲೇ ಯುಡಬ್ಲ್ಯೂಡಬ್ಲ್ಯೂಗೆ ಮನವಿ ಸಲ್ಲಿಸಿದೆ. ಮನವಿಯ ಬೆನ್ನೇರಿ ಸಾಧ್ಯವಾದಷ್ಟು ಬಲವಾದ ರೀತಿಯಲ್ಲಿ ಅನುಸರಿಸುತ್ತಿದ್ದೇವೆ" ಎಂದು ಹೇಳಿದ್ದಾರೆ. (PTI)
ಘಟನೆ ಸಂಬಂಧ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ವಿನೇಶ್‌ ಕುರಿತ ನಿರ್ಧಾರದ ವಿರುದ್ಧ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಈಗಾಗಲೇ ಕ್ರೀಡೆಯ ವಿಶ್ವ ಆಡಳಿತ ಮಂಡಳಿ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್‌ಗೆ ಪ್ರತಿಭಟನೆಯನ್ನು ದಾಖಲಿಸಿದೆ ಎಂದು ಹೇಳಿದ್ದಾರೆ.
(4 / 6)
ಘಟನೆ ಸಂಬಂಧ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ವಿನೇಶ್‌ ಕುರಿತ ನಿರ್ಧಾರದ ವಿರುದ್ಧ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಈಗಾಗಲೇ ಕ್ರೀಡೆಯ ವಿಶ್ವ ಆಡಳಿತ ಮಂಡಳಿ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್‌ಗೆ ಪ್ರತಿಭಟನೆಯನ್ನು ದಾಖಲಿಸಿದೆ ಎಂದು ಹೇಳಿದ್ದಾರೆ.(PTI)
ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಬೆಂಬಲಿಸಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷದ ಸಂಸದರು ವಾಕ್‌ಔಟ್ ನಡೆಸಿ ಘೋಷಣೆಗಳನ್ನು ಕೂಗಿದರು.
(5 / 6)
ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಬೆಂಬಲಿಸಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷದ ಸಂಸದರು ವಾಕ್‌ಔಟ್ ನಡೆಸಿ ಘೋಷಣೆಗಳನ್ನು ಕೂಗಿದರು.(PTI)
ಕ್ರೀಡಾಕೂಟದ ಸಿದ್ಧತೆಗಾಗಿ ಸರ್ಕಾರವು ವಿನೇಶ್ ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಿದೆ. ಅದಕ್ಕಾಗಿ 70 ಲಕ್ಷ 45 ಸಾವಿರ ರೂಪಾಯಿ ಖರ್ಚು ಮಾಡಿದೆ ಎಂದು ಮಾಂಡವಿಯಾ ಸಂಸತ್ತಿನಲ್ಲಿ ಹೇಳಿದ್ದಾರೆ.
(6 / 6)
ಕ್ರೀಡಾಕೂಟದ ಸಿದ್ಧತೆಗಾಗಿ ಸರ್ಕಾರವು ವಿನೇಶ್ ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಿದೆ. ಅದಕ್ಕಾಗಿ 70 ಲಕ್ಷ 45 ಸಾವಿರ ರೂಪಾಯಿ ಖರ್ಚು ಮಾಡಿದೆ ಎಂದು ಮಾಂಡವಿಯಾ ಸಂಸತ್ತಿನಲ್ಲಿ ಹೇಳಿದ್ದಾರೆ.(HT_PRINT)

    ಹಂಚಿಕೊಳ್ಳಲು ಲೇಖನಗಳು