logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mosquito Repellents: ಮಳೆಗಾಲದ ಸೊಳ್ಳೆ ಕಾಟಕ್ಕೆ ಹೇಳಿ ಗುಡ್‌ಬಾಯ್‌; ಈ ಐಡಿಯಾ ಬಳಸಿ ಮನೆಯಲ್ಲೇ ನೈಸರ್ಗಿಕ ಸೊಳ್ಳೆ ನಿವಾರಕ ತಯಾರಿಸಿ

Mosquito Repellents: ಮಳೆಗಾಲದ ಸೊಳ್ಳೆ ಕಾಟಕ್ಕೆ ಹೇಳಿ ಗುಡ್‌ಬಾಯ್‌; ಈ ಐಡಿಯಾ ಬಳಸಿ ಮನೆಯಲ್ಲೇ ನೈಸರ್ಗಿಕ ಸೊಳ್ಳೆ ನಿವಾರಕ ತಯಾರಿಸಿ

Jan 09, 2024 07:58 PM IST

Homemade Repellents: ಮಳೆಗಾಲ ಬಂತೆಂದರೆ ಮನೆ ಮತ್ತು ಸುತ್ತಲಿನ ಪರಿಸರದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದು ಸಾಮಾನ್ಯ. ಸೊಳ್ಳೆಗಳೊಂದಿಗೆ ಕಾಯಿಲೆಯೂ ಜೊತೆಯಾಗಿಯೇ ಬರುತ್ತವೆ. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಮನೆಯಲ್ಲಿ ನೈಸರ್ಗಿಕ ವಿಧಾನದಲ್ಲಿ ಸೊಳ್ಳೆ ನಿವಾರಕಗಳನ್ನು ತಯಾರಿಸಿ, ಸೊಳ್ಳೆಗಳು ಸುಳಿಯದಂತೆ ನೋಡಿಕೊಳ್ಳಬಹುದು.

  • Homemade Repellents: ಮಳೆಗಾಲ ಬಂತೆಂದರೆ ಮನೆ ಮತ್ತು ಸುತ್ತಲಿನ ಪರಿಸರದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದು ಸಾಮಾನ್ಯ. ಸೊಳ್ಳೆಗಳೊಂದಿಗೆ ಕಾಯಿಲೆಯೂ ಜೊತೆಯಾಗಿಯೇ ಬರುತ್ತವೆ. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಮನೆಯಲ್ಲಿ ನೈಸರ್ಗಿಕ ವಿಧಾನದಲ್ಲಿ ಸೊಳ್ಳೆ ನಿವಾರಕಗಳನ್ನು ತಯಾರಿಸಿ, ಸೊಳ್ಳೆಗಳು ಸುಳಿಯದಂತೆ ನೋಡಿಕೊಳ್ಳಬಹುದು.
ಮಳೆಗಾಲದಲ್ಲಿ ಸೊಳ್ಳೆಗಳ ಉತ್ಪತ್ತಿಯ ಪ್ರಮಾಣ ಹೆಚ್ಚುತ್ತದೆ. ಮಳೆನೀರು ನಿಲ್ಲುವುದು, ಆದ್ರ ವಾತಾವರಣ ಹೀಗೆ ಹಲವು ಕಾರಣಗಳಿಂದ ಸೊಳ್ಳೆಗಳು ಹೆಚ್ಚುತ್ತವೆ. ಸೊಳ್ಳೆಗಳು ಹೆಚ್ಚಿದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ. ಈ ಸಮಯದಲ್ಲಿ, ಸೊಳ್ಳೆಯಿಂದ ಹರಡುವ ಎಲ್ಲಾ ರೋಗಗಳ ಅಪಾಯವು ಬಹುಪಟ್ಟು ಹೆಚ್ಚುತ್ತದೆ. 
(1 / 8)

ಮನೆಯೊಳಗಿನಿಂದ ಸೊಳ್ಳೆಗಳನ್ನು ಓಡಿಸಲು ಕಾಯಿಲ್‌ಗಳು, ಕೆಲವರು ಸ್ಪ್ರೇಗಳು ಹಾಗೂ ಇನ್ನೂ ಕೆಲವರು ರಾಸಾಯನಿಕಗಳನ್ನು ಬಳಸುತ್ತಾರೆ. ಇವು ಸೊಳ್ಳೆಗಳನ್ನು ಓಡಿಸಲು ಸಹಾಯ ಮಾಡುತ್ತವೆ ನಿಜ. ಆದರೆ ಅವು ಮಾನವ ದೇಹಕ್ಕೆ ಹಾನಿಯುಂಟು ಮಾಡುತ್ತವೆ. ಆ ಕಾರಣಕ್ಕೆ ಸೊಳ್ಳೆಗಳನ್ನು ಓಡಿಸಲು ನೈಸರ್ಗಿಕ ಮಾರ್ಗಗಳನ್ನು ಅನುಸರಿಸಬೇಕು. 
(2 / 8)

ಮಳೆಗಾಲದಲ್ಲಿ ಸೊಳ್ಳೆಗಳು ಕಡಿಮೆಯಾಗುವಂತೆ ಮಾಡಲು ಇಲ್ಲಿವೆ ಕೆಲವು ನೈಸರ್ಗಿಕ ವಿಧಾನ. 
(3 / 8)

ನಿಂಬೆ ಮತ್ತು ಲವಂಗ: ಸೊಳ್ಳೆಗಳು ಹುಳಿಯಂಶ ಇರುವ ಆಹಾರ ಮತ್ತು ಲವಂಗದ ವಾಸನೆಯನ್ನು ಸಹಿಸುವುದಿಲ್ಲ. ಹಾಗಾಗಿ ಅಂತಹ ವಾಸನೆ ಇದ್ದರೆ ಅಲ್ಲಿ ಸೊಳ್ಳೆಗಳು ಬರುವುದಿಲ್ಲ. ಲವಂಗ ಮತ್ತು ನಿಂಬೆಹಣ್ಣು ಬಳಸುವುದು ಸೊಳ್ಳೆಗಳನ್ನು ಓಡಿಸಲು ಬಳಸುವ ಹಳೆಯ ವಿಧಾನವಾಗಿದೆ. ನಿಂಬೆಹಣ್ಣನ್ನು ಎರಡು ಭಾಗವಾಗಿ ಕತ್ತರಿಸಿ ಅದರಲ್ಲಿ ಕೆಲವು ಲವಂಗವನ್ನು ಮ್ಯಾಶ್ ಮಾಡಿ ಹಾಕಿ. ಲವಂಗ ಸೇರಿಸಿದ ನಿಂಬೆಹಣ್ಣಿನ ತುಂಡುಗಳನ್ನು ಮನೆಯ ವಿವಿಧ ಸ್ಥಳಗಳಲ್ಲಿ ಇರಿಸಿ. ಇದರಿಂದ ಸೊಳ್ಳೆಗಳು ದೂರವಾಗುತ್ತವೆ.
(4 / 8)

ಕರ್ಪೂರ: ಸೊಳ್ಳೆಗಳನ್ನು ಓಡಿಸಲು ಕರ್ಪೂರವನ್ನು ಬಳಸಬಹುದು. ಕರ್ಪೂರವನ್ನು ಬೆಳಗುವುದರಿಂದ ಅದರ ಪರಿಮಳದಿಂದ ಸೊಳ್ಳೆಗಳು ಮನೆಯೊಳಗೆ ಸುಳಿಯುವುದಿಲ್ಲ. ಇದರ ವಾಸನೆ ಸೊಳ್ಳೆಗಳಿಗೆ ಅಸಹನೀಯವಾಗಿದೆ. ಕರ್ಪೂರದ ಪರಿಮಳ ಮಾನವ ದೇಹಕ್ಕೆ ಹಾನಿಯಲ್ಲ. 
(5 / 8)

ರಾಸಾಯನಿಕ ಸೊಳ್ಳೆ ನಿವಾರಕ ಸ್ಪ್ರೇಗಳನ್ನು ಹೆಚ್ಚು ಜನರು ಬಳಸುತ್ತಾರೆ. ಬದಲಿಗೆ ನೀವು ಮನೆಯಲ್ಲಿ ಸ್ಪ್ರೇ ತಯಾರಿಸಬಹುದು. ಕೆಲವು ಬೆಳ್ಳುಳ್ಳಿ ಎಸಳುಗಳನ್ನು ಪುಡಿ ಮಾಡಿ, ನೀರಿನಲ್ಲಿ ಚೆನ್ನಾಗಿ ಕುದಿಸಿ. ತಣ್ಣಗಾದ ಮೇಲೆ ಅದನ್ನು ಸ್ಪ್ರೇ ಬಾಟಲಿಗೆ ಸುರಿಯಿರಿ. ಸೊಳ್ಳೆಗಳು ಇರುವ ಜಾಗದಲ್ಲಿ ಸಿಂಪಡಿಸಿ.
(6 / 8)

ನೀರು ನಿಲ್ಲದಂತೆ ನೋಡಿಕೊಳ್ಳಿ: ನಿಂತ ನೀರು ಸೊಳ್ಳೆಗಳಿಗೆ ನೆಚ್ಚಿನ ತಾಣ. ಮಳೆಯ ನೀರು ಮನೆಯ ಸುತ್ತ ಶೇಖರಣೆಯಾಗಬಹುದು. ಆದ್ದರಿಂದ ಒಳಚರಂಡಿ ವ್ಯವಸ್ಥೆಯನ್ನು ಕ್ರಮವಾಗಿ ಇರಿಸಿ. ಮನೆಯಲ್ಲಿ ಎಲ್ಲಿಯೂ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಏಕೆಂದರೆ ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಇಡುತ್ತವೆ. ಮನೆಯ ಸಮೀಪ ಮರವಿದ್ದರೆ, ಮರದ ಬುಡದಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ.
(7 / 8)

ಕೆಲವು ಗಿಡಗಳನ್ನು ನೆಡಿ: ಸೊಳ್ಳೆಗಳನ್ನು ದೂರವಿಡುವಲ್ಲಿ ಪರಿಣಾಮಕಾರಿಯಾದ ಕೆಲವು ಗಿಡಗಳಿವೆ. ಚೆಂಡು ಹೂ, ತುಳಸಿ, ಲಿಂಬೆರಸ, ಪುದಿನಾ ಇತ್ಯಾದಿ. ಇಂತಹ ಸಸ್ಯಗಳು ಸೊಳ್ಳೆಗಳನ್ನು ಮಾತ್ರವಲ್ಲದೆ ಇತರ ಕೀಟಗಳನ್ನೂ ದೂರವಿಡುತ್ತವೆ. ಮಳೆಗಾಲದಲ್ಲಿ ನೀವು ಅಂತಹ ಸಸ್ಯಗಳನ್ನು ಮನೆಯಲ್ಲಿ ನೆಡಬಹುದು.
(8 / 8)

    ಹಂಚಿಕೊಳ್ಳಲು ಲೇಖನಗಳು