logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Family Politics: ಕರ್ನಾಟಕದ ಸಚಿವ, ಶಾಸಕರ ಮಕ್ಕಳು, ಸಂಬಂಧಿಗೆ ಬಹುತೇಕ ಕಾಂಗ್ರೆಸ್‌ ಟಿಕೆಟ್‌ ಪಕ್ಕಾ, ಯಾರಿದ್ದಾರೆ ಪಟ್ಟಿಯಲ್ಲಿ? Photos

Family Politics: ಕರ್ನಾಟಕದ ಸಚಿವ, ಶಾಸಕರ ಮಕ್ಕಳು, ಸಂಬಂಧಿಗೆ ಬಹುತೇಕ ಕಾಂಗ್ರೆಸ್‌ ಟಿಕೆಟ್‌ ಪಕ್ಕಾ, ಯಾರಿದ್ದಾರೆ ಪಟ್ಟಿಯಲ್ಲಿ? Photos

Mar 20, 2024 04:44 PM IST

 ಕುಟುಂಬವಿಲ್ಲದೇ ರಾಜಕಾರಣವಿಲ್ಲ. ಎಲ್ಲಾ ಪಕ್ಷಗಳು ಇದಕ್ಕೆ ತಲೆಬಾಗಿವೆ. ಅದರಲ್ಲೂ ಹಳೆಯ ಪಕ್ಷ ಕಾಂಗ್ರೆಸ್‌ನಲ್ಲಿ ಇದು ಕೊಂಚ ಹೆಚ್ಚೇ. ಈ ಬಾರಿ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ತಮಗೆ ಸ್ಪರ್ಧಿಸಿ ಎಂದು ಹೇಳಿದರೆ ಮಕ್ಕಳಿಗೆ ಅವಕಾಶ ಕೊಡಿ ಎಂದು ಹಲವು ಸಚಿವರು ಟಿಕೆಟ್‌ ಪಡೆಯುತ್ತಿದ್ದಾರೆ. ನಾಯಕರ ಸಂಬಂಧಿಕರೂ ಕಣಕ್ಕಿಳಿಯುತ್ತಿದ್ದಾರೆ. ಇಲ್ಲಿದೆ ಅದರ ವಿವರ.

ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌  ಪುತ್ರ ಮೃಣಾಲ್‌ ಹೆಬ್ಬಾಳಕರ್‌ ಅವರು ಬೆಳಗಾವಿ ಕ್ಷೇತ್ರದಿಂದ ಲೋಕಸಭೆ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಈ ಹಿಂದೆ ಲಕ್ಷ್ಮಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು. ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಹಾಲಿ ಪರಿಷತ್‌ ಸದಸ್ಯ,
(1 / 10)

ಬೆಳಗಾವಿ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಅವರು ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗುವರು. ಸತೀಶ್‌ ತಮ್ಮಿಬ್ಬರು ಮಕ್ಕಳಿಗೆ ರಾಹುಲ್‌ ಹಾಗೂ ಪ್ರಿಯಾಂಕ ಎನ್ನುವ ಹೆಸರಿಟ್ಟಿದ್ದಾರೆ. ಈಗಾಗಲೇ ಸತೀಶ್‌ ಮೂವರು ಸಹೋದರರು ಶಾಸಕರು. 
(2 / 10)

ರಾಮನಗರ ಉಸ್ತುವಾರಿ ಸಚಿವ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್‌ ಸಿಗಲಿದೆ. ಒಮ್ಮೆ ಶಾಸಕರಾಗಿದ್ದ ಸೌಮ್ಯ ಈ ಬಾರಿ ಕಡಿಮೆ ಅಂತರದಲ್ಲಿ ಜಯನಗರ ಕ್ಷೇತ್ರದಲ್ಲಿ ಸೋತಿದ್ದರು.
(3 / 10)

ಹಾವೇರಿ ಜಿಲ್ಲಾ ಉಸ್ತುವಾರಿ ಹಾಗೂ ಸಕ್ಕರೆ, ಜವಳಿ, ಎಪಿಎಂಸಿ ಸಚಿವ ಶಿವಾನಂದಪಾಟೀಲ್‌ ಅವರ ಪುತ್ರಿ ಸಂಯುಕ್ತಾ ಪಾಟೀಲ್‌ ಅವರಿಗೆ ಬಾಗಲಕೋಟೆ ಕ್ಷೇತ್ರದ ಟಿಕೆಟ್‌ ಅಂತಿಮವಾಗಿದೆ ಎನ್ನಲಾಗುತ್ತಿದೆ. ವಿಜಯಪುರ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿರುವ ಸಂಯುಕ್ತ ಪಾಟೀಲ್‌ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. 
(4 / 10)

ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಸಾಗರ್‌ ಖಂಡ್ರೆ ಹೆಸರುಬೀದರ್‌ ಕ್ಷೇತ್ರಕ್ಕೆ ಪ್ರಬಲವಾಗಿದೆ. ಈ ಹಿಂದೆ ಈಶ್ವರ ಖಂಡ್ರೆ ಇದೇ ಕ್ಷೇತ್ರದಿಂದ ಲೋಕಸಭೆ ಸ್ಥಾನಕ್ಕೆ ನಿಂತು ಸೋತವರು. ಈಶ್ವರ್‌ ಅವರ ತಂದೆ ಭೀಮಣ್ಣ ಖಂಡ್ರೆ ಕೂಡ ಹಿರಿಯ ನಾಯಕರು ಹಾಗೂ ಸಚಿವರಾಗಿದ್ದವರು.
(5 / 10)

ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್‌ ಬೋಸ್‌ ಅವರಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಸಿಗಬಹುದು. ಇದೇ ಕ್ಷೇತ್ರದಲ್ಲಿ ಮೂರು ದಶಕದ ಹಿಂದೆ ಮಹದೇವಪ್ಪ ಸೋತಿದ್ದರು. 
(6 / 10)

ಸಂಡೂರು ಶಾಸಕ ಹಾಗೂ ಮಾಜಿ ಸಚಿವ ಇ.ತುಕಾರಾಂ ಅವರ ಪುತ್ರಿ ಚೈತನ್ಯ ತುಕಾರಾಂ ಅವರಿಗೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಸಿಗುವ ಸಾಧ್ಯತೆಗಳು ಹೆಚ್ಚಿವೆ. 
(7 / 10)

ಕಲಬುರಗಿಯಲ್ಲಿ ಎರಡು ಬಾರಿ ಸಂಸದರಾಗಿ ನಂತರ ಸೋತು ರಾಜ್ಯಸಭಾ ಸದಸ್ಯರಾಗಿರುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್‌ ನೀಡುವುದು ಅಂತಿಮವಾಗಿದೆ. ರಾಧಾಕೃಷ್ಣ ಅವರು ಅಧಿಕಾರಿಯಾಗಿ ಹೆಸರು ಮಾಡಿದವರು.
(8 / 10)

ಕೊಪ್ಪಳದಲ್ಲಿ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಸಹೋದರ ರಾಜಶೇಖರ ಹಿಟ್ನಾಳ ಕಾಂಗ್ರೆಸ್‌ ಅಭ್ಯರ್ಥಿಯಾಗುವರು. ಕಳೆದ ಬಾರಿಯೂ ಅವರೇ ಸ್ಪರ್ಧಿಸಿ ಸೋತಿದ್ದರು. ಹತ್ತು ವರ್ಷದ ಹಿಂದೆ ಇವರ ತಂದೆ ಬಸವರಾಜ ಹಿಟ್ನಾಳ ಕೂಡ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು.
(9 / 10)

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಹಾಗೂ ವಿಧಾನಪರಿಷತ್‌ ಸದಸ್ಯ ಎಂ.ಆರ್.ಸೀತಾರಾಂ ಅವರ ಪುತ್ರ, ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್‌ ಸಿಗಲಿದೆ. 
(10 / 10)

    ಹಂಚಿಕೊಳ್ಳಲು ಲೇಖನಗಳು