logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chunchanakatte Falls: ಕೊಡಗಲ್ಲಿ ಮಳೆ, ಕಾವೇರಿ ನದಿ ನೀರಿನಿಂದ ಚುಂಚನಕಟ್ಟೆ ಜಲಪಾತಕ್ಕೂ ಕಳೆ

Chunchanakatte Falls: ಕೊಡಗಲ್ಲಿ ಮಳೆ, ಕಾವೇರಿ ನದಿ ನೀರಿನಿಂದ ಚುಂಚನಕಟ್ಟೆ ಜಲಪಾತಕ್ಕೂ ಕಳೆ

Jul 02, 2024 02:37 PM IST

Cauvery falls ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ( Saligrama taluk) ಚುಂಚನಕಟ್ಟೆ ಜಲಪಾತವು ಪ್ರವಾಸಿಗರನ್ನು( tourist spot) ಆಕರ್ಷಿಸುತ್ತಿದೆ. ಅಲ್ಲಿನ ವಿಶೇಷ ಚಿತ್ರಣ ಇಲ್ಲಿದೆ.

  • Cauvery falls ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ( Saligrama taluk) ಚುಂಚನಕಟ್ಟೆ ಜಲಪಾತವು ಪ್ರವಾಸಿಗರನ್ನು( tourist spot) ಆಕರ್ಷಿಸುತ್ತಿದೆ. ಅಲ್ಲಿನ ವಿಶೇಷ ಚಿತ್ರಣ ಇಲ್ಲಿದೆ.
ಮೈಸೂರಿನಿಂದ ಕೆಆರ್‌ನಗರ ಮಾರ್ಗವಾಗಿ ಸಾಲಿಗ್ರಾಮ ಕ್ಕೆ ಹೋಗುವಾಗ ಸಿಗುವ ಪ್ರಮುಖ ಪ್ರವಾಸಿ ತಾಣವೇ ಚುಂಚನಕಟ್ಟೆ. ಕೆಲವು ದಿನಗಳಿಂದ ಮಳೆ ಇಲ್ಲದೇ ಸಣ್ಣಗೆ ಜರಿ  ರೀತಿಯಲ್ಲಿ ಜಲಪಾತ ಹರಿಯುತ್ತಿತ್ತು.
(1 / 6)

ಕೊಡಗು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ನಿಧಾನವಾಗಿ ಚುಂಚನಕಟ್ಟೆ ಜಲಪಾತಕ್ಕೆ ನೀರು ಹರಿದು ಬರುತ್ತಿದೆ. 
(2 / 6)

ಕೊಡಗಿನಲ್ಲಿ ಮಳೆ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಚುಂಚನಕಟ್ಟೆ ಜಲಪಾತದಲ್ಲೂ ಮಂಗಳವಾರ ನೀರಿನ ಪ್ರಮಾಣ ಏರಿಕೆ ಕಂಡಿತು.
(3 / 6)
ಕೊಡಗಿನಲ್ಲಿ ಮಳೆ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಚುಂಚನಕಟ್ಟೆ ಜಲಪಾತದಲ್ಲೂ ಮಂಗಳವಾರ ನೀರಿನ ಪ್ರಮಾಣ ಏರಿಕೆ ಕಂಡಿತು.(ಚಿತ್ರ: ವಿನಯ್‌ ದೊಡ್ಡಕೊಪ್ಪಲು )
ಧನುಷ್ಕೋಟಿ ಮೂಲಕ ಹರಿಯುವ ಕಾವೇರಿ ನದಿಯನ್ನು ಇಲ್ಲಿ ನೋಡುವುದೇ ಚಂದ. ಹಲವು ಚಿತ್ರಗಳ ಚಿತ್ರೀಕರಣವೂ ಇಲ್ಲಿ ಆಗಿದೆ. ಹಾಸನ, ಕೊಡಗಿನಿಂದಲೂ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ.
(4 / 6)

ಚುಂಚನಕಟ್ಟೆ ಜಲಪಾತ ಹಾಗೂ ಕಾವೇರಿ ತೀರದಲ್ಲಿರುವ ರಾಮದೇವರ ದೇವಸ್ಥಾನ ಪುರಾತನವಾದದ್ದು. ಜಲಪಾತ ನೋಡಲು ಬರುವವರು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. 
(5 / 6)

ರಾಮದೇಗುಲಕ್ಕೆ ಈಗ ಆಂಜನೇಯನೂ ಬಂದಿದ್ದಾನೆ,. ಬೃಹತ್‌ ಗಾತ್ರದ ಆಂಜನೇಯನ ಮೂರ್ತಿಯೂ ದೇಗುಲದ ಎದುರಿನಲ್ಲೇ ನಿರ್ಮಾಣಗೊಂಡಿದ್ದು ಜಲಪಾತದೊಂದಿಗೆ ವಿಹಂಗಮ ನೋಟಕ್ಕೆ ಅವಕಾಶ ಮಾಡಿಕೊಡುತ್ತದೆ.
(6 / 6)

    ಹಂಚಿಕೊಳ್ಳಲು ಲೇಖನಗಳು