logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅವರಿಗೆ 42 ವರ್ಷವೇ? ವಿಂಟೇಜ್ ಧೋನಿ ಆಟಕ್ಕೆ ಶ್ಲಾಘನೆ; ಇನ್ನೂ 2 ವರ್ಷ ಐಪಿಎಲ್‌ ಆಡ್ತಾರೆ ಎಂದ ಕ್ರಿಸ್ ಶ್ರೀಕಾಂತ್

ಅವರಿಗೆ 42 ವರ್ಷವೇ? ವಿಂಟೇಜ್ ಧೋನಿ ಆಟಕ್ಕೆ ಶ್ಲಾಘನೆ; ಇನ್ನೂ 2 ವರ್ಷ ಐಪಿಎಲ್‌ ಆಡ್ತಾರೆ ಎಂದ ಕ್ರಿಸ್ ಶ್ರೀಕಾಂತ್

Apr 01, 2024 03:32 PM IST

ವಿಶಾಖಪಟ್ಟಣದಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಕ್ರಿಕೆಟಿಗ ಎಂಎಸ್‌ ಧೋನಿ ಆಟ ಕಂಡು ಅಚ್ಚರಿ ಪಡದವರಿಲ್ಲ. ಸಿಎಸ್‌ಕೆ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋತರೂ. ಮಾಹಿ ಆಟ ಮಾತ್ರ ಮನಮೋಹಕವಾಗಿತ್ತು. 42ರ ಹರೆಯದಲ್ಲಿ ಧೋನಿ ಫಿಟ್‌ನೆಸ್‌ ಕಂಡು ಹಿರಿಯ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

  • ವಿಶಾಖಪಟ್ಟಣದಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಕ್ರಿಕೆಟಿಗ ಎಂಎಸ್‌ ಧೋನಿ ಆಟ ಕಂಡು ಅಚ್ಚರಿ ಪಡದವರಿಲ್ಲ. ಸಿಎಸ್‌ಕೆ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋತರೂ. ಮಾಹಿ ಆಟ ಮಾತ್ರ ಮನಮೋಹಕವಾಗಿತ್ತು. 42ರ ಹರೆಯದಲ್ಲಿ ಧೋನಿ ಫಿಟ್‌ನೆಸ್‌ ಕಂಡು ಹಿರಿಯ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ರಿಷಬ್‌ ಪಂತ್‌ ನೇತೃತ್ವದ ಡೆಲ್ಲಿ ನೀಡಿದ 192 ರನ್‌ಗಳ ಗುರಿ ಬೆನ್ನಟ್ಟಿದ ಸಿಎಸ್‌ಕೆ, ಪಂದ್ಯದಲ್ಲಿ ಸೋಲೊಪ್ಪಿತು. ತಂಡವನ್ನು ಗೆಲ್ಲಿಸುವಲ್ಲಿ ಧೋನಿ ವಿಫಲರಾಗಿರಬಹುದು. ಆದರೆ, ಅವರ ಡೆತ್‌ ಓವರ್‌ಗಳಲ್ಲಿ ಅವರ ಸ್ಫೋಟಕ ಆಟ ಅಭಿಮಾನಿಗಳು ಹಿಚ್ಚೆದ್ದು ಕುಣಿಯುವಂತೆ ಮಾಡಿತು.
(1 / 10)
ರಿಷಬ್‌ ಪಂತ್‌ ನೇತೃತ್ವದ ಡೆಲ್ಲಿ ನೀಡಿದ 192 ರನ್‌ಗಳ ಗುರಿ ಬೆನ್ನಟ್ಟಿದ ಸಿಎಸ್‌ಕೆ, ಪಂದ್ಯದಲ್ಲಿ ಸೋಲೊಪ್ಪಿತು. ತಂಡವನ್ನು ಗೆಲ್ಲಿಸುವಲ್ಲಿ ಧೋನಿ ವಿಫಲರಾಗಿರಬಹುದು. ಆದರೆ, ಅವರ ಡೆತ್‌ ಓವರ್‌ಗಳಲ್ಲಿ ಅವರ ಸ್ಫೋಟಕ ಆಟ ಅಭಿಮಾನಿಗಳು ಹಿಚ್ಚೆದ್ದು ಕುಣಿಯುವಂತೆ ಮಾಡಿತು.(CSK)
ಕೇವಲ 16 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದ ಧೋನಿ, ಯುವ ಆಟಗಾರರು ನಾಚುವಂತೆ ಆಡಿದರು. 42ರ ಹರೆಯದಲ್ಲೂ ಫಿಟ್‌ ಆಗಿರುವ ಮಾಹಿಯ ಆಟಕ್ಕೆ ಮಾಜಿ ಕ್ರಿಕೆಟಿಗರು ಮನಸೋತರು.
(2 / 10)
ಕೇವಲ 16 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದ ಧೋನಿ, ಯುವ ಆಟಗಾರರು ನಾಚುವಂತೆ ಆಡಿದರು. 42ರ ಹರೆಯದಲ್ಲೂ ಫಿಟ್‌ ಆಗಿರುವ ಮಾಹಿಯ ಆಟಕ್ಕೆ ಮಾಜಿ ಕ್ರಿಕೆಟಿಗರು ಮನಸೋತರು.(IPL)
ಸಿಎಸ್‌ಕೆ ಮಾಜಿ ನಾಯಕ ನಾಲ್ಕು ಬೌಂಡರಿ ಮತ್ತು ಮೂರು ಸ್ಫೋಟಕ ಸಿಕ್ಸರ್‌ ಸಿಡಿಸಿದರು. ಅದರಲ್ಲೂ ಕೊನೆಯ ಓವರ್‌ನಲ್ಲಿ 20 ರನ್‌ ಗಳಿಸಿದರು. ಆದರೆ, ಸಿಎಸ್‌ಕೆ ತಂಡವು 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಶಕ್ತವಾಯ್ತು. 
(3 / 10)
ಸಿಎಸ್‌ಕೆ ಮಾಜಿ ನಾಯಕ ನಾಲ್ಕು ಬೌಂಡರಿ ಮತ್ತು ಮೂರು ಸ್ಫೋಟಕ ಸಿಕ್ಸರ್‌ ಸಿಡಿಸಿದರು. ಅದರಲ್ಲೂ ಕೊನೆಯ ಓವರ್‌ನಲ್ಲಿ 20 ರನ್‌ ಗಳಿಸಿದರು. ಆದರೆ, ಸಿಎಸ್‌ಕೆ ತಂಡವು 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಶಕ್ತವಾಯ್ತು. (PTI)
ಪ್ರಸಕ್ತ ಋತುವಿನಲ್ಲಿ ಧೋನಿ ಬ್ಯಾಟಿಂಗ್‌ ಮಾಡಿದ್ದ ಇದೇ ಮೊದಲು. ಈವರೆಗಿನ ಎರಡು ಪಂದ್ಯಗಳಲ್ಲಿಯೂ ಅವರು ಬ್ಯಾಟ್‌ ಹಿಡಿದು ಮೈದಾನಕ್ಕೆ ಇಳಿದಿರಲಿಲ್ಲ. ತಮ್ಮ ಪ್ರಾಬಲ್ಯದ ಶಾಟ್‌ಗಳನ್ನು ಆಡಿ ವೈಜಾಗ್‌ ಅಭಿಮಾನಿಗಳನ್ನು ರಂಜಿಸಿದರು.
(4 / 10)
ಪ್ರಸಕ್ತ ಋತುವಿನಲ್ಲಿ ಧೋನಿ ಬ್ಯಾಟಿಂಗ್‌ ಮಾಡಿದ್ದ ಇದೇ ಮೊದಲು. ಈವರೆಗಿನ ಎರಡು ಪಂದ್ಯಗಳಲ್ಲಿಯೂ ಅವರು ಬ್ಯಾಟ್‌ ಹಿಡಿದು ಮೈದಾನಕ್ಕೆ ಇಳಿದಿರಲಿಲ್ಲ. ತಮ್ಮ ಪ್ರಾಬಲ್ಯದ ಶಾಟ್‌ಗಳನ್ನು ಆಡಿ ವೈಜಾಗ್‌ ಅಭಿಮಾನಿಗಳನ್ನು ರಂಜಿಸಿದರು.(PTI)
ಪಂದ್ಯದಲ್ಲಿ ಮಾಹಿಯ ಸೊಗಸಾದ ಹೊಡೆತಗಳನ್ನು ನೋಡಿ, ಭಾರತದ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಮನಸೋತಿದ್ದಾರೆ.
(5 / 10)
ಪಂದ್ಯದಲ್ಲಿ ಮಾಹಿಯ ಸೊಗಸಾದ ಹೊಡೆತಗಳನ್ನು ನೋಡಿ, ಭಾರತದ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಮನಸೋತಿದ್ದಾರೆ.(AP)
“ಏನು ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ. ಒಂದು ಕಡೆ, ಎಂಎಸ್ ಧೋನಿ ಅಭಿಮಾನಿಯಾಗಿ ನಾನು ತುಂಬಾ ಸಂತೋಷವಾಗಿದ್ದೇನೆ. ಎಂಥಾ ಅದ್ಭುತ ಇನ್ನಿಂಗ್ಸ್! ಅದು ಕೂಡಾ 42ನೇ ವಯಸ್ಸಿನಲ್ಲಿ. ಯಾವುದೇ ಭೀತಿಯಿಲ್ಲದೆ ಅವರು ಬಾರಿಸುತ್ತಿದ್ದಾರೆ. ಇದು ವಿಂಟೇಜ್ ಧೋನಿ!” ಎಂದು ಶ್ರೀಕಾಂತ್‌ ಉದ್ಘಾರವೆಳೆದಿದ್ದಾರೆ.
(6 / 10)
“ಏನು ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ. ಒಂದು ಕಡೆ, ಎಂಎಸ್ ಧೋನಿ ಅಭಿಮಾನಿಯಾಗಿ ನಾನು ತುಂಬಾ ಸಂತೋಷವಾಗಿದ್ದೇನೆ. ಎಂಥಾ ಅದ್ಭುತ ಇನ್ನಿಂಗ್ಸ್! ಅದು ಕೂಡಾ 42ನೇ ವಯಸ್ಸಿನಲ್ಲಿ. ಯಾವುದೇ ಭೀತಿಯಿಲ್ಲದೆ ಅವರು ಬಾರಿಸುತ್ತಿದ್ದಾರೆ. ಇದು ವಿಂಟೇಜ್ ಧೋನಿ!” ಎಂದು ಶ್ರೀಕಾಂತ್‌ ಉದ್ಘಾರವೆಳೆದಿದ್ದಾರೆ.(AP)
2005ರಲ್ಲಿ, ಅವರು ಇದೇ ವೈಜಾಗ್‌ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಆಕ್ರಮಣಕಾರಿ ಶತಕವನ್ನು ಗಳಿಸಿದ್ದರು," ಎಂದು ಶ್ರೀಕಾಂತ್‌ ನೆನಪಿಸಿದರು.
(7 / 10)
2005ರಲ್ಲಿ, ಅವರು ಇದೇ ವೈಜಾಗ್‌ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಆಕ್ರಮಣಕಾರಿ ಶತಕವನ್ನು ಗಳಿಸಿದ್ದರು," ಎಂದು ಶ್ರೀಕಾಂತ್‌ ನೆನಪಿಸಿದರು.(PTI)
"ಅವರು ಪಾಯಿಂಟ್ ಮೇಲೆ ಸಿಕ್ಸರ್‌ಗಳನ್ನು ಹೊಡೆಯುತ್ತಿದ್ದಾರೆ. ಮಿಡ್‌-ವಿಕೆಟ್ ಸ್ಟ್ಯಾಂಡ್‌ನತ್ತ ಒಂದು ಕೈಯಲ್ಲಿ ಸಿಕ್ಸರ್ ಹೊಡೆಯುತ್ತಿದ್ದಾರೆ. ಮೈದಾನದ ಎಲ್ಲೆಡೆಯೂ ಬಾರಿಸುತ್ತಿದ್ದಾರೆ. ಅವರು ಡೆಲ್ಲಿ ಬೌಲಿಂಗ್‌ ದಾಳಿಯನ್ನು ಅಕ್ಷರಶಃ ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ಎಂತಹ ಹೊಡೆತವದು! ಅದ್ಭುತ ಎಂದು ಶ್ರೀಕಾಂತ್‌ ಬಣ್ಣಿಸಿದ್ದಾರೆ.
(8 / 10)
"ಅವರು ಪಾಯಿಂಟ್ ಮೇಲೆ ಸಿಕ್ಸರ್‌ಗಳನ್ನು ಹೊಡೆಯುತ್ತಿದ್ದಾರೆ. ಮಿಡ್‌-ವಿಕೆಟ್ ಸ್ಟ್ಯಾಂಡ್‌ನತ್ತ ಒಂದು ಕೈಯಲ್ಲಿ ಸಿಕ್ಸರ್ ಹೊಡೆಯುತ್ತಿದ್ದಾರೆ. ಮೈದಾನದ ಎಲ್ಲೆಡೆಯೂ ಬಾರಿಸುತ್ತಿದ್ದಾರೆ. ಅವರು ಡೆಲ್ಲಿ ಬೌಲಿಂಗ್‌ ದಾಳಿಯನ್ನು ಅಕ್ಷರಶಃ ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ಎಂತಹ ಹೊಡೆತವದು! ಅದ್ಭುತ ಎಂದು ಶ್ರೀಕಾಂತ್‌ ಬಣ್ಣಿಸಿದ್ದಾರೆ.(ANI)
ಧೋನಿ ಪ್ರಸ್ತುತ ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. "ಕೀಪಿಂಗ್ ವಿಷಯದಲ್ಲಿ, ಅವರು ಇನ್ನೂ ಅತ್ಯುತ್ತಮ ಭಾರತೀಯ ಕೀಪರ್. ಅದರಲ್ಲೂ ಸ್ಪಿನ್ನರ್‌ಗಳ ಓವರ್‌ ವೇಳೆ ಅಚಲವಾಗಿ ನಿಂತು ಕ್ಯಾಚ್‌ಗಳನ್ನು ಪಡೆಯುತ್ತಿದ್ದಾರೆ. ಅವರು ಇನ್ನೂ ಭಾರತದ ಅತ್ಯುತ್ತಮ ವಕೆಟ್‌ ಕೀಪರ್. ನಂ.1 ಧೋನಿ ಆದರೆ, ನಂ.2 ವೃದ್ಧಿಮಾನ್ ಸಹಾ. ಇವರಿಬ್ಬರೂ ಸದ್ಯ ಭಾರತದ ಅತ್ಯುತ್ತಮರು" ಎಂದು ಅವರು ಹೇಳಿದ್ದಾರೆ.
(9 / 10)
ಧೋನಿ ಪ್ರಸ್ತುತ ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. "ಕೀಪಿಂಗ್ ವಿಷಯದಲ್ಲಿ, ಅವರು ಇನ್ನೂ ಅತ್ಯುತ್ತಮ ಭಾರತೀಯ ಕೀಪರ್. ಅದರಲ್ಲೂ ಸ್ಪಿನ್ನರ್‌ಗಳ ಓವರ್‌ ವೇಳೆ ಅಚಲವಾಗಿ ನಿಂತು ಕ್ಯಾಚ್‌ಗಳನ್ನು ಪಡೆಯುತ್ತಿದ್ದಾರೆ. ಅವರು ಇನ್ನೂ ಭಾರತದ ಅತ್ಯುತ್ತಮ ವಕೆಟ್‌ ಕೀಪರ್. ನಂ.1 ಧೋನಿ ಆದರೆ, ನಂ.2 ವೃದ್ಧಿಮಾನ್ ಸಹಾ. ಇವರಿಬ್ಬರೂ ಸದ್ಯ ಭಾರತದ ಅತ್ಯುತ್ತಮರು" ಎಂದು ಅವರು ಹೇಳಿದ್ದಾರೆ.(ANI)
ಅವರು ಉತ್ತಮವಾಗಿ ಆಡುತ್ತಿದ್ದಾರೆ. ಅಷ್ಟೇ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ವಿಕೆಟ್‌ಗಳ ನಡುವೆ ಚೆನ್ನಾಗಿ ಓಡುತ್ತಿದ್ದಾರೆ. ಅವರಿಗೆ ಈಗ 42 ವರ್ಷವೇ? ಅವರು ಇನ್ನೂ 2 ವರ್ಷಗಳ ಕಾಲ ಐಪಿಎಲ್ ಆಡುತ್ತಾರೆ ಎಂದು ನನಗನಿಸುತ್ತಿದೆ," ಎಂದು ಶ್ರೀಕಾಂತ್‌ ಅಭಿಪ್ರಾಯಪಟ್ಟಿದ್ದಾರೆ.
(10 / 10)
ಅವರು ಉತ್ತಮವಾಗಿ ಆಡುತ್ತಿದ್ದಾರೆ. ಅಷ್ಟೇ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ವಿಕೆಟ್‌ಗಳ ನಡುವೆ ಚೆನ್ನಾಗಿ ಓಡುತ್ತಿದ್ದಾರೆ. ಅವರಿಗೆ ಈಗ 42 ವರ್ಷವೇ? ಅವರು ಇನ್ನೂ 2 ವರ್ಷಗಳ ಕಾಲ ಐಪಿಎಲ್ ಆಡುತ್ತಾರೆ ಎಂದು ನನಗನಿಸುತ್ತಿದೆ," ಎಂದು ಶ್ರೀಕಾಂತ್‌ ಅಭಿಪ್ರಾಯಪಟ್ಟಿದ್ದಾರೆ.(ANI)

    ಹಂಚಿಕೊಳ್ಳಲು ಲೇಖನಗಳು