logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vasantotsava 2023: ಕರ್ನಾಟಕ ಸಂಘ ಕತಾರ್‌ನ ವಾರ್ಷಿಕ ಕಾರ್ಯಕ್ರಮ “ವಸಂತೋತ್ಸವ 2023” ಸಂಪನ್ನ; ಫೋಟೋ ವರದಿ ಇಲ್ಲಿದೆ

Vasantotsava 2023: ಕರ್ನಾಟಕ ಸಂಘ ಕತಾರ್‌ನ ವಾರ್ಷಿಕ ಕಾರ್ಯಕ್ರಮ “ವಸಂತೋತ್ಸವ 2023” ಸಂಪನ್ನ; ಫೋಟೋ ವರದಿ ಇಲ್ಲಿದೆ

May 01, 2023 10:12 PM IST

Vasantotsava 2023: ಕತಾರ್ ರಾಜ್ಯದ ದೋಹಾ ಮೂಲದ ಕರ್ನಾಟಕ ಸಂಘ ಕತಾರ್‌ನ ವಾರ್ಷಿಕ ಕಾರ್ಯಕ್ರಮ "ವಸಂತೋತ್ಸವ - 2023"ರಲ್ಲಿ ಬಹುಮುಖ ಪ್ರತಿಭೆ, ನಟ, ಗಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು, ಪ್ರೊಫೆಸರ್ ಕೃಷ್ಣೇಗೌಡ ಅವರ ಕಾರ್ಯಕ್ರಮ ಜನಮನಸೂರೆಗೊಂಡಿತು. ಇದರ ಸಚಿತ್ರ ವರದಿ ಒದಗಿಸಿದ್ದಾರೆ ಸುಬ್ರಹ್ಮಣ್ಯ ಹೆಬ್ಬಾಗೆಲು.

ಕತಾರ್ ರಾಜ್ಯದ ದೋಹಾ ಮೂಲದ ಕರ್ನಾಟಕ ಸಂಘ ಕತಾರ್‌ನ ವಾರ್ಷಿಕ ಕಾರ್ಯಕ್ರಮ "ವಸಂತೋತ್ಸವ - 2023" ಇತ್ತೀಚೆಗೆ ಭವ್ಯವಾಗಿ ಸಂಪನ್ನಗೊಂಡಿತು. ಕರ್ನಾಟಕ ಸಂಘ ಕತಾರ್‌ನ ಸದಸ್ಯರು ಕಾರ್ಯಕ್ರಮಗಳಲ್ಲಿ ಲೈವ್ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡಿದರು. ಕತಾರ್ ನ ಕೌಶಲ್ಯ ಅಭಿವೃದ್ಧಿ ಕೇಂದ್ರದ ಕಲಾವಿದರು ಸ್ವಾಗತ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ವಸಂತೋತ್ಸವ - 2023 ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ.  ಮುಖ್ಯ ಅತಿಥಿ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಕ್ಸೇವಿಯರ್ ಧನರಾಜ್, ಗೌರವ ಅತಿಥಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠನ್, ಮತ್ತೊಬ್ಬ ಗೌರವಾನ್ವಿತ ಅತಿಥಿ ಪ್ರೊಫೆಸರ್ ಕೃಷ್ಣೇಗೌಡ ಅವರು ಕಾರ್ಯಕ್ರಮ ಘನತೆ ಹೆಚ್ಚಿಸಿದರು.
(1 / 7)
ಕತಾರ್ ರಾಜ್ಯದ ದೋಹಾ ಮೂಲದ ಕರ್ನಾಟಕ ಸಂಘ ಕತಾರ್‌ನ ವಾರ್ಷಿಕ ಕಾರ್ಯಕ್ರಮ "ವಸಂತೋತ್ಸವ - 2023" ಇತ್ತೀಚೆಗೆ ಭವ್ಯವಾಗಿ ಸಂಪನ್ನಗೊಂಡಿತು. ಕರ್ನಾಟಕ ಸಂಘ ಕತಾರ್‌ನ ಸದಸ್ಯರು ಕಾರ್ಯಕ್ರಮಗಳಲ್ಲಿ ಲೈವ್ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡಿದರು. ಕತಾರ್ ನ ಕೌಶಲ್ಯ ಅಭಿವೃದ್ಧಿ ಕೇಂದ್ರದ ಕಲಾವಿದರು ಸ್ವಾಗತ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ವಸಂತೋತ್ಸವ - 2023 ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ.  ಮುಖ್ಯ ಅತಿಥಿ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಕ್ಸೇವಿಯರ್ ಧನರಾಜ್, ಗೌರವ ಅತಿಥಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠನ್, ಮತ್ತೊಬ್ಬ ಗೌರವಾನ್ವಿತ ಅತಿಥಿ ಪ್ರೊಫೆಸರ್ ಕೃಷ್ಣೇಗೌಡ ಅವರು ಕಾರ್ಯಕ್ರಮ ಘನತೆ ಹೆಚ್ಚಿಸಿದರು.(KSQ Doha)
ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು , ಭಾರತೀಯ ಕ್ರೀಡಾ ಕೇಂದ್ರದ ಅಧ್ಯಕ್ಷ ಇ.ಪಿ.ಅಬ್ದುಲ್ ರಹ್ಮಾನ್ ಮತ್ತು ಇತರ ಅಪೆಕ್ಸ್ ಸಂಸ್ಥೆಗಳ ಅಧ್ಯಕ್ಷರು ಮತ್ತು ಕರ್ನಾಟಕ ಸಂಘ ಕತಾರ್ ಆಡಳಿತ ಸಮಿತಿ ಸದಸ್ಯರು ಮತ್ತು ಸಲಹಾ ಮಂಡಳಿ ಸದಸ್ಯರು ಭಾಗವಹಿಸಿದ್ದರು. ̧ಮೇಲಿನ ಚಿತ್ರದಲ್ಲಿರುವುದು ವಸಂತೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ.
(2 / 7)

ಮಹೇಶ್ ಗೌಡ ಅವರು ಕಾರ್ಯಕ್ರಮಕ್ಕೆ ಅತಿಥಿಗಳನ್ನು ಮತ್ತು ಸಭಿಕರನ್ನು ಸ್ವಾಗತಿಸಿ ಮಾತನಾಡುತ್ತ ಸಂಘದ ಯಶಸ್ಸಿಗೆ ಕೊಡುಗೆ ನೀಡಿದ ಹಿಂದಿನ ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.  2024ರಲ್ಲಿ ಕರ್ನಾಟಕ ಸಂಘ ಕತಾರ್‌ಗೆ ಬೆಳ್ಳಿಹಬ್ಬದ ವರ್ಷವಾಗಲಿದ್ದು, ಇದನ್ನು ಅದ್ಧೂರಿಯಾಗಿ ಆಚರಿಸುವ ಇಚ್ಛೆ ವ್ಯಕ್ತ ಪಡಿಸಿದರು. 
(3 / 7)

ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಶ್ರೀ ಮಣಿಕಂಠನ್ ಅವರು ಕನ್ನಡ ಸಮುದಾಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕರ್ನಾಟಕ ಸಂಘ ಕತಾರ್‌ನ ಕೊಡುಗೆಯನ್ನು ಶ್ಲಾಘಿಸಿದರು ಮತ್ತು ಸಂಘಕ್ಕೆ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ಮೇಲಿನ ಫೋಟೋದಲ್ಲಿರುವುದು ಕಾರ್ಯಕ್ರಮದ ಸಂಘಟಕರು ಮತ್ತು ಅತಿಥಿಗಳು.
(4 / 7)

ಕರ್ನಾಟಕ ಸಂಘ ಕತಾರ್‌ನ ವಾರ್ಷಿಕ ಕಾರ್ಯಕ್ರಮ "ವಸಂತೋತ್ಸವ - 2023"ರಲ್ಲಿ ಬಹುಮುಖ ಪ್ರತಿಭೆ, ನಟ, ಗಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು, ಪ್ರೊಫೆಸರ್ ಕೃಷ್ಣೇಗೌಡ ಅವರ ಕಾರ್ಯಕ್ರಮ ಜನಮನಸೂರೆಗೊಂಡಿತು. ಕನ್ನಡ ಸಮುದಾಯ ಮತ್ತು ಭಾಷೆಗೆ ಮಾಡಿದ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಘ ಕತಾರ್ ಪ್ರೊಫೆಸರ್ ಕೃಷ್ಣ ಬೈರೇಗೌಡ ಅವರಿಗೆ “ಕನ್ನಡ ಕಾವ್ಯ ಕಲಾ ಕನಕ ಕಲಶ” ಮತ್ತು ಗಾಯಕ ನವೀನ್ ಸಜ್ಜು ಅವರಿಗೆ “ಜಾನಪದ ಕೋಗಿಲೆ” ಎಂಬ ಬಿರುದು ನೀಡಿ ಗೌರವಿಸಿತು.
(5 / 7)

ಪ್ರೊಫೆಸರ್ ಕೃಷ್ಣೇಗೌಡ ಅವರು ಸಾಮಾಜಿಕ ಸಂದೇಶದ ಜತೆಗೆ ತಮ್ಮ ಹಾಸ್ಯದ ಮಾತುಗಳಿಂದ ಸಭಿಕರನ್ನು ತಲ್ಲಣಗೊಳಿಸಿದರು. ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ನವೀನ್ ಸಜ್ಜು ಮತ್ತು ಅವರ ತಂಡ ನಡೆಸಿ ಕೊಟ್ಟ ಕನ್ನಡ ಜಾನಪದ ರಾಕ್ ಬಾಂಡ್ ಕಾನ್ಸರ್ಟ್. ಇವರು ತಮ್ಮ ಹಾಡುಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. 
(6 / 7)

ಕ್ಸೇವಿಯರ್ ಧನರಾಜ್ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಕಾರ್ಯಕ್ರಮಕ್ಕೆ ಬೆಂಬಲ ನೀಡಿದ ಎಲ್ಲಾ ಸಮುದಾಯದ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಕರ್ನಾಟಕ ಸಂಘ ಕತಾರ್‌ನ ಹಿತಚಿಂತನೆಯ ಚಟುವಟಿಕೆಗಳನ್ನು ಗುರುತಿಸಿದರು.
(7 / 7)

    ಹಂಚಿಕೊಳ್ಳಲು ಲೇಖನಗಳು