logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mrs.india I Am Powerful 2022: ಯೂನಿವರ್ಸ್‌ ಪ್ರಶಸ್ತಿ ಗೆದ್ದ ಕತಾರ್‌ ಕನ್ನಡತಿ ಸುಮಾ ಮಹೇಶ್‌ ಗೌಡ

Mrs.India I Am Powerful 2022: ಯೂನಿವರ್ಸ್‌ ಪ್ರಶಸ್ತಿ ಗೆದ್ದ ಕತಾರ್‌ ಕನ್ನಡತಿ ಸುಮಾ ಮಹೇಶ್‌ ಗೌಡ

Nov 25, 2022 10:22 AM IST

Mrs.India I Am Powerful 2022: ದೋಹಾ ಮೂಲದ ಇಂಟೀರಿಯರ್‌ ಡಿಸೈನರ್‌ ಮತ್ತು ಮಹಿಳಾ, ಮಕ್ಕಳ ಕೌನ್ಸೆಲರ್‌ ಕನ್ನಡತಿ ಸುಮಾ ಮಹೇಶ್‌ ಗೌಡ (ಬಲಭಾಗದಲ್ಲಿ ಮೊದಲನೆಯವರು) ಮಿಸೆಸ್ ಇಂಡಿಯಾ ಐ ಆಮ್‌ ಪವರ್‌ಫುಲ್‌ 2022ರ ಯೂನಿವರ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ದೋಹಾ ಮೂಲದ ಇಂಟೀರಿಯರ್‌ ಡಿಸೈನರ್‌ ಮತ್ತು ಮಹಿಳಾ, ಮಕ್ಕಳ ಕೌನ್ಸೆಲರ್‌ ಕನ್ನಡತಿ ಸುಮಾ ಮಹೇಶ್‌ ಗೌಡ (ಬಲಭಾಗದಲ್ಲಿ ಮೊದಲನೆಯವರು) ಮಿಸೆಸ್ ಇಂಡಿಯಾ ಐ ಆಮ್‌ ಪವರ್‌ಫುಲ್‌ 2022ರ ಯೂನಿವರ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಕಾರ್ಯಕ್ರಮ ಗೋವಾದಲ್ಲಿ ಇತ್ತೀಚೆಗೆ ನಡೆದಿತ್ತು. 
(1 / 3)

ಮಿಸೆಸ್ ಇಂಡಿಯಾ ಐ ಆಮ್‌ ಪವರ್‌ಫುಲ್‌ 2022ರ ವಿಜೇತರು ಇವರು - ಐ ಆಮ್‌ ಪವರ್‌ಫುಲ್‌ 2022 - ಶಿಲ್ಪಾ ದುಬೆ (ಟೂರಿಸಂ), ಶಾಮಲಾ (ಅರ್ಥ್)‌, ಜನನಿ ರಾಜನ್ (ವರ್ಲ್ಡ್‌), ಸುಮಾ ಮಹೇಶ್ ಗೌಡ (ಯುನಿವರ್ಸ್), ಬಬಿತಾ (ಏಷ್ಯಾ). ಇದೇ ರೀತಿ ಮಿಸೆಸ್ ಇಂಡಿಯಾ ಕರ್ವಿ 2022ರ ವಿಜೇತರು- ಧನಶ್ರೀ ದೇಶಮುಖ (ಯೂನಿವರ್ಸ್), ಶ್ವೇತಾ (ವರ್ಲ್ಡ್)‌ ಚೈತ್ರಾ (ಟೂರಿಸಂ). ದಿವ್ಯಾ ರಾವ್‌ ಅವರ ರೂಹೀ ಕೌಚರ್‌ನಿಂದ ಹಿಡಿದು ಬೋಹೋ ಥೀಮ್‌ನ ಕಾಕ್‌ಟೇಲ್‌ ಉಡುಪು, ಕೆಂಪು ಪ್ರಿನ್ಸೆಸ್‌ ಗೌನ್‌ ಮತ್ತು ಉಡುಪುಗಳನ್ನು ಸ್ಪರ್ಧಾರ್ಥಿಗಳು ಧರಿಸಿ ರ್ಯಾಂಪ್‌ ವಾಕ್‌ ಮಾಡಿದ್ದರು. ಈ ಸ್ಪರ್ಧೆಯನ್ನು ಮಾರ್ಜಿಮ್‌, ಉತ್ತರ ಗೋವಾದ ಆಸ್ಟೆರ್‌ ಫೈನ್‌ ಆರ್ಟ್ಸ್‌ ಎಜುಕೇಶನ್‌ ಆಯೋಜಿಸಿತ್ತು.
(2 / 3)

ಮಿಸೆಸ್ ಇಂಡಿಯಾ ಐ ಆಮ್‌ ಪವರ್‌ಫುಲ್‌ 2022ರ ಯೂನಿವರ್ಸ್‌ ಪ್ರಶಸ್ತಿ ಗೆದ್ದ ಸುಮಾ ಮಹೇಶ್‌ ಗೌಡ. ಸ್ಪರ್ಧೆಯಲ್ಲಿ ಟ್ಯಾಲೆಂಟ್ ಸುತ್ತು, ಥೀಮ್ ಸುತ್ತು, ವೈಯಕ್ತಿಕ ಸಂದರ್ಶನ ಸುತ್ತು, ಪ್ರಶ್ನಾವಳಿ, ರಾಂಪ್ ವಾಕ್ ಮತ್ತು ಇತರ ಕಾರ್ಯಗಳು ಕ್ರಮವಾಗಿ 6 ಸುತ್ತುಗಳಿದ್ದವು. ಪ್ರಸಿದ್ಧ ಸಮಾಜ ಸೇವಕಿ ಮತ್ತು ಉದ್ಯಮಿ ನಂದಿನಿ ಮತ್ತು ಜಜ್‌ಪ್ರೀತ್ ಕೌರ್ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅಲಂಕರಿಸಿದ್ದಾರೆ. ಸುಮಾ ಮಹೇಶ್ ಅವರು ಮುಂದಿನ ವರ್ಷ 2023 ರಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೂನಿವರ್ಸ್ ಸ್ಪರ್ಧೆಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.  ಸುಮಾ ಮಹೇಶ್ ಗೌಡ ಅವರು ಮುಖ್ಯ ಮತ್ತು ಅದ್ಭುತವಾದ ಮಿಸೆಸ್ ಇಂಡಿಯಾ ಯೂನಿವರ್ಸ್ ಪ್ರಶಸ್ತಿಯನ್ನು ಗೆಲ್ಲುವುದರ ಜೊತೆಗೆ "ಅತ್ಯುತ್ತಮ ವ್ಯಕ್ತಿತ್ವ" ಪ್ರಶಸ್ತಿಯನ್ನು ಗೆದ್ದರು ಮತ್ತು ಟ್ಯಾಲೆಂಟ್ ಸುತ್ತಿನಲ್ಲಿ 1 ನೇ ರನ್ನರ್ ಅಪ್ ಕೂಡ ಆಗಿದ್ದರು. 
(3 / 3)

    ಹಂಚಿಕೊಳ್ಳಲು ಲೇಖನಗಳು