logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Temples: ಕರ್ನಾಟಕದಲ್ಲಿದ್ದು ಈ 10 ದೇವಸ್ಥಾನಗಳನ್ನು ನೋಡಿಲ್ಲ ಅಂದ್ರೆ ಹೇಗೆ? ನೀವು ಮಿಸ್ ಮಾಡದೇ ನೋಡಬೇಕಾದ ದೇಗುಲಗಳಿವು

Karnataka Temples: ಕರ್ನಾಟಕದಲ್ಲಿದ್ದು ಈ 10 ದೇವಸ್ಥಾನಗಳನ್ನು ನೋಡಿಲ್ಲ ಅಂದ್ರೆ ಹೇಗೆ? ನೀವು ಮಿಸ್ ಮಾಡದೇ ನೋಡಬೇಕಾದ ದೇಗುಲಗಳಿವು

Nov 03, 2023 05:30 AM IST

ಕರ್ನಾಟಕದಲ್ಲಿ ನಮಗೆ ತಿಳಿದಿರುವ, ತಿಳಿಯದಿರುವ ಅನೇಕ ದೇವಸ್ಥಾನಗಳಿವೆ. ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬಂದರೆ ಜನ್ಮ ಪಾವನ ಎಂಬ ಭಾವ ಉಂಟಾಗುತ್ತದೆ. ಕರ್ನಾಟಕದಲ್ಲಿ ನೀವು ನೋಡಲೇಬೇಕಾದ 10 ಖ್ಯಾತ ದೇವಸ್ಥಾನಗಳ ವಿವರ ಇಲ್ಲಿದೆ. 

ಮುಂದಿನ ಬಾರಿ ರಜೆ ಸಿಕ್ಕಾಗ ನಿಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಈ ಪ್ರಸಿದ್ಧ ದೇವಾಲಯಗಳಿಗೆ ಹೋಗಿ ಬನ್ನಿ
(1 / 11)
ಮುಂದಿನ ಬಾರಿ ರಜೆ ಸಿಕ್ಕಾಗ ನಿಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಈ ಪ್ರಸಿದ್ಧ ದೇವಾಲಯಗಳಿಗೆ ಹೋಗಿ ಬನ್ನಿ(PC: Facebook)
13ನೇ ಶತಮಾನದಲ್ಲಿ ನಿರ್ಮಾಣವಾದ ಉಡುಪಿಯ ಕೃಷ್ಣ ಮಠವನ್ನು ನೋಡಲು ದೂರದೂರಿನಿಂದ ಕೃಷ್ಣನ ಭಕ್ತರು ಆಗಮಿಸುತ್ತಾರೆ. ಇಲ್ಲಿ ನೀವು ನೇರವಾಗಿ ಕೃಷ್ಣನ ಮೂರ್ತಿಯನ್ನು ನೋಡಲಾಗುವುದಿಲ್ಲ. ಕನಕನ ಕಿಂಡಿ ಎಂಬ 9 ಆಯಾತಾಕಾರದ ಕಿಟಕಿಯ ಮೂಲಕ ನೋಡಬಹುದು. 
(2 / 11)

ವಿದ್ಯೆಗೆ ಅಧಿದೇವತೆ ಆಗಿರುವ ಚಿಕ್ಕಮಗಳೂರಿನ ಶೃಂಗೇರಿ ಶಾರದಾ ಪೀಠ ಹಾಗೂ ವಿದ್ಯಾಶಂಕರ ದೇವಸ್ಥಾನಕ್ಕೆ ನೀವು ನಿಮ್ಮ ಮಕ್ಕಳನ್ನು ಕರೆತರಬೇಕು. ಇಲ್ಲಿ ಪೂಜಿಸಿದರೆ  ಮಕ್ಕಳಿಗೆ ಶಾರದೆ ಒಲಿಯುತ್ತಾಳೆ ಎಂಬ ನಂಬಿಕೆ ಇದೆ. 
(3 / 11)

ಉತ್ತರ ಕನ್ನಡ ಜಿಲ್ಲೆಯ ಕಂದುಕ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಮುರುಡೇಶ್ವರ ದೇವಾಲಯವು ನೀವು ನೋಡಲೇಬೇಕಾದ ದೇವಸ್ಥಾನಗಳಲ್ಲಿ ಒಂದು. 123 ಅಡಿ ಎತ್ತರದ ಶಿವನ ವಿಗ್ರಹವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದು ವಿಶ್ವದ 2ನೇ ಅತಿ ದೊಡ್ಡ ಶಿವನ ಪ್ರತಿಮೆಯಾಗಿದೆ. ದೇವಸ್ಥಾನದ ಮೂರೂ ಕಡೆಗಳಲ್ಲಿ ಅರಬ್ಬೀ ಸಮುದ್ರ ಸುತ್ತುವರೆದಿದೆ. 
(4 / 11)

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯಲ್ಲಿರುವ ವಿರೂಪಾಕ್ಷ ಹಾಗೂ ವಿಠ್ಠಲ ದೇವಸ್ಥಾನ ಕೂಡಾ ಅತ್ಯಂತ ಜನಪ್ರಿಯ ದೇವಸ್ಥಾನಗಳಲ್ಲಿ ಒಂದಾಗಿದೆ. ಇಲ್ಲಿ ಕಲ್ಲಿನ ರಥ ಮತ್ತು ಏಕಶಿಲೆಯ ಸಂಗೀತ ಸ್ತಂಭಗಳು ಸೇರಿದಂತೆ ಇಲ್ಲಿನ ಶಿಲ್ಪಕಲೆ ಬಹಳ ಹೆಸರಾಗಿದೆ. 
(5 / 11)

ಶಿವನನ್ನು ಪೂಜಿಸಲ್ಪಡುವ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಬಗ್ಗೆ ರಾಮಾಯಣ ಮತ್ತು ಮಹಾಭಾರತ ಕಾಲದಿಂದಲೂ ಉಲ್ಲೇಖವಿದೆ. ಉತ್ತರ ಕನ್ನಡ ಜಿಲ್ಲೆಯ ಈ ದೇವಸ್ಥಾನಕ್ಕೆ ಒಮ್ಮೆ ನೀವೂ ಹೋಗಿ ಬನ್ನಿ. 
(6 / 11)
ಶಿವನನ್ನು ಪೂಜಿಸಲ್ಪಡುವ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಬಗ್ಗೆ ರಾಮಾಯಣ ಮತ್ತು ಮಹಾಭಾರತ ಕಾಲದಿಂದಲೂ ಉಲ್ಲೇಖವಿದೆ. ಉತ್ತರ ಕನ್ನಡ ಜಿಲ್ಲೆಯ ಈ ದೇವಸ್ಥಾನಕ್ಕೆ ಒಮ್ಮೆ ನೀವೂ ಹೋಗಿ ಬನ್ನಿ. (PC: www.karnatakatourism.org)
ಹೊಯ್ಸಳ ರಾಜ ವಿಷ್ಣುವರ್ಧನ 12ನೇ ಶತಮಾನದಲ್ಲಿ ನಿರ್ಮಿಸಿರುವ ಹಾಸನ ಜಿಲ್ಲೆ, ಬೇಲೂರಿನ ಚನ್ನಕೇಶವ ದೇವಸ್ಥಾನ ಕೂಡಾ ಶಿಲ್ಪಕಲೆಗೆ ಹೆಸರಾಗಿದೆ. ಇಲ್ಲಿನ ವಿವಿಧ ಶಿಲ್ಪಕಲೆಗಳನ್ನು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. 
(7 / 11)

ಕೋಲಾರದ ಕೋಟಿಲಿಂಗ ದೇವಸ್ಥಾನ ಕರ್ನಾಟಕದ ಅತಿ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿದೆ. ಏಷ್ಯಾದ ಅತಿ ದೊಡ್ಡ ಶಿವಲಿಂಗದ ಪ್ರತಿಮೆ ಈ ದೇವಸ್ಥಾನದಲ್ಲಿದೆ. ಮಹಾಶಿವರಾತ್ರಿಯ ಸಮಯದಲ್ಲಿ ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ ಕೊಡುತ್ತಾರೆ. 
(8 / 11)

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪಟ್ಟದಕಲ್ಲು ಹಿಂದೂ ದೇವಾಲಯಗಳ ನೆಲೆಯಾಗಿದೆ. ಇದು 8ನೇ ಶತಮಾನದಲ್ಲಿ ನಿರ್ಮಿಸಲಾದ ಪುರಾತನ ದೇವಾಲಯ. ದ್ರಾವಿಡ ವಾಸ್ತುಶಿಲ್ಪ ಮತ್ತು ಮಹಾಭಾರತ, ರಾಮಾಯಣ ಮತ್ತು ಪಂಚತಂತ್ರದ ಸುಂದರವಾದ ಕೆತ್ತನೆಗಳು ಈ ದೇವಾಲಯದ ಪ್ರಮುಖ ಆಕರ್ಷಣೆಗಳು
(9 / 11)

ಮೈಸೂರು ಜಿಲ್ಲೆಯ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ರಾಜ್ಯದ ಪುರಾತನ ದೇವಾಲಯಗಳಲ್ಲಿ ಒಂದು. ಕಪಿಲಾ ನದಿಯ ದಂಡೆಯಲ್ಲಿರುವ ಈ ದೇವಾಲಯಕ್ಕೆ ಶಿವರಾತ್ರಿ ಸಮಯದಲ್ಲಿ ಅನೇಕ ಭಕ್ತರು ಬರುತ್ತಾರೆ. 
(10 / 11)

ಐಹೊಳೆಯಲ್ಲಿರುವ ನೂರಕ್ಕೂ ಹೆಚ್ಚು ದೇವಾಲಯಗಳಲ್ಲಿ ದುರ್ಗಾ ಗುಡಿ ಕೂಡಾ ಬಹಳ ಫೇಮಸ್.‌ ನೀವು ನೋಡಬಹುದಾದ ದೇವಸ್ಥಾನಗಳಲ್ಲಿ ಇದೂ ಒಂದು. 
(11 / 11)

    ಹಂಚಿಕೊಳ್ಳಲು ಲೇಖನಗಳು