logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ ಹರಾಜು ಮುಕ್ತಾಯ; ಅತ್ಯಂತ ದುಬಾರಿಗೆ ಮೊತ್ತಕ್ಕೆ ಹರಾಜಾದ ಟಾಪ್-10 ಆಟಗಾರರ ಪಟ್ಟಿ ಇಲ್ಲಿದೆ

ಐಪಿಎಲ್ ಹರಾಜು ಮುಕ್ತಾಯ; ಅತ್ಯಂತ ದುಬಾರಿಗೆ ಮೊತ್ತಕ್ಕೆ ಹರಾಜಾದ ಟಾಪ್-10 ಆಟಗಾರರ ಪಟ್ಟಿ ಇಲ್ಲಿದೆ

Dec 19, 2023 09:22 PM IST

IPL 2024 Auction Most Expensive Players list: ಐಪಿಎಲ್-2024ರ ಮಿನಿ ಹರಾಜು ಮುಕ್ತಾಯಗೊಂಡಿದೆ. ಹಾಗಾದರೆ ಈ ಐಪಿಎಲ್​ನಲ್ಲಿ ಅತ್ಯಂತ ದುಬಾರಿ ಬೆಲೆಗೆ ಹರಾಜಾದ ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.

  • IPL 2024 Auction Most Expensive Players list: ಐಪಿಎಲ್-2024ರ ಮಿನಿ ಹರಾಜು ಮುಕ್ತಾಯಗೊಂಡಿದೆ. ಹಾಗಾದರೆ ಈ ಐಪಿಎಲ್​ನಲ್ಲಿ ಅತ್ಯಂತ ದುಬಾರಿ ಬೆಲೆಗೆ ಹರಾಜಾದ ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.
ಐಪಿಎಲ್ ಹರಾಜಿನಲ್ಲಿ ಮೊದಲ ಬಾರಿಗೆ ಆಟಗಾರರು 20 ಕೋಟಿಗೂ ಹೆಚ್ಚು ಮೊತ್ತಕ್ಕೆ ಬಿಡ್ ಆಗಿದ್ದಾರೆ. ಮಿನಿ ಹರಾಜಾದರೂ ಇಬ್ಬರು 20 ಕೋಟಿಗೂ ಅಧಿಕ ಮೊತ್ತಕ್ಕೆ ಖರೀದಿಯಾಗಿದ್ದಾರೆ. ಇಬ್ಬರೂ ಕೂಡ ಆಸ್ಟ್ರೇಲಿಯಾದ ಆಟಗಾರರೇ ಎಂಬುದು ವಿಶೇಷ.
(1 / 13)

ಐಪಿಎಲ್ ಹರಾಜು ಇತಿಹಾಸದಲ್ಲಿ ಈ ಹಿಂದೆ ಇದ್ದ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿದ ಮಿಚೆಲ್ ಸ್ಟಾರ್ಕ್​ ಅತ್ಯಂತ ದುಬಾರಿ ಆಟಗಾರ ಎನಿಸಿದ್ದಾರೆ. ಹಾಗಾದರೆ ಈ ಬಾರಿಯ ಟಾಪ್-10 ಆಟಗಾರರು ಯಾರು? ಅವರು ಯಾವ ತಂಡಕ್ಕೆ ಎಷ್ಟಕ್ಕೆ ಸೇಲ್ ಆಗಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.
(2 / 13)

1. ಮಿಚೆಲ್ ಸ್ಟಾರ್ಕ್ (24.75 ಕೋಟಿ): ಮಿಚೆಲ್ ಸ್ಟಾರ್ಕ್ ಐಪಿಎಲ್‌ನಲ್ಲಿ ಇದುವರೆಗಿನ ಅತ್ಯಂತ ದುಬಾರಿ ಆಟಗಾರ. ಸ್ಟಾರ್ಕ್ ಮೂಲ ಬೆಲೆ 2 ಕೋಟಿ ಆಗಿತ್ತು. ಮುಂಬೈ ಮತ್ತು ಡೆಲ್ಲಿ ಆರಂಭದಲ್ಲಿ ಸ್ಟಾರ್ಕ್‌ಗಾಗಿ ಬಿಡ್ ಮಾಡಿದವು. ನಂತರ ಕೋಲ್ಕತ್ತಾ ಮತ್ತು ಗುಜರಾತ್ ರೇಸ್​ನಲ್ಲಿ ಸೇರಿಕೊಂಡವು. ಅಂತಿಮವಾಗಿ ಕೆಕೆಆರ್ 24.75 ಕೋಟಿಗೆ ಖರೀದಿಸಿತು.
(3 / 13)

2. ಪ್ಯಾಟ್ ಕಮಿನ್ಸ್ (20.5 ಕೋಟಿ): ಮೂಲ ಬೆಲೆ 2 ಕೋಟಿ ಹೊಂದಿದ್ದ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು 20 ಕೋಟಿ 50 ಲಕ್ಷಕ್ಕೆ ಸನ್​ರೈಸರ್ಸ್​ ಹೈದರಾಬಾದ್​ ಖರೀದಿಸಿತ್ತು. ಮುಂಬೈ, ಚೆನ್ನೈ ಕಮಿನ್ಸ್ ಖರೀದಿಗೆ ಆಸಕ್ತಿ ತೋರಿದವು. ಮತ್ತೊಂದೆಡೆ ಆರ್​ಸಿಬಿ ಕೊನೆಯವರೆಗೂ ಹೋರಾಟ ನಡೆಸಿತು. ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್ 20.5 ಕೋಟಿಗೆ ಖರೀದಿಸಿತು.
(4 / 13)

3. ಡ್ಯಾರಿಲ್ ಮಿಚೆಲ್ (14 ಕೋಟಿ): ನ್ಯೂಜಿಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ ಮೂಲ ಬೆಲೆ 1 ಕೋಟಿ ಆಗಿತ್ತು. ಅವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಕದನ ನಡೆದಿತ್ತು. ಕೊನೆಗೆ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯ ಪ್ರವೇಶಿಸಿ ಮಿಚೆಲ್ ಅವರನ್ನು 14 ಕೋಟಿ ರೂ.ಗೆ ಖರೀದಿಸಿತು.
(5 / 13)

4. ಹರ್ಷಲ್ ಪಟೇಲ್ (11.75 ಕೋಟಿ): ಅಧಿಕ ಮೊತ್ತಕ್ಕೆ ಸೇಲಾದ ಆಟಗಾರರ ಪಟ್ಟಿಯಲ್ಲಿ ಹರ್ಷಲ್ ಪಟೇಲ್ ಹೆಸರು 4ನೇ ಸ್ಥಾನದಲ್ಲಿದೆ. ಹರ್ಷಲ್ ಭಾರತದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಬಿಡ್ ನಡೆಸಿದವು. ಲಕ್ನೋ ಕೂಡ ಪ್ರಯತ್ನ ನಡೆಸಿತು. ಆದರೆ ಅಂತಿಮವಾಗಿ ಪಂಜಾಬ್ ಕಿಂಗ್ಸ್ 11.75 ಕೋಟಿ ರೂ.ಗೆ ಖರೀದಿಸಿತು.
(6 / 13)

5. ಅಲ್ಜಾರಿ ಜೋಸೆಫ್ (11.5 ಕೋಟಿ): ಅಲ್ಜಾರಿ ಜೋಸೆಫ್ ಮೂಲ ಬೆಲೆ 1 ಕೋಟಿ. ಆದರೆ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದ್ದು 11.5 ಕೋಟಿಗೆ. ಲಕ್ನೋ ಮತ್ತು ಆರ್‌ಸಿಬಿ ಫ್ರಾಂಚೈಸಿಗಳ ತೀವ್ರ ಹೋರಾಟ ನಡೆಯಿತು. ಕೊನೆಗೆ ಆರ್​ಸಿಬಿ ಗೆಲುವು ಸಾಧಿಸಿತು.
(7 / 13)

6. ಸ್ಪೆನ್ಸರ್ ಜಾನ್ಸರ್ (10 ಕೋಟಿ): ಆಸ್ಟ್ರೇಲಿಯಾದ ಸ್ಪೆನ್ಸರ್ ಜಾನ್ಸರ್ 10 ಕೋಟಿ ಪಡೆದು ಗುಜರಾತ್ ಟೈಟಾನ್ಸ್ ತಂಡದ ಪಾಲಾಗಿದ್ದಾರೆ. ಈ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಸೇಲಾದ ಆಸೀಸ್​ನ 3ನೇ ಆಟಗಾರ ಎನಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ಸಹ ಇವರ ಖರೀದಿಗೆ ಪೈಪೋಟಿ ನಡೆಸಿತು.
(8 / 13)

7. ಸಮೀರ್ ರಿಜ್ವಿ (8.4 ಕೋಟಿ): ಉತ್ತರ ಪ್ರದೇಶದ ಯುವ ಬಲಗೈ ಬ್ಯಾಟ್ಸ್‌ಮನ್ ಸಮೀರ್ ರಿಜ್ವಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 8.4 ಕೋಟಿಗೆ ಖರೀದಿಸಿದೆ. ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ ಈ ಬ್ಯಾಟರ್‌ ದುಬಾರಿ ಮೊತ್ತ ಪಡೆದು ಗಮನ ಸೆಳೆದಿದ್ದಾರೆ.
(9 / 13)

8. ರೈಲಿ ರೋಸೋ (8 ಕೋಟಿ): 2 ಕೋಟಿ ಮೂಲ ಬೆಲೆ ಹೊಂದಿದ್ದ ಸೌತ್ ಆಫ್ರಿಕಾದ ರೈಲಿ ರೋಸೋ 8 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಅವರ ಖರೀದಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪೈಪೋಟಿ ನಡೆಸಿತು. 
(10 / 13)

9. ಶಾರೂಖ್ ಖಾನ್ (7.40 ಕೋಟಿ): 40 ಲಕ್ಷ ಮೂಲ ಬೆಲೆಯ ಶಾರುಖ್ ಖಾನ್​ರನ್ನು ಗುಜರಾತ್ ಟೈಟಾನ್ಸ್ 7.40 ಕೋಟಿಗೆ ಖರೀದಿಸಿದೆ. ನಿರೀಕ್ಷೆಯಂತೆ ಶಾರೂಖ್ ದುಬಾರಿ ಮೊತ್ತಕ್ಕೆ ಖರೀದಿಯಾಗಿದ್ದಾರೆ. ಪಂಜಾಬ್ ಕಿಂಗ್ಸ್ ಕೂಡ ತಮಿಳುನಾಡು ಕ್ರಿಕೆಟಿಗನನ್ನು ಮತ್ತೆ ಖರೀದಿಸಲು ಯತ್ನಿಸಿತು. ಕೊನೆಯಲ್ಲಿ ಟೈಟಾನ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿತು.
(11 / 13)

10. ರೊವ್​ಮನ್ ಪೊವೆಲ್ (7.40 ಕೋಟಿ): 1 ಕೋಟಿ ಮೂಲ ಬೆಲೆಯೊಂದಿಗೆ ಮೊದಲ ಹೆಸರಾಗಿ ಹರಾಜಿಗೆ ಬಂದ ಕಣಕ್ಕಿಳಿದ ವೆಸ್ಟ್ ಇಂಡೀಸ್ ಬ್ಯಾಟರ್​ ರೊವ್​ಮನ್ ಪೊವೆಲ್, ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದಾರೆ. 7.4 ಕೋಟಿ ಜಾಕ್​ಪಾಟ್ ಪಡೆದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಪೈಪೋಟಿ ನಡೆಸಿತು
(12 / 13)

11. ಕುಮಾರ್ ಕುಶಾಗ್ರಾ (7.20 ಕೋಟಿ): ಜಾರ್ಖಂಡ್‌ನ ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ಕುಮಾರ್ ಕುಶಾಗ್ರಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಬರೋಬ್ಬರಿ 7 ಕೋಟಿ 20 ಲಕ್ಷಕ್ಕೆ ಖರೀದಿಸಿತು. ಅವರ ಮೂಲ ಬೆಲೆ ಕೇವಲ 20 ಲಕ್ಷ ರೂಪಾಯಿ.
(13 / 13)

    ಹಂಚಿಕೊಳ್ಳಲು ಲೇಖನಗಳು