logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರು ದಸರಾ ಯುವ ಸಂಭ್ರಮದಲ್ಲಿ ದೇಶ ಭಕ್ತಿಯ ಪರಾಕಾಷ್ಠೆ, ಸರ್ವಧರ್ಮ ಸಹಿಷ್ಣುತೆಯ ಸಂದೇಶ, ಜೋಶ್‌ ನಡುವೆ ಗಮನ ಸೆಳೆದ ಕಾರ್ಯಕ್ರಮ

ಮೈಸೂರು ದಸರಾ ಯುವ ಸಂಭ್ರಮದಲ್ಲಿ ದೇಶ ಭಕ್ತಿಯ ಪರಾಕಾಷ್ಠೆ, ಸರ್ವಧರ್ಮ ಸಹಿಷ್ಣುತೆಯ ಸಂದೇಶ, ಜೋಶ್‌ ನಡುವೆ ಗಮನ ಸೆಳೆದ ಕಾರ್ಯಕ್ರಮ

Oct 01, 2024 05:48 PM IST

ಯುವ ಸಂಭ್ರಮ ಎಂದರೆ ಕಾಲೇಜು ವಿದ್ಯಾರ್ಥಿಗಳ ಜೋಶ್‌. ಬರೀ ಕುಣಿತಕ್ಕಿಂತ ಸಾಮಾಜಿಕ ಸಂದೇಶ ನೀಡುವ ವಿಷಯ ಆಧರಿಸಿ ನೀಡುತ್ತಿರುವ ಕಾರ್ಯಕ್ರಮ ಗಮನ ಸೆಳೆಯುತ್ತಿವೆ. ಗುರುವಾರ ರಾತ್ರಿ ಹಲವು ತಂಡಗಳ ಕಾರ್ಯಕ್ರಮ ವೈಖರಿ ಹೀಗಿತ್ತು.

  • ಯುವ ಸಂಭ್ರಮ ಎಂದರೆ ಕಾಲೇಜು ವಿದ್ಯಾರ್ಥಿಗಳ ಜೋಶ್‌. ಬರೀ ಕುಣಿತಕ್ಕಿಂತ ಸಾಮಾಜಿಕ ಸಂದೇಶ ನೀಡುವ ವಿಷಯ ಆಧರಿಸಿ ನೀಡುತ್ತಿರುವ ಕಾರ್ಯಕ್ರಮ ಗಮನ ಸೆಳೆಯುತ್ತಿವೆ. ಗುರುವಾರ ರಾತ್ರಿ ಹಲವು ತಂಡಗಳ ಕಾರ್ಯಕ್ರಮ ವೈಖರಿ ಹೀಗಿತ್ತು.
ನಾಡ ಹಬ್ಬ ದಸರಾ ಪ್ರಯುಕ್ತ ನಡೆಯುವ ಯುವ ಸಂಭ್ರಮ ಕಾರ್ಯಕ್ರಮವು ನಗರದ ಮಾನಸ ಗಂಗೋತ್ರಿಯ ಬಯಲುರಂಗ ಮಂದಿರದಲ್ಲಿ ಆಯೋಜಿಸಿದ 3 ನೇ ದಿನದ ಕಾರ್ಯಕ್ರಮದಲ್ಲಿ ಎಂದಿನಂತೆ ಕಿಕ್ಕಿರಿದ ಜನಸಾಗರದಿಂದ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಎತ್ತಿಹಿಡಿಯುವಂತಹ 57 ಕಲಾ ತಂಡಗಳಿಂದ  ಕಾರ್ಯಕ್ರಮಗಳು ಅದ್ಧೂರಿಯಾಗಿ ಪ್ರದರ್ಶನಗೊಂಡಿತ್ತು.
(1 / 8)

ಅದರಲ್ಲೂ ದೇಶ ಭಕ್ತಿ ಮೂಡಿಸುವ, ಸರ್ವಧರ್ಮಗಳ ಸಮನ್ವಯ ಸಾರುವ ಸಂದೇಶದೊಂದಿಗೆ ಹಲವಾರು ನೃತ್ಯ ರೂಪಕಗಳು ಗಮನ ಸೆಳೆದವು.
(2 / 8)

ಮೈಸೂರು ಆಳಿದ ದೊರೆ ಕೃಷ್ಣರಾಜ ಒಡೆಯರ್‌ ಅವರ ಸೇವೆಯನ್ನು ನೆನೆಯುವ ನೃತ್ಯ ರೂಪಕ ವಿಶೇಷವಾಗಿತ್ತು.
(3 / 8)

ಭಾರತ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಇನ್ನಿಲ್ಲದ ಸಾಧನೆ ಮಾಡಿದೆ. ಅದರಲ್ಲೂ ಉಪಗ್ರಹ ಉಡಾವಣೆಯಲ್ಲಿ ಭಾರತದ ಅನನ್ಯ ಸಾಧನೆಯನ್ನು ಕಾಲೇಜು ವಿದ್ಯಾರ್ಥಿ ಯುವ ಸಂಭ್ರಮದಲ್ಲಿ ನೆನೆದರು.
(4 / 8)

ಯುವ ಸಂಭ್ರಮವೆಂದರೆ ಮನರಂಜನೆಯ ಕಾರ್ಯಕ್ರಮ. ಈ ಮನರಂಜನೆಯಲ್ಲಿ  ದಸರಾ ಪರಂಪರೆ, ಕರ್ನಾಟಕ ವೈಭವ,  ಮರ್ಯಾದೆ ಪುರುಷೋತ್ತಮ ಶ್ರೀ ರಾಮನ ಚರಿತ್ರೆ, ಮಹಿಳಾ ಸಬಲೀಕರಣ, ಅನ್ನದಾತ ರೈತನ ದಿನಜೀವನದ ಬಗ್ಗೆ, ಭಾರತ ಸಂವಿಧಾನದ ಶಿಲ್ಪಿ ಡಾ.ಭೀಮರಾವ್ ಅಂಬೇಡ್ಕರ್ ಅವರ ಜೀವನ ಕಥೆ, ಕನ್ನಡ ನಾಡು ನುಡಿ ಸಾಹಿತ್ಯ, ಭಾರತೀಯ ವೀರ ಯೋಧರ ತ್ಯಾಗ ಬಲಿದಾನ,ಮಹದೇಶ್ವರ ಜಾನಪದ ನೃತ್ಯ,ಸೇರಿದಂತೆ ಹಲವಾರು ಕಲಾ ತಂಡಗಳು ಮನರಂಜಿಸಿದರು. ಭಾರತ ಸಾಧನೆಯಿಂದಲೇ ವಿಶ್ವದ ಪ್ರಮುಖ ದೇಶವಾಗಿ ರೂಪುಗೊಂಡಿದೆ. ಇದಕ್ಕೆ ನಮ್ಮೆಲರ ಸಲಾಮ ಎಂದು ಕಲಾಂ ಸಹಿತ ಹಲವರನ್ನು ನೆನೆದರು.
(5 / 8)

ಚಾಮರಾಜನಗರದ ವೈ ಎಂ ಮಲ್ಲಿಕಾರ್ಜುನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನವತಿಯಿಂದ ಮಹಾನ್ ದೇಶಭಕ್ತ ನಾಡ ಪ್ರೇಮಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುರಿತು ಪ್ರದರ್ಶನ, ನಗರದ ಹುಣಸೂರ ತಾಲೂಕಿನ ವಿ. ಎಸ್. ಎಸ್.ಪ್ರಥಮ ದರ್ಜೆ ಕಾಲೇಜಿನಿಂದ ರಾಷ್ಟ್ರೀಯ ಭಾವೈಕ್ಯತೆ ವಿವಿಧತೆಯಲ್ಲಿ ಏಕತೆ  ಹಾಗೂ ನಗರದ ಜಯಲಕ್ಷ್ಮಿಪುರಂನ ವಿವೇಕಾನಂದ ಪದವಿ ಪೂರ್ವ ಕಾಲೇಜುನಿಂದ ಸಂವಿಧಾನ ಮತ್ತು ಶಾಸನಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಪ್ರದರ್ಶಿಸಿದರು.
(6 / 8)

 ಯುವ ಸಂಭ್ರಮದಲ್ಲಿ  ತಿಲಕ್ ನಗರ ಮೈಸೂರಿನ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದ ವತಿಯಿಂದ ಅಹಿಂದ ನಾಯಕ ಡಿ ದೇವರಾಜ ಅರಸ್ ಅವರ ಸಾಧನೆಯ ಬಗ್ಗೆ ಪ್ರದರ್ಶನ  ಎಲ್ಲರ ಮನಸೆಳೆಯಿತು.
(7 / 8)

ಮೈಸೂರಿನಲ್ಲಿ ನಡೆದಿರುವ ಯುವ ಸಂಭ್ರಮ ದಸರಾ ಚಟುವಟಿಕೆಗಳನ್ನು ವೀಕ್ಷಿಸಲು ಆಗಮಿಸಿದ್ದ ಯುವ ಸಮೂಹ.
(8 / 8)

    ಹಂಚಿಕೊಳ್ಳಲು ಲೇಖನಗಳು