logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ktm 890 Adventure R: ಕೆಟಿಎಂ ಬೈಕ್‌ ಪ್ರಿಯರ ಗಮನಸೆಳೆದ ಕೆಟಿಎಂ 890 ಅಡ್ವೆಂಚರ್‌ ಆರ್‌, ಈ ಬೈಕ್‌ ಸೂಪರ್‌ ಗುರು!

KTM 890 Adventure R: ಕೆಟಿಎಂ ಬೈಕ್‌ ಪ್ರಿಯರ ಗಮನಸೆಳೆದ ಕೆಟಿಎಂ 890 ಅಡ್ವೆಂಚರ್‌ ಆರ್‌, ಈ ಬೈಕ್‌ ಸೂಪರ್‌ ಗುರು!

Dec 04, 2022 04:41 PM IST

ಗೋವಾದಲ್ಲಿ ಕಳೆದ ಎರಡು ದಿನಗಳಲ್ಲಿ ನಡೆದ India Bike Week 2022ನಲ್ಲಿ ಹಲವು ಬೈಕ್‌ಗಳು ಬೈಕ್‌ ಪ್ರಿಯರ ಮನಸೂರೆಗೊಂಡಿವೆ. ಅವುಗಳಲ್ಲಿ ಆಸ್ಟ್ರೀಯಾದ ಕೆಟಿಎಂ ಕಂಪನಿಯ KTM 890 Adventure R ಬೈಕ್‌ ಪ್ರಮುಖವಾಗಿದೆ. ಈ ಬೈಕ್‌ನ ಕುರಿತು ಹೆಚ್ಚಿನ ವಿವರ ಇಲ್ಲಿದೆ.

  • ಗೋವಾದಲ್ಲಿ ಕಳೆದ ಎರಡು ದಿನಗಳಲ್ಲಿ ನಡೆದ India Bike Week 2022ನಲ್ಲಿ ಹಲವು ಬೈಕ್‌ಗಳು ಬೈಕ್‌ ಪ್ರಿಯರ ಮನಸೂರೆಗೊಂಡಿವೆ. ಅವುಗಳಲ್ಲಿ ಆಸ್ಟ್ರೀಯಾದ ಕೆಟಿಎಂ ಕಂಪನಿಯ KTM 890 Adventure R ಬೈಕ್‌ ಪ್ರಮುಖವಾಗಿದೆ. ಈ ಬೈಕ್‌ನ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ನೂತನ ಕೆಟಿಎಂ 890 ಅಡ್ವೆಂಚರ್‌ ಆರ್‌ ಪವರ್‌ಫುಲ್‌ ಬೈಕಾಗಿದ್ದು, ಟ್ರಯಂಪ್‌ ಟೈಗರ್‌ 900, ಡುಕಾಟಿ ಮಲ್ಟಿಸ್ಟ್ರಡಾ ವಿ2 ಸೇರಿದಂತೆ ಈ ಶ್ರೇಣಿಯ ಇತರೆ ಬೈಕ್‌ಗಳ ಜತೆ ಪೈಪೋಟಿ ನಡೆಸಲಿದೆ. ಆದರೆ, ಕೆಟಿಎಂ 890 ಅಡ್ವೆಂಚರ್‌ ಆರ್‌ ಯಾವಾಗ ಭಾರತದ ರಸ್ತೆಗೆ ಇಳಿಯಲಿದೆ ಎಂದು ಇನ್ನೂ ಖಚಿತ ಮಾಹಿತಿ ಹೊರಬಿದ್ದಿಲ್ಲ.
(1 / 7)

ಎತ್ತರದ ವೈಂಡ್‌ಸ್ಕ್ರೀನ್‌ ಜತೆಗೆ ಆಕರ್ಷಕ ಎಲ್‌ಇಡಿ ಹೆಡ್‌ಲ್ಯಾಂಪ್‌ನಿಂದ ಈ ಬೈಕ್‌ ಆಕರ್ಷಕವಾಗಿ ಕಾಣಿಸುತ್ತದೆ. ಈ ಅಡ್ವೆಂಚರ್‌ ಬೈಕ್‌ನಲ್ಲಿ ಹೆಚ್ಚುವರಿ ಸುರಕ್ಷತೆಗೆ ಹ್ಯಾಂಡಲ್‌ಬಾರ್‌ ಗಾರ್ಡ್‌ಗಳು ಮತ್ತು ಬೆಲ್ಲಿ ಪ್ಯಾನ್‌ಗಳಿವೆ.
(2 / 7)

ದುರ್ಗಮ ದಾರಿಗಳಲ್ಲಿಯೂ ನಿರಾಳವಾಗಿ ಸಂಚರಿಸಲು ಅನುವಾಗುವಂತೆ ಈ ಬೈಕ್‌ನಲ್ಲಿ ಸೂಕ್ತವಾದ ಮಡ್‌ಗಾರ್ಡ್‌ ಮತ್ತು ಎಗ್ಸಾಸ್ಟ್‌ ವ್ಯವಸ್ಥೆಯಿದೆ. ವೈರ್‌ ಸ್ಪೋಕ್ಡ್‌ ವೀಲ್‌ಗಳಿಂದಾಗಿ ರಸ್ತೆಯಲ್ಲಿ ಉತ್ತಮ ಹಿಡಿತ ನಿರೀಕ್ಷಿಸಬಹುದು.
(3 / 7)

ಕೆಟಿಎಂ 890 ಅಡ್ವೆಂಚರ್‌ ಆರ್‌ನಲ್ಲಿ 889 ಸಿಸಿಎ ಎಲ್‌ಸಿ8ಸಿ ಪ್ಯಾರೆಲ್‌ ಟ್ವಿನ್‌ ಮೋಟಾರ್‌ ಎಂಜಿನ್‌ ಇದೆ. ಇದು 8 ಸಾವಿರ ಆವರ್ತನಕ್ಕೆ 103 ಬಿಎಚ್‌ಪಿ ಪವರ್‌ ಮತ್ತು 6,500 ಆವರ್ತನಕ್ಕೆ 100 ಎನ್‌ಎಂ ಪೀಕ್‌ ಟಾರ್ಕ್‌ ಒದಗಿಸುತ್ತದೆ.
(4 / 7)

ಈ ಎಂಜಿನ್‌ಗೆ ಆರು ಸ್ಪೀಡ್‌ನ ಗಿಯರ್‌ಬಾಕ್ಸ್‌ ಜತೆಯಾಗಿದೆ. ಈ ಬೈಕ್‌ನಲ್ಲಿ ಹಲವು ಅತ್ಯಾಧುನಿಕ ತಂತ್ರಜ್ಞಾನಗಳೂ ಇವೆ.
(5 / 7)

9.3 MP ಎಬಿಸೆಸ್‌ನಿಂದಾಗಿ ಆಫ್‌ರೋಡ್‌ ಮತ್ತು ಕಾರ್ನರ್‌ನಲ್ಲಿ ಸುಲಲಿತವಾಗಿ ಚಾಲನೆ ಮಾಡಬಹುದು. ರ್ಯಾಲಿ ಮೋಡ್‌ನಲ್ಲಿ ರೈಡ್‌ ಮಾಡಬಹುದಾಗಿದೆ.
(6 / 7)

ಉಳಿದಂತೆ ಹೊಸ ಟಿಎಫ್‌ಟಿ ಸ್ಕ್ರೀನ್‌ ಇದ್ದು, ರೈಡ್‌ ಮೋಡ್‌ಗೆ ತಕ್ಕಂತೆ ಮಾಹಿತಿಗಳನ್ನು ನೋಡಬಹುದು. ಬ್ಲೂಟೂಥ್‌ ಕನೆಕ್ಟಿವೆಟಿಯೂ ಇದೆ. ಭವಿಷ್ಯದಲ್ಲಿ ಈ ಬೈಕ್‌ ಭಾರತದ ರಸ್ತೆಗಿಳಿಯುವ ಸೂಚನೆಯನ್ನು ಕಂಪನಿ ಈ ಬೈಕ್‌ ವೀಕ್‌ನಲ್ಲಿ ಪ್ರದರ್ಶಿಸುವ ಮೂಲಕ ನೀಡಿದೆ.
(7 / 7)

    ಹಂಚಿಕೊಳ್ಳಲು ಲೇಖನಗಳು