logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysuru Dasara: ಅರಮನೆಯಲ್ಲಿ ಚಿನ್ನದ ಸಿಂಹಾಸನ ಜೋಡಣೆ: ಮೈಸೂರು ದಸರಾಗೂ ಎಲ್ಲೆಲ್ಲೂ ಸಿದ್ದತೆ ಸಡಗರ

Mysuru Dasara: ಅರಮನೆಯಲ್ಲಿ ಚಿನ್ನದ ಸಿಂಹಾಸನ ಜೋಡಣೆ: ಮೈಸೂರು ದಸರಾಗೂ ಎಲ್ಲೆಲ್ಲೂ ಸಿದ್ದತೆ ಸಡಗರ

Oct 09, 2023 02:56 PM IST

Mysuru Dasara preparations ಈ ಬಾರಿ ಸರಳ, ಸಾಂಪ್ರದಾಯಿಕ ಎಂದು ಸರ್ಕಾರ ಹೇಳಿದರೂ ಮೈಸೂರಿನಲ್ಲಿ ದಸರಾ ಹಬ್ಬಕ್ಕೆ ಸಿದ್ದತೆ ಜೋರಾಗಿದೆ. ಅರಮನೆ ಸುಣ್ಣ ಬಣ್ಣದಿಂದ ಕಂಗೊಳಿಸುತ್ತಿದೆ. ಹಲವು ವೃತ್ತಗಳ ದುರಸ್ತಿ ಕಾರ್ಯವೂ ನಡೆದಿದೆ. ಮೈಸೂರು ಅರಮನೆ ಆವರಣದಲ್ಲಿ ಹಿಂದಿನ ವೈಭವಕ್ಕೆ ಮರಳುವ ಖಾಸಗಿ ದರ್ಬಾರ್‌ನ ಚಿನ್ನದ ಸಿಂಹಾಸವನ್ನು ಜೋಡಿಸುವ ಪೂಜಾ ವಿಧಾನಗಳೂ ಜರುಗಿವೆ.

  • Mysuru Dasara preparations ಈ ಬಾರಿ ಸರಳ, ಸಾಂಪ್ರದಾಯಿಕ ಎಂದು ಸರ್ಕಾರ ಹೇಳಿದರೂ ಮೈಸೂರಿನಲ್ಲಿ ದಸರಾ ಹಬ್ಬಕ್ಕೆ ಸಿದ್ದತೆ ಜೋರಾಗಿದೆ. ಅರಮನೆ ಸುಣ್ಣ ಬಣ್ಣದಿಂದ ಕಂಗೊಳಿಸುತ್ತಿದೆ. ಹಲವು ವೃತ್ತಗಳ ದುರಸ್ತಿ ಕಾರ್ಯವೂ ನಡೆದಿದೆ. ಮೈಸೂರು ಅರಮನೆ ಆವರಣದಲ್ಲಿ ಹಿಂದಿನ ವೈಭವಕ್ಕೆ ಮರಳುವ ಖಾಸಗಿ ದರ್ಬಾರ್‌ನ ಚಿನ್ನದ ಸಿಂಹಾಸವನ್ನು ಜೋಡಿಸುವ ಪೂಜಾ ವಿಧಾನಗಳೂ ಜರುಗಿವೆ.
ಮೈಸೂರಿನ ದಸರಾದ ಪ್ರಮುಖ ಚಟುವಟಿಕೆಗಳಲ್ಲಿ ಒಂದಾದ ಖಾಸಗಿ ದರ್ಬಾರ್‌. ಎಂಟು ವರ್ಷ ಹಳೆಯದಾದ 280 ಕೆಜಿ ತೂಗುವ ಚಿನ್ನದ ಸಿಂಹಾಸನ ಜೋಡಣೆ ಸೋಮವಾರ ನಡೆಯಿತು. ಇದರ ಮೇಲೆಯೇ ಕುಳಿತು ರಾಜವಂಶಸ್ಥ ಯದುವೀರ್‌ ಒಡೆಯರ್‌ ಖಾಸಗಿ ದರ್ಬಾರ್‌ ಆರಂಭಿಸುತ್ತಾರೆ. ಸಂಪೂರ್ಣ ಖಾಸಗಿ ಕಾರ್ಯಕ್ರಮವಾದರೂ ಇದು ರಾಜವೈಭವವನ್ನು ನೆನಪಿಸುತ್ತದೆ.
(1 / 6)

ದಸರಾದ ಪ್ರಮುಖ ಆಕರ್ಷಣೆಯಾದ ಖಾಸಗಿ ದರ್ಬಾರ್‌ ನಡೆಯುವ ದರ್ಬಾರ್‌ ಹಾಲ್‌ ಸೇರಿದಂತೆ ಹಲವು ಕಡೆ ದುರಸ್ತಿ ಕಾರ್ಯ ಅರಮನೆ ಮಂಡಳಿಯಿಂದ ನಡೆದಿದೆ. 
(2 / 6)

ಮೈಸೂರು ಆಳಿದ ಪ್ರಮುಖರಾದ ಕೃಷ್ಣರಾಜ ಒಡೆಯರ್‌ ಅವರ ವೃತ್ತದಲ್ಲಿ ದುರಸ್ತಿ ಕಾರ್ಯಗಳು ಭರದಿಂದ ಸಾಗಿವೆ. ಇದೇ ಮಾರ್ಗದಲ್ಲಿ ಜಂಬೂ ಸವಾರಿ ನಡೆಯುವುದರಿಂದ ಪ್ರತಿ ವರ್ಷ ಸ್ವಚ್ಛತೆ ಕೈಗೊಳ್ಳಲಾಗುತ್ತದೆ.
(3 / 6)

ಮೈಸೂರು ದಸರಾದ ಮುಖ್ಯ ಆಕರ್ಷಣೆ ಜಂಬೂ ಸವಾರಿ. ಸುಮಾರು ನಾಲ್ಕೂವರೆ ಕಿ.ಮಿ ಸಂಚರಿಸುವ ಜಂಬೂ ಸವಾರಿ ಮಾರ್ಗದುದ್ದಕ್ಕೂ ಬೆಳೇದಿರುವ ಮರದ ಕೊಂಬೆ ತೆಗೆಯುವ ಚಟುವಟಿಕೆಯನ್ನೂ ಕೈಗೊಳ್ಳಲಾಗಿದೆ. 
(4 / 6)

ಮೈಸೂರು ದಸರಾ ವೇಳೆ ಇಡೀ ನಗರ ದೀಪಧಾರಣಿಯಂತೆ ಜಗಮಗಿಸುತ್ತದೆ. ಪ್ರಮುಖ ರಸ್ತೆ, ವೃತ್ತ, ಕಟ್ಟಡಗಳಿಗೆ ದೀಪಾಲಂಕಾರಕ್ಕೆ ಬೇಕಾದ ದೀಪಗಳ ಅಳವಡಿಕೆ ಕಾರ್ಯವೂ ಬಹುತೇಕ ಕಡೆ ಸಾಗಿದೆ., ಚಿತ್ರ: ರವಿಕೀರ್ತಿ ಗೌಡ ಮೈಸೂರು
(5 / 6)

ಮೈಸೂರು ದಸರಾ ವೇಳೆ ಆಕರ್ಷಿಸುವ ದೀಪಾಲಂಕಾರಕಲ್ಕೆ ಹಲವು ಕಡೆ  ಅಲಂಕಾರಿಕ ದೀಪಗಳನ್ನು ಅಳವಡಿಸಿ ಪ್ರಾಯೋಗಿಕ ಪರೀಕ್ಷೆಗಳು ಹಲವು ಮಾರ್ಗಗಳಲ್ಲಿ ನಡೆದಿವೆ. 
(6 / 6)

    ಹಂಚಿಕೊಳ್ಳಲು ಲೇಖನಗಳು