logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತ ಕುಂಬ್ಳೆ, ಅಶ್ವಿನ್ ಕಂಡಿರಬಹುದು; ಆದರೆ ಬಿಷ್ಣೋಯ್ ವಿಭಿನ್ನ ಸ್ಪಿನ್ನರ್; ಮುರಳೀಧರನ್ ಪ್ರಶಂಸೆ

ಭಾರತ ಕುಂಬ್ಳೆ, ಅಶ್ವಿನ್ ಕಂಡಿರಬಹುದು; ಆದರೆ ಬಿಷ್ಣೋಯ್ ವಿಭಿನ್ನ ಸ್ಪಿನ್ನರ್; ಮುರಳೀಧರನ್ ಪ್ರಶಂಸೆ

Dec 04, 2023 08:30 PM IST

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಭಾರತವು 4-1 ಅಂತರದಿಂದ ವಶಪಡಿಸಿಕೊಂಡು. ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ರವಿ ಬಿಷ್ಣೋಯ್. ಆಡಿದ 5 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ ಬಿಷ್ಣೋಯ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದೀಗ ಸ್ಪಿನ್ನರ್‌ ಕುರಿತು ದಿಗ್ಗಜ ಬೌಲರ್‌ ಮುತ್ತಯ್ಯ ಮುರಳೀಧರನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಭಾರತವು 4-1 ಅಂತರದಿಂದ ವಶಪಡಿಸಿಕೊಂಡು. ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ರವಿ ಬಿಷ್ಣೋಯ್. ಆಡಿದ 5 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ ಬಿಷ್ಣೋಯ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದೀಗ ಸ್ಪಿನ್ನರ್‌ ಕುರಿತು ದಿಗ್ಗಜ ಬೌಲರ್‌ ಮುತ್ತಯ್ಯ ಮುರಳೀಧರನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಆಸೀಸ್‌ ವಿರುದ್ಧದ ಸರಣಿಯ ಅಂತಿಮ ಪಂದ್ಯಕ್ಕೂ ಮುನ್ನ ಜಿಯೋ ಸಿನಿಮಾ ಜೊತೆಗೆ ಮಾತನಾಡಿದ ಮುರಳೀಧರನ್, ಭಾರತೀಯ ಸ್ಪಿನ್ನರ್‌ ಕುರಿತು ಮಾತನಾಡಿದರು.
(1 / 5)
ಬೆಂಗಳೂರಿನಲ್ಲಿ ನಡೆದ ಆಸೀಸ್‌ ವಿರುದ್ಧದ ಸರಣಿಯ ಅಂತಿಮ ಪಂದ್ಯಕ್ಕೂ ಮುನ್ನ ಜಿಯೋ ಸಿನಿಮಾ ಜೊತೆಗೆ ಮಾತನಾಡಿದ ಮುರಳೀಧರನ್, ಭಾರತೀಯ ಸ್ಪಿನ್ನರ್‌ ಕುರಿತು ಮಾತನಾಡಿದರು.
ಭಾರತದ ಕ್ರಿಕೆಟ್‌ ಇತಿಹಾಸದುದ್ದಕ್ಕೂ ಉತ್ತಮ ಸ್ಪಿನ್ನರ್‌ಗಳಿದ್ದಾರೆ. ಅನಿಲ್ ಕುಂಬ್ಳೆ ಅವರಿಂದ ಹಿಡಿದು ರವಿಚಂದ್ರನ್ ಅಶ್ವಿನ್‌ವರೆಗೆ ಹಲವರನ್ನು ನೀವು ನೋಡಿದ್ದೀರಿ. ಆದರೆ, ಬಿಷ್ಣೋಯ್ ಇತರ ಲೆಗ್ ಸ್ಪಿನ್ನರ್‌ಗಳಿಗಿಂತ ಭಿನ್ನ ಎಂದು ಮುರಳೀಧರನ್‌ ಹೇಳಿದ್ದಾರೆ.
(2 / 5)
ಭಾರತದ ಕ್ರಿಕೆಟ್‌ ಇತಿಹಾಸದುದ್ದಕ್ಕೂ ಉತ್ತಮ ಸ್ಪಿನ್ನರ್‌ಗಳಿದ್ದಾರೆ. ಅನಿಲ್ ಕುಂಬ್ಳೆ ಅವರಿಂದ ಹಿಡಿದು ರವಿಚಂದ್ರನ್ ಅಶ್ವಿನ್‌ವರೆಗೆ ಹಲವರನ್ನು ನೀವು ನೋಡಿದ್ದೀರಿ. ಆದರೆ, ಬಿಷ್ಣೋಯ್ ಇತರ ಲೆಗ್ ಸ್ಪಿನ್ನರ್‌ಗಳಿಗಿಂತ ಭಿನ್ನ ಎಂದು ಮುರಳೀಧರನ್‌ ಹೇಳಿದ್ದಾರೆ.(PTI)
ಅವರು ವೇಗವಾಗಿ ಬೌಲ್ ಮಾಡುತ್ತಾರೆ ಮತ್ತು ಅವರು ಚೆಂಡನ್ನು ಸಾಕಷ್ಟು ಸ್ಲೈಡ್ ಮಾಡುತ್ತಾರೆ. ಅತ್ತ ಅಕ್ಸರ್ ಪಟೇಲ್ ಬೌಲಿಂಗ್‌ ಕೂಡಾ ನಿಖರವಾಗಿದೆ. ವಾಶಿಂಗ್ಟನ್‌ ಕೂಡಾ ಉತ್ತಮವಾಗಿದ್ದಾರೆ. ಅದರೆ ಅವರು ಹೆಚ್ಚು ಅರ್ನ್‌ ಮಾಡುವುದಿಲ್ಲ ಎಂದು ಮುರಳೀಧರನ್ ಹೇಳಿದರು.
(3 / 5)

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ರವಿ ಬಿಷ್ಣೋಯ್ ರವಿಚಂದ್ರನ್ ಅಶ್ವಿನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಬಿಷ್ಣೋಯ್ ಹೊಂದಿದ್ದಾರೆ. ಈ ಹಿಂದೆ ಅಶ್ವಿನ್ ಈ ಸಾಧನೆ ಮಾಡಿದ್ದರು.
(4 / 5)

ಶ್ರೀಲಂಕಾ ವಿರುದ್ಧದ 2016ರ ಟಿ20 ಸರಣಿಯಲ್ಲಿ, ಅಶ್ವಿನ್ ಒಂಬತ್ತು ವಿಕೆಟ್‌ಗಳೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಹೆಚ್ಚು ವಿಕೆಟ್‌ ಕಬಳಿಸಿದ್ದರು. ಬಿಷ್ಣೋಯ್ ಆ ಸಾಧನೆಯನ್ನು ಪುನರಾವರ್ತನೆ ಮಾಡಿದ್ದಾರೆ.
(5 / 5)
ಶ್ರೀಲಂಕಾ ವಿರುದ್ಧದ 2016ರ ಟಿ20 ಸರಣಿಯಲ್ಲಿ, ಅಶ್ವಿನ್ ಒಂಬತ್ತು ವಿಕೆಟ್‌ಗಳೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಹೆಚ್ಚು ವಿಕೆಟ್‌ ಕಬಳಿಸಿದ್ದರು. ಬಿಷ್ಣೋಯ್ ಆ ಸಾಧನೆಯನ್ನು ಪುನರಾವರ್ತನೆ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು