logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Asia Cup 2023: ಏಷ್ಯಾಕಪ್‌ನಲ್ಲಿ ಇಬ್ಬರು ಭಾರತೀಯರು ಮಾತ್ರ ಗೆದ್ದಿರುವ ಈ ಪ್ರಶಸ್ತಿಯನ್ನು ಈ ಬಾರಿ ರೋಹಿತ್-ವಿರಾಟ್ ಗೆಲ್ಲುತ್ತಾರಾ?

Asia Cup 2023: ಏಷ್ಯಾಕಪ್‌ನಲ್ಲಿ ಇಬ್ಬರು ಭಾರತೀಯರು ಮಾತ್ರ ಗೆದ್ದಿರುವ ಈ ಪ್ರಶಸ್ತಿಯನ್ನು ಈ ಬಾರಿ ರೋಹಿತ್-ವಿರಾಟ್ ಗೆಲ್ಲುತ್ತಾರಾ?

Aug 22, 2023 12:26 PM IST

Asia Cup 2023: ಬಹುನಿರೀಕ್ಷಿತ ಏಷ್ಯಾಕಪ್‌ ಟೂರ್ನಿಗೆ ಆಗಸ್ಟ್ 30ರಂದು ಚಾಲನೆ ಸಿಗಲಿದೆ. 2023ರ ಏಕದಿನ ವಿಶ್ವಕಪ್‌ ಟೂರ್ನಿಗೂ ಮೊದಲು ನಡೆಯುವ ಈ ಪಂದ್ಯಾವಳಿಯು ಭಾರತ ಸೇರಿದಂತೆ ಏಷ್ಯಾದ ಎಲ್ಲಾ ತಂಡಗಳಿಗೆ ಬಹಳ ಮಹತ್ವದ್ದಾಗಿದೆ. ಆಟಗಾರರ ಮೇಲೂ ನಿರೀಕ್ಷೆಗಳ ಬೆಟ್ಟವೇ ಇದೆ.

  • Asia Cup 2023: ಬಹುನಿರೀಕ್ಷಿತ ಏಷ್ಯಾಕಪ್‌ ಟೂರ್ನಿಗೆ ಆಗಸ್ಟ್ 30ರಂದು ಚಾಲನೆ ಸಿಗಲಿದೆ. 2023ರ ಏಕದಿನ ವಿಶ್ವಕಪ್‌ ಟೂರ್ನಿಗೂ ಮೊದಲು ನಡೆಯುವ ಈ ಪಂದ್ಯಾವಳಿಯು ಭಾರತ ಸೇರಿದಂತೆ ಏಷ್ಯಾದ ಎಲ್ಲಾ ತಂಡಗಳಿಗೆ ಬಹಳ ಮಹತ್ವದ್ದಾಗಿದೆ. ಆಟಗಾರರ ಮೇಲೂ ನಿರೀಕ್ಷೆಗಳ ಬೆಟ್ಟವೇ ಇದೆ.
ಸದ್ಯ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರ ತಾರಕಕ್ಕೇರಿದೆ. ಈ ನಡುವೆ 50 ಓವರ್‌ಗಳ ಏಷ್ಯಾಕಪ್‌ನಲ್ಲಿ ಈವರೆಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ. ಈ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಮಾತ್ರ ಸ್ಥಾನ ಪಡೆದಿದ್ದಾರೆ.
(1 / 6)

ಭಾರತದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ನವಜೋತ್ ಸಿಂಗ್ ಸಿಧು 50 ಓವರ್‌ಗಳ ಏಷ್ಯಾಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ. 1988ರ ಏಷ್ಯಾಕಪ್‌ನಲ್ಲಿ ಅವರು ಈ ಪ್ರಶಸ್ತಿ ಗೆದ್ದಿದ್ದರು. ಇದರ ನಂತರ, ಅಂದರೆ 1995ರಲ್ಲಿ ಅವರು ಏಷ್ಯಾಕಪ್‌ನಲ್ಲಿ ಮತ್ತೊಮ್ಮೆ ಪ್ಲೇಯರ್‌ ಆಫ್‌ ದಿ ಸಿರೀಸ್‌ ಪ್ರಶಸ್ತಿ ಗೆದ್ದರು. ಸಿಧು ಏಷ್ಯಾಕಪ್‌ನಲ್ಲಿ ಎರಡು ಬಾರಿ ಈ ಪ್ರಶಸ್ತಿ ಗೆದ್ದ ಏಕೈಕ ಭಾರತೀಯ.
(2 / 6)

ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಏಷ್ಯಾಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಎರಡನೇ ಭಾರತೀಯ. 2018ರ ಏಷ್ಯನ್ ಟೂರ್ನಿಯಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಧವನ್‌ ಈ ಪ್ರಶಸ್ತಿ ಗೆದ್ದಿದ್ದರು.
(3 / 6)

ಅರ್ಜುನ ರಣತುಂಗ (1986,1997), ಸನತ್ ಜಯಸೂರ್ಯ (2004), ಅಜಂತಾ ಮೆಂಡಿಸ್ (2008) ಮತ್ತು ಲಹಿರು ತಿರಿಮನ್ನೆ (2014) ಏಕದಿನ ಮಾದರಿಯ ಏಷ್ಯಾಕಪ್‌ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಶ್ರೀಲಂಕಾದ ನಾಲ್ವರು ಆಟಗಾರರಾಗಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ಆಟಗಾರರು ಪ್ರಾಬಲ್ಯ ಮೆರೆದಿದ್ದಾರೆ.
(4 / 6)

2002ರಲ್ಲಿ ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಯೂಸುಫ್ ಮತ್ತು 2012ರಲ್ಲಿ ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಏಷ್ಯಾಕಪ್‌ನಲ್ಲಿ ತಲಾ ಒಂದು ಬಾರಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.
(5 / 6)

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಮೇಲೆ ಈ ಬಾರಿ ಹೆಚ್ಚಿನ ಭಾರವಸೆ ಇರಿಸಲಾಗಿದೆ. ಹೀಗಾಗಿ ಈ ಇಬ್ಬರೂ ಸರಣಿ ಶ್ರೇಷ್ಠ ಪ್ರಶ್ತಿ ಗೆಲ್ಲುವ ಅವಕಾಶ ಹೊಂದಿದ್ದಾರೆ. ಈ ನಿರೀಕ್ಷೆ ನಿಜವಾಗುತ್ತಾ ಎಂಬುದನ್ನು ಕಾದು ನೋಡಬೇಕು.
(6 / 6)

    ಹಂಚಿಕೊಳ್ಳಲು ಲೇಖನಗಳು