logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karthika Deepa: ಅಪ್ಪಿತಪ್ಪಿಯೂ ಈ ರೀತಿ ಕಾರ್ತಿಕ ದೀಪ ಹಚ್ಚಬೇಡಿ, ಅದು ಅಶುಭ

Karthika Deepa: ಅಪ್ಪಿತಪ್ಪಿಯೂ ಈ ರೀತಿ ಕಾರ್ತಿಕ ದೀಪ ಹಚ್ಚಬೇಡಿ, ಅದು ಅಶುಭ

Nov 27, 2023 05:00 AM IST

Kartika Deepam: ಕಾರ್ತಿಕ ಮಾಸವು ಅತ್ಯಂತ ಮಂಗಳಕರ ಮಾಸವಾಗಿದೆ. ಕಾರ್ತಿಕ ದೀಪವನ್ನು ಹಚ್ಚುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಹಾಗೆ ಮಾಡಿದರೆ ಅಶುಭ ಎಂದು ಪರಿಗಣಿಸಲಾಗುವುದು. ಯಾವ ತಪ್ಪುಗಳನ್ನು ಮಾಡಬಾರದು ಎಂದು ಅರಿಯೋಣ..

  • Kartika Deepam: ಕಾರ್ತಿಕ ಮಾಸವು ಅತ್ಯಂತ ಮಂಗಳಕರ ಮಾಸವಾಗಿದೆ. ಕಾರ್ತಿಕ ದೀಪವನ್ನು ಹಚ್ಚುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಹಾಗೆ ಮಾಡಿದರೆ ಅಶುಭ ಎಂದು ಪರಿಗಣಿಸಲಾಗುವುದು. ಯಾವ ತಪ್ಪುಗಳನ್ನು ಮಾಡಬಾರದು ಎಂದು ಅರಿಯೋಣ..
ಹಿಂದೂ ಧರ್ಮದಲ್ಲಿ ದೀಪವನ್ನು ಹಚ್ಚುವುದಕ್ಕೆ ಬಹಳ ಪ್ರಾತಿನಿಧ್ಯ ನೀಡಲಾಗಿದೆ. ಪ್ರತಿಯೊಂದು ಹಬ್ಬಕ್ಕೂ ದೀಪಗಳಿರುತ್ತವೆ. ಅದರಲ್ಲಿಯೂ ದೀಪ ಬೆಳಗಿಸಲು ಕಾರ್ತಿಕ ಮಾಸ ಬಹಳ ಪವಿತ್ರವಾದುದು.  
(1 / 6)

ಕಾರ್ತಿಕ ದೀಪ ಹಚ್ಚುವುದಕ್ಕೆ ಸರಿಯಾದ ನಿಯಮವಿದೆ. ಎಲ್ಲರಿಗೂ ಈ ನಿಯಮ ತಿಳಿದಿರುವುದಿಲ್ಲ. ಆದ್ದರಿಂದ ಕೆಲವರು ದೀಪವನ್ನು ಬೆಳಗಿಸುವಾಗ ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪಿನಿಂದಾಗಿ ದೀಪ ಹಚ್ಚಿದರೂ ಅದರ ಸಂಪೂರ್ಣ ಲಾಭ ಸಿಗುವುದಿಲ್ಲ. 
(2 / 6)

ಹಳೆಯ ಬತ್ತಿ-ಎಣ್ಣೆ ಇರುವ ದೀಪ ಬೆಳಗಿಸಬಾರದು. ದೀಪ ಶುಭ್ರವಾಗಿರಬೇಕು. ಹಳೆಯ ದೀಪವನ್ನು ಸಂಪೂರ್ಣವಾಗಿ ನೀರಿನಿಂದ ಸ್ವಚ್ಛಗೊಳಿಸಿ ನಂತರ ಬಳಸಬೇಕು.  
(3 / 6)

ದೀಪವನ್ನು ಬೆಳಗಿಸಲು ಹಿತ್ತಾಳೆ, ತಾಮ್ರ ಮತ್ತು ಮಣ್ಣಿನ ಹಣತೆ ಅಥವಾ ದೀಪವನ್ನು ಮಾತ್ರ ಬಳಸಬೇಕು. ಇದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಇತರ ಲೋಹಗಳಿಂದ ಮಾಡಿದ ದೀಪಗಳನ್ನು ಬಳಸಬೇಡಿ. ಯಾವುದೇ ಪ್ರಯೋಜನವಾಗುವುದಿಲ್ಲ.
(4 / 6)

ಹಿತ್ತಾಳೆಯ ದೀಪದಲ್ಲಿ ದೀಪವನ್ನು ಹಚ್ಚುವಾಗ ಬತ್ತಿ, ತುಪ್ಪ, ಎಣ್ಣೆ, ಅರಿಶಿಣ ಅಕ್ಕಿ ಮತ್ತು ಹೂವಿನ ದಳಗಳನ್ನು ಹಾಕಿ ದೀಪವನ್ನು ಹಚ್ಚಿ. 
(5 / 6)

ಹಾಗೆಯೇ ದೀಪ ಹಚ್ಚಲು ತುಪ್ಪ, ಸಾಸಿವೆ ಎಣ್ಣೆ, ಎಳ್ಳೆಣ್ಣೆ ಬಳಸಬಹುದು. ಅನೇಕರು ಎಲ್ಲಾ ದೇವತೆಗಳ ಮುಂದೆ ವಿವಿಧ ರೀತಿಯ ದೀಪಗಳನ್ನು ಗೊತ್ತಿಲ್ಲದೆಯೇ ಹಚ್ಚುತ್ತಾರೆ. ಕೆಲವು ವಿಶೇಷ ದಿನಗಳು, ದಿನಾಂಕಗಳು ಮತ್ತು ದೇವತೆಗಳಿಗೆ ಮಾತ್ರ ಕೆಲವು ಎಣ್ಣೆ ದೀಪಗಳನ್ನು ಅರ್ಪಿಸಲಾಗುತ್ತದೆ. ಆ ಬಗ್ಗೆ ನಿಖರ ಮಾಹಿತಿ ತಿಳಿದುಕೊಳ್ಳಿ. 
(6 / 6)

    ಹಂಚಿಕೊಳ್ಳಲು ಲೇಖನಗಳು