logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kitchen Hacks: ಕರೆಂಟ್​ ಹೋದಾಗ ಫ್ರಿಡ್ಜ್​​ನಲ್ಲಿರುವ ಆಹಾರ ಪದಾರ್ಥ ವೇಸ್ಟ್ ಆಗಬಾರ್ದು ಅಂದ್ರೆ ಹೀಗೆ ಮಾಡಿ

Kitchen Hacks: ಕರೆಂಟ್​ ಹೋದಾಗ ಫ್ರಿಡ್ಜ್​​ನಲ್ಲಿರುವ ಆಹಾರ ಪದಾರ್ಥ ವೇಸ್ಟ್ ಆಗಬಾರ್ದು ಅಂದ್ರೆ ಹೀಗೆ ಮಾಡಿ

Jan 03, 2024 06:02 PM IST

ಇತ್ತೀಚಿನ ದಿನಗಳಲ್ಲಿ ನಾವು ಫ್ರಿಡ್ಜ್​​ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಕರೆಂಟ್​ ಹೋಯ್ತು ಅಂದ್ರೆ ರೆಫ್ರಿಜರೇಟರ್‌ನಲ್ಲಿರುವ ಆಹಾರ ಪದಾರ್ಥಗಳದ್ದೇ ಚಿಂತೆಯಾಗುತ್ತದೆ. ದೀರ್ಘಕಾಲದ ವರೆಗೆ ಪವರ್​ ಕಟ್​ ಆದ್ರೆ, ಫ್ರಿಡ್ಜ್ ಹಾಳಾದ್ರೆ ಅದರಲ್ಲಿರುವ ಆಹಾರ ಪದಾರ್ಥ ವೇಸ್ಟ್ ಆಗದಂತೆ ಏನು ಮಾಡಬಹುದು ಎಂಬುದಕ್ಕೆ ಇಲ್ಲಿದೆ ಸಲಹೆಗಳು..

  • ಇತ್ತೀಚಿನ ದಿನಗಳಲ್ಲಿ ನಾವು ಫ್ರಿಡ್ಜ್​​ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಕರೆಂಟ್​ ಹೋಯ್ತು ಅಂದ್ರೆ ರೆಫ್ರಿಜರೇಟರ್‌ನಲ್ಲಿರುವ ಆಹಾರ ಪದಾರ್ಥಗಳದ್ದೇ ಚಿಂತೆಯಾಗುತ್ತದೆ. ದೀರ್ಘಕಾಲದ ವರೆಗೆ ಪವರ್​ ಕಟ್​ ಆದ್ರೆ, ಫ್ರಿಡ್ಜ್ ಹಾಳಾದ್ರೆ ಅದರಲ್ಲಿರುವ ಆಹಾರ ಪದಾರ್ಥ ವೇಸ್ಟ್ ಆಗದಂತೆ ಏನು ಮಾಡಬಹುದು ಎಂಬುದಕ್ಕೆ ಇಲ್ಲಿದೆ ಸಲಹೆಗಳು..
1) ನಾಲ್ಕು ಗಂಟೆಗಳ ಅವಧಿಗಿಂತಲೂ ಹೆಚ್ಚು ಸಮಯ ಕರೆಂಟ್​ ಇಲ್ಲವಾದರೆ ಫ್ರಿಡ್ಜ್​​ನಲ್ಲಿರುವ ಕತ್ತರಿಸಿದ ಹಣ್ಣುಗಳು, ಕತ್ತರಿಸಿದ ತರಕಾರಿಗಳು, ಮಾಂಸ, ಮೀನು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸಬಾರದು. ಇದಕ್ಕೆ ಪರಿಹಾರವೆಂದರೆ ದೀರ್ಘಾವಧಿ ವಿದ್ಯುತ್​ ಕಡಿತವಾದಾಗ 4 ಗಂಟೆಗಳ ಒಳಗಾಗಿ ಫ್ರಿಡ್ಜ್​​ನಲ್ಲಿರುವ ಸಾಧ್ಯವಾದಷ್ಟು ಆಹಾರವನ್ನು ಸೇವಿಸಿ ಅಥವಾ ಇತರರಿಗೆ ನೀಡಿ.  
(1 / 5)

2) ಡ್ರೈ ಐಸ್ ಕಂಟೈನರ್​ ಹೊಂದಿದ್ದರೆ ಕೆಲ ಸಮಯದ ವರೆಗೆ ಬೇಗ ಹಾಳಾಗುವ ವಸ್ತುಗಳನ್ನು ಸಂಗ್ರಹಿಸಿಡಬಹುದು.  
(2 / 5)

3) ಆದಷ್ಟು ಹಣ್ಣು ಮತ್ತು ತರಕಾರಿಗಳನ್ನು ಕತ್ತರಿಸದೆ ರೆಫ್ರಿಜರೇಟರ್‌ನಲ್ಲಿ ಇಡಿ. ಇದರಿಂದ ಒಂದು ವೇಳೆ ಫ್ರಿಡ್ಜ್ ಹಾಳಾದರೂ ಹಣ್ಣು ಮತ್ತು ತರಕಾರಿಗಳು ಕೆಲ ದಿನಗಳ ಕಾಲ ಚೆನ್ನಾಗಿ ಇರುತ್ತವೆ. 
(3 / 5)

4) ಕರೆಂಟ್​ ಹೋದಾಗ ಫ್ರಿಡ್ಜ್ ಬಾಗಿಲನ್ನು ಕೆಲ ಸಮಯದ ವರೆಗೆ ತೆಗೆಯಬೇಡಿ. ಆಗ ಆಹಾರ ಪದಾರ್ಥಗಳು ಸ್ವಲ್ಪ ಹೆಚ್ಚು ಸಮಯ ಹಾಳಾಗುವುದಿಲ್ಲ. 
(4 / 5)

5) ರೆಫ್ರಿಜರೇಟರ್‌ಗಳು ಯಾವುದೇ ಸಮಯಕ್ಕಾದರೂ ತಾಂತ್ರಿಕ ಕಾರಣಗಳಿಂದ ಕೆಲಸ ಮಾಡುವುದನ್ನು ನಿಲ್ಲಿಸಬಹುದು. ಹೀಗಾಗಿ ಪೋರ್ಟಬಲ್ ಕೂಲರ್​ ಆಯ್ಕೆಯನ್ನೂ ಇಟ್ಟುಕೊಂಡಿರಿ. ಆದರೆ ಇದು ಕೂಡ ತಾತ್ಕಾಲಿಕ ಪರಿಹಾರ ಅಷ್ಟೆ.  
(5 / 5)

    ಹಂಚಿಕೊಳ್ಳಲು ಲೇಖನಗಳು