logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Rains: ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ, ಉಕ್ಕಿ ಹರಿಯುತ್ತಿರುವ ನದಿಗಳು, ಹೀಗಿದೆ ಚಿತ್ರಣ Photos

Karnataka Rains: ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ, ಉಕ್ಕಿ ಹರಿಯುತ್ತಿರುವ ನದಿಗಳು, ಹೀಗಿದೆ ಚಿತ್ರಣ photos

Jul 30, 2024 12:10 PM IST

Rain Updates  ಕರ್ನಾಟಕದ ನಾನಾ ಭಾಗಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಭಾಗದಲ್ಲಿ ಮಳೆಗೆ ನದಿಗಳು ತುಂಬಿ ಹರಿಯುತ್ತಿದೆ.ಅಲ್ಲಲ್ಲಿ ಮರ ಉರುಳಿದ, ಭೂಕುಸಿತವಾದ ವರದಿಯಾಗಿದೆ. ಈ ಕುರಿತು ಚಿತ್ರ ನೋಟ ಇಲ್ಲಿದೆ.

  • Rain Updates  ಕರ್ನಾಟಕದ ನಾನಾ ಭಾಗಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಭಾಗದಲ್ಲಿ ಮಳೆಗೆ ನದಿಗಳು ತುಂಬಿ ಹರಿಯುತ್ತಿದೆ.ಅಲ್ಲಲ್ಲಿ ಮರ ಉರುಳಿದ, ಭೂಕುಸಿತವಾದ ವರದಿಯಾಗಿದೆ. ಈ ಕುರಿತು ಚಿತ್ರ ನೋಟ ಇಲ್ಲಿದೆ.
ಭಾರೀ ಮಳೆಯಿಂದಾಗಿ ಕೊಡಗಿನ ಕಾವೇರಿ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಹೆಚ್ಚಿನ ನೀರು ಬಂದಿದೆ. ಅದರಲ್ಲೂ ತ್ರಿವೇಣಿ ಸಂಗಮ ಭಾಗಮಂಡಲದ ದೇಗುಲ ಸುತ್ತಾ ನೀರು ನಿಂತಿದೆ.
(1 / 8)

ಭಾರೀ ಮಳೆಯಿಂದಾಗಿ ಹಾಸನ ಜಿಲ್ಲೆಯ ಕೆಲವು ಕಡೆಗಳಲ್ಲಿ ಭೂಕುಸಿತವೂ ಆಗಿ ರಸ್ತೆ ಕಡಿತವಾಗಿದೆ.
(2 / 8)

ಭಾರೀ ಮಳೆಯ ಕಾರಣದಿಂದ ಕೊಡಗಿನಲ್ಲಿ ಕಾವೇರಿ ನದಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಡಿಕೇರಿ ನಾಪೊಕ್ಲು ಸೇತುವೆ ಬಳಿ ಹೆಚ್ಚಿನ ನೀರು ಹರಿಯುತ್ತಿದೆ.
(3 / 8)

ದಕ್ಷಿಣ ಕನ್ನಡ ಭಾಗದಲ್ಲೂ ಮಳೆಯಾಗಿ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ. ಇದರಲ್ಲಿಯೇ ಪ್ರವಾಸಿಗರು ಸ್ನಾನ ಮಾಡುತ್ತಿರುವುದು ಕಂಡು ಬಂದಿತು.
(4 / 8)

ಎಡಬಿಡದೇ ಸುರಿದ ಭಾರೀ ಮಳೆಯಿಂದ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ  ಕುಂಬರಡಿ ಬಳಿ ರಸ್ತೆಯೇ ಬಿರುಕು ಬಿಟ್ಟಿದೆ. 
(5 / 8)

ಭಾರೀ ಮಳೆ ಸುರಿದು ಚಿಕ್ಕಮಗಳೂರು ಭಾಗದಲ್ಲೂ ಅಲ್ಲಲ್ಲಿ ಮರಗಳು ಉರುಳಿ ಬಿದ್ದಿವೆ. ಹಳ್ಳ, ತೊರೆಗಳು ಉಕ್ಕಿ ಹರಿಯುತ್ತಿವೆ. 
(6 / 8)

ಮಳೆಯ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ನೇತ್ರಾವತಿ ನದಿಯ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.
(7 / 8)

ಕೇರಳ, ಕೊಡಗಿನ ಮಳೆಯಿಂದ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯ ತುಂಬಿ ಕಪಿಲಾ ಹಾಗೂ ಕಾವೇರಿ ನದಿ ನೀರು ಹರಿಸಲಾಗುತ್ತಿದೆ. ಇದರಿಂದ ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಹೆಮ್ಮಿಗೆ ಬಳಿ ಕಾವೇಇ ನದಿ ಹರಿವು ಜೋರಾಗಿದೆ.
(8 / 8)

    ಹಂಚಿಕೊಳ್ಳಲು ಲೇಖನಗಳು