logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೆಂಚುರಿಯನ್‌ನಲ್ಲಿ ಸೆಂಚುರಿ ಸಾಧನೆ; ದಕ್ಷಿಣ ಆಫ್ರಿಕಾ ವಿರುದ್ಧ ಕೆಎಲ್ ರಾಹುಲ್ ಮತ್ತೊಂದು ಶತಕ ದಾಖಲೆ

ಸೆಂಚುರಿಯನ್‌ನಲ್ಲಿ ಸೆಂಚುರಿ ಸಾಧನೆ; ದಕ್ಷಿಣ ಆಫ್ರಿಕಾ ವಿರುದ್ಧ ಕೆಎಲ್ ರಾಹುಲ್ ಮತ್ತೊಂದು ಶತಕ ದಾಖಲೆ

Dec 27, 2023 03:14 PM IST

KL Rahul: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಅಬ್ಬರಿಸಿದ್ದಾರೆ. ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಶತಕ ಸಿಡಿಸಿ ಆಸರೆಯಾಗಿದ್ದಾರೆ. ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಎರಡು ವರ್ಷಗಳ ಹಿಂದಷ್ಟೇ ಹರಿಣಗಳ ವಿರುದ್ಧ ಶತಕ ಬಾರಿಸಿದ್ದ ಕನ್ನಡಿಗ, ಇದೀಗ ಮತ್ತದೇ ಮೈದಾನದಲ್ಲಿ ಆಫ್ರಿಕಾಗೆ ಮುಳುವಾಗಿದ್ದಾರೆ.

  • KL Rahul: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಅಬ್ಬರಿಸಿದ್ದಾರೆ. ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಶತಕ ಸಿಡಿಸಿ ಆಸರೆಯಾಗಿದ್ದಾರೆ. ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಎರಡು ವರ್ಷಗಳ ಹಿಂದಷ್ಟೇ ಹರಿಣಗಳ ವಿರುದ್ಧ ಶತಕ ಬಾರಿಸಿದ್ದ ಕನ್ನಡಿಗ, ಇದೀಗ ಮತ್ತದೇ ಮೈದಾನದಲ್ಲಿ ಆಫ್ರಿಕಾಗೆ ಮುಳುವಾಗಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 67.4 ಓವರ್‌ಗಳಲ್ಲಿ 245 ರನ್‌ ಗಳಿಸಿ ಆಲೌಟ್‌ ಆಗಿದೆ. ಭಾರತದ ಪರ ಕೆಎಲ್‌ ರಾಹುಲ್ 137 ಎಸೆತಗಳಲ್ಲಿ 101 ರನ್‌ ಗಳಿಸಿ ತಂಡದ ಪರ ಅಧಿಕ ರನ್‌ ಗಳಿಸಿದ ಆಟಗಾರನಾದರು. ಈ ಶತಕದೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 8ನೇ ಸೆಂಚುರಿ ಗಳಿಸಿದರು.
(1 / 7)

ಪಂದ್ಯದ ಮೊದಲ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ಬೌಲಿಂಗ್‌ ದಾಳಿಗೆ ಉತ್ತಮ ಪ್ರತಿರೋಧ ಒಡ್ಡಿದ್ದ ಕೆಎಲ್ ರಾಹುಲ್‌, ಏಕಾಂಗಿಯಾಗಿ ಅಬ್ಬರಿಸಿ ಅಜೇಯ 70 ರನ್ ಗಳಿಸಿದರು. ಎರಡನೇ ದಿನವಾದ ಇಂದು ಮತ್ತೆ ಬ್ಯಾಟಿಂಗ್‌ ಮುಂದುವರೆಸಿ ಶತಕ ಸಿಡಿಸಿದರು.
(2 / 7)

ಕೇವಲ 133 ಎಸೆತಗಳಲ್ಲಿ ಮೂರಂಕಿ ಮೊತ್ತ ತಲುಪಿದ ರಾಹುಲ್‌, ಸೆಂಚುರಿಯನ್‌ ಮೈದಾನದಲ್ಲಿ ಒಂದಕ್ಕಿಂತ ಹೆಚ್ಚು ಶತಕ ಸಿಡಿಸಿದ ಮೊದಲನೇ ವಿದೇಶಿ ಬ್ಯಾಟರ್‌ ಎನಿಸಿಕೊಂಡು. 2021/22ರ ಪ್ರವಾಸದ ವೇಳೆ ರಾಹುಲ್‌ ಇದೇ ಮೈದಾನದಲ್ಲಿ 260 ಎಸೆತಗಳಲ್ಲಿ 123 ರನ್‌ ಗಳಿಸಿದ್ದರು.
(3 / 7)

ಇದೇ ವೇಳೆ ದಕ್ಷಿಣ ಆಫ್ರಿಕಾದಲ್ಲಿ ಒಂದಕ್ಕಿಂತ ಹೆಚ್ಚು ಶತಕ ಸಿಡಿಸಿದ ಏಷ್ಯಾದ ಐದನೇ ಬ್ಯಾಟರ್‌ ಎಂಬ ದಾಖಲೆ ಬರೆದರು. ದಿಗ್ಗಜ ಬ್ಯಾಟೃ ಸಚಿನ್‌ ತೆಂಡೂಲ್ಕರ್‌ ಒಟ್ಟು 5 ಶತಕ ಸಿಡಿಸಿದ್ದಾರೆ.
(4 / 7)

ಉಳಿದಂತೆ ಅಜರ್‌ ಮಹ್ಮೂದ್‌, ಟಿ ಸಮರವೀರ, ವಿರಾಟ್‌ ಕೊಹ್ಲಿ ತಲಾ ಇಎರಡು ಸೆಂಚುರಿ ಬಾರಿಸಿದ್ದಾರೆ. ಇದೀಗ ರಾಹುಲ್‌ ಕೂಡಾ ಇ ಪಟ್ಟಿ ಸೇರಿಕೊಂಡಿದ್ದಾರೆ.
(5 / 7)

ಕೊಯೆಟ್ಜಿ ಎಸೆತಕ್ಕೆ ಸಿಕ್ಸರ್‌ ಸಿಡಿಸುವ ಮೂಲಕ ಶತಕ ಪೂರೈಸಿದ ರಾಹುಲ್‌, ಆ ಬಳಿಕ ಯಾವುದೇ ರನ್‌ ಗಳಿಸಲಿಲ್ಲ. ಅಂತಿಮವಾಗಿ ಅವರು 137 ಎಸೆತ ಎದುರಿಸಿ ಬರ್ಗರ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು.
(6 / 7)

31 ವರ್ಷ ಬ್ಯಾಟರ್‌, ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದಾರೆ. ಎಂಟು ವರ್ಷಗಳ ಹಿಂದೆ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಯಶಸ್ವಿಯಾಗಿದ್ದಾರೆ.
(7 / 7)
31 ವರ್ಷ ಬ್ಯಾಟರ್‌, ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದಾರೆ. ಎಂಟು ವರ್ಷಗಳ ಹಿಂದೆ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಯಶಸ್ವಿಯಾಗಿದ್ದಾರೆ.(REUTERS)

    ಹಂಚಿಕೊಳ್ಳಲು ಲೇಖನಗಳು