ಕನ್ನಡ ಸುದ್ದಿ /
ಫೋಟೋ ಗ್ಯಾಲರಿ /
National Hugging Day: ಹೃದಯದ ಆರೋಗ್ಯದಿಂದ ಒತ್ತಡ ನಿವಾರಣೆವರೆಗೆ, ಅಪ್ಪಿಕೊಳ್ಳುವುದರಿಂದ ದೇಹ, ಮನಸ್ಸಿಗೆ ಇಷ್ಟೆಲ್ಲಾ ಪ್ರಯೋಜನಗಳಿವೆ ಒಂದೇ ಒಂದು ಮಾತು ಹೇಳದೇ ಮನಸ್ಸಿನ ಭಾವನೆಗಳನ್ನು ಅರ್ಥೈಸುವ ಶಕ್ತಿ ಅಪ್ಪುಗೆಗಿದೆ. ಅದು ಸ್ವಾಂತನದ ಸೆಲೆಯೂ ಹೌದು. ಅಪ್ಪುಗೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 21ರಂದು ರಾಷ್ಟ್ರೀಯ ಅಪ್ಪುಗೆಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಸಂದರ್ಭ ಅಪ್ಪುಗೆಯಿಂದ ದೇಹ, ಮನಸ್ಸಿಗೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
- ಒಂದೇ ಒಂದು ಮಾತು ಹೇಳದೇ ಮನಸ್ಸಿನ ಭಾವನೆಗಳನ್ನು ಅರ್ಥೈಸುವ ಶಕ್ತಿ ಅಪ್ಪುಗೆಗಿದೆ. ಅದು ಸ್ವಾಂತನದ ಸೆಲೆಯೂ ಹೌದು. ಅಪ್ಪುಗೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 21ರಂದು ರಾಷ್ಟ್ರೀಯ ಅಪ್ಪುಗೆಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಸಂದರ್ಭ ಅಪ್ಪುಗೆಯಿಂದ ದೇಹ, ಮನಸ್ಸಿಗೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
(1 / 10)ನಮ್ಮ ಮನಸ್ಸಿಗೆ ಅದೆಷ್ಟೇ ನೋವು, ಬೇಸರ ಇದ್ದರೂ ಆತ್ಮೀಯರ ಆ ಒಂದು ಅಪ್ಪುಗೆ ನಮಗೆ ಅದೆಷ್ಟೋ ಸಮಾಧಾನ ನೀಡುತ್ತದೆ. ಅಪ್ಪುಗೆಯಲ್ಲಿ ಏನೋ ಒಂದು ಮಾಂತ್ರಿಕ ಶಕ್ತಿ ಇರುವ...ಮತ್ತಷ್ಟು ಓದು
ನಮ್ಮ ಮನಸ್ಸಿಗೆ ಅದೆಷ್ಟೇ ನೋವು, ಬೇಸರ ಇದ್ದರೂ ಆತ್ಮೀಯರ ಆ ಒಂದು ಅಪ್ಪುಗೆ ನಮಗೆ ಅದೆಷ್ಟೋ ಸಮಾಧಾನ ನೀಡುತ್ತದೆ. ಅಪ್ಪುಗೆಯಲ್ಲಿ ಏನೋ ಒಂದು ಮಾಂತ್ರಿಕ ಶಕ್ತಿ ಇರುವುದು ಸುಳ್ಳಲ್ಲ. ಅಪ್ಪಿಕೊಳ್ಳುವುದು ಕೇವಲ ಆತ್ಮೀಯತೆಯನ್ನು ಸೂಚಿಸುವ ಭಾವವಷ್ಟೇ ಅಲ್ಲ, ಅದಕ್ಕೂ ಮೀರಿದ ಹಲವು ಅರ್ಥಗಳು ಅಪ್ಪುಗೆಗಿದೆ. ಸ್ವಾಂತನದ ಸೆಲೆಯೇ ಆಗಿರುವ ಅಪ್ಪುಗೆಯಿಂದ ಅಥವಾ ಅಪ್ಪಿಕೊಳ್ಳುವುದರಿಂದ ದೇಹ ಮನಸ್ಸಿಗೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ.(PC: Canva) (2 / 10)ಒಂದು ಅಪ್ಪುಗೆಯು ನಮ್ಮಲ್ಲಿ ಶಕ್ತಿ, ಭರವಸೆ, ಪ್ರೀತಿ, ಸಂತೋಷ ತುಂಬಲು ಕಾರಣವಾಗುತ್ತದೆ. ಇಂತಹ ಅಪ್ಪುಗೆಯ ಮಹತ್ವ ತಿಳಿಸುವ ಸಲುವಾಗಿ ಪ್ರತಿವರ್ಷ ಜನವರಿ 21 ರಂದು ರ...ಮತ್ತಷ್ಟು ಓದು
ಒಂದು ಅಪ್ಪುಗೆಯು ನಮ್ಮಲ್ಲಿ ಶಕ್ತಿ, ಭರವಸೆ, ಪ್ರೀತಿ, ಸಂತೋಷ ತುಂಬಲು ಕಾರಣವಾಗುತ್ತದೆ. ಇಂತಹ ಅಪ್ಪುಗೆಯ ಮಹತ್ವ ತಿಳಿಸುವ ಸಲುವಾಗಿ ಪ್ರತಿವರ್ಷ ಜನವರಿ 21 ರಂದು ರಾಷ್ಟ್ರೀಯ ಅಪ್ಪುಗೆ ದಿನವನ್ನು ಆಚರಿಸಲಾಗುತ್ತದೆ. 1986 ಮಾರ್ಚ್ 29 ರಂದು, ಮಿಚಿಗನ್‌ನ ಕ್ಯಾರೊದಲ್ಲಿ ರೆವರೆಂಡ್ ಕೆವಿನ್ ಜಬೋರ್ನಿ ಅಪ್ಪುಗೆಯ ದಿನದ ಆಚರಣೆಯನ್ನು ಆರಂಭಿಸುತ್ತಾರೆ. ಒತ್ತಡ ಕಡಿಮೆಯಾಗುವುದರಿಂದ ಹೃದಯದ ಆರೋಗ್ಯ ಸುಧಾರಣೆಯಾಗುವವರೆಗೆ ಅಪ್ಪಿಕೊಳ್ಳುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ. (3 / 10)ಒತ್ತಡ, ನೋವು ಕಡಿಮೆಯಾಗುತ್ತದೆ: ನಾವು ಬೇಸರದಲ್ಲಿದ್ದಾಗ ಯಾರಾದರೂ ಆತ್ಮೀಯರು ನಮ್ಮನ್ನು ಅಪ್ಪಿಕೊಂಡಾಗ ಅಥವಾ ನಮ್ಮ ಆತ್ಮೀಯರು ನೋವು, ಒತ್ತಡ ಬೇಸರದಲ್ಲಿದ್ದಾಗ ನಾವ...ಮತ್ತಷ್ಟು ಓದು
ಒತ್ತಡ, ನೋವು ಕಡಿಮೆಯಾಗುತ್ತದೆ: ನಾವು ಬೇಸರದಲ್ಲಿದ್ದಾಗ ಯಾರಾದರೂ ಆತ್ಮೀಯರು ನಮ್ಮನ್ನು ಅಪ್ಪಿಕೊಂಡಾಗ ಅಥವಾ ನಮ್ಮ ಆತ್ಮೀಯರು ನೋವು, ಒತ್ತಡ ಬೇಸರದಲ್ಲಿದ್ದಾಗ ನಾವು ಅವರನ್ನು ಅಪ್ಪಿಕೊಂಡರೆ ಆ ಕ್ಷಣಕ್ಕೆ ಎಲ್ಲಾ ದುಃಖಗಳು, ನೋವು, ಒತ್ತಡ ಮಾಯವಾಗುತ್ತದೆ. ಸ್ಪರ್ಶದ ಮೂಲಕ ಇನ್ನೊಬ್ಬ ವ್ಯಕ್ತಿಗೆ ಬೆಂಬಲ ನೀಡುವುದರಿಂದ ಸಾಂತ್ವನ ಪಡೆಯುವ ವ್ಯಕ್ತಿಯ ಒತ್ತಡವನ್ನು ಕಡಿಮೆ ಮಾಡಬಹುದು ಎಂಬುದನ್ನು ವಿಜ್ಞಾನವೂ ಸಾಬೀತು ಪಡಿಸಿದೆ. ಇದು ಸಾಂತ್ವನ ನೀಡುವ ವ್ಯಕ್ತಿಯ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ.(PC: Canva) (4 / 10)ಒತ್ತಡದಿಂದ ಅನಾರೋಗ್ಯ ಕಡಿಮೆಯಾಗುತ್ತದೆ: ತಬ್ಬಿಕೊಳ್ಳುವುದರಿಂದ ಒತ್ತಡ ಕಡಿಮೆಯಾಗುವ ಕಾರಣ ನಾವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರುತ್ತೇವೆ. ಇದನ್ನು ಅ...ಮತ್ತಷ್ಟು ಓದು
ಒತ್ತಡದಿಂದ ಅನಾರೋಗ್ಯ ಕಡಿಮೆಯಾಗುತ್ತದೆ: ತಬ್ಬಿಕೊಳ್ಳುವುದರಿಂದ ಒತ್ತಡ ಕಡಿಮೆಯಾಗುವ ಕಾರಣ ನಾವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರುತ್ತೇವೆ. ಇದನ್ನು ಅಧ್ಯಯನಗಳು ಕೂಡ ಸಾಬೀತು ಪಡಿಸಿವೆ. (PC: Canva) (5 / 10)ಅಪ್ಪಿಕೊಳ್ಳುವುದು ಹೃದಯದ ಆರೋಗ್ಯಕ್ಕೂ ಉತ್ತಮ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆತ್ಮೀಯರ ಜೊತೆ ಒಂದಷ್ಟು ಹೊತ್ತು ಅಪ್ಪಿಕೊಂಡರೆ ರಕ್ತದೊತ್ತಡ ಮಟ್ಟ ಹಾಗೂ ಹೃದಯ...ಮತ್ತಷ್ಟು ಓದು
ಅಪ್ಪಿಕೊಳ್ಳುವುದು ಹೃದಯದ ಆರೋಗ್ಯಕ್ಕೂ ಉತ್ತಮ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆತ್ಮೀಯರ ಜೊತೆ ಒಂದಷ್ಟು ಹೊತ್ತು ಅಪ್ಪಿಕೊಂಡರೆ ರಕ್ತದೊತ್ತಡ ಮಟ್ಟ ಹಾಗೂ ಹೃದಯ ಬಡಿತ ಲಯಕ್ಕೆ ಬರುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ ಎಂಬುದನ್ನು ಸಂಶೋಧನೆಯ ಮೂಲಕ ಕಂಡುಕೊಳ್ಳಲಾಗಿದೆ. (PC: Canva) (6 / 10)ಅಪ್ಪುಗೆಯು ಸಂತೋಷಕ್ಕೆ ಕಾರಣವಾಗುತ್ತದೆ. ಬೇರೆಯವರನ್ನು ನಾವು ಅಪ್ಪಿಕೊಂಡಾಗ ಅಥವಾ ಬೇರೆಯವರು ನಮ್ಮನ್ನು ಅಪ್ಪಿಕೊಂಡಾಗ ನಮ್ಮ ದೇಹದಲ್ಲಿ ಆಕ್ಸಿಟೋಟಿನ್ ಎನ್ನುವ ಹಾರ...ಮತ್ತಷ್ಟು ಓದು
ಅಪ್ಪುಗೆಯು ಸಂತೋಷಕ್ಕೆ ಕಾರಣವಾಗುತ್ತದೆ. ಬೇರೆಯವರನ್ನು ನಾವು ಅಪ್ಪಿಕೊಂಡಾಗ ಅಥವಾ ಬೇರೆಯವರು ನಮ್ಮನ್ನು ಅಪ್ಪಿಕೊಂಡಾಗ ನಮ್ಮ ದೇಹದಲ್ಲಿ ಆಕ್ಸಿಟೋಟಿನ್ ಎನ್ನುವ ಹಾರ್ಮೋನು ಬಿಡುಗಡೆಯಾಗುತ್ತದೆ. ಇದು ಸಂತೋಷದ ಹಾರ್ಮೋನ್ ಆಗಿದ್ದು, ಇದು ನಮ್ಮ ಸಂತಸ ಹೆಚ್ಚಲು ಕಾರಣವಾಗುತ್ತದೆ. ಆಕ್ಸಿಟೋಸಿನ್ ರಕ್ತದೊತ್ತಡ ಮತ್ತು ಒತ್ತಡದ ಹಾರ್ಮೋನ್ ನೊರ್ಪೈನ್ಫ್ರಿನ್ ಅನ್ನು ಕಡಿಮೆ ಮಾಡುತ್ತದೆ.(PC: Canva) (7 / 10)ಭಯವನ್ನು ನಿವಾರಿಸುತ್ತದೆ: ಸ್ಪರ್ಶವು ಸ್ವಾಭಿಮಾನದ ಕೊರತೆ ಇರುವ ಜನರಲ್ಲಿ ಆತಂಕವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಒಂದೇ ಒಂದು ಅಪ್...ಮತ್ತಷ್ಟು ಓದು
ಭಯವನ್ನು ನಿವಾರಿಸುತ್ತದೆ: ಸ್ಪರ್ಶವು ಸ್ವಾಭಿಮಾನದ ಕೊರತೆ ಇರುವ ಜನರಲ್ಲಿ ಆತಂಕವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಒಂದೇ ಒಂದು ಅಪ್ಪುಗೆಯು ನಮ್ಮಲ್ಲಿರುವ ಎಲ್ಲಾ ಭಯವನ್ನು ದೂರವಾಗಿಸಿ ಧೈರ್ಯ ತುಂಬುವ ಶಕ್ತಿಯನ್ನು ಹೊಂದಿದೆ. (8 / 10)ನೋವು ಕಡಿಮೆ ಮಾಡುವ ಶಕ್ತಿಯಿದೆ. ಅಪ್ಪುಗೆಗೆ ನೋವು ನಿವಾರಿಸುವ ಗುಣವಿದೆ ಎಂದು ಸಂಶೋಧನೆ ಸೂಚಿಸುತ್ತದೆ. ಆ ಕಾರಣಕ್ಕೆ ಅಪ್ಪುಗೆಯ ಮಾಂತ್ರಿಕ ಶಕ್ತಿ ಇದೆ ಎಂದ...ಮತ್ತಷ್ಟು ಓದು
ನೋವು ಕಡಿಮೆ ಮಾಡುವ ಶಕ್ತಿಯಿದೆ. ಅಪ್ಪುಗೆಗೆ ನೋವು ನಿವಾರಿಸುವ ಗುಣವಿದೆ ಎಂದು ಸಂಶೋಧನೆ ಸೂಚಿಸುತ್ತದೆ. ಆ ಕಾರಣಕ್ಕೆ ಅಪ್ಪುಗೆಯ ಮಾಂತ್ರಿಕ ಶಕ್ತಿ ಇದೆ ಎಂದು ಹೇಳಬಹುದು. ಮನದಲ್ಲಿ ನೋವಿನ ಕಡಲು ಹರಿಯುತ್ತಿದ್ದರೂ ಆತ್ಮೀಯರ ಒಂದೇ ಅಪ್ಪುಗೆ ನಮ್ಮೆಲ್ಲಾ ನೋವನ್ನು ಕಡಿಮೆಯಾಗಿಸಿ ಮನಸ್ಸು ಹಗುರಾಗಲು ಕಾರಣವಾಗುತ್ತದೆ. (PC: Canva) (9 / 10)ಇಷ್ಟು ಮಾತ್ರವಲ್ಲದೇ ಅಪ್ಪುಗೆಯಿಂದ ನಮ್ಮ ದೇಹಕ್ಕೆ ಇನ್ನೂ ಹಲವು ಪ್ರಯೋಜನಗಳಿವೆ. ಇದರಿಂದ ಕೋಪ ಕಡಿಮೆಯಾಗುತ್ತದೆ. ಎಷ್ಟೋ ಬಾರಿ ವಿಪರೀತ ಕೋಪಗೊಂಡಾಗಲು ಒಂದೇ ಒಂದು ...ಮತ್ತಷ್ಟು ಓದು
ಇಷ್ಟು ಮಾತ್ರವಲ್ಲದೇ ಅಪ್ಪುಗೆಯಿಂದ ನಮ್ಮ ದೇಹಕ್ಕೆ ಇನ್ನೂ ಹಲವು ಪ್ರಯೋಜನಗಳಿವೆ. ಇದರಿಂದ ಕೋಪ ಕಡಿಮೆಯಾಗುತ್ತದೆ. ಎಷ್ಟೋ ಬಾರಿ ವಿಪರೀತ ಕೋಪಗೊಂಡಾಗಲು ಒಂದೇ ಒಂದು ಅಪ್ಪುಗೆ ಎನ್ನುವುದು ನಮ್ಮ ಮನಸ್ಸಿನಲ್ಲಿರುವ ಎಲ್ಲಾ ಕೋಪವನ್ನು ಮಂಜಿನಂತೆ ಕರಗಿ ಹೋಗುವಂತೆ ಮಾಡುತ್ತದೆ. (10 / 10)ಆಹಾರ, ಆರೋಗ್ಯ, ಫ್ಯಾಷನ್, ರಿಲೇಷನ್‌ಶಿಪ್ , ಪೇರೆಂಟಿಂಗ್ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಲೈಫ್‌ಸ್ಟೈಲ್ ಪುಟಕ್ಕೆ ಭೇಟಿ ನೀಡಿ&nbs...ಮತ್ತಷ್ಟು ಓದು
ಆಹಾರ, ಆರೋಗ್ಯ, ಫ್ಯಾಷನ್, ರಿಲೇಷನ್‌ಶಿಪ್ , ಪೇರೆಂಟಿಂಗ್ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಲೈಫ್‌ಸ್ಟೈಲ್ ಪುಟಕ್ಕೆ ಭೇಟಿ ನೀಡಿ