logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2023 : ಈ ಐವರು ಆಟಗಾರರಿಗೆ ಇದೇ ಕೊನೆಯ ಐಪಿಎಲ್​?

IPL 2023 : ಈ ಐವರು ಆಟಗಾರರಿಗೆ ಇದೇ ಕೊನೆಯ ಐಪಿಎಲ್​?

Mar 29, 2023 11:22 PM IST

IPL 2023: ಐಪಿಎಲ್ 16ನೇ ಸೀಸನ್ ಮಾರ್ಚ್​ 31ರಿಂದ ಆರಂಭವಾಗಲಿದ್ದು, ಎಲ್ಲರ ದೃಷ್ಟಿ ಹಿರಿಯ ಆಟಗಾರರ ಮೇಲೆ ನೆಟ್ಟಿದೆ. MS ಧೋನಿ ಸೇರಿದಂತೆ ಅನುಭವಿ ಮತ್ತು ಹಿರಿಯ ಆಟಗಾರರು ಈ ಆವೃತ್ತಿ ನಂತರ ಐಪಿಎಲ್​ಗೆ ವಿದಾಯ ಘೋಷಿಸುವ ಸಾಧ್ಯತೆ ಇದೆ.  ಆ ಆಟಗಾರರು ಯಾರು? ಬನ್ನಿ ನೋಡೋಣ.

MS Dhoni: MS ಧೋನಿ ಈ ಪಟ್ಟಿಯಲ್ಲಿರುವ ಮೊದಲ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, ಎರಡು IPL ಸೀಸನ್‌ಗಳಲ್ಲಿ ಕಣಕ್ಕಿಳಿದಿರುವ ಧೋನಿಗೆ ಪ್ರಸ್ತುತ 41 ವರ್ಷ. ಫಿಟ್​​​ನೆಸ್​ ವಿಚಾರದಲ್ಲಿ ಇನ್ನೂ ಫಿಟ್ ಆಗಿದ್ದರೂ, ವಿದಾಯ ಹೇಳಿ ಯುವ ಆಟಗಾರರಿಗೆ ಚೆನ್ನೈ ಸೂಪರ್ ಕಿಂಗ್ಸ್ ಜವಾಬ್ದಾರಿಯನ್ನು ಹಸ್ತಾಂತರಿಸುವ ಸಮಯ ಬಂದಿದೆ. ಹಾಗಾಗಿ ಅವರು ಈ ವರ್ಷ ಚೆನ್ನೈನಲ್ಲಿ ಪ್ರೇಕ್ಷಕರ ಮುಂದೆ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಆಡುವ ಸಾಧ್ಯತೆಗಳಿವೆ.
(1 / 6)

Ambati Rayudu: ಹೈದಾರಾಬಾದ್​ ಬ್ಯಾಟರ್ ಅಂಬಟಿ ರಾಯುಡು ಅವರಿಗೆ ಸದ್ಯ 38 ವರ್ಷ. ಕಳೆದ ಸೀಸನ್​​ನಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಮಧ್ಯಮ ಕ್ರಮಾಂಕಕ್ಕೆ ಆಧಾರವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಇದು ರಾಯುಡುಗೆ ಕೊನೆಯ ಐಪಿಎಲ್ ಸೀಸನ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
(2 / 6)

Amit mishra: ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಇನ್ಮುಂದೆ IPLನಲ್ಲಿ ಕಾಣಿಸಿಕೊಳ್ಳದೇ ಇರಬಹುದು. 40ರ ಹರೆಯದ ಮಿಶ್ರಾ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಆದರೆ, ಯುವ ಆಟಗಾರರ ಅಬ್ಬರದ ಮುಂದೆ ಮಿಶ್ರಾ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಇದೇ ಕೊನೆಯ ಆದರೂ ಅಚ್ಚರಿ ಇಲ್ಲ.
(3 / 6)

David Warner: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಪಂತ್ ಅನುಪಸ್ಥಿತಿಯಲ್ಲಿ ನಾಯಕತ್ವದ ಅವಕಾಶ ಪಡೆದಿರುವ ವಾರ್ನರ್, ಡೆಲ್ಲಿಗೆ ಚೊಚ್ಚಲ ಕಪ್​ ಗೆಲ್ಲಿಸಿಕೊಡುವ ವಿಶ್ವಾಸದಲ್ಲಿದ್ದಾರೆ. ಆದರೆ 36 ವರ್ಷದ ವಾರ್ನರ್ ಕೂಡ ಈ ಋತುವಿನ ನಂತರ ಲೀಗ್ ತೊರೆಯುವ ಸಾಧ್ಯತೆಯಿದೆ.
(4 / 6)

Dinesh Karthik: ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಕಳೆದ ವರ್ಷ ಆರ್‌ಸಿಬಿ ತಂಡದ ಪರ ಅತ್ಯುತ್ತಮ ಫಿನಿಶರ್ ಆಗಿದ್ದರು. ಇದರಿಂದ ಟೀಮ್​ ಇಂಡಿಯಾಗೂ ಕಂಬ್ಯಾಕ್​ ಮಾಡಿದ್ದರು. ಮೊದಲ ಟಿ20 ವಿಶ್ವಕಪ್‌ನಿಂದ ಆಡುತ್ತಿರುವ 37 ವರ್ಷದ ಕಾರ್ತಿಕ್, ಈ ಋತುವಿನ ನಂತರ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ನಿವೃತ್ತಿಯಾಗುವ ಸಾಧ್ಯತೆಯಿದೆ.
(5 / 6)

IPL 2023: 16ನೇ ಆವೃತ್ತಿಯ ನಂತರ ಈ ಐವರು ಕ್ರಿಕೆಟಿಗರಿಗೆ ಇದೇ ಕೊನೆಯ ಸೀಸನ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ
(6 / 6)
IPL 2023: 16ನೇ ಆವೃತ್ತಿಯ ನಂತರ ಈ ಐವರು ಕ್ರಿಕೆಟಿಗರಿಗೆ ಇದೇ ಕೊನೆಯ ಸೀಸನ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ(photos - players instagram)

    ಹಂಚಿಕೊಳ್ಳಲು ಲೇಖನಗಳು