logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shalini: ಡಿವೋರ್ಸ್‌ಗೂ ಫೋಟೋಶೂಟ್‌; ಪತಿಯ ಫೋಟೋ ಹರಿದು, ತುಳಿದು ವಿಚ್ಛೇದನವನ್ನು ಸಂಭ್ರಮಿಸಿದ ತಮಿಳು ನಟಿ ಶಾಲಿನಿ

Shalini: ಡಿವೋರ್ಸ್‌ಗೂ ಫೋಟೋಶೂಟ್‌; ಪತಿಯ ಫೋಟೋ ಹರಿದು, ತುಳಿದು ವಿಚ್ಛೇದನವನ್ನು ಸಂಭ್ರಮಿಸಿದ ತಮಿಳು ನಟಿ ಶಾಲಿನಿ

May 03, 2023 06:19 AM IST

ಈತಂತೂ ಫೋಟೋಶೂಟ್‌ ಕ್ರೇಜ್‌ ಬಹಳ ಹೆಚ್ಚುತ್ತಿದೆ. ಮದುವೆ, ಮುಂಜಿ, ನಿಶ್ಚಿತಾರ್ಥ ಕೆಲವೊಮ್ಮೆ ಸುಮ್ಮನೆ ಖುಷಿಗೆ ಕೂಡಾ ಫೋಟೋಶೂಟ್‌ ಮಾಡಿಸಲಾಗುತ್ತಿದೆ. ಇದೀಗ ತಮಿಳು ನಟಿಯೊಬ್ಬರು ಫೋಟೋಶೂಟ್‌ ಮಾಡುವ ಮೂಲಕ ತಮ್ಮ ಡಿವೋರ್ಸ್‌ ಸಂಭ್ರಮಿಸಿದ್ದಾರೆ. 

ತಮಿಳು ನಟಿ ಶಾಲಿನಿ ಇತ್ತೀಚೆಗೆ ಪತಿಯಿಂದ ದೂರಾಗಿದ್ದರು. ಆದರೆ ಎಲ್ಲರಂತೆ ಅಳುತ್ತಾ ಕೂರದೆ ನೋವಿನಿಂದ ಹೊರ ಬಂದು ಫೋಟೋ ಶೂಟ್‌ ಮಾಡಿಸಿ ಸಂಭ್ರಮಿಸಿದ್ದಾರೆ. 
(1 / 10)
ತಮಿಳು ನಟಿ ಶಾಲಿನಿ ಇತ್ತೀಚೆಗೆ ಪತಿಯಿಂದ ದೂರಾಗಿದ್ದರು. ಆದರೆ ಎಲ್ಲರಂತೆ ಅಳುತ್ತಾ ಕೂರದೆ ನೋವಿನಿಂದ ಹೊರ ಬಂದು ಫೋಟೋ ಶೂಟ್‌ ಮಾಡಿಸಿ ಸಂಭ್ರಮಿಸಿದ್ದಾರೆ. (PC: shalu2626 Instagram)
ಈ ಫೋಟೋಗಳನ್ನು ಶಾಲಿನಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ''ಮೂಕರೋದನೆ ಅನುಭವಿಸುತ್ತಿರುವ ಮಹಿಳೆಯರಿಗೆ ವಿಚ್ಛೇದಿತ ಮಹಿಳೆ ನೀಡುತ್ತಿರುವ ಸಂದೇಶ'' ಎಂದು ಶಾಲಿನಿ ಬರೆದುಕೊಂಡಿದ್ದಾರೆ. 
(2 / 10)

''ಕೆಟ್ಟ ದಾಂಪತ್ಯದಿಂದ ಹೊರ ಬರುವುದು ತಪ್ಪೇನಲ್ಲ. ಹಿಂದಿನದನ್ನು ಮರೆತು ನಿಮ್ಮ ಮಕ್ಕಳ ಭವಿಷ್ಯದ ಕಡೆಗೆ ಗಮನ ನೀಡಿ'' ಎಂದು ಶಾಲಿನಿ ಬರೆದುಕೊಂಡಿದ್ದಾರೆ. 
(3 / 10)

ನನಗೆ 99 ಸಮಸ್ಯೆಗಳಿವೆ. ಆದರೆ ಅದರಲ್ಲಿ ಪತಿಯ ಸಮಸ್ಯೆ ಇಲ್ಲ ಎಂಬ ಬೋರ್ಡ್‌ ಹಿಡಿದು ಶಾಲಿನಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮತ್ತೊಂದು ಕೈನಲ್ಲಿ ವೈನ್‌ ಬಾಟಲ್‌ ಹಿಡಿದಿದ್ದಾರೆ. 
(4 / 10)

ಶಾಲಿನಿ 2020 ರಲ್ಲಿ ರಿಯಾಜ್‌ ಎಂಬುವರನ್ನು ಮದುವೆಯಾಗಿದ್ದರು. ಈ ದಂಪತಿಗೆ ರಿಯಾ ಎಂಬ ಮಗಳಿದ್ದಾಳೆ. ಮದುವೆ ಹೊಸತರಲ್ಲಿ ಎಲ್ಲವೂ ಸರಿ ಇತ್ತು. ಆದರೆ ನಂತರ ಶಾಲಿನಿ ಪತಿಯಿಂದ ದೈಹಿಕ, ಮಾನಸಿಕ ಹಿಂಸೆ ಅನುಭವಿಸಿದ್ದಾರೆ. ಕೊನೆಗೆ ಇದು ವಿಚ್ಛೇದನದಲ್ಲಿ ಕೊನೆ ಆಗಿದೆ. 
(5 / 10)

ಶಾಲಿನಿ ತಮಿಳಿನ 'ಮುಲ್ಲುಮ ಮರಲುಂ' ಧಾರಾವಾಹಿ ಮೂಲಕ ಕಿರುತೆರೆ ಪ್ರಿಯರಿಗೆ ಪರಿಚಯವಾಗಿದ್ದರು. ಇತ್ತೀಚೆಗೆ ಅವರು ತಮಿಳಿನ ಸೂಪರ್‌ ಮಾಮ್‌ ಕಾರ್ಯಕ್ರಮದಲ್ಲಿ ಮಗಳೊಂದಿಗೆ ಕಾಣಿಸಿಕೊಂಡಿದ್ದರು. 
(6 / 10)

ಮದುವೆ ದಿನ ತೆಗೆಸಿದ ಪತಿ ರಿಯಾಜ್‌ ಜೊತೆಗಿನ ಫೋಟೋ ಹರಿಯುತ್ತಿರುವ ಶಾಲಿನಿ 
(7 / 10)
ಮದುವೆ ದಿನ ತೆಗೆಸಿದ ಪತಿ ರಿಯಾಜ್‌ ಜೊತೆಗಿನ ಫೋಟೋ ಹರಿಯುತ್ತಿರುವ ಶಾಲಿನಿ 
ಪುತ್ರಿ ರಿಯಾ ಜೊತೆ ಶಾಲಿನಿ. ನಟಿಯ ಫೋಟೋಶೂಟ್‌ಗೆ ಕೆಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಬೆಂಬಲ ಸೂಚಿಸಿದ್ದಾರೆ. 
(8 / 10)

ಪತಿಯಿಂದ ಮಾನಸಿಕ ದೈಹಿಕ ಹಿಂಸೆ ಅನುಭವಿಸಿರುವ ಶಾಲಿನಿ ಅವರಂತೆ ನೊಂದ ಇತರ ಮಹಿಳೆಯರಿಗೆ ಧೈರ್ಯ ತುಂಬಿದ್ದಾರೆ ಎಂದು ಹಲವರು ಶಾಲಿನಿ ಧೈರ್ಯವನ್ನು ಕೊಂಡಾಡಿದ್ದಾರೆ. 
(9 / 10)

ಒಟ್ಟಿನಲ್ಲಿ ಶಾಲಿನಿ ಡಿವೋರ್ಸ್‌ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು ಹಾಟ್‌ ಟಾಪಿಕ್‌ ಆಗಿರುವುದಂತೂ ನಿಜ. 
(10 / 10)

    ಹಂಚಿಕೊಳ್ಳಲು ಲೇಖನಗಳು