logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Krs Dam: ಮಳೆಗಾಲದಲ್ಲೇ ಖಾಲಿ ಮೈದಾನದಂತಾಗಿದೆ ಕೆಆರ್‌ಎಸ್‌ ಜಲಾಶಯ: ಬೇಸಿಗೆಯ ಭೀಕರತೆಗೆ ಮುನ್ನೋಟ

KRS Dam: ಮಳೆಗಾಲದಲ್ಲೇ ಖಾಲಿ ಮೈದಾನದಂತಾಗಿದೆ ಕೆಆರ್‌ಎಸ್‌ ಜಲಾಶಯ: ಬೇಸಿಗೆಯ ಭೀಕರತೆಗೆ ಮುನ್ನೋಟ

Oct 03, 2023 09:20 AM IST

ಕಾವೇರಿ ಕೊಳ್ಳದ ಪ್ರಮುಖ ಜಲಾಶಯ ಕೃಷ್ಣರಾಜಸಾಗರ( KRS) ಈ ಬಾರಿ ತುಂಬಲೇ ಇಲ್ಲ. ತಮಿಳುನಾಡಿಗೆ ನೀರು ಹರಿಸಿದ್ದರಿಂದ ನೀರಿನ ಮಟ್ಟ ಕುಸಿದಿದೆ. ಅದೂ ಮಳೆಗಾಲದಲ್ಲೇ ಜಲಾಶಯ ಅರ್ಧ ತುಂಬಿದ ಸ್ಥಿತಿಯಲ್ಲಿದೆ. ಬೇಸಿಗೆಯವರೆಗೂ ನೀರು ನಿರ್ವಹಣೆ ದೊಡ್ಡ ಸವಾಲು. ಕೆಆರ್‌ಎಸ್‌ ಸದ್ಯದ ಸ್ಥಿತಿ ಚಿತ್ರ ನೋಟವನ್ನು ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಕಟ್ಟಿಕೊಟ್ಟಿದ್ದಾರೆ.

  • ಕಾವೇರಿ ಕೊಳ್ಳದ ಪ್ರಮುಖ ಜಲಾಶಯ ಕೃಷ್ಣರಾಜಸಾಗರ( KRS) ಈ ಬಾರಿ ತುಂಬಲೇ ಇಲ್ಲ. ತಮಿಳುನಾಡಿಗೆ ನೀರು ಹರಿಸಿದ್ದರಿಂದ ನೀರಿನ ಮಟ್ಟ ಕುಸಿದಿದೆ. ಅದೂ ಮಳೆಗಾಲದಲ್ಲೇ ಜಲಾಶಯ ಅರ್ಧ ತುಂಬಿದ ಸ್ಥಿತಿಯಲ್ಲಿದೆ. ಬೇಸಿಗೆಯವರೆಗೂ ನೀರು ನಿರ್ವಹಣೆ ದೊಡ್ಡ ಸವಾಲು. ಕೆಆರ್‌ಎಸ್‌ ಸದ್ಯದ ಸ್ಥಿತಿ ಚಿತ್ರ ನೋಟವನ್ನು ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಕಟ್ಟಿಕೊಟ್ಟಿದ್ದಾರೆ.
ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ ಹಲವು ಜಿಲ್ಲೆಗಳ ಜೀವ ನಾಡಿ. ನೀರಿನ ದಾಹ ನೀಗಿಸುವ ಜಲದೇವತೆ. ಈ ಬಾರಿ ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಕೊರತೆ. ಅದೂ ಅಕ್ಟೋಬರ್‌ ನಲ್ಲಿಯೇ ನೀರಿಲ್ಲದೇ ಜಲಾಶಯ ಭಣಗುಟ್ಟತೊಡಗಿದೆ. 
(1 / 5)

ಕೃಷ್ಣರಾಜಸಾಗರ ಜಲಾಶಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಈಗ ನೀರು ಅಲ್ಲಲ್ಲಿ ಕಾಣುತ್ತಿದೆ. ಇದರೊಟ್ಟಿಗೆ ಮುಳ್ಳುಕಂಟಿಗಳ ದರ್ಶನವೂ ಆಗುತ್ತಿದೆ. ಮಳೆಯಾಗದೇ ಜಲಾಶಯ ಈ ಬಾರಿ ತುಂಬದೇ ಇಂತಹ ಸನ್ನಿವೇಶ ಈಗಲೇ ನೋಡುವಂತಾಗಿದೆ.
(2 / 5)

ಕಾವೇರಿ ಕೊಳ್ಳದ ದೊಡ್ಡ ಜಲಾಶಯ ಕೆಆರ್‌ಎಸ್‌ ಒಡಲು ಈ ಬಾರಿ ಖಾಲಿಯಾಗುತ್ತಿದೆ. ಅದೂ ಅಕ್ಟೋಬರ್‌ನಲ್ಲಿಯೇ. ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ಆಗಲೇ ಕಲ್ಲು ಬಂಡೆಗಳ ದರ್ಶನವೂ ಆಗುತ್ತಿದೆ. 
(3 / 5)

ಕೃಷ್ಣರಾಜಸಾಗರ ಜಲಾಶಯ ಈ ಭಾಗವೆಲ್ಲಾ ನೀರಿನಿಂದ ತುಂಬಿರುತ್ತಿತ್ತು. ಈ ಬಾರಿ ಮಳೆ ಕೊರತೆಯಿಂದ ಜಲಾಶಯ ತುಂಬಲೇ ಇಲ್ಲ. ಈಗಲೇ ರಾಸುಗಳು ಮೇಯಲು ಬರುವ ಸನ್ನಿವೇಶ ಕಂಡು ಬಂದಿದೆ. 
(4 / 5)

ಕೃಷ್ಣಸಾಗರ ಜಲಾಶಯದಲ್ಲಿ ಈ ಬಾರಿ ನೀರಿನ ಮಟ್ಟ ಅಕ್ಟೋಬರ್‌ನಲ್ಲಿಯೇ ಕುಸಿದಿದೆ. ಇರುವ ಸ್ವಲ್ಪ ನೀರನ್ನು ಕಾಯುತ್ತಿರುವ ಶ್ವಾನದ ನೋಟ ನೀರಿನ ಸ್ಥಿತಿಯನ್ನು ಬಿಂಬಿಸುತ್ತದೆ.
(5 / 5)

    ಹಂಚಿಕೊಳ್ಳಲು ಲೇಖನಗಳು