logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಧಾರವಾಡದಲ್ಲಿ ಭಾರೀ ಚಳಿ; ಸತತ 3 ಗಂಟೆಗಳ ಕಾಲ ಮುಸುಕಿದ ಮಂಜು

ಧಾರವಾಡದಲ್ಲಿ ಭಾರೀ ಚಳಿ; ಸತತ 3 ಗಂಟೆಗಳ ಕಾಲ ಮುಸುಕಿದ ಮಂಜು

Dec 21, 2024 06:53 PM IST

ರಾಜ್ಯದಲ್ಲೆಡೆ ಚುಮುಚುಮು ಚಳಿ ಹೆಚ್ಚಾಗುತ್ತಿದೆ. ಮಳೆಗಾಲ ಮುಗಿದು ಚಳಿಗಾಲದ ವಾತಾವರಣ ದಿನೇ ದಿನೇ ಹೆಚ್ಚಾಗುತ್ತದೆ. ಮಂಜು ಮುಸುಕಿದ ವಾತಾವರಣ ಎಲ್ಲೆಡೆ ನಿರ್ಮಾಣವಾಗುತ್ತಿದ್ದು, ಕಂಬಳಿ ಹೊದ್ದುಕೊಳ್ಳುವಂತಹ ಮುಂಜಾನೆ ನಿರ್ಮಾಣವಾಗುತ್ತಿದೆ.

  • ರಾಜ್ಯದಲ್ಲೆಡೆ ಚುಮುಚುಮು ಚಳಿ ಹೆಚ್ಚಾಗುತ್ತಿದೆ. ಮಳೆಗಾಲ ಮುಗಿದು ಚಳಿಗಾಲದ ವಾತಾವರಣ ದಿನೇ ದಿನೇ ಹೆಚ್ಚಾಗುತ್ತದೆ. ಮಂಜು ಮುಸುಕಿದ ವಾತಾವರಣ ಎಲ್ಲೆಡೆ ನಿರ್ಮಾಣವಾಗುತ್ತಿದ್ದು, ಕಂಬಳಿ ಹೊದ್ದುಕೊಳ್ಳುವಂತಹ ಮುಂಜಾನೆ ನಿರ್ಮಾಣವಾಗುತ್ತಿದೆ.
ಪೇಡಾ ನಗರಿ ಧಾರವಾಡದಲ್ಲೂ ಇದೇ ವಾತಾವರಣ ನಿರ್ಮಾಣವಾಗಿದೆ. ಇಂದು (ಡಿಸೆಂಬರ್ 21) ಬೆಳಗಿನ ಜಾವ ಸತತವಾಗಿ 3 ಗಂಟೆಗಳ ಕಾಲ ಅತಿಯಾದ ಮಂಜು ವಿದ್ಯಾನಗರಿ ಧಾರವಾಡವನ್ನು ಆವರಿಸಿತ್ತು. 
(1 / 10)

ಇಂತಹ ವಾತಾವರಣದಿಂದ ಧಾರವಾಡದ ನಾಗರಿಕರು ಕೊಂಚ ಪರಿಪಾಟಲು ಅನುಭವಿಸುವಂತಾಗಿದೆ. 
(2 / 10)
ಇಂತಹ ವಾತಾವರಣದಿಂದ ಧಾರವಾಡದ ನಾಗರಿಕರು ಕೊಂಚ ಪರಿಪಾಟಲು ಅನುಭವಿಸುವಂತಾಗಿದೆ. 
ರಾತ್ರಿಯ ಸಮಯದಲ್ಲಿ ಸಹ ವಾತಾವರಣ ಹೆಚ್ಚಿನ ಚಳಿಯಿಂದ ಕೂಡಿದ್ದು, ವೃದ್ಧರು ಮತ್ತು ಚಿಕ್ಕಮಕ್ಕಳು ಮನೆಯಿಂದ ಆಚೆ ಬರಲು ಪರದಾಟ ಅನುಭವಿಸುವಂತಾಯಿತು.   
(3 / 10)

ಧಾರವಾಡದ ಪ್ರತಿ ಪ್ರದೇಶವೂ ಮುಸುಕಿನ ಮಂಜಿನಿಂದ ಮುಳುಗಿದ್ದು, ಮುಂಜಾನೆಯಲ್ಲಿ ವಾಕಿಂಗ್ ಮಾಡುವವರು, ಕ್ರೀಡೆಯಲ್ಲಿ ತರಬೇತಿ ಪಡೆಯುವವರು, ವಾಹನ ಸವಾರರು ಇಂದು ಕವಿದ ಮಂಜಿನಲ್ಲಿ ಕಂಡಿದ್ದು ಹೀಗೆ. 
(4 / 10)

ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅಲ್ಲಲ್ಲಿ ಮಂಜಿನ ವಾತಾವರಣ ಕಂಡು ಬಂದಿದೆ.
(5 / 10)

ಆದರೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಹೇಳಿಕೊಳ್ಳುವಂತಹ ಚಳಿ ಇಲ್ಲ. ಹೀಗಾಗಿ ಕೃಷಿಕರು ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ವರದಿಗಳು ತಿಳಿಸಿವೆ.
(6 / 10)

ಇತ್ತ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ವಾತಾವರಣದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. 
(7 / 10)

ವಿದ್ಯಾನಗರಿ ಧಾರವಾಡವು ಚುಮುಚುಮು ಚಳಿಯಲ್ಲಿ ಮುಳುಗಿದೆ
(8 / 10)
ವಿದ್ಯಾನಗರಿ ಧಾರವಾಡವು ಚುಮುಚುಮು ಚಳಿಯಲ್ಲಿ ಮುಳುಗಿದೆ
ಚಿತ್ರ ಕೃಪೆ: ಪ್ರಸನ್ನ ಕುಮಾರ್
(9 / 10)
ಚಿತ್ರ ಕೃಪೆ: ಪ್ರಸನ್ನ ಕುಮಾರ್
ಧಾರಾವಾಡದಲ್ಲಿ ಭಾರೀ ಚಳಿ
(10 / 10)
ಧಾರಾವಾಡದಲ್ಲಿ ಭಾರೀ ಚಳಿ

    ಹಂಚಿಕೊಳ್ಳಲು ಲೇಖನಗಳು