logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Dasara 2024: ದಸರಾ ಅರಮನೆ ವೇದಿಕೆಯಲ್ಲಿ ಜನಪದ ಝೇಂಕಾರ, ಕ್ಲಾರಿಯೋನೆಟ್-‌ ಸ್ಯಾಕ್ಸೋಫೋನ್‌ ಜುಗುಲ್‌ ಬಂದಿ ರಸದೌತಣ Photos

Mysore Dasara 2024: ದಸರಾ ಅರಮನೆ ವೇದಿಕೆಯಲ್ಲಿ ಜನಪದ ಝೇಂಕಾರ, ಕ್ಲಾರಿಯೋನೆಟ್-‌ ಸ್ಯಾಕ್ಸೋಫೋನ್‌ ಜುಗುಲ್‌ ಬಂದಿ ರಸದೌತಣ photos

Oct 05, 2024 09:48 AM IST

ಮೈಸೂರು ಅರಮನೆ ಅಂಗಣದಲ್ಲಿ ದಸರಾ ಅಂಗವಾಗಿ ದಿಗ್ಗಜರ ಸಂಗೀತ ವೈಭವ. ಕ್ಲಾರಿಯೋನೆಟ್-‌ ಸ್ಯಾಕ್ಸೋಫೋನ್‌ ಜುಗುಲ್‌ ಬಂದಿ, ಜತೆಗೆ ಜನಪದ ಗೀತೆಗಳ ವೈಭವ. ಅದೂ ಕರ್ನಾಟಕದ ಪ್ರಮುಜ ಜನಪದ ಗಾಯಕರ ಸಂಗಮದ ಕ್ಷಣಗಳು ಹೀಗಿದ್ದವು.

  • ಮೈಸೂರು ಅರಮನೆ ಅಂಗಣದಲ್ಲಿ ದಸರಾ ಅಂಗವಾಗಿ ದಿಗ್ಗಜರ ಸಂಗೀತ ವೈಭವ. ಕ್ಲಾರಿಯೋನೆಟ್-‌ ಸ್ಯಾಕ್ಸೋಫೋನ್‌ ಜುಗುಲ್‌ ಬಂದಿ, ಜತೆಗೆ ಜನಪದ ಗೀತೆಗಳ ವೈಭವ. ಅದೂ ಕರ್ನಾಟಕದ ಪ್ರಮುಜ ಜನಪದ ಗಾಯಕರ ಸಂಗಮದ ಕ್ಷಣಗಳು ಹೀಗಿದ್ದವು.
ಕರ್ನಾಟಕ ಸಂಗೀತ ಕ್ಷೇತ್ರದ ದಿಗ್ಗಜ ಪಂಡಿತ್‌ ನರಸಿಂಹಲು ವಡವಾಟಿ ಹಾಗೂ ಸ್ಯಾಕ್ಸೋಫೋನ್‌ ವಾದಕ ಕದ್ರಿ ರಮೇಶ್‌ ನಾಥ್‌ ಅವರ ಜುಗುಲ್‌ ಬಂದಿ ಮೈಸೂರು ದಸರಾ ಅರಮನೆ ಆವರಣದಲ್ಲಿ ಗಮನ ಸೆಳೆಯಿತು
(1 / 6)

ತುಂತುರು ಮಳೆಯ ನಡುವೆಯೂ ಉತ್ತರ ಕರ್ನಾಟಕದ ವಡವಾಟಿ, ಕರಾವಳಿಯ ರಮೇಶ್‌ನಾಥ್‌ ಕದ್ರಿ ಅವರು ನಾದ ನಿನಾದದ ಮೂಲಕ ಸಂಗೀತ ಪ್ರಿಯರನ್ನು ಆಕರ್ಷಿಸಿದರು.
(2 / 6)

ಕದ್ರಿ ಗೋಪಾಲನಾಥ್‌ ಅವರ ನಿಧನದ ನಂತರ ಈಗ ಕದ್ರಿ ರಮೇಶ್‌ ನಾಥ್‌ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದ್ದು, ವಡವಾಟಿಯೊಂದಿಗೆ ನಡೆಸಿಕೊಟ್ಟ ಜುಗುಲ್‌ ಬಂದಿ ಕಲಾ ನೈಪುಣ್ಯತೆಯನ್ನು ಸಾರಿತು.
(3 / 6)

ಮೈಸೂರು ಅರಮನೆ ಅಂಗಳದಲ್ಲಿ ಜನಪದ ಗಾಯನ ಕ್ಷೇತ್ರದ ಮಿನುಗು ತಾರೆಗಳ ಸಂಗಮ. ದಶಕಗಳಿಂದ ಕರ್ನಾಟಲದಲ್ಲಿ ಮನೆಮಾತಾಗಿರುವ ಜನಪದ ಗಾಯನ ಮೈಸೂರು ಅರಮನೆ ವೇದಿಕೆಯಲ್ಲಿ ರಿಂಗಣಿಸಿತು.
(4 / 6)

ಹಿರಿಯ ಕಲಾವಿದರಾದ ಬಾನಂದೂರು ಕೆಂಪಯ್ಯ, ಗೊಲ್ಲಹಳ್ಳಿ ಶಿವಪ್ರಸಾದ್‌, ಪಿಚ್ಚಳ್ಳಿ ಶ್ರೀನಿವಾಸ್‌, ಜನ್ನಿ, ಸಿ.ಎಂ.ನರಸಿಂಹಮೂರ್ತಿ, ದೇವಾನಂದ ವರಪ್ರಸಾದ್‌ ಅವರು ಜನಪದ ಝೇಂಕಾರವನ್ನು ಪ್ರಸ್ತುತಪಡಿಸಿದರು.
(5 / 6)

ಜನಮನವನ್ನು ರೋಮಾಂಚನಗೊಳಿಸುವ ಜತೆಗೆ ಮುದಗೊಳಿಸುವ ಹತ್ತಾರು ಜನಪದ ಗೀತೆಗಳನ್ನು ಕರುನಾಡಿನ ಪ್ರಮುಖ ಕಲಾವಿದರು ಪ್ರಸ್ತುತಪಡಿಸಿ ಸಂಜೆಗೆ ಮೆರಗು ನೀಡಿದರು.
(6 / 6)

    ಹಂಚಿಕೊಳ್ಳಲು ಲೇಖನಗಳು