logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Arun Yogiraj: ಗಮನಸೆಳೆಯುತ್ತಿವೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್‌ ಕೆಲಸಗಳು; ಆಯ್ದ ಶಿಲ್ಪಗಳ ಸಚಿತ್ರ ವಿವರ ಇಲ್ಲಿದೆ

Arun Yogiraj: ಗಮನಸೆಳೆಯುತ್ತಿವೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್‌ ಕೆಲಸಗಳು; ಆಯ್ದ ಶಿಲ್ಪಗಳ ಸಚಿತ್ರ ವಿವರ ಇಲ್ಲಿದೆ

Jan 03, 2024 03:14 PM IST

ಅಯೋಧ್ಯೆಯ ರಾಮಮಂದಿರದ ರಾಮಲಲಾ (ಬಾಲರಾಮ) ವಿಗ್ರಹದ ಕಾರಣ ಹೆಚ್ಚು ಸುದ್ದಿಯಲ್ಲಿದ್ದಾರೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್‌. ದೇಶದ ಪ್ರಸಿದ್ಧ ಶಿಲ್ಪಿಗಳಲ್ಲಿ ಒಬ್ಬರು. ದೆಹಲಿಯ ಸುಭಾಷ್‌ಚಂದ್ರ ಬೋಸರ ಪ್ರತಿಮೆ, ಕೇದಾರನಾಥದ ಶಂಕರಾಚಾರ್ಯರ ಮೂರ್ತಿಗಳನ್ನು ನಿರ್ಮಿಸಿಕೊಟ್ಟಾಗಲೂ ಸುದ್ದಿಯಾಗಿದ್ದರು. ಅವರ ಕೆಲಸ, ಕುಟುಂಬ ಮತ್ತು ಆಯ್ದ ಶಿಲ್ಪಗಳ ಫೋಟೋ ವರದಿ ಇಲ್ಲಿದೆ. 

ಹಿಂದೊಮ್ಮೆ ಮಾಡಿದ್ದ ಸಪರಿವಾರ ಸೀತಾರಾಮಚಂದ್ರರ ಮೂರ್ತಿ ಜೊತೆಗೆ ಅರುಣ್‌ ಯೋಗಿರಾಜ್‌,. ಇನ್ನೊಂದು ಚಿತ್ರದಲ್ಲಿ ದೆಹಲಿಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ಚಂದ್ರ ಬೋಸ್‌ ಅವರ ಬೃಹತ್ ಪ್ರತಿಮೆಯನ್ನು ಕೂಡ ಅರುಣ್ ಯೋಗಿರಾಜ್ ನಿರ್ಮಿಸಿದರು. 280 ಟನ್ ತೂಕದ ಕಪ್ಪು ಶಿಲೆಯಲ್ಲಿ ಈ ಮೂರ್ತಿ ನಿರ್ಮಿಸಲು ಅವರಿಗೆ 75 ದಿನ ಬೇಕಾಯಿತು ಎಂದು ಟ್ವೀಟ್ ಮಾಡಿದ್ದಾರೆ.
(1 / 7)

ಇದು ಕೇದಾರನಾಥದಲ್ಲಿರುವ ಆದಿಗುರ ಶ್ರೀಶಂಕರಾಚಾರ್ಯರ ಮೂರ್ತಿ. ಇದನ್ನು ಕೂಡ ಅರುಣ್ ಯೋಗಿರಾಜ್ ನಿರ್ಮಿಸಿದ್ದಾರೆ. ಎರಡು ವರ್ಷದ ಹಿಂದೆ ಈ ಕೆಲಸ ಮಾಡಿದ್ದರು.
(2 / 7)

ಮೈಸೂರಿನ ರೈಲ್ವೆ ನಿಲ್ಧಾಣದ ಆವರಣದಲ್ಲಿರುವ ಕಂಚಿನ ಪ್ರತಿಮೆಗಳು ಕೂಡ ಅರುಣ್ ಯೋಗಿರಾಜ್ ಅವರ ಕೈಚಳಕದಲ್ಲೇ ಮೂಡಿರುವಂಥವು. ಅವುಗಳ ಜತೆಗೆ ನಿಂತಿರುವ ಅರುಣ್ ಯೋಗಿರಾಜ್‌. ಅವರು ಇದುವರೆಗೆ 1500 ರಿಂದ 2000 ಮೂರ್ತಿಗಳನ್ನು ಕೆತ್ತಿದ್ದಾರೆ. ಈ ಪೈಕಿ ಮೈಸೂರಿನ ಹಾರ್ಡಿಂಜ್ ಸರ್ಕಲ್​ನಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ, ಟೌನ್ ಹಾಲ್​ನಲ್ಲಿರುವ ಅಂಬೇಡ್ಕರ್ ಪ್ರತಿಮೆ, ಮೈಸೂರಿನ ಪಾರಂಪರಿಕ ರೈಲ್ವೆ ನಿಲ್ದಾಣದಲ್ಲಿರುವ ಲೈಫ್ ಇಸ್ ಜರ್ನಿ ಪ್ರತಿಮೆಗಳು ಕೂಡ ಸೇರಿಕೊಂಡಿವೆ.
(3 / 7)

ಅಮೃತಶಿಲೆಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ನಿರ್ಮಾಣದ ಕಾರ್ಯದಲ್ಲಿ ಮಗ್ನರಾಗಿದ್ದ ಅರುಣ್ ಯೋಗಿರಾಜ್‌.
(4 / 7)

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಳೆತ್ತರದ ಪ್ರತಿಮೆ ನಿರ್ಮಿಸಿದ್ದ ಅರುಣ್‌ ಯೋಗಿರಾಜ್‌, ಎರಡೂವರೆ ಅಡಿ ಎತ್ತರದ ನಂದಿ ಮೂರ್ತಿಯನ್ನೂ ರಚಿಸಿದ್ದಾರೆ. ವಿವಿಧ ದೇಗುಲಗಳಲ್ಲಿರುವ ದೇವರ ವಿಗ್ರಹಗಳು ಅರುಣ್ ಯೋಗಿರಾಜ್ ಅವರ ಕೈಚಳಕದಲ್ಲೇ ಮೂಡಿರುವಂಥವು.
(5 / 7)

ಹೊರನಾಡು ಕ್ಷೇತ್ರದಲ್ಲಿರುವ ಅನ್ನಪೂರ್ಣೇಶ್ವರಿ ದೇವಿ ಮತ್ತು ಕೆಆರ್ ನಗರ ತಾಲೂಕಿನ ಸಾಲಿಗ್ರಾಮದಲ್ಲಿರುವ ಯೋಗ ನರಸಿಂಹ ಮೂರ್ತಿಯನ್ನೂ ನಿರ್ಮಿಸಿದವರು ಕೂಡ ಅರುಣ್.
(6 / 7)

ಕೆಆರ್‌ಎಸ್‌ ವೇಣುಗೋಪಾಲಸ್ವಾಮಿ ದೇವಸ್ಥಾನದ ಗರುಡ ವಿಗ್ರಹದ ಜತೆಗೆ ಅರುಣ್ ಯೋಗಿರಾಜ್‌. ಅಯೋಧ್ಯೆಯ ಬಾಲರಾಮನ ವಿಗ್ರಹದ ಕಾರಣಕ್ಕೆ ಸುದ್ದಿಯಲ್ಲಿರುವ ಅರುಣ್ ಯೋಗಿರಾಜ್ ಕುಟುಂಬ ಮೈಸೂರಲ್ಲಿ ನೆಲೆಸಿದೆ. ಅರುಣ್ ಯೋಗಿರಾಜ್ ಎಂಬಿಎ ಪದವೀಧರರಾಗಿದ್ದು, ಉದ್ಯೋಗ ಬಿಟ್ಟು, ಶಿಲ್ಪಕಲೆಯನ್ನೇ ಉದ್ಯೋಗವಾಗಿ ಸ್ವೀಕರಿಸಿದವರು ಅರುಣ್‌. ಅವರ ಪತ್ನಿ ವಿಜೇತಾ, ಪುತ್ರಿಯರು. ಅಮ್ಮ ಸರಸ್ವತಿ, ಅಪ್ಪ ಯೋಗಿರಾಜ್. ಮುತ್ತಾತ ಬಸವಣ್ಣ ಮೈಸೂರು ಒಡೆಯರ ಅರಮನೆಯಲ್ಲಿ ಕೆಲಸ ಮಾಡಿದ್ದರು. ಐದು ತಲೆಮಾರಿನಿಂದ ಶಿಲ್ಪಕಲೆಯಲ್ಲಿ ತೊಡಗಿಕೊಂಡಿರುವ ಕುಟುಂಬ ಅರುಣ್ ಯೋಗಿರಾಜ್ ಅವರದ್ದು. 
(7 / 7)

    ಹಂಚಿಕೊಳ್ಳಲು ಲೇಖನಗಳು