logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Leopards In Pipeline: ಮೈಸೂರಿನಲ್ಲಿ ಪೈಪ್‌ಲೈನ್‌ ಒಳಗೆ ಸೇರಿಕೊಂಡ ಚಿರತೆಗಳು: ಸೆರೆ ಹಿಡಿದ ಅರಣ್ಯ ಇಲಾಖೆ

Leopards in Pipeline: ಮೈಸೂರಿನಲ್ಲಿ ಪೈಪ್‌ಲೈನ್‌ ಒಳಗೆ ಸೇರಿಕೊಂಡ ಚಿರತೆಗಳು: ಸೆರೆ ಹಿಡಿದ ಅರಣ್ಯ ಇಲಾಖೆ

Jan 15, 2024 07:44 PM IST

ಮೈಸೂರು ನಗರದ ಹೊರವಲಯವಾಗಿರುವ ಇಲವಾಲ ಹೋಬಳಿ ರಾಮನಹಳ್ಳಿಯಲ್ಲಿ ಸೋಮವಾರ ಎರಡು ಚಿರತೆಗಳು ಸುಮಾರು 300 ಮೀಟರ್ ಉದ್ದದ ಹಳೆ ಪೈಪ್ ಲೈನ್ ಒಳಗೆ ಸೇರಿಕೊಂಡು ಬೆಚ್ಚಗೆ ಕುಳಿತಿದ್ದವು. ಇದನ್ನು ಗಮನಿಸಿದವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ತಾಯಿ ಹಾಗೂ ಮರಿಯನ್ನು ಸುರಕ್ಷಿತವಾಗಿ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಬಿಟ್ಟರು. ಹೀಗಿತ್ತು ಕಾರ್ಯಾಚರಣೆ

  • ಮೈಸೂರು ನಗರದ ಹೊರವಲಯವಾಗಿರುವ ಇಲವಾಲ ಹೋಬಳಿ ರಾಮನಹಳ್ಳಿಯಲ್ಲಿ ಸೋಮವಾರ ಎರಡು ಚಿರತೆಗಳು ಸುಮಾರು 300 ಮೀಟರ್ ಉದ್ದದ ಹಳೆ ಪೈಪ್ ಲೈನ್ ಒಳಗೆ ಸೇರಿಕೊಂಡು ಬೆಚ್ಚಗೆ ಕುಳಿತಿದ್ದವು. ಇದನ್ನು ಗಮನಿಸಿದವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ತಾಯಿ ಹಾಗೂ ಮರಿಯನ್ನು ಸುರಕ್ಷಿತವಾಗಿ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಬಿಟ್ಟರು. ಹೀಗಿತ್ತು ಕಾರ್ಯಾಚರಣೆ
ಚಳಿಗೆ ಬೆಚ್ಚನೆಯ ಜಾಗ ಎನ್ನುವಂತೆ ಮೈಸೂರು ಹೊರವಲಯದಲ್ಲಿ ನಡೆದಿರುವ ಪೈಪ್‌ಲೈನ್‌ ಕಾಮಗಾರಿಯ ಸ್ಥಳದಲ್ಲಿ ತಾಯಿ ಮರಿ ಚಿರತೆಗಳು ಸೇರಿಕೊಂಡಿದ್ದವು. ಯಾರಿಗೂ ತೊಂದರೆಯನ್ನೇನೂ ಮಾಡಿರಲಿಲ್ಲ. ಜನರ ಮೇಲೆ ದಾಳಿ ಮಾಡುವ ಮುನ್ನವೇ ಅರಣ್ಯ ಇಲಾಖೆ ಮೈಸೂರು ವಿಭಾಗದ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. 
(1 / 6)

ಮೊದಲು ಪೈಪ್‌ಲೈನ್‌ ಎರಡು ತುದಿಗಳನ್ನು ಬಂದ್‌ ಮಾಡಿ ಆನಂತರ ಚಿರತೆ ತಾಯಿ ಹಾಗೂ ಮರಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಯೋಜಿಸಿ ಯಶಸ್ವಿಯೂ ಆದರು. 
(2 / 6)

ಚಿರತೆಗಳು ಪೈಪ್‌ಲೈನ್‌ನಲ್ಲಿ ಸೇರಿರುವ ವಿಚಾರ ತಿಳಿದು ಅಕ್ಕಪಕ್ಕದ ಗ್ರಾಮಸ್ಥರು ಅಲ್ಲಿ ಸೇರಿದ್ದರು. ಅವರನ್ನು ದೂರವಿಟ್ಟು ಅರಣ್ಯ ಇಲಾಖೆ ಸಿಬ್ಬಂದಿ ಎಸಿಎಫ್‌ ಲಕ್ಷ್ಮಿಕಾಂತ್‌ ನೇತೃತ್ವದಲ್ಲಿ ಸೆರೆ ಕಾರ್ಯಾಚರಣೆ ಕೈಗೊಂಡರು.
(3 / 6)

ಸತತ ಕಾರ್ಯಾಚರಣೆಯ ಬಳಿಕ ಎರಡು ಚಿರತೆಗಳನ್ನು ಮೈಸೂರಿನ ಅರಣ್ಯ ಇಲಾಖೆ ಸಿಬ್ಬಂದಿ  ಸೆರೆ ಹಿಡಿದು ಕಾಡಿಗೆ ಬಿಡಲು ಬೋನುಗಳನ್ನು ಲಾರಿಗೆ ಏರಿಸಿದರು.
(4 / 6)

ಮೈಸೂರು ಹೊರವಲಯದ ಪೈಪ್‌ಲೈನ್‌ನಲ್ಲಿ ಸೇರಿಕೊಂಡಿದ್ದ ಎರಡು ಹೆಣ್ಣು ಚಿರತೆಗಳನ್ನು ಅರಣ್ಯ ಇಲಾಖೆಯವರು ಸುರಕ್ಷಿತವಾಗಿ ಸೆರೆ ಹಿಡಿದಾಗ ಎರಡೂ ಜತೆಯಾಗಿ ಇದ್ದುದು ಕಂಡುಬಂದಿತು. ಎರಡನ್ನೂ ಬೇರ್ಪಡಿಸದೇ ಜತೆಗೆ ಕಾಡಿಗೆ ಬಿಡಲಾಯಿತು.
(5 / 6)

ಅಮ್ಮನಿನ್ನ ತೋಳಿನಲ್ಲಿ ಕಂದಾ ನಾನು ಎನ್ನುವಂತೆ ನಾಲ್ಕು ತಿಂಗಳ ಮರಿಯೊಂದಿಗೆ ಆರೇಳು ವರ್ಷದ ತಾಯಿ ಚಿರತೆಯನ್ನು ಸೆರೆ ಹಿಡಿದು ಬೋನಿಗೆ ಸ್ಥಳಾಂತರಿಸಲಾಯಿತು.
(6 / 6)

    ಹಂಚಿಕೊಳ್ಳಲು ಲೇಖನಗಳು