logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Budget 2023: ಸಿದ್ದರಾಮಯ್ಯ ಬಜೆಟ್‌ ಮೇಲೆ ರಾಜ್ಯದ ಜನತೆಯ ನಿರೀಕ್ಷೆಗಳೇನು? ಹೀಗಿದೆ ಪ್ರಾಂತ್ಯವಾರು ಮಾಹಿತಿ

Karnataka Budget 2023: ಸಿದ್ದರಾಮಯ್ಯ ಬಜೆಟ್‌ ಮೇಲೆ ರಾಜ್ಯದ ಜನತೆಯ ನಿರೀಕ್ಷೆಗಳೇನು? ಹೀಗಿದೆ ಪ್ರಾಂತ್ಯವಾರು ಮಾಹಿತಿ

Jul 06, 2023 02:17 PM IST

ಕರ್ನಾಟಕದ 2023-24ನೇ ಸಾಲಿನ ಬಜೆಟ್‌ ಮಂಡನೆಗೆ ಇನ್ನೊಂದು ದಿನ ಬಾಕಿ ಇದೆ. ಈ ನಡುವೆ ರಾಜ್ಯದ ವಿವಿಧ ಭಾಗಗಳ ಜನ ಸಿಎಂ ಸಿದ್ದರಾಮಯ್ಯನವರ ಬಜೆಟ್‌ ಮೇಲೆ ಅಪಾರ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಆ ನಿರೀಕ್ಷೆ ಮತ್ತು ಬೇಡಿಕೆಗಳ ಪಟ್ಟಿ ಹೀಗಿದೆ. 

  • ಕರ್ನಾಟಕದ 2023-24ನೇ ಸಾಲಿನ ಬಜೆಟ್‌ ಮಂಡನೆಗೆ ಇನ್ನೊಂದು ದಿನ ಬಾಕಿ ಇದೆ. ಈ ನಡುವೆ ರಾಜ್ಯದ ವಿವಿಧ ಭಾಗಗಳ ಜನ ಸಿಎಂ ಸಿದ್ದರಾಮಯ್ಯನವರ ಬಜೆಟ್‌ ಮೇಲೆ ಅಪಾರ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಆ ನಿರೀಕ್ಷೆ ಮತ್ತು ಬೇಡಿಕೆಗಳ ಪಟ್ಟಿ ಹೀಗಿದೆ. 
ದಕ್ಷಿಣ ಕನ್ನಡದ ಬೇಡಿಕೆಗಳು: ಕರಾವಳಿ ಪ್ರಾಧಿಕಾರ ಮೇಲ್ದರ್ಜೆಗೆ, ಮೀನುಗಾರರಿಗೆ 10 ಲಕ್ಷ ರೂ ವಿಮೆ. ಮೀನುಗಾರ ಮಹಿಳೆಯರಿಗೆ ಬಡ್ಡಿರಹಿತ ಸಾಲ, ಹಡಗು ಖರೀದಿಗೆ 25 ಲಕ್ಷ ರೂ. ಸಾಲ, ನಾರಾಯಣಗುರು ಅಭಿವೃದ್ಧಿ ಮಂಡಳಿ, ಬಂಟರ ಅಭಿವೃದ್ಧಿ ಮಂಡಳಿ ಸ್ಥಾಪನೆ, ಅಡಕೆ ಬೆಳೆ ಸಮಸ್ಯೆ ಪರಿಹಾರಕ್ಕೆ 50 ಕೋಟಿ ರೂಪಾಯಿ ಮೀಸಲಿಡಿ, ಇದರ ಜತೆಗೆ ಉಡುಪಿಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕಿದೆ.
(1 / 6)

ಕಲ್ಯಾಣ ಕರ್ನಾಟಕದ ಬೇಡಿಕೆಗಳು: ಪ್ರತ್ಯೇಕ ಬಜೆಟ್‌ ಮಂಡನೆಯಾಗಲಿ, 70 ಸಾವಿರ ಕೋಟಿ ರೂಪಾಯಿ ಮೀಸಲಿಡಿ, ತೊಗರಿ ಅಭಿವೃದ್ಧಿ ಮಂಡಳಿಗೆ 100 ಕೋಟಿ ರೂ. ಅನುದಾನ ಸಿಗಲಿ, ಪ್ರತ್ಯೇಕ ಕೈಗಾರಿಕಾ ನೀತಿ ಜತೆಗೆ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಅನುದಾನದ ಸೌಲಭ್ಯ, ಈ ಭಾಗದ ಯುವಕರಿಗೆ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಹೆಚ್ಚಿನ ಮೀಸಲಾತಿ ಸಿಗಲಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಅನುದಾನ
(2 / 6)

ಮಧ್ಯ ಕರ್ನಾಟಕದ ಬೇಡಿಕೆಗಳು: ದಾವಣಗೆರೆಯಲ್ಲಿ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಸ್ಥಳ ನೀಡಬೇಕಿದೆ, ಬಹುದಿನಗಳ ಬೇಡಿಕೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ, ಮೆಕ್ಕೆಜೋಳ ಆಹಾರ ಸಂಸ್ಕರಣ ಘಟಕ ನಿರ್ಮಾಣ ಸ್ಥಾಪನೆ, ಕೈಗಾರಿಕಾ ಕಾರಿಡಾರ್ ನಿರ್ಮಾಣದ ಕನಸೂ ನನಸಾಗಬೇಕಿದೆ, ಚಿತ್ರದುರ್ಗದಲ್ಲಿಯೂ ಮೂಲಸೌಕರ್ಯಗಳ ಕೊರತೆ ನೀಗಿಸಬೇಕಿದೆ, ಹೀಗೆ ಇನ್ನೂ ಹಲವು ಬೇಡಿಕೆಗಳು ಈ ಭಾಗದ ಜನರದ್ದಾಗಿದೆ. 
(3 / 6)

ಬೆಂಗಳೂರಿಗರ ಬೇಡಿಕೆಗಳೇನು? ರಾಜಧಾನಿಯ ಗುಂಡಿಗಳು ಗುಂಡಿ ಮುಕ್ತ ರಸ್ತೆಗಳಾಗಲಿವೆಯೇ, ಬೆಂಗಳೂರು ಸಂಚಾರ ದಟ್ಟನೆಗೆ ಈ ಸಲದ ಬಜೆಟ್‌ನಲ್ಲಿ ಸಿಗುವುದೇ ಆದ್ಯತೆ, ಕುಡಿಯುವ ನೀರು ಪೂರೈಕೆ, ಚರಂಡಿ ವ್ಯವಸ್ಥೆ ಸುಧಾರಣೆಗೆ ಬೇಕು ಸೂಕ್ತ ಕ್ರಮ, ಮಳೆಗಾಲದಲ್ಲಿ ಕೆರೆಯಂತಾಗುವ ರಾಜಧಾನಿಯ ರಸ್ತೆಗಳ ಸ್ಥಿತಿ ಸುಧಾರಿಸಲಿ, ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ, ಸೂಕ್ತ ವ್ಯವಸ್ಥೆ ಸಿಗುವುದೇ?
(4 / 6)

ಮೈಸೂರು ಭಾಗದ ನಿರೀಕ್ಷೆಗಳೇನು?: ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕು, ಆನೆಧಾಮ ಸ್ಥಾಪನೆ, ಮಂಡ್ಯದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಚಾಮರಾಜನಗರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ, ಗುಣಮಟ್ಟದ ಶಿಕ್ಷಣ ಮತ್ತು ಶಾಲೆಗಳ ಅಭಿವೃದ್ಧಿಗೆ ಅನುದಾನದ ಅವಶ್ಯಕತೆ, ಶ್ರೀರಂಗಪಟ್ಟಣ ಮೆಕ್ಸಿಕೋ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಸ್ಮಾರಕಗಳ ಸಂರಕ್ಷಣೆ, ಕೊಡಗಿನ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ನೀಡಬೇಕೆಂಬುದು ಇಲ್ಲಿನ ಜನರ ಬೇಡಿಕೆ. 
(5 / 6)

ಉತ್ತರ ಕರ್ನಾಟಕದ ಬೇಡಿಕೆಗಳು: ನನೆಗುದಿಗೆ ಬಿದ್ದ ಮಹಾದಾಯಿ ಯೋಜನೆ ಸಾಕಾರಗೊಲ್ಳುವುದೇ?, ಶಿಕ್ಷಣ ಕ್ಷೇತ್ರ ಮತ್ತು ನೀರಾವರಿ ಯೋಜನೆಗೂ ದಕ್ಕಲಿದೆಯೇ ನಿರೀಕ್ಷಿತ ಫಲ, ಕೃಷಿ ವಿಚಾರದಲ್ಲಿ ಇಸ್ರೇಲ್‌ ಮಾದರಿ ಯೋಜನೆ ಅಳವಡಿಕೆ ಏನಾಯ್ತು?, ಕೈಗಾರಿಕಾ ಅಭಿವೃದ್ಧಿ ಸಲುವಾಗಿ ಇಂಡಸ್ಟ್ರಿಯಲ್‌ ಕಾರಿಡಾರ್‌ ನಿರ್ಮಾಣದ ಕನಸು ಏನಾಯ್ತು?, ಟೈರ್‌ 2 ಟೈರ್‌ 3 ನಗರಗಳಾದ ಹುಬ್ಬಳ್ಳಿ ಮತ್ತು ಬೆಳಗಾವಿ ಸುತ್ತ ಬೃಹತ್‌ ಕೈಗಾರಿಕೆಗಳ ನಿರ್ಮಾಣ ಯಾವಾಗ? ಹೀಗೆ ಇನ್ನೂ ಹಲವು ಬೇಡಿಕೆಗಳು ಈ ಭಾಗದ ಜನರದ್ದಾಗಿದೆ. 
(6 / 6)

    ಹಂಚಿಕೊಳ್ಳಲು ಲೇಖನಗಳು