logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  4, 6, 6, 6, 4, 6: ಒಂದೇ ಓವರ್‌ನಲ್ಲಿ 32 ರನ್ ಸಿಡಿಸಿ ಮುಂಬೈ ಗೆಲ್ಲಿಸಿದ ರೊಮಾರಿಯೋ ಶೆಫರ್ಡ್

4, 6, 6, 6, 4, 6: ಒಂದೇ ಓವರ್‌ನಲ್ಲಿ 32 ರನ್ ಸಿಡಿಸಿ ಮುಂಬೈ ಗೆಲ್ಲಿಸಿದ ರೊಮಾರಿಯೋ ಶೆಫರ್ಡ್

Apr 07, 2024 09:14 PM IST

Romario Shepherd: ಮುಂಬೈ ಇಂಡಿಯನ್ಸ್ ತಂಡಕ್ಕೆ ರೊಮಾರಿಯೊ ಶೆಫರ್ಡ್‌ ಪಂದ್ಯ ಗೆಲ್ಲಿಸಿ ಕೊಟ್ಟಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸುನಾಮಿಯಂತೆ ಅಬ್ಬರಿಸಿದ ಅವರು, ಮುಂಬೈ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಬರೋಬ್ಬರಿ 32 ರನ್ ಗಳಿಸಿದರು. ಎಲ್ಲಾ ಎಸೆತಗಳನ್ನು ಬೌಂಡರಿ ಲೈನ್‌ ಹೊರಗಟ್ಟುವ ಮೂಲಕ ದಾಖಲೆಯ ಆಟವಾಡಿದರು.

  • Romario Shepherd: ಮುಂಬೈ ಇಂಡಿಯನ್ಸ್ ತಂಡಕ್ಕೆ ರೊಮಾರಿಯೊ ಶೆಫರ್ಡ್‌ ಪಂದ್ಯ ಗೆಲ್ಲಿಸಿ ಕೊಟ್ಟಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸುನಾಮಿಯಂತೆ ಅಬ್ಬರಿಸಿದ ಅವರು, ಮುಂಬೈ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಬರೋಬ್ಬರಿ 32 ರನ್ ಗಳಿಸಿದರು. ಎಲ್ಲಾ ಎಸೆತಗಳನ್ನು ಬೌಂಡರಿ ಲೈನ್‌ ಹೊರಗಟ್ಟುವ ಮೂಲಕ ದಾಖಲೆಯ ಆಟವಾಡಿದರು.
ಆಡುವ ಬಳಗದಲ್ಲಿ ಅವಕಾಶ ಪಡೆದ ವೆಸ್ಟ್ ಇಂಡೀಸ್‌ ಸ್ಫೋಟಕ ಆಲ್‌ರೌಂಡರ್‌, ಆನ್ರಿಚ್ ನಾರ್ಟ್ಜೆ ಎಸೆದ ಕೊನೆಯ ಓವರ್‌ನಲ್ಲಿ 32 ರನ್ ಗಳಿಸಿದರು. ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡಿದ ಶೆಫರ್ಡ್, ದಕ್ಷಿಣ ಆಫ್ರಿಕಾದ ವೇಗಿ ದಾಳಿಯನು ಹಣ್ಣುಗಾಯಿ ನೀರುಗಾಯಿ ಮಾಡಿದರು.
(1 / 6)
ಆಡುವ ಬಳಗದಲ್ಲಿ ಅವಕಾಶ ಪಡೆದ ವೆಸ್ಟ್ ಇಂಡೀಸ್‌ ಸ್ಫೋಟಕ ಆಲ್‌ರೌಂಡರ್‌, ಆನ್ರಿಚ್ ನಾರ್ಟ್ಜೆ ಎಸೆದ ಕೊನೆಯ ಓವರ್‌ನಲ್ಲಿ 32 ರನ್ ಗಳಿಸಿದರು. ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡಿದ ಶೆಫರ್ಡ್, ದಕ್ಷಿಣ ಆಫ್ರಿಕಾದ ವೇಗಿ ದಾಳಿಯನು ಹಣ್ಣುಗಾಯಿ ನೀರುಗಾಯಿ ಮಾಡಿದರು.(AP)
ನಾರ್ಟ್ಜೆ ಎಸೆದ 20ನೇ ಓವರ್‌ನ ಆರು ಎಸೆತಗಳಲ್ಲಿ ಮುಂಬೈ ಬ್ಯಾಟರ್‌ ಶೆಫರ್ಡ್ ನಾಲ್ಕು ಸ್ಫೋಟಕ ಸಿಕ್ಸರ್‌ ಹಾಗೂ ಎರಡು ಬೌಂಡರಿ ಬಾರಿಸಿದರು. ಆರು ಎಸೆತಗಳಲ್ಲಿ ಕ್ರಮವಾಗಿ 4, 6, 6, 6, 4, 6 ರನ್‌ ಸಿಡಿಸಿದರು.
(2 / 6)
ನಾರ್ಟ್ಜೆ ಎಸೆದ 20ನೇ ಓವರ್‌ನ ಆರು ಎಸೆತಗಳಲ್ಲಿ ಮುಂಬೈ ಬ್ಯಾಟರ್‌ ಶೆಫರ್ಡ್ ನಾಲ್ಕು ಸ್ಫೋಟಕ ಸಿಕ್ಸರ್‌ ಹಾಗೂ ಎರಡು ಬೌಂಡರಿ ಬಾರಿಸಿದರು. ಆರು ಎಸೆತಗಳಲ್ಲಿ ಕ್ರಮವಾಗಿ 4, 6, 6, 6, 4, 6 ರನ್‌ ಸಿಡಿಸಿದರು.(AP)
ಪಂದ್ಯದಲ್ಲಿ ಶೆಫರ್ಡ್‌ ಕೇವಲ 10 ಎಸೆತಗಳಲ್ಲಿ 39 ರನ್ ಗಳಿಸಿದರು. ಅಲ್ಲದೆ ನಿರ್ಣಾಯಕ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.
(3 / 6)
ಪಂದ್ಯದಲ್ಲಿ ಶೆಫರ್ಡ್‌ ಕೇವಲ 10 ಎಸೆತಗಳಲ್ಲಿ 39 ರನ್ ಗಳಿಸಿದರು. ಅಲ್ಲದೆ ನಿರ್ಣಾಯಕ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.
ಮುಂಬೈ ಇಂಡಿಯನ್ಸ್ ಪರ ಆರಂಭಿಕ ಆಟಗಾರ ರೋಹಿತ್ ಶರ್ಮಾ 49 ರನ್‌ ಗಳಿಸಿದರೆ, ಇಶಾನ್ ಕಿಶನ್ 42 ರನ್‌ ಕಲೆ ಹಾಕಿ ಔಟಾದರು. ಟಿಮ್ ಡೇವಿಡ್ ಅಜೇಯ 45 ರನ್‌ ಬಾರಿಸಿದರು.
(4 / 6)
ಮುಂಬೈ ಇಂಡಿಯನ್ಸ್ ಪರ ಆರಂಭಿಕ ಆಟಗಾರ ರೋಹಿತ್ ಶರ್ಮಾ 49 ರನ್‌ ಗಳಿಸಿದರೆ, ಇಶಾನ್ ಕಿಶನ್ 42 ರನ್‌ ಕಲೆ ಹಾಕಿ ಔಟಾದರು. ಟಿಮ್ ಡೇವಿಡ್ ಅಜೇಯ 45 ರನ್‌ ಬಾರಿಸಿದರು.(PTI)
ನನ್ನ ಕಠಿಣ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ನೆಟ್ಸ್‌ನಲ್ಲಿ ನಾನು ಸಾಕಷ್ಟು ಶ್ರಮ ಹಾಕಿದ್ದೇನೆ. ಕೊನೆಯ ಓವರ್‌ ಎದುರಿಸುವಾಗ, ಟಿಮ್ ಡೇವಿಡ್ ನನ್ನನ್ನು ಸ್ಟ್ರೈಕ್‌ನಲ್ಲೇ ಇದ್ದು ಹೊಡೆಯುವಂತೆ ಹೇಳಿದರು. ನಾನು  ಚೆಂಡಿನ ಲಾಭ ಪಡೆಯುವ  ಸ್ಥಿತಿಯಲ್ಲಿದ್ದೆ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಶೆಫರ್ಡ್‌ ಹೇಳಿದ್ದಾರೆ.
(5 / 6)
ನನ್ನ ಕಠಿಣ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ನೆಟ್ಸ್‌ನಲ್ಲಿ ನಾನು ಸಾಕಷ್ಟು ಶ್ರಮ ಹಾಕಿದ್ದೇನೆ. ಕೊನೆಯ ಓವರ್‌ ಎದುರಿಸುವಾಗ, ಟಿಮ್ ಡೇವಿಡ್ ನನ್ನನ್ನು ಸ್ಟ್ರೈಕ್‌ನಲ್ಲೇ ಇದ್ದು ಹೊಡೆಯುವಂತೆ ಹೇಳಿದರು. ನಾನು  ಚೆಂಡಿನ ಲಾಭ ಪಡೆಯುವ  ಸ್ಥಿತಿಯಲ್ಲಿದ್ದೆ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಶೆಫರ್ಡ್‌ ಹೇಳಿದ್ದಾರೆ.(PTI)
ಶೆಫರ್ಡ್‌ ನಿರ್ಣಾಯಕ ಪ್ರದರ್ಶನವು ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಕುರಿತು ಪಂದ್ಯದ ಬಳಿಕ ನಾಯಕ ಹಾರ್ದಿಕ್‌ ಪಾಂಡ್ಯ ಕೂಡಾ ಹೇಳಿಕೊಂಡಿದ್ದಾರೆ.
(6 / 6)
ಶೆಫರ್ಡ್‌ ನಿರ್ಣಾಯಕ ಪ್ರದರ್ಶನವು ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಕುರಿತು ಪಂದ್ಯದ ಬಳಿಕ ನಾಯಕ ಹಾರ್ದಿಕ್‌ ಪಾಂಡ್ಯ ಕೂಡಾ ಹೇಳಿಕೊಂಡಿದ್ದಾರೆ.(PTI)

    ಹಂಚಿಕೊಳ್ಳಲು ಲೇಖನಗಳು