logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Passport Ranking: ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ ಯಾವ ದೇಶದ್ದು? ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

Passport Ranking: ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ ಯಾವ ದೇಶದ್ದು? ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

Jan 11, 2023 08:02 PM IST

ವಿಶ್ವದ ಅತ್ಯುತ್ತಮ ಪಾಸ್‌ಪೋರ್ಟ್ ಶ್ರೇಯಾಂಕ: ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು, ವೀಸಾ ಇಲ್ಲದೆ ಒಟ್ಟು 59 ದೇಶಗಳಿಗೆ ಪ್ರಯಾಣಿಸಬಹುದು. (2022ರಲ್ಲಿ ಈ ಸಂಖ್ಯೆ 60 ಆಗಿತ್ತು). ಮೌರಿಟಾನಿಯನ್ ಮತ್ತು ಉಜ್ಬೇಕಿಸ್ತಾನಿ ಪಾಸ್‌ಪೋರ್ಟ್‌ಗಳು ಕೂಡ ಭಾರತದಷ್ಟೇ ಬಲಿಷ್ಠವಾಗಿವೆ. ಹಾಗಿದ್ದರೆ ವಿಶ್ವದ ಅತ್ಯಂತ ಬಲಿಷ್ಠ ಪಾಸ್‌ಪೋರ್ಟ್‌ ಹೊಂದಿರುವ ದೇಶ  ಯಾವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..

  • ವಿಶ್ವದ ಅತ್ಯುತ್ತಮ ಪಾಸ್‌ಪೋರ್ಟ್ ಶ್ರೇಯಾಂಕ: ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು, ವೀಸಾ ಇಲ್ಲದೆ ಒಟ್ಟು 59 ದೇಶಗಳಿಗೆ ಪ್ರಯಾಣಿಸಬಹುದು. (2022ರಲ್ಲಿ ಈ ಸಂಖ್ಯೆ 60 ಆಗಿತ್ತು). ಮೌರಿಟಾನಿಯನ್ ಮತ್ತು ಉಜ್ಬೇಕಿಸ್ತಾನಿ ಪಾಸ್‌ಪೋರ್ಟ್‌ಗಳು ಕೂಡ ಭಾರತದಷ್ಟೇ ಬಲಿಷ್ಠವಾಗಿವೆ. ಹಾಗಿದ್ದರೆ ವಿಶ್ವದ ಅತ್ಯಂತ ಬಲಿಷ್ಠ ಪಾಸ್‌ಪೋರ್ಟ್‌ ಹೊಂದಿರುವ ದೇಶ  ಯಾವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..
ಜಪಾನ್ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಹೊಂದಿದೆ. ಏಕೆಂದರೆ ಜಪಾನ್‌ನ ಪಾಸ್‌ಪೋರ್ಟ್ 193 ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ನೀಡುತ್ತದೆ. ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2023ರಲ್ಲಿ, ಜಪಾನ್ ವಿಶ್ವದ ಅತ್ಯುತ್ತಮ ಹಾಗೂ ಬಲಿಷ್ಠ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. (ಸಾಂದರ್ಭಿಕ ಚಿತ್ರ)
(1 / 5)
ಜಪಾನ್ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಹೊಂದಿದೆ. ಏಕೆಂದರೆ ಜಪಾನ್‌ನ ಪಾಸ್‌ಪೋರ್ಟ್ 193 ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ನೀಡುತ್ತದೆ. ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2023ರಲ್ಲಿ, ಜಪಾನ್ ವಿಶ್ವದ ಅತ್ಯುತ್ತಮ ಹಾಗೂ ಬಲಿಷ್ಠ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. (ಸಾಂದರ್ಭಿಕ ಚಿತ್ರ)(Pixabay)
ಜಪಾನ್ ನಂತರದ ಸ್ಥಾನದಲ್ಲಿ ಎರಡು ಏಷ್ಯಾದ ದೇಶಗಳಾದ  ಸಿಂಗಾಪುರ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಇವೆ. ಈ ಎರಡೂ ದೇಶಗಳ ಪಾಸ್‌ಪೋರ್ಟ್ 192 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುತ್ತದೆ.
(2 / 5)
ಜಪಾನ್ ನಂತರದ ಸ್ಥಾನದಲ್ಲಿ ಎರಡು ಏಷ್ಯಾದ ದೇಶಗಳಾದ  ಸಿಂಗಾಪುರ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಇವೆ. ಈ ಎರಡೂ ದೇಶಗಳ ಪಾಸ್‌ಪೋರ್ಟ್ 192 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುತ್ತದೆ.(Mint)
3ನೇ ಸ್ಥಾನದಲ್ಲಿ ಜರ್ಮನಿ ಮತ್ತು ಸ್ಪೇನ್ ರಾಷ್ಟ್ರಗಳಿವೆ. ಈ ಎರಡು ಯುರೋಪಿಯನ್ ರಾಷ್ಟ್ರಗಳ ಪಾಸ್‌ಪೋರ್ಟ್‌ಗಳು, 190 ದೇಶಗಳಿಗೆ ವೀಸಾ ಮುಕ್ತ ಪ್ರಯಾಣವನ್ನು ಅನುಮತಿಸುತ್ತವೆ.
(3 / 5)
3ನೇ ಸ್ಥಾನದಲ್ಲಿ ಜರ್ಮನಿ ಮತ್ತು ಸ್ಪೇನ್ ರಾಷ್ಟ್ರಗಳಿವೆ. ಈ ಎರಡು ಯುರೋಪಿಯನ್ ರಾಷ್ಟ್ರಗಳ ಪಾಸ್‌ಪೋರ್ಟ್‌ಗಳು, 190 ದೇಶಗಳಿಗೆ ವೀಸಾ ಮುಕ್ತ ಪ್ರಯಾಣವನ್ನು ಅನುಮತಿಸುತ್ತವೆ.(Mint)
ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ ಒಟ್ಟು 59 ದೇಶಗಳಿಗೆ ಪ್ರಯಾಣಿಸಬಹುದು. (2022ರಲ್ಲಿ ಈ ಸಂಖ್ಯೆ 60 ಆಗಿತ್ತು). ಮೌರಿಟಾನಿಯನ್ ಮತ್ತು ಉಜ್ಬೇಕಿಸ್ತಾನಿ ಪಾಸ್‌ಪೋರ್ಟ್‌ಗಳು ಕೂಡ ಭಾರತದ ಪಾಸ್‌ಪೋರ್ಟ್‌ನಷ್ಟೇ ಪ್ರಬಲವಾಗಿವೆ.
(4 / 5)
ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ ಒಟ್ಟು 59 ದೇಶಗಳಿಗೆ ಪ್ರಯಾಣಿಸಬಹುದು. (2022ರಲ್ಲಿ ಈ ಸಂಖ್ಯೆ 60 ಆಗಿತ್ತು). ಮೌರಿಟಾನಿಯನ್ ಮತ್ತು ಉಜ್ಬೇಕಿಸ್ತಾನಿ ಪಾಸ್‌ಪೋರ್ಟ್‌ಗಳು ಕೂಡ ಭಾರತದ ಪಾಸ್‌ಪೋರ್ಟ್‌ನಷ್ಟೇ ಪ್ರಬಲವಾಗಿವೆ.(HT_PRINT)
ಆದರೆ ಭಾರತವು ಈ ಬಾರಿ 2 ಸ್ಥಾನ ಮೇಲಕ್ಕೇರಿದ್ದು, ಈ ಹಿಂದೆ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಭಾರತ 87ನೇ ಸ್ಥಾನದಲ್ಲಿತ್ತು. ಈಗ ಭಾರತ 85ನೇ ಸ್ಥಾನದಲ್ಲಿದೆ. 
(5 / 5)
ಆದರೆ ಭಾರತವು ಈ ಬಾರಿ 2 ಸ್ಥಾನ ಮೇಲಕ್ಕೇರಿದ್ದು, ಈ ಹಿಂದೆ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಭಾರತ 87ನೇ ಸ್ಥಾನದಲ್ಲಿತ್ತು. ಈಗ ಭಾರತ 85ನೇ ಸ್ಥಾನದಲ್ಲಿದೆ. (Hindustan times)

    ಹಂಚಿಕೊಳ್ಳಲು ಲೇಖನಗಳು