logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  10ನೇ ತರಗತಿಗೆ ಸೇರಿದ 14 ವರ್ಷದ ವೈಭವ್ ಸೂರ್ಯವಂಶಿ; ಐಪಿಎಲ್ ಸೆನ್ಸೇಷನ್ ಸ್ಕೂಲ್ ಫೀಜ್ ಎಷ್ಟು?

10ನೇ ತರಗತಿಗೆ ಸೇರಿದ 14 ವರ್ಷದ ವೈಭವ್ ಸೂರ್ಯವಂಶಿ; ಐಪಿಎಲ್ ಸೆನ್ಸೇಷನ್ ಸ್ಕೂಲ್ ಫೀಜ್ ಎಷ್ಟು?

Published May 16, 2025 05:21 PM IST

Vaibhav suryavanshi: ಅಚ್ಚರಿ ಏನೆಂದರೆ ವೈಭವ್ ಸೂರ್ಯವಂಶಿ ಈಗಿನ್ನೂ 10ನೇ ತರಗತಿ ಸೇರಿದ್ದಾರೆ. ವೈಭವ್ ಎಲ್ಲಿ ಓದುತ್ತಿದ್ದಾನೆ, ಆತನ ಶಾಲಾ ಶುಲ್ಕ ಎಷ್ಟು? ಮುಂದೆ ತಿಳಿಯೋಣ.

  • Vaibhav suryavanshi: ಅಚ್ಚರಿ ಏನೆಂದರೆ ವೈಭವ್ ಸೂರ್ಯವಂಶಿ ಈಗಿನ್ನೂ 10ನೇ ತರಗತಿ ಸೇರಿದ್ದಾರೆ. ವೈಭವ್ ಎಲ್ಲಿ ಓದುತ್ತಿದ್ದಾನೆ, ಆತನ ಶಾಲಾ ಶುಲ್ಕ ಎಷ್ಟು? ಮುಂದೆ ತಿಳಿಯೋಣ.
ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ 14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್​ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. 35 ಎಸೆತಗಳಲ್ಲೇ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಆ ಮೂಲಕ ತನ್ನ ಜಗತ್ತಿನ ಗಮನವನ್ನು ತನ್ನತ್ತ ಸೆಳೆದುಕೊಂಡರು.
(1 / 8)
ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ 14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್​ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. 35 ಎಸೆತಗಳಲ್ಲೇ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದ...
ಮತ್ತಷ್ಟು ಓದು
(AFP)
ವೈಭವ್ ಸೂರ್ಯವಂಶಿ ಕ್ರಿಕೆಟ್​ ವಿಚಾರಕ್ಕೆ ಮಾತ್ರವಲ್ಲದೆ ತನ್ನ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. ಪ್ರಸ್ತುತ ಅವರು ಸಿಬಿಎಸ್​ಸಿ 10ನೇ ತರಗತಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ ಎಂದು ವದಂತಿಗಳು ಹರಡುತ್ತಿವೆ.
(2 / 8)
ವೈಭವ್ ಸೂರ್ಯವಂಶಿ ಕ್ರಿಕೆಟ್​ ವಿಚಾರಕ್ಕೆ ಮಾತ್ರವಲ್ಲದೆ ತನ್ನ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. ಪ್ರಸ್ತುತ ಅವರು ಸಿಬಿಎಸ್​ಸಿ 10ನೇ ತರಗತಿ ಪರೀಕ್ಷೆ...
ಮತ್ತಷ್ಟು ಓದು
(AFP)
ಆದರೆ ಅಚ್ಚರಿ ಏನೆಂದರೆ ಈಗಿನ್ನೂ ಅವರು 10ನೇ ತರಗತಿ ಓದುತ್ತಿದ್ದಾರೆ. ಆದರೆ, ವೈಭವ್ ಎಲ್ಲಿ ಓದುತ್ತಿದ್ದಾನೆ, ಆತನ ಶಾಲಾ ಶುಲ್ಕ ಎಷ್ಟು? ಮುಂದೆ ತಿಳಿಯೋಣ.
(3 / 8)
ಆದರೆ ಅಚ್ಚರಿ ಏನೆಂದರೆ ಈಗಿನ್ನೂ ಅವರು 10ನೇ ತರಗತಿ ಓದುತ್ತಿದ್ದಾರೆ. ಆದರೆ, ವೈಭವ್ ಎಲ್ಲಿ ಓದುತ್ತಿದ್ದಾನೆ, ಆತನ ಶಾಲಾ ಶುಲ್ಕ ಎಷ್ಟು? ಮುಂದೆ ತಿಳಿಯೋಣ.(REUTERS)
ವೈಭವ್ ಸೂರ್ಯವಂಶಿ ಬಿಹಾರದ ಸಮಸ್ತಿಪುರ ಜಿಲ್ಲೆಯ ತಾಜ್‌ಪುರ ಗ್ರಾಮದವರು. ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವೈಭವ್, ಸಮಷ್ಟಿಪುರ ಜಿಲ್ಲೆಯ ತಾಜ್‌ಪುರದ ಮಾಡೆಸ್ಟಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.
(4 / 8)
ವೈಭವ್ ಸೂರ್ಯವಂಶಿ ಬಿಹಾರದ ಸಮಸ್ತಿಪುರ ಜಿಲ್ಲೆಯ ತಾಜ್‌ಪುರ ಗ್ರಾಮದವರು. ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವೈಭವ್, ಸ...
ಮತ್ತಷ್ಟು ಓದು
(REUTERS)
ಈ ವರ್ಷ 10 ನೇ ತರಗತಿಗೆ ಸೇರಿದ್ದು, ಇದರರ್ಥ ಅವರು 2026ರಲ್ಲಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಮಾಡೆಸ್ಟಿ ಶಾಲೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಆದರೆ ಟ್ಯೂಷನ್ ಫೀಸ್ ಆಗಿ ಪ್ರತಿ ತಿಂಗಳು 2500 ಪಾವತಿಸಬೇಕು.
(5 / 8)
ಈ ವರ್ಷ 10 ನೇ ತರಗತಿಗೆ ಸೇರಿದ್ದು, ಇದರರ್ಥ ಅವರು 2026ರಲ್ಲಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಮಾಡೆಸ್ಟಿ ಶಾಲ...
ಮತ್ತಷ್ಟು ಓದು
(Surjeet Yadav)
ಅಲ್ಲದೆ, ಪರೀಕ್ಷಾ ಶುಲ್ಕದ ಅಡಿಯಲ್ಲಿ 1000 ರೂಪಾಯಿ ಮತ್ತು ಆ್ಯಕ್ಟಿವಿಟೀಸ್ ಶುಲ್ಕಗಳ ಭಾಗವಾಗಿ 3000 ಪಾವತಿಸಬೇಕು. ವೈಭವ್ ಬೆಳಿಗ್ಗೆ ಬೇಗನೆ ಎದ್ದು ಓದುತ್ತಾರೆ. ಆತನ ದಿನಚರಿ ಟ್ಯೂಷನ್ ಕ್ಲಾಸ್​ನೊಂದಿಗೆ ಪ್ರಾರಂಭವಾಗುತ್ತದೆ ಎಂದು ಅವರ ತಂದೆ ಸಂಜೀವ್ ಸೂರ್ಯವಂಶಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
(6 / 8)
ಅಲ್ಲದೆ, ಪರೀಕ್ಷಾ ಶುಲ್ಕದ ಅಡಿಯಲ್ಲಿ 1000 ರೂಪಾಯಿ ಮತ್ತು ಆ್ಯಕ್ಟಿವಿಟೀಸ್ ಶುಲ್ಕಗಳ ಭಾಗವಾಗಿ 3000 ಪಾವತಿಸಬೇಕು. ವೈಭವ್ ಬೆಳಿಗ್ಗೆ ಬೇಗನೆ ಎದ್ದು ಓದುತ್ತಾರೆ. ...
ಮತ್ತಷ್ಟು ಓದು
(AFP)
ಐಪಿಎಲ್ 2025 ಮೆಗಾ ಹರಾಜಿನಲ್ಲಿ ವೈಭವ್ ಸೂರ್ಯವಂಶಿರನ್ನು 1.1 ಕೋಟಿ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ಖರೀದಿಸಿತು. ಐಪಿಎಲ್​ನಲ್ಲಿ ಪದಾರ್ಪಣೆ ಮಾಡಿದ ವೈಭವ್, ತಮ್ಮ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ದಾಖಲೆ ನಿರ್ಮಿಸಿದ್ದರು.
(7 / 8)
ಐಪಿಎಲ್ 2025 ಮೆಗಾ ಹರಾಜಿನಲ್ಲಿ ವೈಭವ್ ಸೂರ್ಯವಂಶಿರನ್ನು 1.1 ಕೋಟಿ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ಖರೀದಿಸಿತು. ಐಪಿಎಲ್​ನಲ್ಲಿ ಪದಾರ್ಪಣೆ ಮಾಡಿದ ವೈಭವ್, ತಮ್ಮ...
ಮತ್ತಷ್ಟು ಓದು
(PTI)
ನಂತರ 2025ರ ಏಪ್ರಿಲ್ 28 ರಂದು, ಗುಜರಾತ್ ಟೈಟಾನ್ಸ್ ವಿರುದ್ಧ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವೈಭವ್ ಇದುವರೆಗೆ ಐಪಿಎಲ್‌ನಲ್ಲಿ 5 ಪಂದ್ಯಗಳನ್ನು ಆಡಿದ್ದು, 31.00 ಸರಾಸರಿಯಲ್ಲಿ 155 ರನ್ ಗಳಿಸಿದ್ದಾರೆ. ವಿಶೇಷವೆಂದರೆ ಅವರ ಸ್ಟ್ರೈಕ್ ರೇಟ್ 209.45.
(8 / 8)
ನಂತರ 2025ರ ಏಪ್ರಿಲ್ 28 ರಂದು, ಗುಜರಾತ್ ಟೈಟಾನ್ಸ್ ವಿರುದ್ಧ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ವೇಗದ ಭಾರತೀಯ ಎಂಬ ಹೆಗ್ಗ...
ಮತ್ತಷ್ಟು ಓದು
(PTI)

    ಹಂಚಿಕೊಳ್ಳಲು ಲೇಖನಗಳು