logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Almatti Dam: ಆಲಮಟ್ಟಿಯಿಂದ 14 ಗೇಟ್‌ಗಳ ಮೂಲಕ ಭಾರೀ ನೀರು ಹೊರಕ್ಕೆ, ಹೀಗಿದೆ ಜಲ ವೈಭವ Photo

Almatti Dam: ಆಲಮಟ್ಟಿಯಿಂದ 14 ಗೇಟ್‌ಗಳ ಮೂಲಕ ಭಾರೀ ನೀರು ಹೊರಕ್ಕೆ, ಹೀಗಿದೆ ಜಲ ವೈಭವ photo

Jul 17, 2024 09:46 AM IST

Karnataka Reservoirs ಉತ್ತರ ಕರ್ನಾಟಕದ ಪ್ರಮುಖ ಜಲಾಶಯ ಆಲಮಟ್ಟಿ( almatti dam) ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಇದರ ನೋಟ ಇಲ್ಲಿದೆ. 

ಕರ್ನಾಟಕದ ಅತಿ ದೊಡ್ಡ ಜಲಾಶಯ ಆಲಮಟ್ಟಿ ಶೇ. 80 ತುಂಬಿದ್ದು,ವಿದ್ಯುದಾಗಾರದ ಮೂಲಕ 45 ಸಾವಿರ ಕ್ಯೂಸೆಕ್‌, ಗೇಟ್ ಮೂಲಕ 20ಸಾವಿರ ಕ್ಯೂಸೆಕ್‌ ಸೇರಿ ಒಟ್ಟು65 ಸಾವಿರ ಕ್ಯುಸೆಕ್ ನೀರನ್ನು ಈಗಾಗಲೇ ಹರಿಸಲಾಗುತ್ತಿದೆ.
(1 / 6)

ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿರುವುದರಿಂದ ಜಲಾಶಯಕ್ಕೆ ಬರುತ್ತಿರವ ಒಳ ಹರಿವಿನ ಪ್ರಮಾಣವೂ ಏರಿದೆ. ಬುಧವಾರ ಬೆಳಿಗ್ಗೆ 92736  ಕ್ಯೂಸೆಕ್‌ ಒಳ ಹರಿವು ಇದೆ.
(2 / 6)

ಜಲಾಶಯದಿಂದ ಹೊರ ಹರಿವಿನ ಪ್ರಮಾಣವನ್ನು ಏರಿಸಿರುವುದರಿಂದ ಕೃಷ್ಣಾ ನದಿ ಮೂಲಕ ನೀರು ನಾರಾಯಣಪುರ ಜಲಾಶಯಕ್ಕೆ ಹೋಗುತ್ತಿದೆ. 
(3 / 6)

ಆಲಮಟ್ಟಿಯ ಲಾಲ್‌ ಬಹದ್ದೂರು ಶಾಸ್ತ್ರಿ ಜಲಾಶಯದಲ್ಲಿ ಈವರೆಗೂ 98.729 ಟಿಎಂಸಿ ನೀರು ಸಂಗ್ರಹವಾಗಿದೆ. ಮೂರು ದಿನದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ನೂರು ಟಿಎಂಸಿಯನ್ನು ಇಂದು ಸಂಜೆ ಒಳಗೆ ದಾಟಬಹುದು.
(4 / 6)

ಆಲಮಟ್ಟಿ ಜಲಾಶಯದ ಒಟ್ಟು 26ಗೇಟ್ ಗಳಿದ್ದು. ಈಗ ಒಳಹರಿವು ಒಂದು ಲಕ್ಷ ತಲುಪಿರುವುದರಿಂದ ಏರಿಕೆ ಮಾಡಲಾಗಿದ್ದು, ಇನ್ನಷ್ಟು ಹೊರ ಹರಿವು ಹೆಚ್ಚಿಸಬಹುದು.
(5 / 6)

ಆಲಮಟ್ಟಿ ಜಲಾಶಯದಿಂದ ನೀರು ಹರಿಸುತ್ತಿರುವುದರಿಂದ ಈ ಭಾಗದ ಜನರು ಜಲಾಶಯ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಜಲವೈಭವದ ವಾತಾವರಣ ಇಲ್ಲಿ ಕಂಡು ಬಂದಿದೆ. ಇನ್ನೂ ನೀರು ಹೆಚ್ಚಿಸಿದರೆ ನೋಡಲು ಹಿತಕರ ವಾತಾವರಣ ಸೃಷ್ಟಿಯಾಗಲಿದೆ. 
(6 / 6)

    ಹಂಚಿಕೊಳ್ಳಲು ಲೇಖನಗಳು