logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mangaluru: ಮಂಗಳೂರಲ್ಲಿ ಮಳೆಯೊಂದಿಗೆ ಹಲಸು, ಆಹಾರೋತ್ಸವ ಸಂಭ್ರಮ; ಫೋಟೋಸ್ ನೋಡಿ

Mangaluru: ಮಂಗಳೂರಲ್ಲಿ ಮಳೆಯೊಂದಿಗೆ ಹಲಸು, ಆಹಾರೋತ್ಸವ ಸಂಭ್ರಮ; ಫೋಟೋಸ್ ನೋಡಿ

Jun 14, 2023 07:00 AM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೆಡೆ ಮಳೆಯಾದರೆ, ಮತ್ತೊಂದೆಡೆ ಹಲಸು, ಆಹಾರೋತ್ಸವದ ಗೌಜಿ. ಮಂಗಳೂರಿನ ಬಾಳಂಬಟ್ ಹಾಲ್ ನಲ್ಲಿ ಜೂನ್ 5, 6ರಂದು ಹಲಸುಮೇಳ ನಡೆದಿದ್ದರೆ, ಜೂನ್ 11ರಂದು ನಂತೂರಿನ ಶ್ರೀ ಭಾರತೀ ಕಾಲೇಜಿನ ಆವರಣದಲ್ಲಿ ಹಲಸುಮೇಳ ಆಹಾರೋತ್ಸವ ಇತ್ತು. ಫೋಟೋಸ್ ಇಲ್ಲಿದೆ.

ಹಲಸು ಮೇಳದಲ್ಲಿ ಮಾರಾಟಕ್ಕೆ ಇಟ್ಟಿರುವ ವಿವಿಧ ಬಗೆಯ ಹಲಸು
(1 / 4)
ಹಲಸು ಮೇಳದಲ್ಲಿ ಮಾರಾಟಕ್ಕೆ ಇಟ್ಟಿರುವ ವಿವಿಧ ಬಗೆಯ ಹಲಸು
ನಂತೂರಿನ ಕಾರ್ಯಕ್ರಮದ ವೈಶಿಷ್ಟವೆಂದರೆ, ಇಲ್ಲಿ ಮಾರಾಟವಾಗಿ ಗಳಿಸಿದ ಹಣವನ್ನು ಬೆಳೆದವರಾಗಲೀ, ಖಾದ್ಯಗಳನ್ನು ಮಾಡಿ ಮಾರಾಟ ಮಾಡಿದವರಾಗಲೀ, ತಮ್ಮ ಮನೆಗೆ ತೆಗೆದುಕೊಂಡು ಹೋಗಲಿಲ್ಲ, ಬದಲಿಗೆ ಶ್ರೀರಾಮಚಂದ್ರಾಪುರ ಮಠದ ಸೇವಾ ಕಾರ್ಯಗಳಿಗೆ ನೀಡಿದ್ದಾರೆ.
(2 / 4)

ದಿನವಿಡೀ ನಡೆದ ಹಲಸುಮೇಳದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಹಲಸು, ಮಾವು, ಬಾಳೆಯ ವಿವಿಧ ರೀತಿಯ ತಿನಿಸುಗಳು, ಹಲಸಿನ ಹಣ್ಣಿನ ಪಾಯಸ, ಬೆರಟಿ ಪಾಯಸ, ಹಲಸಿನ ಕಾಯಿ ದೋಸೆ, ಗುಜ್ಜೆ ಮಂಚೂರಿ, ಹಲಸಿನ ಬೀಜದ ಚಟ್ಟಂಬಡೆ, ಹಲಸಿನ ಕಾಯಿ ಸೋಂಟೆ, ಹಲಸಿನ ಕಾಯಿ ಬೋಂಡಾ, ಬಾಳೆಕಾಯಿ ಚಿಪ್ಸ್, ಹಲಸಿನ ಕಾಯಿ ಹಪ್ಪಳ, ಹಲ್ವ, ಮಾಂಬಳ ಸಹಿತ ಗುಜ್ಜೆ ಪಾಯಸ, ಹೋಳಿಗೆಯಂಥ ಖಾದ್ಯಗಳ ವೈವಿಧ್ಯ ಕಂಡುಬಂದವು. ಗ್ರಾಹಕರು ತಮಗೆ ಬೇಕಾದದ್ದನ್ನು ಕೊಂಡು ಚಪ್ಪರಿಸಿದ್ದಾರೆ.
(3 / 4)

ದ.ಕ., ಕಾಸರಗೋಡು, ಉಡುಪಿ ಜಿಲ್ಲೆಗಳಲ್ಲಿನ, ಶ್ರೀರಾಮಚಂದ್ರಾಪುರ ಮಠದ ಶಿಷ್ಯಭಕ್ತರು ಸೇರಿ ತಿಂಡಿ ತಿನಿಸುಗಳನ್ನು ತಯಾರಿಸಿದ್ದರು. ಮಂಗಳೂರು ಹವ್ಯಕ ಮಂಡಲ, ಉಪ್ಪಿನಂಗಡಿ ಹವ್ಯಕ ಮಂಡಲ, ಮುಳ್ಳೇರಿಯ ಹವ್ಯಕ ಮಂಡಲಗಳ ಹಲವು ಮನೆಗಳಲ್ಲಿ ಕನಿಷ್ಠ 10 ಮಂದಿ, ಗರಿಷ್ಠ 40 ಮಂದಿ ಜತೆಸೇರಿ ಹಪ್ಪಳ, ಸೋಂಟೆ, ಚಿಪ್ಸ್, ಉಂಡ್ಳಕಾಳು, ಹಲ್ವ ಇತ್ಯಾದಿ ತಯಾರಿಸಿದ್ದಾರೆ. 
(4 / 4)

    ಹಂಚಿಕೊಳ್ಳಲು ಲೇಖನಗಳು