logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Isl Points Table: ಹೈದರಾಬಾದ್ ಮಣಿಸಿ ಅಗ್ರ 5ರಲ್ಲಿ ಕಾಣಿಸಿಕೊಂಡ ಈಸ್ಟ್ ಬೆಂಗಾಲ್; ಐಎಸ್‌ಎಲ್ ಅಂಕಪಟ್ಟಿಯಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ?

ISL Points Table: ಹೈದರಾಬಾದ್ ಮಣಿಸಿ ಅಗ್ರ 5ರಲ್ಲಿ ಕಾಣಿಸಿಕೊಂಡ ಈಸ್ಟ್ ಬೆಂಗಾಲ್; ಐಎಸ್‌ಎಲ್ ಅಂಕಪಟ್ಟಿಯಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ?

Oct 01, 2023 12:05 PM IST

ಕ್ಟೇಟನ್ ಸಿಲ್ವರ್ ಅವರ ಡಬಲ್ ಗೋಲು ನೆರವಿನಿಂದ ಹೈದರಾಬಾದ್‌ ಮಣಿಸಿರುವ ಈಸ್ಟ್ ಬೆಂಗಾಲ್ ಐಎಸ್‌ಎಲ್‌ ಪಾಯಿಂಟ್ಸ್ ಟೇಬಲ್‌ನಲ್ಲಿ 4ನೇ ಸ್ಥಾನಕ್ಕೇರಿದೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಬೆಂಗಳೂರು ಎಫ್‌ಸಿ ಎಷ್ಟನೇ ಸ್ಥಾನದಲ್ಲಿದೆ. 

ಐಎಸ್‌ಎಲ್‌ನಲ್ಲಿ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಹಾಲಿ ಚಾಂಪಿಯನ್ ಮೋಹನ್ ಬಾಗನ್ 2023ನೇ ಆವೃತ್ತಿಯ ಐಸಿಎಲ್‌ ಪಾಯಿಂಟ್ಸ್ ಪಟ್ಟಿಯಲ್ಲಿ 6 ಅಂಕಗಳೊಂದಿಗೆ ನಂಬರ್ 1 ಸ್ಥಾನದಲ್ಲಿದೆ. ಒಡಿಶಾ, ಮುಂಬೈ ಸಿಟಿ, ಈಸ್ಟ್ ಬೆಂಗಾಲ್ ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ. 
(1 / 7)

ಒಡಿಶಾ ಎಫ್‌ಸಿ ಮೊದಲ ಪಂದ್ಯದಲ್ಲಿ ಚೆನ್ನೈಇನ್ ಎಫ್‌ಸಿ ವಿರುದ್ಧ ಗೆಲುವಿನೊಂದಿಗೆ ಲೀಗ್‌ನಲ್ಲಿ ಶುಭಾರಂಭ ಮಾಡಿದೆ. ಆದರೆ ಎರಡನೇ ಪಂದ್ಯದಲ್ಲಿ ಮುಂಬೈ ಸಿಟಿ ವಿರುದ್ಧ ಡ್ರಾ ಸಾಧಿಸಿದೆ. ಒಡಿಶಾ 2 ಪಂದ್ಯಗಳಿಂದ 4 ಅಂಕಗಳನ್ನು ಪಡೆದು ಲೀಗ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
(2 / 7)

ಈಸ್ಟ್ ಬೆಂಗಾಲ್ ತನ್ನ ಮೊದಲ ಪಂದ್ಯದಲ್ಲಿ ಜಮ್‌ಶೆಡ್‌ಪುರ ಎಫ್‌ಸಿ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿತ್ತು. ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಹೈದರಾಬಾದ್‌ ಎಫ್‌ಸಿಯನ್ನು 2-1 ರಿಂದ ಸೋಲಿಸಿ 2 ಪಂದ್ಯಗಳಿಂದ 4 ಅಂಕಗಳೊಂದಿಗೆ ಲೀಗ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.
(3 / 7)

ಮುಂಬೈ ಸಿಟಿ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಎರಡನೇ ಪಂದ್ಯದಲ್ಲಿ ಚೆನ್ನೈ ಇನ್ ತಂಡವನ್ನು 3-0 ಅಂತರ ಗೆಲುವಿನೊಂದಿಗೆ ಕಂಬ್ಯಾಕ್ ಮಾಡಿದೆ. ಲೀಗ್ ಪಟ್ಟಿಯಲ್ಲಿ ನಾರ್ತ್ ಈಸ್ಟ್ ಯುನೈಟೆಡ್ 5ನೇ ಸ್ಥಾನದಲ್ಲಿದ್ದಾರೆ.
(4 / 7)

ಈಸ್ಟ್ ಬೆಂಗಾಲ್ ವಿರುದ್ಧ ತಾನಾಡಿರುವ ಒಂದೇ ಒಂದು ಪಂದ್ಯದಲ್ಲಿ ಜೆಮ್‌ಶೆಡ್‌ಪುರ ಎಫ್‌ಸಿ ಡ್ರಾ ಸಾಧಿಸಿದೆ. 1 ಅಂಕಗೊಂದಿಗೆ ಲೀಗ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. 
(5 / 7)

ಈ ವರ್ಷದ ಐಎಸ್‌ಎಲ್‌ನಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಆಡದ ಏಕೈಕ ತಂಡವೆಂದರೆ ಗೋವಾ ಎಫ್‌ಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.  ಗೋವಾ ತಂಡ ಅಕ್ಟೋಬರ್ 2 ರಂದು ಪಂಜಾಬ್ ಎಫ್‌ಸಿ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
(6 / 7)

ಹೈದರಾಬಾದ್‌ ಎಎಫ್‌ಸಿ ಶನಿವಾರ ನಡೆದ ಈಸ್ಟ್ ಬೆಂಗಾಲ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದೆ. ಆ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಕಳೆದ ವರ್ಷದ ರನ್ನರ್ ಅಪ್ ತಂಡ ಬೆಂಗಳೂರು ಎಫ್‌ಸಿ ಈವರೆಗೆ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಪಂಜಾಬ್ 11 ಹಾಗೂ ಚೆನ್ನೈಇನ್ 12ನೇ ಸ್ಥಾನದಲ್ಲಿವೆ.
(7 / 7)

    ಹಂಚಿಕೊಳ್ಳಲು ಲೇಖನಗಳು